ಫೆಬ್ರವರಿಯಲ್ಲೇ ಬರೋಬ್ಬರಿ 2 ಲಕ್ಷ ಕಾರುಗಳನ್ನು ಮಾರಿದ ಮಾರುತಿ ಸುಜುಕಿ: ಬೈಕ್‌ಗಳಿಗಿಂತಲೂ ಫೇಮಸ್‌

ಭಾರತದ ಅತೀದೊಡ್ಡ ಕಾರು ನಿರ್ಮಾಣ ಕಂಪನಿಯಾದ ಮಾರುತಿ ಸುಜುಕಿ ಒಂದಲ್ಲಾ ಒಂದು ದಾಖಲೆಯನ್ನು ಬರೆಯುತ್ತಲೇ ಇದೆ. ಈ ವರ್ಷದಲ್ಲಿ ಮಾರುತಿ ಸುಜುಕಿ ಸ್ವಿಫ್ಟ್‌ ಹೈಬ್ರಿಡ್ ಭಾರತೀಯ ಮಾರುಕಟ್ಟೆಯನ್ನು ಪ್ರವೇಶಿಸಲಿರುವ ಬೆನ್ನಲ್ಲೇ ಮಾರುತಿ ಸುಜುಕಿ ಕಂಪನಿಯ ವ್ಯಾಪಾರ ವಹಿವಾಟಿನ ಮಾಹಿತಿ ಹೊರಬಿದ್ದಿದ್ದು, ಜನರನ್ನು ಮೂಕರನ್ನಾಗಿಸಿದೆ.

ಬಜೆಟ್‌ ಮತ್ತು ಮೈಲೇಜ್‌ ಪ್ರಿಯ ಕಾರುಗಳನ್ನು ಹೊಂದಿರುವ ಮಾರುತಿ ಸುಜುಕಿ ಕಂಪನಿಯು 2024ರ ಫೆಬ್ರವರಿ ತಿಂಗಳಲ್ಲಿ ಬರೋಬ್ಬರಿ ಎರಡು ಲಕ್ಷ ವಾಹನಗಳನ್ನು ಮಾರಾಟ ಮಾಡಿದೆ. ಈ ತಿಂಗಳಲ್ಲಿ ಮಾತ್ರವೇ ಮಾರುತಿ ಸುಜುಕಿ ಸುಮಾರು 1,97,471 ಕಾರುಗಳನ್ನು ಭಾರತೀಯ ಮಾರುಕಟ್ಟೆಯಲ್ಲಿ ಮಾರಾಟ ಮಾಡಿದೆ ಎಂದು ತಿಳಿದು ಬಂದಿದೆ.

Maruti Suzuki Sold 2 Lakh Cars In February 2024 Swift Ertiga And More

ಈ ಸಂಖ್ಯೆಯು ಮಾರುತಿ ಸುಜುಕಿ (Maruti Suzuki) ಭಾರತದಲ್ಲಿ ಮಾರಾಟ ಮಾಡುವ ಎಲ್ಲ ಕಾರುಗಳ ಸೆಗ್ಮೆಂಟ್‌ ಅನ್ನು ಒಳಗೊಂಡಿದ್ದು, ಮಿನಿ ಸೆಗ್ಮೆಂಟ್‌ನಲ್ಲಿ ಆಲ್ಟೋ ಮತ್ತು ಎಸ್‌-ಪ್ರೆಸ್ಸೋ ಕಾರುಗಳು ಹೆಚ್ಚು ಮಾರಾಟವಾಗಿದೆ ಎನ್ನಲಾಗುತ್ತಿದೆ. ಮಿನಿ ಸೆಗ್ಮೆಂಟ್‌ನಲ್ಲಿ ಸುಮಾರು 14,782 ಕಾರುಗಳು ಮಾರಾಟವಾಗಿದ್ದು, 2023 ರ ಡಿಸೆಂಬರ್‌ನಲ್ಲಿ ಇದರ ಸಂಖ್ಯೆ ಸುಮಾರು 2,557 ಅಷ್ಟಿದ್ದು, ಭಾರೀ ಪ್ರಮಾಣದಲ್ಲಿ ಏರಿಕೆಯಾಗಿರುವುದನ್ನು ಗಮನಿಸಬಹುದಾಗಿದೆ.

ಇನ್ನು ಮಾರುತಿಯ ಕಾಂಪಾಕ್ಟ್‌ ಸೆಗ್ಮೆಂಟ್‌ನಲ್ಲಿ ಬಲೇನೋ, ಸೆಲೆರಿಯೋ, ಡಿಸೈರ್‌, ಇಗ್ನಿಸ್‌ ಮತ್ತು ಮಾರುತಿ ಸುಜುಕಿ ಸ್ವಿಫ್ಟ್‌ ಕಾರುಗಳು ಈ ಮಾರಾಟದ ಮೊತ್ತದಲ್ಲಿ ಹೆಚ್ಚು ಪಾತ್ರವಹಿಸಿದ್ದು, ಮುಂಚೂಣಿಯಲ್ಲಿ ವ್ಯಾಗನರ್‌ ಇದೆ ಎನ್ನಲಾಗುತ್ತಿದೆ. ಈ ಸೆಗ್ಮೆಂಟ್‌ನಲ್ಲಿ ಸುಮಾರು 71,627 ಕಾರುಗಳು ಮಾರಾಟವಾಗಿದ್ದು, ಮಾರುತಿ ಕಂಪನಿಯ ಕಾರುಗಳು ಎಷ್ಟರ ಮಟ್ಟಿಗೆ ಭಾರತೀಯರ ನೆಚ್ಚಿನದ್ದಾಗಿದೆ ಎಂದು ತಿಳಿಯಬಹುದಾಗಿದೆ.

Maruti Suzuki Sold 2 Lakh Cars In February 2024 Swift Ertiga And More

ಮಾರುತಿ ಸುಜುಕಿಯ ಎಸ್‌ಯುವಿ ಸೆಗ್ಮೆಂಟ್‌ ಸಹ ಈ ಮಾರಾಟದ ಸಂಖ್ಯೆಯಲ್ಲಿ ಪ್ರಮುಖ ಪಾತ್ರ ವಹಿಸಿದ್ದು, ಮಾಹಿತಿಗಳ ಪ್ರಕಾರ ಈ ಸೆಗ್ಮೆಂಟ್‌ನಲ್ಲಿ ಒಟ್ಟು, 61,234 ಕಾರುಗಳು ಮಾರಾಟವಾಗಿದೆ. ಇದರಲ್ಲಿ ಬ್ರೇಝಾ, ಎರ್ಟಿಗಾ, ಫ್ರಾಂಕ್ಸ್‌, ಗ್ರಾಂಡ್‌ ವಿಟಾರಾ, ಇನ್ವಿಕ್ಟೋ, ಜಿಮ್ನಿ ಮುಂತಾದ ಜನಪ್ರಿಯ ಎಸ್‌ಯುವಿಗಳು ಸೇರಿವೆ. ಏನೇ ಆದರೂ ಮಾರುತಿಯ ಎಲ್ಲಾ ಕಾರುಗಳು ಭಾರತದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಮಾರಾಟವಾಗುತ್ತಿದ್ದು ಇನ್ನೂ ಸಹ ಹೆಚ್ಚಾಗುವ ನಿರೀಕ್ಷೆಯಿದೆ.

ಈ ವರ್ಷದಲ್ಲೇ ಮಾರುತಿಯು ಹೊಸ ಸ್ವಿಫ್ಟ್‌ ಅನ್ನು ಮಾರುಕಟ್ಟೆಗೆ ತರಲಿದ್ದು, ಇದರಲ್ಲಿ ಹೈಬ್ರಿಡ್‌ ಎಂಜಿನ್ ಬರಲಿದೆ. ಮುಂಬರಲಿವ ಈ ಕಾರು, 1.2 - ಲೀಟರ್ ಹೈಬ್ರಿಡ್ ಪೆಟ್ರೋಲ್ ಎಂಜಿನ್ ಹಾಗೂ ಇ - ಸಿವಿಟಿ ಗೇರ್ ಬಾಕ್ಸ್ ಆಯ್ಕೆಯೊಂದಿಗೆ ಗ್ರಾಹಕರಿಗೆ ಖರೀದಿಗೆ ಸಿಗುವ ಸಾಧ್ಯತೆಯಿದ್ದು, 30 - 35 kmpl ಮೈಲೇಜ್ ನೀಡಬಹುದು ಎನ್ನಲಾಗಿದೆ.

ಅಲ್ಲದೆ, ನೂತನ ಸ್ವಿಫ್ಟ್, ಮರು - ವಿನ್ಯಾಸಗೊಳಿಸಲಾದ ಮುಂಭಾಗದ ಬಂಪರ್, ನವೀನವಾದ ಕಪ್ಪು ಬಣ್ಣದ ಗ್ರಿಲ್, ಆಕರ್ಷಕ ಎಲ್ಇಡಿ ಹೆಡ್‌ಲ್ಯಾಂಪ್‌, ಡ್ಯುಯಲ್ - ಟೋನ್ ವೀಲ್ಸ್ ಕೂಡ ಹೊಂದಿದೆ. ಇದನ್ನು ಜಾಗತಿಕವಾಗಿ ಪ್ರದರ್ಶಿಸಲಾದ ಮಾದರಿಯಲ್ಲಿ ನೋಡಬಹುದು. ಸುರಕ್ಷತೆಯ ಸಲುವಾಗಿ ADAS (ಅಡ್ವಾನ್ಸ್ಡ್ ಡ್ರೈವರ್ ಅಸಿಸ್ಟೆನ್ಸ್ ಸಿಸ್ಟಮ್ಸ್) ವೈಶಿಷ್ಟ್ಯದೊಂದಿಗೆ ಲಾಂಚ್ ಆಗಬಹುದು ಎಂದು ಹೇಳಲಾಗಿದೆ.

ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.

Article Published On: Saturday, March 2, 2024, 13:09 [IST]
English summary
Maruti suzuki sold 2 lakh cars in february 2024 swift ertiga and more
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+