ಮಾರುತಿ ಸುಜುಕಿ ಸ್ವಿಫ್ಟ್ 2024 ಡಿಸೈನ್ ಸೋರಿಕೆ: ಇನ್ಮುಂದೆ ಎಲ್ಲೆಲ್ಲೂ ಸ್ವಿಫ್ಟೇ!
ಭಾರತೀಯರ ನೆಚ್ಚಿನ ಕಾರು ಬ್ರಾಂಡ್ ಆದ ಮಾರುತಿ ಸುಜುಕಿಯ ಪ್ರಸಿದ್ದ ಮಾಡೆಲ್ ಆದ ಸ್ವಿಫ್ಟ್ ನ ಹೈಬ್ರಿಡ್ ವರ್ಷನ್ ಅನ್ನು ಎಲ್ಲರೂ ಕುತೂಹಲದಿಂದ ಕಾಯುತ್ತಿದ್ದಾರೆ. ಮಾರುತಿ ಸುಜುಕಿ ಸ್ವಿಫ್ಟ್ 2024 ಜನರಲ್ಲಿ ಸಾಕಷ್ಟು ನಿರೀಕ್ಷೆಗಳನ್ನು ಮೂಡಿಸುತ್ತಿದ್ದು, ಹಲವಾರು ವದಂತಿಗಳಿಗೆ ಸಹ ಎಡೆಮಾಡಿಕೊಟ್ಟಿದೆ.
ಇತ್ತೀಚಿನ ಮಾಹಿತಿಯ ಪ್ರಕಾರ ಇದೀಗ ಮಾರುತಿ ಸುಜುಕಿ ಸ್ವಿಫ್ಟ್ 2024 ಕಾರಿನ ಕಂಪ್ಲೀಟ್ ಡಿಸೈನ್ ಡೀಟೇಲ್ಸ್ ಸಾಮಾಜಿ ಜಾಲತಾಣಗಳಲ್ಲಿ ಸೋರಿಕೆಯಾಗಿದೆ. ಹೌದು, ಯ್ಯೂಟ್ಯೂಬ್ ಚಾನೆಲ್ ಒಂದರಲ್ಲಿ ಹೊಸ ಮಾರುತಿ ಸುಜುಕಿ ಸ್ವಿಫ್ಟ್ ನೀಲಿ ಬಣ್ಣದಲ್ಲಿ ಕಂಗೊಳಿಸುತ್ತಿದ್ದು ಮಾರುತಿ ಸುಜುಕಿ ಫ್ಯಾನ್ಸ್ ಮುಖದಲ್ಲಿ ಮಂದಹಾಸಕ್ಕೆ ಕಾರಣವಾಗಿದೆ. ಈ ಮೂಲಕ ಸಾಕಷ್ಟು ದಿನದ ಕಾಯುವಿಕೆಗೆ ತಕ್ಕ ಮಟ್ಟಿನ ತೃಪ್ತಿಯನ್ನು ನೀಡಿದೆ.

ವಿಡಿಯೋದಲ್ಲಿ ಕಾಣುವ ಪ್ರಕಾರ ಮಾರುತಿ ಸುಜುಕಿ ಹೊಸ ಸ್ವಿಫ್ಟ್ ನೀಲಿ ಬಣ್ಣದಲ್ಲಿ ಕಂಗೊಳಿಸುತ್ತಿದ್ದು, ಆಕರ್ಷಕ ಡಿಸೈನ್ ವಿನ್ಯಾಸವನ್ನು ಹೊಂದಿದೆ. ಈಗಿರುವ ಸ್ವಿಫ್ಟ್‌ಗಿಂತಲೂ ಹೆಚ್ಚಿನ ಸ್ಪೋರ್ಟಿ ಮತ್ತು ಅಗ್ರೆಸಿವ್ ಡಿಸೈನ್ ಅನ್ನು ಹೊಂದಿದ್ದು ನೋಡುಗರ ಕಣ್ಮನ ಸೆಳೆಯುವ ಹಾಗಿದೆ. ರೀ ಡಿಸೈನ್ ಆಗಿರುವ ಫ್ರಂಟ್ ಗ್ರಿಲ್, ಡಿಆರ್‌ಎಲ್ ಗಳಿದ್ದು ಕಾರಿನ ನೋಟವನ್ನು ಹೆಚ್ಚಿಸಿವೆ.
ಕಾರಿನ ಹೊರಭಾಗದಲ್ಲಿ ಮಾತ್ರವಲ್ಲದೇ, ಹೊರ ಭಾಗದಲ್ಲಿಯೂ ಸಹ ಹಲವಾರು ಬದಲಾವಣೆಗಳನ್ನು ಕಾಣಬಹುದಾಗಿದೆ. ದೊಡ್ಡ ಇನ್ಫೋಟೈನ್‌ಮೆಂಟ್ ಸಿಸ್ಟಂ ಈ ಕಾರಿನ ಒಳಭಾಗದ ಹೈಲೈಟ್ ಆಗಿದ್ದು, ನೆಕ್ಸಾನ್ ಮತ್ತು ಬಲೇನೊ ಕಾರುಗಳಲ್ಲಿ ಇದ್ದ ಅದೇ ಇನ್ಫೋಟೈನ್‌ಮೆಂಟ್ ಸಿಸ್ಟಂ ಅನ್ನು ಸಹ ಇದಕ್ಕೆ ಬಳಸಲಾಗಿದೆಯೇ ಎಂಬುದು ಎಲ್ಲರ ಪ್ರಶ್ನೆ.

ಭಾರತದಲ್ಲಿ ಮುಂಬರುವ 2024 ಮಾರುತಿ ಸ್ವಿಫ್ಟ್ ಬಿಡುಗಡೆ ದಿನಾಂಕವನ್ನು ಕಂಪನಿ ಇನ್ನೂ ಪ್ರಕಟಿಸಿಲ್ಲ. ವರದಿಗಳ ಪ್ರಕಾರ, 2024ರ ಫೆಬ್ರವರಿಯಲ್ಲಿ ಸ್ವಿಫ್ಟ್ ಉತ್ಪಾದನೆಯು ಪ್ರಾರಂಭವಾಗಲಿದೆ. ಹಾಗೆಯೆ ಕಾರಿನ ಮಾರಾಟವು ಮಾರ್ಚ್ 2024 ರ ವೇಳೆಗೆ ಪ್ರಾರಂಭವಾಗುವ ನಿರೀಕ್ಷೆಯಿದೆ. ಈ ಎಲ್ಲಾ ಸನ್ನಿವೇಶಗಳನ್ನು ಗಮನಿಸಿದರೆ ಶೀಘ್ರದಲ್ಲೇ ಬಿಡುಗಡೆ ಮಾಡುವ ಸಾಧ್ಯತೆಯಿದೆ.
ಹೊಸ ಸ್ವಿಫ್ಟ್ ಗ್ರ್ಯಾಂಡ್ ಫ್ರಂಟ್ ವಿನ್ಯಾಸ, ಆಕರ್ಷಕ ಗ್ರಿಲ್, ಹೊಸ ಎಲ್‌ಇಡಿ ಹೆಡ್‌ಲ್ಯಾಂಪ್‌ಗಳೊಂದಿಗೆ ಬರಲಿದೆ. ಪ್ರಸ್ತುತ ಮಾದರಿಯಂತೆ ಡೋರ್ ಹ್ಯಾಂಡಲ್‌ಗಳನ್ನು ಹೊಂದಿರುವುದಿಲ್ಲ. ಸ್ವಲ್ಪ ಉತ್ತಮ ಶೈಲಿಯನ್ನು ಪಡೆಯುತ್ತದೆ. ಸ್ಪೋರ್ಟಿ ಅಲಾಯ್ ವೀಲ್‌ಗಳು, ಟೈಲ್‌ಗೇಟ್, ಸಿ-ಆಕಾರದ ಎಲ್‌ಇಡಿ ಟೈಲ್‌ಲೈಟ್‌ಗಳನ್ನು ಪಡೆಯುತ್ತದೆ. ಬಲೆನೋ ರೀತಿಯ ಡ್ಯುಯಲ್-ಟೋನ್ ಇಂಟೀರಿಯರ್ ಕಲರ್ ಸ್ಕೀಮ್‌ನಲ್ಲಿ ಹೊಸ ಡ್ಯಾಶ್‌ಬೋರ್ಡ್ ಲೇಔಟ್ ನೀಡಲಾಗುವುದು.
ಹೊಸ ಸ್ವಿಫ್ಟ್ 1.2-ಲೀಟರ್, Z-ಸಿರೀಸ್ ಪೆಟ್ರೋಲ್ ಎಂಜಿನ್‌ನಿಂದ ನಿಯಂತ್ರಿಸಲ್ಪಡುತ್ತದೆ. ಇದು 82bhp ಪವರ್ ಮತ್ತು 108Nm ಟಾರ್ಕ್ ಉತ್ಪಾದಿಸುತ್ತದೆ. ಜೊತೆಗೆ ಹೈಬ್ರಿಡ್ ಎಂಜಿನ್ ಆಯ್ಕೆಯೊಂದಿಗೆ ಬರಲಿದೆ. 5-ಸ್ಪೀಡ್ ಮ್ಯಾನುವಲ್, ಹೊಸ CVT ಆಟೋಮ್ಯಾಟಿಕ್ ಗೇರ್ ಬಾಕ್ಸ್ ಆಯ್ಕೆಯು ಲಭ್ಯವಿರುತ್ತದೆ. ಕಾರಿನ ಹೈಬ್ರಿಡ್ ಮಾದರಿಯು 25.5 ಕಿ.ಮೀ ಮೈಲೇಜ್ ನೀಡಬಲ್ಲದು. ಸಾಮಾನ್ಯ ಮಾದರಿಯು 23.4 kmpl ಮೈಲೇಜ್ ನೀಡಬಲ್ಲದು.
ಕ್ಲೈಮೆಟ್ ಕಂಟ್ರೋಲ್‌ಗಾಗಿ ಟಾಗಲ್, ಪುಶ್ ಬಟನ್ ಸ್ಟಾರ್ಟ್-ಸ್ಟಾಪ್, ಅನಲಾಗ್ ಡಯಲ್, ಎಂಐಡಿ, ರಿವರ್ಸ್ ಪಾರ್ಕಿಂಗ್ ಕ್ಯಾಮೆರಾ, ಕೀಲೆಸ್ ಎಂಟ್ರಿ, ರಿಮೋಟ್ ಸ್ಟೋರೇಜ್ ಡೋರ್ ಮಿರರ್, 9-ಇಂಚಿನ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಮ್, ಆಂಡ್ರಾಯ್ಡ್ ಆಟೋ, ಆಪಲ್ ಕಾರ್‌ಪ್ಲೇ, ಸೆಂಟರ್ ಕನ್ಸೋಲ್ ಟ್ರೇ, ಡ್ರಿಂಕ್ ಹೋಲ್ಡರ್‌ಗಳು, ಬಾಗಿಲಿನ ಪಾಕೆಟ್‌ಗಳಂತಹ ವೈಶಿಷ್ಟ್ಯಗಳನ್ನು ಸಹ ಪಡೆಯುತ್ತದೆ.
ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.


Click it and Unblock the Notifications