Maruti Suzuki: ಮಾರುತಿ ಸುಜುಕಿ ಎಸ್-ಪ್ರೆಸ್ಸೊ ಕಾರಿಗೆ ಅರ್ಧ ಲಕ್ಷ ಡಿಸ್ಕೌಂಟ್.. 4 ಲಕ್ಷ ಆರಂಭಿಕ ಬೆಲೆ

ದೇಶಾದ್ಯಂತ ಆಯ್ದ ಮಾರುತಿ ಸುಜುಕಿ (Maruti Suzuki) ಡೀಲರ್‌ಗಳು, ಅರೆನಾ ಹಾಗೂ ನೆಕ್ಸಾ ಶೋರೂಂ ಮೂಲಕ ಮಾರಾಟಗೊಳಿಸುವ ವಿವಿಧ ಕಾರುಗಳ ಮೇಲೆ ಈ ಜನವರಿ ತಿಂಗಳು ದೊಡ್ಡ ಡಿಸ್ಕೌಂಟ್ ಆಫರ್ ಘೋಷಣೆ ಮಾಡಿದೆ. ಜನಪ್ರಿಯ ಎಸ್-ಪ್ರೆಸ್ಸೊ (S-Presso) ಕಾರು ಸಹ ಭರ್ಜರಿ ರಿಯಾಯಿತಿ ಪ್ರಯೋಜನವನ್ನು ಹೊಂದಿದೆ.

ಮಾರುತಿ ಸುಜುಕಿ ಎಸ್-ಪ್ರೆಸ್ಸೊ (Maruti Suzuki S-Presso) ಒಟ್ಟು ರೂ.50,000 ವರೆಗೆ ರಿಯಾಯಿತಿ ಪ್ರಯೋಜನವನ್ನು ಪಡೆದಿದೆ. 2023ರ ಮಾದರಿಗಳು ರೂ.30,000 ನಗದು ರಿಯಾಯಿತಿ, ರೂ.15,000 ವಿನಿಮಯ ಬೋನಸ್, ರೂ.4,000 ಕಾರ್ಪೊರೇಟ್ ಡಿಸ್ಕೌಂಟ್ ಅನ್ನು ಹೊಂದಿವೆ. 2024ರ ಮಾದರಿಗಳು ರೂ.23,000 ಕ್ಯಾಶ್ ಡಿಸ್ಕೌಂಟ್, ರೂ.15,000 ವಿನಿಮಯ ಬೋನಸ್, ರೂ.4,000 ಕಾರ್ಪೊರೇಟ್ ರಿಯಾಯಿತಿಯನ್ನು ಒಳಗೊಂಡಿವೆ.

Maruti Suzuki S-Presso

ಸದ್ಯ, ಭಾರತದ ಮಾರುಕಟ್ಟೆಯಲ್ಲಿ ಖರೀದಿಗೆ ದೊರೆಯುವ ಮಾರುತಿ ಸುಜುಕಿ ಎಸ್-ಪ್ರೆಸ್ಸೊ ರೂ.4.26 ಲಕ್ಷದಿಂದ ರೂ.6.12 ಲಕ್ಷ ಎಕ್ಸ್ ಶೋರೂಂ ಬೆಲೆಯನ್ನು ಹೊಂದಿದೆ. ಈ ಕಾರು, ಎಲ್ಎಕ್ಸ್ಐ, ವಿಎಕ್ಸ್ಐ, ವಿಎಕ್ಸ್ಐ ಪ್ಲಸ್ ಸೇರಿದಂತೆ 4 ರೂಪಾಂತರ, ಸಾಲಿಡ್ ಸಿಜ್ಲೆ ಆರೆಂಜ್, ಸಾಲಿಡ್ ಫೈರ್ ರೆಡ್, ಮೆಟಾಲಿಕ್ ಗ್ರಾನೈಟ್ ಗ್ರೇ, ಮೆಟಾಲಿಕ್ ಸಿಲ್ಕಿ ಸಿಲ್ವರ್ ಒಳಗೊಂಡಂತೆ 7 ಬಣ್ಣಗಳೊಂದಿಗೆ ಲಭ್ಯವಿದೆ.

ಮಾರುತಿ ಸುಜುಕಿ ಎಸ್-ಪ್ರೆಸ್ಸೊ ಪೆಟ್ರೋಲ್ ಮತ್ತು ಸಿಎನ್‌ಜಿ ಆಯ್ಕೆಯಲ್ಲಿ ಸಿಗಲಿದೆ. ಇದರ 1 - ಲೀಟರ್ ಪೆಟ್ರೋಲ್ ಎಂಜಿನ್ 67 PS ಗರಿಷ್ಠ ಪವರ್, 89 Nm ಪೀಕ್ ಟಾರ್ಕ್ ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದೆ. ಜೊತೆಗೆ 5 - ಸ್ವೀಡ್ ಮ್ಯಾನುವಲ್ ಅಥವಾ 5 - ಸ್ವೀಡ್ ಎಎಂಟಿ (ಆಟೋಮೆಟಿಕ್) ಗೇರ್ ಬಾಕ್ಸ್ ಆಯ್ಕೆಯಲ್ಲಿ ದೊರೆಯುತ್ತದೆ.

Maruti Suzuki S-Presso

ಸಿಎನ್‌ಜಿ ಕಾರು ಇದೇ ಎಂಜಿನ್ ಹೊಂದಿದೆ. ಆದರೆ, 57 PS ಪವರ್, 82 Nm ಪೀಕ್ ಟಾರ್ಕ್ ಹೊರಹಾಕುತ್ತದೆ. 5 - ಸ್ವೀಡ್ ಮ್ಯಾನುವಲ್ ಗೇರ್ ಬಾಕ್ಸ್ ಅನ್ನು ಮಾತ್ರ ಹೊಂದಿದೆ. ಮೈಲೇಜ್ ವಿಚಾರಕ್ಕೆ ಬರುವುದಾದರೆ, ಪೆಟ್ರೋಲ್ ರೂಪಾಂತರಗಳು 24.12 kmpl - 25.30 kmpl, ಸಿಎನ್‌ಜಿ ರೂಪಾಂತರ 32.73 km/kg ಇಂಧನ ದಕ್ಷತೆಯನ್ನು ಒಳಗೊಂಡಿವೆ.

ಮಾರುತಿ ಸುಜುಕಿ ಎಸ್-ಪ್ರೆಸ್ಸೊ ಕಾರಿನಲ್ಲಿ 4 ಜನರು ಆರಾಮದಾಯಕವಾಗಿ ಪ್ರಯಾಣಿಸಬಹುದು. ಈ ಕಾರು ಹತ್ತಾರು ಆಕರ್ಷಕ ವೈಶಿಷ್ಟ್ಯಗಳನ್ನು ಹೊಂದಿದೆ. ಪ್ರಮುಖವಾಗಿ 7-ಇಂಚಿನ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಮ್, ಸೆಮಿ ಡಿಜಿಟಲ್ ಇನ್‌ಸ್ಟ್ರುಮೆಂಟ್ ಕ್ಲಸ್ಟರ್ ಹಾಗೂ ಕೀಲೆಸ್ ಎಂಟ್ರಿಯನ್ನು ಒಳಗೊಂಡಿದೆ. ಜೊತೆಗೆ 240 ಲೀಟರ್ ಸಾಮರ್ಥ್ಯದ ಬೂಟ್ ಸ್ಪೇಸ್ ಅನ್ನು ಹೊಂದಿದೆ.

Maruti Suzuki S-Presso

ಬೆಲೆಗೆ ತಕ್ಕಂತೆ ಈ ಕಾರು ಸುರಕ್ಷತೆಯಲ್ಲೂ ಅತ್ಯಾಧುನಿಕವಾಗಿದ್ದು, ಡುಯಲ್ ಫ್ರಂಟ್ ಏರ್‌ಬ್ಯಾಗ್‌, EBD (ಎಲೆಕ್ಟ್ರಾನಿಕ್ ಬ್ರೇಕ್‌ಫೋರ್ಸ್ ಡಿಸ್ಟ್ರಿಬ್ಯೂಷನ್), ABS (ಆಂಟಿಲಾಕ್ ಬ್ರೇಕಿಂಗ್ ಸಿಸ್ಟಮ್), ರೇರ್ ಪಾರ್ಕಿಂಗ್ ಸೇನಾರ್ಸ್, ಹಿಲ್ ಹೋಲ್ಡ್ ಅಸಿಸ್ಟ್, ESP (ಎಲೆಕ್ಟ್ರಾನಿಕ್ ಸ್ಟೆಬಿಲಿಟಿ ಪ್ರೋಗ್ರಾಂ) ಅನ್ನು ಪಡೆದಿದೆ. ಗಮನಿಸಿ.. ಈ ರಿಯಾಯಿತಿ ಸೌಲಭ್ಯಗಳು ರಾಜ್ಯದಿಂದ ರಾಜ್ಯಕ್ಕೆ ಬೇರೆಯಿರಲಿದ್ದು, ಹೆಚ್ಚಿನ ಮಾಹಿತಿಗೆ ಸಮೀಪದ ಶೋರೂಂ ಭೇಟಿ ನೀಡಿರಿ.

ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.

Article Published On: Monday, January 15, 2024, 11:00 [IST]
English summary
Maruti suzuki s presso get rs 50000 discount in january 4 lakh starting price
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+