ಕೇವಲ 6.49 ಲಕ್ಷಕ್ಕೆ ಮಾರುತಿಯ ಹೊಸ ಕಾರು ಬಿಡುಗಡೆ: 25.75 ಕಿ.ಮೀ ಮೈಲೇಜ್!
ಭಾರತದಲ್ಲಿ ಮಾರುತಿ ಸುಜುಕಿ ಕಂಪನಿಯು, ಹೊಸ ಎಡಿಷನ್‌ನ ಸ್ವಿಫ್ಟ್ ಅನ್ನು ಬಿಡುಗಡೆ ಮಾಡಿದೆ. ಇದರಲ್ಲಿ ಹೆಚ್ಚುವರಿ ಅಕ್ಸೊಸರಿಗಳನ್ನು ಉಚಿತವಾಗಿ ನೀಡಲಾಗಿದ್ದು, ಹಬ್ಬದ ಸೀಸನ್‌ನಲ್ಲಿ ಗ್ರಾಹಕರಿಗೆ ಬಂಪರ್ ಆಫರ್ ಕೊಟ್ಟಿದೆ. ಮಾರುತಿ ಕಂಪನಿಯು ಸ್ವಿಫ್ಟ್‌ನ ಮಾರಾಟವನ್ನು ಹೆಚ್ಚಿಸಲು ಶ್ರಮಿಸುತ್ತಿದ್ದು, ಕಳೆದ ಎರಡು ತಿಂಗಳಲ್ಲಿ ಬಲೆನೊ ರೀಗಲ್ ಎಡಿಷನ್, ವ್ಯಾಗನ್ ಆರ್ ವಾಲ್ಟ್ಜ್ ಎಡಿಷನ್, ಗ್ರ್ಯಾಂಡ್ ವಿಟಾರಾ ಡೊಮಿನಿಯನ್ ಎಡಿಷನ್ ಮತ್ತು ಇಗ್ನಿಸ್ ರೇಡಿಯನ್ಸ್ ಎಡಿಷನ್ ಅನ್ನು ಹೊರತಂದಿದೆ. ಈಗ ಸ್ವಿಫ್ಟ್ ಬ್ಲಿಟ್ಜ್ ಎಡಿಷನ್ ಬಿಡುಗಡೆ ಮಾಡಿದೆ.
ಮಾರುತಿ ಸುಜುಕಿಯು ಒಟ್ಟಾರೆ ಬಲೆನೊ, ವ್ಯಾಗನ್ ಆರ್, ಗ್ರ್ಯಾಂಡ್ ವಿಟಾರಾ, ಇಗ್ನಿಸ್ ಸೇರಿದಂತೆ ಐದು ಹೊಸ ಎಡಿಷನ್‌ಗಳನ್ನು ಪರಿಚಯಿಸಿದ್ದು, ಇದರಲ್ಲಿ ಸ್ವಿಫ್ಟ್ ಬ್ಲಿಟ್ಜ್ ಐದನೇ ವಿಶೇಷ ಆವೃತ್ತಿಯಾಗಿದೆ. ಮಾರುತಿ ಸುಜುಕಿ ಸ್ವಿಫ್ಟ್ ಬ್ಲಿಟ್ಜ್ ಹ್ಯಾಚ್ ಬ್ಯಾಕ್‌ನ ಕಡಿಮೆ-ಸ್ಪೆಕ್ ವೇರಿಯೆಂಟ್‌ಗಳ ಮಾರಾಟವನ್ನು ಹೆಚ್ಚಿಸಲು ಮಾರುತಿ ಅರೆನಾ ಡೀಲರ್‌ಗಳು ಸ್ವಿಫ್ಟ್ ಬ್ಲಿಟ್ಜ್ ಅನ್ನು ಸೀಮಿತ ಅವಧಿಗೆ ಮಾರಾಟ ಮಾಡಲಿದ್ದಾರೆ.

ಸ್ವಿಫ್ಟ್ ಬ್ಲಿಟ್ಜ್ ವಿಶೇಷ ಆವೃತ್ತಿಯನ್ನು ಖರೀದಿಸುವವರಿಗೆ 49,848 ರೂ.ಗಳ ಮೌಲ್ಯದ ಅಕ್ಸೆಸೊರಿ ಕಿಟ್ ಅನ್ನು ಉಚಿತವಾಗಿ ನೀಡಲಾಗುತ್ತಿದೆ. ಈ ಸ್ಪೆಷಲ್ ಸ್ವಿಫ್ಟ್ ಬ್ಲಿಟ್ಜ್ ಎಡಿಷನ್ ಅನ್ನು ಎಲ್ಎಕ್ಸ್ಐ, ವಿಎಕ್ಸ್ಐ (ಒ), ವಿಎಕ್ಸ್ಐ, ವಿಎಕ್ಸ್ಐ ಎಎಂಟಿ ಮತ್ತು ವಿಎಕ್ಸ್ಐ (ಒ) ಎಎಂಟಿ ಎಂಬ ಐದು ವೇರಿಯೆಂಟ್‌ಗಳಲ್ಲಿ ನೀಡಲಾಗುವುದು.
ಮೊದಲೇ ಹೇಳಿದಂತೆ ಈ ಎಲ್ಲಾ ವೇರಿಯೆಂಟ್‌ಗಳಲ್ಲಿ ಸಿಗುವ ಸ್ಟ್ಯಾಂಡರ್ಡ್ ಫೀಚರ್ಸ್ ಜೊತೆಗೆ ಹಿಂಭಾಗದ ಅಂಡರ್ ಬಾಡಿ ಸ್ಪಾಯ್ಲರ್, ಶೈನಿಂಗ್ ಡೋರ್ ಸಿಲ್‌ಗಳು, ಡೋರ್ ವೈಸರ್‌ಗಳು, ಬೂಟ್‌ನ ಮೇಲ್ಭಾಗದಲ್ಲಿ ಸ್ಪಾಯ್ಲರ್, ಫಾಗ್ ಲ್ಯಾಂಪ್‌ಗಳು ಮತ್ತು ಬದಿಗಳಲ್ಲಿ ಮೌಲ್ಡಿಂಗ್ ಅಕ್ಸೆಸೊರಿಗಳು ಬ್ಲಿಟ್ಜ್ ಎಡಿಷನ್‌ನಲ್ಲಿ ಉಚಿತವಾಗಿ ಸಿಗಲಿವೆ.

ಮಾರುತಿ ಸ್ವಿಫ್ಟ್ ಬ್ಲಿಟ್ಜ್ ಬೆಲೆಯು ಹಬ್ಬದ ಸೀಸನ್‌ನಲ್ಲಿ ಕೇವಲ ರೂ. 6.49 ಲಕ್ಷದಿಂದ 8.02 ಲಕ್ಷ ರೂ. (ಎಕ್ಸ್ ಶೂರೂಂ) ಬೆಲೆಯಲ್ಲಿ ಖರೀದಿಗೆ ಲಭ್ಯವಿದೆ. ಈ ಸ್ಪೆಷಲ್ ಎಡಿಷನ್, ಮೇಲೆ ತಿಳಿಸಿದ ಹೆಚ್ಚುವರಿ ಅಕ್ಸೆಸೊರಿಗಳನ್ನು ಬಿಟ್ಟರೆ ಇನ್ಯಾವುದೇ ಹೊಸ ಅಂಶಗಳನ್ನು ಹೊಂದಿರುವುದಿಲ್ಲ. ಎಂಜಿನ್ ಹಾಗೂ ಪರ್ಫಾಮೆನ್ಸ್ ನಲ್ಲಿ ಯಾವುದೇ ಬದಲಾವಣೆ ಇರುವುದಿಲ್ಲ.
ಹೊಸ ಸ್ವಿಫ್ಟ್ ಬ್ಲಿಟ್ಞ್ ಎಡಿಷನ್‌ನಲ್ಲಿ ಅದೇ Z-ಸೀರಿಸ್ 1.2 ಲೀಟರ್ ಪೆಟ್ರೋಲ್ ಎಂಜಿನ್ ಅನ್ನು ನೀಡಲಾಗಿದೆ. ಇದು 80.46 bhp ಪವರ್ ಮತ್ತು 111.7 Nm ಟಾರ್ಕ್ ಅನ್ನು ಉತ್ಪಾದಿಸುತ್ತದೆ. 5-ಸ್ಪೀಡ್ ಮ್ಯಾನ್ಯುವಲ್ ಟ್ರಾನ್ಸ್‌ಮಿಷನ್ ಅಥವಾ 5-ಸ್ಪೀಡ್ AMT ಯುನಿಟ್ ಅನ್ನು ನೀಡಲಾಗಿದೆ. ಮ್ಯಾನುವಲ್ನಲ್ಲಿ 24.80km ಮೈಲೇಜ್ ಹಾಗೂ ಆಟೋಮ್ಯಾಟಿಕ್‌ನಲ್ಲಿ 25.75 ಕಿ.ಮೀ ಮೈಲೇಜ್ ನೀಡುತ್ತದೆ.

ಸುರಕ್ಷತೆಗಾಗಿ 6 ಏರ್‌ಬ್ಯಾಗ್, EBD (ಎಲೆಕ್ಟ್ರಾನಿಕ್ ಬ್ರೇಕ್‌ಫೋರ್ಸ್ ಡಿಸ್ಟ್ರಿಬ್ಯೂಷನ್), 3 - ಪಾಯಿಂಟ್ ಸೀಟ್‌ಬೆಲ್ಟ್‌ಗಳು, TCS (ಟ್ರಾಕ್ಷನ್ ಕಂಟ್ರೋಲ್ ಸಿಸ್ಟಮ್), ABS (ಆಂಟಿಲಾಕ್ ಬ್ರೇಕಿಂಗ್ ಸಿಸ್ಟಮ್), ಸೀಟ್ ಬೆಲ್ಟ್ ರಿಮೈಂಡರ್ ಒಳಗೊಂಡಂತೆ ವಿವಿಧ ರಕ್ಷಣಾತ್ಮಕ ವೈಶಿಷ್ಟ್ಯಗಳನ್ನು ನೀಡಲಾಗಿದೆ. ಈಗ ಹೊಸ ಸ್ವಿಫ್ಟ್ ಬ್ಲಿಟ್ಜ್ ಎಡಿಷನ್ ಬಗ್ಗೆ ನಿಮ್ಮ ಅನಿಸಿಕೆಗಳನ್ನು ಕಮೆಂಟ್‌ನಲ್ಲಿ ತಿಳಿಸಿ.
ಇತ್ತೀಚೆಗೆ ಸಿಎನ್‌ಜಿ ಬಿಡುಗಡೆ: ಕಳೆದ ತಿಂಗಳು ಸಿಎನ್‌ಜಿ ವೇರಿಯೆಂಟ್ ಕೂಡ ಪರಿಚಯಿಸಿದ್ದು, ಇದು 1.2-ಲೀಟರ್ ಮೂರು ಸಿಲಿಂಡರ್ ಎಂಜಿನ್ ಹೊಂದಿದ್ದು, 70 ಬಿಹೆಚ್ ಪವರ್ ಮತ್ತು 112 ಎನ್ಎಂ ಟಾರ್ಕ್ ಉತ್ಪಾದಿಸುತ್ತದೆ. ಇದು 5-ಸ್ಪೀಡ್ ಮ್ಯಾನುವಲ್ ಗೇರ್‌ಬಾಕ್ಸ್ ಅನ್ನು ಸ್ಟ್ಯಾಂಡರ್ಡ್ ಆಗಿ ಪಡೆದಿದೆ. 32.85 ಕಿ.ಮೀ ಮೈಲೇಜ್ ಅನ್ನು ನೀಡುತ್ತದೆ ಎಂದು ಕಂಪನಿ ಹೇಳಿದೆ.


Click it and Unblock the Notifications








