ಬಹುನಿರೀಕ್ಷಿತ ಸ್ವಿಫ್ಟ್‌ ಹೈಬ್ರಿಡ್‌ ಲಾಂಚ್‌ ಮಾಹಿತಿ ಸೋರಿಕೆ: ಸ್ವಿಫ್ಟ್ ಕೊಳ್ಳುವವರು ಕೊಂಚ ಕಾಯಿರಿ!

ಬಹುನಿರೀಕ್ಷಿತ ಮಾರುತಿ ಸುಜುಕಿ ಸ್ವಿಫ್ಟ್ 2024 ಬಗ್ಗೆ ಆಗಾಗ ಸುದ್ದಿಗಳು ಕೇಳಿ ಬರುತ್ತಲೇ ಇದೆ. ಈ ಬಾರಿಯ ಸ್ವಿಫ್ಟ್‌ನಲ್ಲಿ ಹಲವಾರು ಬದಲಾವಣೆಗಳು ಕಾಣಲಿದೆ ಎಂಬ ಕಾರಣದಿಂದಾಗಿ ಕಾರು ಪ್ರೀಯರು ಹೊಸ ಸ್ವಿಫ್ಟ್‌ನ ಬರುವಿಕೆಗಾಗಿ ಕಾಯುತ್ತಲೇ ಇದ್ದಾರೆ. ಇದೀಗ ಮತ್ತೆ ಮಾರುತಿ ಸುಜುಕಿ ಸ್ವಿಫ್ಟ್‌ ಸದ್ದು ಮಾಡುತ್ತಿದೆ.

ಈ ಬಾರಿ ಮಾರುತಿ ಸುಜುಕಿ ಸ್ವಿಫ್ಟ್‌ ಸುದ್ದಿಯಾಗುತ್ತಿರುವುದು ಹೊಸ ವಿಷಯದಲ್ಲಿ. ಮಾಹಿತಿಗಳ ಪ್ರಕಾರ ಮಾರುತಿ ಸುಜುಕಿ ಸ್ವಿಫ್ಟ್‌ 2024 ಜೂನ್‌ ಅರ್ಧದಲ್ಲಿ ಭಾರತೀಯ ಮಾರುಕಟ್ಟೆಗೆ ಬರಲಿದೆ ಎಂದು ತಿಳಿದು ಬಂದಿದೆ. ಈ ಮೂಲಕ ಈ ಕಾರು ಮಾರುಕಟ್ಟೆಗೆ ಯಾವಾಗ ಬರುತ್ತದೆ ಎಂದು ಕಾದು ಕುಳಿತಿದ್ದವರಿಗೆ ಉತ್ತರ ಸಿಕ್ಕಿದೆಯಾದರೂ, ಈ ಕಾರಿಗಾಗಿ ಕಾಯುವ ಅವಧಿ ಮಾತ್ರ ಇನ್ನೂ ಮುಂದಕ್ಕೆ ಹೋಗಿದೆ ಎನ್ನಬಹುದು.

Maruti Suzuki Swift 2024 Will Be Launching Soon In Indian Market

ಮಾರುತಿ ಸುಜುಕಿಯ ನಾಲ್ಕನೇ ತಲೆಮಾರಿನ ( Maruti Suzuki Swift 2024) ಈ ಕಾರನ್ನು ಮೊದಲು ಕಂಪನಿ ಪ್ರದರ್ಶನಕ್ಕೆ ಇಟ್ಟದ್ದು 2024 ಜಪಾನ್‌ ಮೊಬಿಲಿಟಿ ಶೋನಲ್ಲಿ. ಸದ್ಯಕ್ಕೆ ಭಾರತೀಯ ರಸ್ತೆಗಳಲ್ಲಿ ಕಂಪನಿ ಈ ಕಾರಿನ ಟೆಸ್ಟ್‌ಗಳನ್ನು ನಡೆಸುತ್ತಿದೆ. ಮಾಹಿತಿಗಳ ಪ್ರಕಾರ ಇದರ ಹೊರಭಾಗದಲ್ಲಿ ಕೊಂಚ ಮಟ್ಟಿನ ಬದಲಾವಣೆ ಜೊತೆಗೆ, ಎಂಜಿನ್‌ನಲ್ಲಿ ಭಾರೀ ಬದಲಾವಣೆ ಕಂಡು ಬರಲಿದೆ ಎಂದು ತಿಳಿದು ಬಂದಿದೆ.

ಸುಜುಕಿ ಸ್ವಿಫ್ಟ್‌ನ ಮಾಹಿತಿಗಳನ್ನು ನೋಡುವುದಾದರೆ, ಸದ್ಯ, ದೇಶೀಯ ಮಾರುಕಟ್ಟೆಯಲ್ಲಿ ಮಾರುತಿ ಸುಜುಕಿ ಸ್ವಿಫ್ಟ್, ರೂ.5.99 ಲಕ್ಷದಿಂದ ರೂ.9.03 ಲಕ್ಷ ಎಕ್ಸ್ ಶೋರೂಂ ಬೆಲೆಯಲ್ಲಿ ಖರೀದಿಗೆ ಲಭ್ಯವಿದೆ. ಪೆಟ್ರೋಲ್ ಹಾಗೂ ಸಿಎನ್‌ಜಿ ಎಂಜಿನ್, ಮ್ಯಾನುವಲ್ ಹಾಗೂ ಆಟೋಮೆಟಿಕ್ ಗೇರ್ ಬಾಕ್ಸ್ ಆಯ್ಕೆಯಲ್ಲಿ ಗ್ರಾಹಕರಿಗೆ ಸಿಗುತ್ತದೆ . ರೂಪಾಂತರಗಳಿಗೆ ಅನುಗುಣವಾಗಿ 22.38 - 22.56 kmpl ಮೈಲೇಜ್ ನೀಡುತ್ತದೆ.

Maruti Suzuki Swift 2024 Will Be Launching Soon In Indian Market

ಮಾರುತಿ ಸುಜುಕಿ 2024, ಹೈಬ್ರಿಡ್‌ ಎಂಜಿನ್‌ ನೊಂದಿಗೆ ಭಾರತೀಯ ಮಾರುಕಟ್ಟೆಯನ್ನು ಪ್ರವೇಶಿಸಲಿದೆ. ಈ ಮೂಲಕ ಈಗಿರುವ ಮಾರುತಿ ಸುಜುಕಿ ಸ್ವಿಫ್ಟ್‌ಗಿಂತಲೂ, ಅಧಿಕ ಮೈಲೇಜ್‌ ಮತ್ತು ಹೆಚ್ಚು ರಿಫೈನ್‌ ಆಗಿರುವ ಎಂಜಿನ್‌ ಈ ಕಾರಿನಲ್ಲಿ ಸಿಗಲಿದೆ ಎನ್ನಲಾಗುತ್ತಿದೆ. ಸಾಧಾರಣವಾಗಿ ಸ್ವಿಫ್ಟ್‌ ಉತ್ತಮ ಮೈಲೇಜ್‌ ನೀಡುತ್ತಿದೆಯಾದರೂ, ಹೈಬ್ರಿಡ್‌ ಎಂಜಿನ್‌ ಬಂದರೆ ಈ ಕಾರು ಏನಿಲ್ಲವೆಂದರೂ ಸುಮಾರು 35 ಕಿಮೀ ಮೈಲೇಜ್‌ ನೀಡಲಿದೆ ಎಂದು ಹೇಳಲಾಗುತ್ತಿದೆ.

ಮುಂಬರಲಿವ ಈ ಕಾರು, 1.2 - ಲೀಟರ್ ಹೈಬ್ರಿಡ್ ಪೆಟ್ರೋಲ್ ಎಂಜಿನ್ ಹಾಗೂ ಇ - ಸಿವಿಟಿ ಗೇರ್ ಬಾಕ್ಸ್ ಆಯ್ಕೆಯೊಂದಿಗೆ ಗ್ರಾಹಕರಿಗೆ ಖರೀದಿಗೆ ಸಿಗುವ ಸಾಧ್ಯತೆಯಿದ್ದು, 30 - 35 kmpl ಮೈಲೇಜ್ ನೀಡಬಹುದು ಎನ್ನಲಾಗಿದೆ. ಮತ್ತೊಂದು, ನಾನ್ ಹೈಬ್ರಿಡ್ 1.2 - ಲೀಟರ್ 3 - ಸಿಲಿಂಡರ್ ಪೆಟ್ರೋಲ್ ಎಂಜಿನ್‌ ಆಯ್ಕೆಯೊಂದಿಗೂ ಖರೀದಿದಾರಿಗೆ ಲಭ್ಯವಾಗಬಹುದು.

Maruti Suzuki Swift 2024 Will Be Launching Soon In Indian Market

ಅಲ್ಲದೆ, ನೂತನ ಸ್ವಿಫ್ಟ್, ಮರು - ವಿನ್ಯಾಸಗೊಳಿಸಲಾದ ಮುಂಭಾಗದ ಬಂಪರ್, ನವೀನವಾದ ಕಪ್ಪು ಬಣ್ಣದ ಗ್ರಿಲ್, ಆಕರ್ಷಕ ಎಲ್ಇಡಿ ಹೆಡ್‌ಲ್ಯಾಂಪ್‌, ಡ್ಯುಯಲ್ - ಟೋನ್ ವೀಲ್ಸ್ ಕೂಡ ಹೊಂದಿದೆ. ಇದನ್ನು ಜಾಗತಿಕವಾಗಿ ಪ್ರದರ್ಶಿಸಲಾದ ಮಾದರಿಯಲ್ಲಿ ನೋಡಬಹುದು. ಸುರಕ್ಷತೆಯ ಸಲುವಾಗಿ ADAS (ಅಡ್ವಾನ್ಸ್ಡ್ ಡ್ರೈವರ್ ಅಸಿಸ್ಟೆನ್ಸ್ ಸಿಸ್ಟಮ್ಸ್) ವೈಶಿಷ್ಟ್ಯದೊಂದಿಗೆ ಲಾಂಚ್ ಆಗಬಹುದು ಎಂದು ಹೇಳಲಾಗಿದೆ.

ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.

Article Published On: Wednesday, April 3, 2024, 13:00 [IST]
English summary
Maruti suzuki swift 2024 will be launching soon in indian market
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+