Maruti Swift CNG: ಹೊಸ ಮಾರುತಿ ಸುಜುಕಿ ಸ್ವಿಫ್ಟ್‌ ಸಿಎನ್‌ಜಿ ಕಾರು ಶೀಘ್ರ ಬಿಡುಗಡೆ.. 31 ಕಿ.ಮೀ ಮೈಲೇಜ್?

ಭಾರತದ ಅತಿದೊಡ್ಡ ವಾಹನ ತಯಾರಕ ಸಂಸ್ಥೆಯಾಗಿ ಮಾರುತಿ ಸುಜುಕಿ (Maruti Suzuki) ಖ್ಯಾತಿಗಳಿಸಿದೆ. ನೆಕ್ಸಾ ಹಾಗೂ ಅರೆನಾ ಡೀಲರ್‌ಶಿಪ್ ಮೂಲಕ ಆಲ್ಟೊ, ಸೆಲರಿಯೊ, ಫ್ರಾಂಕ್ಸ್, ಬಲೆನೊ, ವ್ಯಾಗನ್ಆರ್, ಇಗ್ನಿಸ್, ಜಿಮ್ನಿ ಸೇರಿದಂತೆ ವಿವಿಧ ಕಾರುಗಳನ್ನು ಮಾರಾಟಗೊಳಿಸುತ್ತಿದೆ. ಕಳೆದ ತಿಂಗಳು ದೇಶೀಯ ಮಾರುಕಟ್ಟೆಯಲ್ಲಿ ನಾಲ್ಕನೇ ತಲೆಮಾರಿನ 'ಸ್ವಿಫ್ಟ್‌' ಹ್ಯಾಚ್‌ಬ್ಯಾಕ್‌ನ್ನು ರೂ.6.49 ಲಕ್ಷ ಆರಂಭಿಕ ಬೆಲೆಗೆ (ಎಕ್ಸ್ ಶೋರೂಂ) ಬಿಡುಗಡೆಗೊಳಿಸಿತ್ತು. ಮುಂಬರುವ ದಿನಗಳಲ್ಲಿ ಈ ಕಾರನ್ನು ಸಿಎನ್‌ಜಿ ರೂಪದಲ್ಲಿ ಕೂಡ ಪರಿಚಯಿಸಲು ಕಂಪನಿಯು ಸಾಕಷ್ಟು ತಯಾರಿಯನ್ನು ಮಾಡಿಕೊಳ್ಳುತ್ತಿದೆ. ಆ ಬಗ್ಗೆ ಇಲ್ಲಿದೆ ಹೆಚ್ಚಿನ ಮಾಹಿತಿ.

ಸದ್ಯ ಮಾರುತಿ ಸುಜುಕಿ ಸ್ವಿಫ್ಟ್‌ ಸಿಎನ್‌ಜಿ (Maruti Suzuki Swift CNG) ಕಾರು ಅಭಿವೃದ್ಧಿ ಹಂತದಲ್ಲಿದೆ ಎಂದು ಹಲವು ಮಾಧ್ಯಮಗಳು ವರದಿ ಮಾಡಿವೆ. ಇದು ಬೈಕ್‌ಗೂ ಮೀರಿಸುವ ಮೈಲೇಜ್‌ನ್ನು ನೀಡಬಹುದು. ಸರಿ ಸುಮಾರು 30.9 ಕೆಎಂ/ಕೆಜಿ ಇಂಧನ ದಕ್ಷತೆ (Fuel Efficiency) ಹೊಂದಿರಲಿದೆ ಎಂದು ಅಂದಾಜಿಸಲಾಗಿದೆ. ಈಗಿರುವ ಹೊಸ ಸ್ವಿಫ್ಟ್‌ ಪೆಟ್ರೋಲ್ ರೂಪಾಂತರ (ವೇರಿಯೆಂಟ್)ಗಳು 24.8 ರಿಂದ 25.72 ಕೆಎಂಪಿಎಲ್‌ವರೆಗೆ ಮೈಲೇಜ್ ಕೊಡುತ್ತವೆ.

Maruti Suzuki Swift CNG Car Launch Soon 31 Km Mileage Details

ಮುಂಬರಲಿರುವ ಸಿಎನ್‌ಜಿ ಚಾಲಿತ ಸ್ವಿಫ್ಟ್‌ ಮಾದರಿ (ಮಾಡೆಲ್)ಯು ಪೆಟ್ರೋಲ್ ಕಾರಿನಂತೆಯೇ 1.2-ಲೀಟರ್ 3-ಸಿಲಿಂಡರ್ ನ್ಯಾಚುರಲ್ ಆಸ್ಪಿರೇಟೆಡ್ ಪೆಟ್ರೋಲ್ ಎಂಜಿನ್‌ನ್ನು ಪಡೆದಿರಬಹುದು. ಆದಾಗ್ಯೂ ಕಡಿಮೆ ಪವರ್ (ಶಕ್ತಿ) ಮತ್ತು ಪೀಕ್ ಟಾರ್ಕ್ ಉತ್ಪಾದಿಸಲಿದೆ ಎಂದು ಹೇಳಲಾಗಿದೆ. ಜೊತೆಗೆ 5-ಸ್ಪೀಡ್ ಮ್ಯಾನುವಲ್ ಗೇರ್‌ಬಾಕ್ಸ್ ಆಯ್ಕೆಯನ್ನು ಒಳಗೊಂಡಿರುವ ನಿರೀಕ್ಷೆಯಿದೆ.

ಪೆಟ್ರೋಲ್ ಆವೃತ್ತಿಗೆ ಹೋಲಿಕೆ ಮಾಡಿದರೆ ಸ್ವಿಫ್ಟ್‌ ಸಿಎನ್‌ಜಿ ಕೊಂಚ ಅಧಿಕ ಬೆಲೆಯನ್ನು ಹೊಂದಿರಬಹುದು. ಬಹುತೇಕ 90 ಸಾವಿರದಷ್ಟು ಹೆಚ್ಚಿನ ದರವನ್ನು ಪಡೆದಿರಲಿದೆ ಎಂದು ಹೇಳಲಾಗಿದೆ. ಈ ಕಾರಿಗೆ ಟಾಟಾ ಟಿಯಾಗೊ ಸಿಎನ್‌ಜಿ, ಹ್ಯುಂಡೈ ಗ್ರಾಂಡ್ ಐ10 ನಿಯೋಸ್ ಸಿಎನ್‌ಜಿ, ಟಾಟಾ ಪಂಚ್ ಸಿಎನ್‌ಜಿ ಹಾಗೂ ಹ್ಯುಂಡೈ ಎಕ್ಸ್‌ಟರ್ ಸಿಎನ್‌ಜಿ ಮಾದರಿಗಳು ಪ್ರಬಲ ಪ್ರತಿಸ್ಪರ್ಧಿಯಾಗುವ ಸಾಧ್ಯತೆಯಿದೆ.

Maruti Suzuki Swift CNG Car Launch Soon 31 Km Mileage Details

ಮೇ.9ರಂದು ಬಿಡುಗಡೆಯಾದ ನೂತನ ಮಾರುತಿ ಸುಜುಕಿ ಸ್ವಿಫ್ಟ್‌ ಹ್ಯಾಚ್‌ಬ್ಯಾಕ್‌ ಆಕರ್ಷಕ ವಿನ್ಯಾಸವನ್ನು ಹೊಂದಿದ್ದು, ಎಲ್ಇಡಿ ಪ್ರೊಜೆಕ್ಟರ್ ಹೆಡ್‌ಲ್ಯಾಂಪ್‌ಗಳು, ಎಲ್ಇಡಿ ಡಿಆರ್‌ಎಲ್‌ಗಳು, ಎಲ್ಇಡಿ ಫಾಗ್ ಲೈಟ್‌ಗಳು, 15-ಇಂಚಿನ ಡೈಮಂಡ್-ಕಟ್ ಅಲಾಯ್ ವೀಲ್‌ಗಳನ್ನು ಪಡೆದಿದೆ. ಎಲ್ಎಕ್ಸ್ಐ, ವಿಎಕ್ಸ್ಐ, ವಿಎಕ್ಸ್ಐ (ಒ), ಝಡ್ಎಕ್ಸ್ಐ ಒಳಗೊಂಡಂತೆ ವಿವಿಧ ರೂಪಾಂತರಗಳೊಂದಿಗೂ ದೊರೆಯುತ್ತದೆ.

ಈ ಸ್ವಿಫ್ಟ್ 1.2-ಲೀಟರ್ 3-ಸಿಲಿಂಡರ್ ಝಡ್ ಸೀರಿಯಸ್ ಪೆಟ್ರೋಲ್ ಎಂಜಿನ್ ಒಳಗೊಂಡಿದ್ದು, 80 ಪಿಎಸ್ ಗರಿಷ್ಠ ಪವರ್ (ಶಕ್ತಿ) ಹಾಗೂ 112 ಎನ್ಎಂ ಪೀಕ್ ಟಾರ್ಕ್ ಹೊರಹಾಕುವ ಸಾಮರ್ಥ್ಯವನ್ನು ಹೊಂದಿದೆ. ಜೊತೆಗೆ 5-ಸ್ಪೀಡ್ ಮ್ಯಾನುವಲ್/ 5-ಸ್ಪೀಡ್ ಆಟೋಮೆಟಿಕ್ ಗೇರ್‌ಬಾಕ್ಸ್‌ನೊಂದಿಗೂ ಲಭ್ಯವಿದೆ. ಇದರಲ್ಲಿ 5 ಮಂದಿ ಆರಾಮದಾಯಕವಾಗಿ ಪ್ರಯಾಣಿಬಹುದು.

Maruti Suzuki Swift CNG Car Launch Soon 31 Km Mileage Details

ಹೊಚ್ಚ ಹೊಸ ಮಾರುತಿ ಸುಜುಕಿ ಸ್ವಿಫ್ಟ್‌ ಹ್ಯಾಚ್‌ಬ್ಯಾಕ್‌ ಸಿಜ್ಲಿಂಗ್ ರೆಡ್, ಪರ್ಲ್ ಆರ್ಕ್ಟಿಕ್ ವೈಟ್, ಮ್ಯಾಗ್ಮಾ ಗ್ರೇ ಸೇರಿದಂತೆ ವಿವಿಧ ಆಕರ್ಷಕ ಬಣ್ಣಗಳ ಆಯ್ಕೆಯಲ್ಲಿ ಸಿಗಲಿದ್ದು, 9-ಇಂಚಿನ ಇನ್ಫೋಟೈನ್‌ಮೆಂಟ್ ಸ್ಕ್ರೀನ್‌, ಆಟೋ ಕ್ಲೇಮೇಟ್ ಕಂಟ್ರೋಲ್, ಸೆಮಿ ಡಿಜಿಟಲ್ ಇನ್ಸ್ಟ್ರುಮೆಂಟ್ ಕ್ಲಸ್ಟರ್ ಒಳಗೊಂಡಂತೆ ಹತ್ತಾರು ವೈಶಿಷ್ಟ್ಯಗಳನ್ನು ಹೊಂದಿದೆ. ಸುರಕ್ಷತೆಗಾಗಿ 6 ಏರ್‌ಬ್ಯಾಗ್‌, ABS (ಆಂಟಿಲಾಕ್ ಬ್ರೇಕಿಂಗ್ ಸಿಸ್ಟಮ್), EBD (ಎಲೆಕ್ಟ್ರಾನಿಕ್ ಬ್ರೇಕ್‌ಫೋರ್ಸ್ ಡಿಸ್ಟ್ರಿಬ್ಯೂಷನ್) ಅನ್ನು ಪಡೆದಿದೆ.

ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.

Article Published On: Wednesday, June 5, 2024, 11:50 [IST]
English summary
Maruti suzuki swift cng car launch soon 31 km mileage details
Read more on maruti suzuki india
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+