ಮಹೀಂದ್ರಾ ಥಾರ್ ಎದುರು ಮಕಾಡೆ ಮಲಗಿದ ಮಾರುತಿ ಜಿಮ್ನಿ: ಮಾರಾಟದಲ್ಲಿ ಭಾರೀ ಕುಸಿತ
ಅಂತರರಾಷ್ಟ್ರೀಯ ಮಾರುಕಟ್ಟೆಗಳಲ್ಲಿ ಜಿಮ್ನಿ ಎಸ್‍ಯುವಿಯು ದಾಖಲೆಯ ಮಟ್ಟದಲ್ಲಿ ಮಾರಾಟವಾಗಿ ಹೊಸ ಕ್ರಾಂತಿಯನ್ನು ಸೃಷ್ಟಿಸಿತು. ಭಾರತೀಯ ಮಾರುಕಟ್ಟೆಯಲ್ಲೂ ಈ ಎಸ್‍ಯುವಿ ಕ್ರಾಂತಿ ಮಾಡಬಹುದು ಎಂದು ಎಲ್ಲಾರೂ ತಿಳಿದುಕೊಂಡಿದ್ದರು. ಆದರೆ ಎದುರಾಳಿ ಮಹೀಂದ್ರಾ ಥಾರ್ ಮುಂದೆ ಇದು ಮಂಕಾಗಿದೆ. ಮಾರಾಟದಲ್ಲಿ ಮಾರುತಿ ಜುಮ್ನಿ ಭಾರೀ ಕುಸಿತವನ್ನು ಕಂಡಿದೆ.
ಈ ಮಾರುತಿ ಜಿಮ್ಮಿ ಮಾದರಿಯು ಒಂದು ಕಾಲದ ಆಫ್-ರೋಡ್ ಕಿಂಗ್ ಆಗಿದ್ದ ಜಿಪ್ಸಿಯ ಉತ್ತರಾಧಿಕಾರಿಯಾಗಿ ಬಂದು ಭಾರತೀಯ ವಾಹನ ಪ್ರೇಮಿಗಳ ಮನ ಗೆಲ್ಲುವಲ್ಲಿ ಅಷ್ಟು ಯಶಸ್ವಿಯಾಗಿಲ್ಲ. ಕಳೆದ ತಿಂಗಳು (ಜನವರಿ 2024), ಮಹೀಂದ್ರಾ ಥಾರ್ 6,059 ಯುನಿಟ್‌ಳು ಮಾರಾಟವಾಗಿವೆ. ಆದರೆ ಮಾರುತಿ ಜಿಮ್ನಿ ಮಾದರಿಯ 163 ಯುನಿಟ್ ಗಳು ಮಾತ್ರ ಮಾರಾಟವಾಗಿದೆ. ಈ ಮಾರುತಿ ಜಿಮ್ನಿ ಎಸ್‍ಯುವಿಯ ಆರಂಭಿಕ ಬೆಲೆಯು ಎಕ್ಸ್ ಶೋರೂಂ ಪ್ರಕಾರ ರೂ.12.74 ಲಕ್ಷವಾಗಿದೆ.

ಈ ಹೊಸ ಲೈಫ್ ಸ್ಟೈಲ್ ಆಫ್-ರೋಡರ್, ಮಾರುತಿ ಸುಜುಕಿ ಜಿಮ್ನಿ (Maruti Suzuki Jimny) ದೇಶದ ಅತ್ಯಂತ ಸಮರ್ಥ ಆಫ್-ರೋಡರ್‌ಗಳಲ್ಲಿ ಒಂದು ಎಂದು ಸಾಬೀತಾಗಿದೆ. ಇದರಿಂದ ಆಫ್-ರೋಡ್ ವಾಹನಗಳ ಪ್ರೇಮಿಗಳು ಈ ಜಿಮ್ನಿ ಎಸ್‍ಯುವಿಯನ್ನು ಖರೀದಿಸುತ್ತಿದ್ದಾರೆ. ಮಾರುತಿ ಸುಜುಕಿ ಜಿಮ್ನಿಯನ್ನು ಪ್ರತಿಸ್ಪರ್ಧಿಗಳಾದ ಥಾರ್ ಮತ್ತು ಗೂರ್ಖಾಗೆ ಹೋಲಿಸಿದರೆ ಡ್ರೈವ್ ಮಾಡಲು ಹೆಚ್ಚು ಸುಲಭವಾಗಿದೆ. ಈ ಮಾರುತಿ ಜಿಮ್ನಿ ಕಾಂಪ್ಯಾಕ್ಟ್ ಆಯಾಮಗಳನ್ನು ಹೊಂದಿದೆ.
ಇದು ಗರಿಷ್ಠ ಟ್ರಾಫಿಕ್ ಸಮಯದಲ್ಲಿ ಚಾಲನೆ ಮಾಡಲು ಸುಲಭ. ರಸ್ತೆಯಲ್ಲಿ ಕಡಿಮೆ ಜಾಗ ಸಾಕಾಗುತ್ತದೆ. ಅದರ ಹೊರತಾಗಿ, ಜಿಮ್ನಿಯು ಕುಶಲತೆಯಿಂದ ಕಂಟ್ರೋಲ್ ಮಾಡಲು ತುಂಬಾ ಸುಲಭವಾಗಿದೆ. ಏಕೆಂದರೆ ಇದು ತೂಕದಲ್ಲಿ ಹೆಚ್ಚು ಹಗುರವಾಗಿರುತ್ತದೆ. ಅದಕ್ಕಾಗಿಯೇ ಥಾರ್‌ಗೆ ಹೋಲಿಸಿದರೆ ಜಿಮ್ನಿ ದೈನಂದಿನ ಬಳಕೆ ಮತ್ತು ಪ್ರಯಾಣಕ್ಕೆ ಹೆಚ್ಚು ಪ್ರಾಯೋಗಿಕವಾಗಿದೆ.

ಈ ಮಾರುತಿ ಜಿಮ್ನಿ ಎಸ್‍ಯುವಿಯಲ್ಲಿ ಫ್ಲಾಟ್ ಕ್ಲಾಮ್‌ಶೆಲ್ ಬಾನೆಟ್, ವಾಷರ್‌ಗಳೊಂದಿಗೆ ಎಲ್ಇಡಿ ಪ್ರೊಜೆಕ್ಟರ್ ಹೆಡ್‌ಲ್ಯಾಂಪ್, ಅಲಾಯ್ ವೀಲ್ಸ್, 195/80 ಅಳತೆಯ ಟೈಯರ್ಸ್ ಪಡೆದಿದೆ. ಜೊತೆಗೆ ಇದರ ಫ್ರಂಟ್ ಲುಕ್ ನೋಡುಗರನ್ನು ಸೆಳೆಯುತ್ತದೆ. ರೇರ್ ಆಕರ್ಷವಾಗಿದೆ. ಕ್ಯಾಬಿನ್ ಒಳಭಾಗವು ಅತ್ಯುತ್ತಮವಾಗಿದೆ. ಮಾರುತಿ ಸುಜುಕಿ ಜಿಮ್ನಿ 5 ಡೋರ್ ಆಫ್-ರೋಡ್ ಎಸ್‌ಯುವಿಯಾಗಿರುವುದರಿಂದ ಅದಕ್ಕೆ ತಕ್ಕಂತೆಯೇ ವಿನ್ಯಾಸವನ್ನು ಹೊಂದಿದೆ.
ಜಿಮ್ನಿ 5 ಡೋರ್ ಫೀಚರ್ಸ್ ಬಗ್ಗೆ ಹೇಳುವುದಾದರೆ, ಇದರಲ್ಲಿ 9 ಇಂಚಿನ ಸ್ಮಾರ್ಟ್‌ಪ್ಲೇ ಪ್ರೊ+ ಇನ್ಫೋಟೈನ್‌ಮೆಂಟ್ ಸಿಸ್ಟಮ್ ಮತ್ತು ಆಂಡ್ರಾಯ್ಡ್ ಆಟೋ, ಆಪಲ್ ಕಾರ್‌ಪ್ಲೇ ಹೊಂದಿದೆ.ಇದರೊಂದಿಗೆ ಆಟೋಮ್ಯಾಟಿಕ್ ಕ್ಲೇಮೇಟ್ ಕಂಟ್ರೋಲ್, ಕ್ರೂಸ್ ಕಂಟ್ರೋಲ್, ಕೀಲೆಸ್ ಎಂಟ್ರಿ ಹಾಗೂ ಕಿವಿಗೆ ಕೇಳಲು ಹಿತವಾಗಿರುವ ಸೌಂಡ್ ಸಿಸ್ಟಮ್ ಹೊಂದಿದೆ. 4WD (ಫೋರ್ ವೀಲ್ಸ್ ಡ್ರೈವ್) ತಂತ್ರಜ್ಞಾನವನ್ನು ಒಳಗೊಂಡಿದೆ.

ಈ ಮಾರುತಿ ಜಿಮ್ನಿಯಲ್ಲಿ ಇದು ಐಡಲ್ ಸ್ಟಾರ್ಟ್/ಸ್ಟಾಪ್ ಬಟನ್ ವೈಶಿಷ್ಟ್ಯದೊಂದಿಗೆ 1.5 ಲೀಟರ್ ಕೆ-ಸೀರಿಯಸ್ ಪೆಟ್ರೋಲ್ ಎಂಜಿನ್ ಹೊಂದಿದೆ. ಈ ಎಂಜಿನ್ 6000 rpm ನಲ್ಲಿ 104.8 ಪಿಎಸ್ ಗರಿಷ್ಠ ಪವರ್ ಹಾಗೂ 4000 rpm ನಲ್ಲಿ 134.2 Nm ಪೀಕ್ ಟಾರ್ಕ್ ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದೆ. ಈ ಎಂಜಿನ್ ನೊಂದಿಗೆ 5 ಸ್ವೀಡ್ ಮ್ಯಾನುವಲ್ ಹಾಗೂ 4 ಸ್ವೀಡ್ ಆಟೋಮೆಟಿಕ್ ಗೇರ್ ಬಾಕ್ಸ್ ಆಯ್ಕೆಯಲ್ಲಿ ಖರೀದಿಗೆ ಲಭ್ಯವಿದೆ.
ಮಾರುತಿ ಸುಜುಕಿ ಜಿಮ್ನಿ ಎಸ್‍ಯುವಿಯ ಸುರಕ್ಷತಾ ವೈಶಿಷ್ಟ್ಯಗಳ ಕುರಿತು ಮಾತನಾಡುವುದಾದರೆ, ಇದು 6 ಏರ್‌ಬ್ಯಾಗ್ಸ್, ABS (ಆಂಟಿಲಾಕ್ ಬ್ರೇಕಿಂಗ್ ಸಿಸ್ಟಮ್), EBD (ಎಲೆಕ್ಟ್ರಾನಿಕ್ ಬ್ರೇಕ್‌ಫೋರ್ಸ್ ಡಿಸ್ಟ್ರಿಬ್ಯೂಷನ್), ಹಿಲ್ ಹೋಲ್ಡ್ ಕಂಟ್ರೋಲ್, ಹಿಲ್ ಡಿಸೆಂಟ್ ಕಂಟ್ರೋಲ್, ಸೈಡ್ ಇಂಪ್ಯಾಕ್ಟ್ ಡೋರ್ ಬೀಮ್ಸ್ ಒಳಗೊಂಡಂತೆ ವಿವಿಧ ಪಿಚರ್ಸ್ ಹೊಂದಿದೆ.
ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತ ಆಟೋಮೊಬೈಲ್ ಸುದ್ದಿಗಳನ್ನು ಒದಗಿಸುತ್ತದೆ, ಎಲ್ಲಾ ಸಾಮಾಜಿಕ ಮಾಧ್ಯಮಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಹಂಚಿಕೊಳ್ಳುತ್ತದೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್ ಮತ್ತು ಯೂಟ್ಯೂಬ್ ಪೇಜ್‌ಗಳೊಂದಿಗೆ ಸಂಪರ್ಕದಲ್ಲಿರಿ. ನಿಮಗೆ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.


Click it and Unblock the Notifications