ಜನಸಾಮಾನ್ಯನ ಲಾಂಗ್‌ಡ್ರೈವ್ ಕನಸು ನನಸು: ಸ್ವಿಫ್ಟ್ ಹೈಬ್ರಿಡ್‌ನಲ್ಲಿ 35 ಕಿಮೀ ಮೈಲೇಜ್ ಪಕ್ಕಾ!
ಅತಿ ಶೀಘ್ರದಲ್ಲೇ ಭಾರತದಲ್ಲಿ ಮಾರುತಿ ಸುಜುಕಿಯ ಪ್ರಸಿದ್ದ ಕಾರು ಮಾದರಿಯಾದ ಸ್ವಿಫ್ಟ್ ಕಾರಿನ ಹೈಬ್ರಿಡ್ ಮಾದರಿಯನ್ನು ಲಾಂಚ್ ಮಾಡಲಿದ್ದು ಈಗಾಗಲೇ ಇದರ ಬಗ್ಗೆ ಹಲವರಿಗೆ ನಿರೀಕ್ಷೆ ಹೆಚ್ಚಾಗಿದೆ. ಪ್ರಮುಖವಾಗಿ ಈ ಕಾರು ಭಾರತೀಯ ಮಾರುಕಟ್ಟೆಗೆ ಲಾಂಚ್ ಆದ ಮೇಲೆ ಹೆಚ್ಚು ಹೈಲೈಟ್ ಆಗಲಿರುವುದು ಇದರ ಮೈಲೇಜ್‌ನಿಂದ ಎಂಬುದು ಬಹುತೇಕ ಖಚಿತವಾಗಿದೆ.
ಹೌದು, ಹೊಸ ಮಾರುತಿ ಸುಜುಕಿ ಸ್ವಿಫ್ಟ್ ಹೈಬ್ರಿಡ್ ಕಾರಿನ ವಿನ್ಯಾಸಗಳಲ್ಲಿ ಕೊಂಚ ಬದಲಾವಣೆ ಕಾಣಲಿದೆಯಾದರೂ, ಇದು ಬಹುತೇಕ ಕಳೆಯ ಸ್ವಿಫ್ಟ್ ಅನ್ನೇ ಡಿಸೈನ್ ವಿಭಾಗದಲ್ಲಿ ಹೋಲಲಿದೆ. ಆದರೆ ಕಾರು ಪಂಡಿತರ ಪ್ರಕಾರ ಹೊಸ ಮಾರುತಿ ಸುಜುಕಿ ಸ್ವಿಫ್ಟ್ ಹೈಬ್ರಿಡ್ ಕಾರಿನಲ್ಲಿ ಕಂಡು ಬರಲಿರುವ ಪ್ರಮುಖ ಬದಲಾವಣೆ ಎಂದರೆ ಅದು ಈ ಕಾರಿನ ಎಂಜಿನ್.

ಹೈಬ್ರಿಡ್ ಟಚ್‌ನೊಂದಿಗೆ ಬರಲಿರುವ ಈ ಕಾರಿನ ಎಂಜಿನ್ ಗ್ರಾಹಕರಿಗೆ ಹೆಚ್ಚಿನ ಮೈಲೇಜ್ ನೀಡುವ ಮೂಲಕ ಮುಖದಲ್ಲಿ ಮಂದಹಾಸ ಮೂಡುವಂತೆ ಮಾಡಲಿದೆ. ಮಾಹಿತಿಗಳ ಪ್ರಕಾರ ಈ ಕಾರು ಈಗಿರುವ ಸ್ವಿಫ್ಟ್ ಕಾರು ಸುಮಾರು ೨೩ ರಿಂದ ೨೪ ಕಿಮೀ ಮೈಲೇಜ್ ನೀಡುತ್ತಿದ್ದು ಗ್ರಾಹಕರು ಇದರಿಂದ ಸಂತುಷ್ಟಗೊಂಡಿದ್ದಾರೆ. ಆದರೆ ಹೈಬ್ರಿಡ್ ಬಂದರೆ ಈ ಕಾರಿನ ಮೈಲೇಜ್ 24 ರಿಂದ 35 ರವರೆಗೆ ಏರಲಿದ್ದು ಇದು ಗ್ರಾಹಕರಿಗೆ ಮತ್ತಷ್ಟು ಖುಷಿಯನ್ನು ನೀಡಲಿದೆ.
ಈ ಮೂಲಕ ಒಬ್ಬ ಸಾಮಾನ್ಯ ವ್ಯಕ್ತಿಯೂ ಸಹ ಕಾರನ್ನು ತೆಗೆದುಕೊಂಡು ಲಾಂಗ್ ಡ್ರೈವ್ ಹೋಗುವ ದಿನ ಹತ್ತಿರವಾಗುತ್ತಿದೆ. ಹೊಸ ಮಾರುತಿ ಸುಜುಕಿ ಸ್ವಿಫ್ಟ್ ಹೈಬ್ರಿಡ್ ಕಾರಿನಲ್ಲಿ 35 ಕಿಮೀ ಮೈಲೇಜ್ ನೀಡಿದರೆ ಆರಾಮವಾಗಿ ಯಾರು ಬೇಕಾದರೂ ಮೈಲೇಜ್ ಬಗ್ಗೆ ಯೋಚನೆ ಮಾಡದೆ ಕಾರನ್ನು ತೆಗೆದುಕೊಂಡು ಲಾಂಗ್ ಡ್ರೈವ್ ಹೋಗಬಹುದು ಎಂಬುದು ಎಲ್ಲರ ನಿರೀಕ್ಷೆ.

ಈ ಮೂಲಕ ಮಧ್ಯಮ ವರ್ಗದ ಜನರ ಜೇಬಿಗೂ ಕತ್ತರಿ ಬೀಳದೆ ದೂರ ಪ್ರಯಾಣವನ್ನು ಮಾಡಬಹುದಾಗಿದೆ. ಇನ್ನು ಸ್ವಿಫ್ಟ್ ಕಾರಿನಲ್ಲಿ ಸಾಕಷ್ಟು ಸ್ಥಳಾವಕಾಶ ಇದ್ದು ನಾಲ್ಕು ಜನರಿಗೆ ಆರಾಮವಾಗಿ ಪ್ರಯಾಣ ಮಾಡಬಹುದಾಗಿದೆ. ಹಾಗಾಗಿ ಸಾಮಾನ್ಯ ವ್ಯಕ್ತಿಯೊಬ್ಬ ತನ್ನ ಕುಟುಂಬದೊಂದಿಗೆ ಲಾಂಗ್ ಡ್ರೈವ್ ಹೋಗಬಹುದು.
ಸದ್ಯ, ದೇಶೀಯ ಮಾರುಕಟ್ಟೆಯಲ್ಲಿ ಮಾರುತಿ ಸುಜುಕಿ ಸ್ವಿಫ್ಟ್, ರೂ.5.99 ಲಕ್ಷದಿಂದ ರೂ.9.03 ಲಕ್ಷ ಎಕ್ಸ್ ಶೋರೂಂ ಬೆಲೆಯಲ್ಲಿ ಖರೀದಿಗೆ ಲಭ್ಯವಿದೆ. ಪೆಟ್ರೋಲ್ ಹಾಗೂ ಸಿಎನ್‌ಜಿ ಎಂಜಿನ್, ಮ್ಯಾನುವಲ್ ಹಾಗೂ ಆಟೋಮೆಟಿಕ್ ಗೇರ್ ಬಾಕ್ಸ್ ಆಯ್ಕೆಯಲ್ಲಿ ಗ್ರಾಹಕರಿಗೆ ಸಿಗುತ್ತದೆ . ರೂಪಾಂತರಗಳಿಗೆ ಅನುಗುಣವಾಗಿ 22.38 - 22.56 kmpl ಮೈಲೇಜ್ ನೀಡುತ್ತದೆ.
ಮುಂಬರಲಿವ ಈ ಕಾರು, 1.2 - ಲೀಟರ್ ಹೈಬ್ರಿಡ್ ಪೆಟ್ರೋಲ್ ಎಂಜಿನ್ ಹಾಗೂ ಇ - ಸಿವಿಟಿ ಗೇರ್ ಬಾಕ್ಸ್ ಆಯ್ಕೆಯೊಂದಿಗೆ ಗ್ರಾಹಕರಿಗೆ ಖರೀದಿಗೆ ಸಿಗುವ ಸಾಧ್ಯತೆಯಿದ್ದು, 30 - 35 kmpl ಮೈಲೇಜ್ ನೀಡಬಹುದು ಎನ್ನಲಾಗಿದೆ. ಮತ್ತೊಂದು, ನಾನ್ ಹೈಬ್ರಿಡ್ 1.2 - ಲೀಟರ್ 3 - ಸಿಲಿಂಡರ್ ಪೆಟ್ರೋಲ್ ಎಂಜಿನ್ ಆಯ್ಕೆಯೊಂದಿಗೂ ಖರೀದಿದಾರಿಗೆ ಲಭ್ಯವಾಗಬಹುದು.
ಅಲ್ಲದೆ, ನೂತನ ಸ್ವಿಫ್ಟ್, ಮರು - ವಿನ್ಯಾಸಗೊಳಿಸಲಾದ ಮುಂಭಾಗದ ಬಂಪರ್, ನವೀನವಾದ ಕಪ್ಪು ಬಣ್ಣದ ಗ್ರಿಲ್, ಆಕರ್ಷಕ ಎಲ್ಇಡಿ ಹೆಡ್‌ಲ್ಯಾಂಪ್, ಡ್ಯುಯಲ್ - ಟೋನ್ ವೀಲ್ಸ್ ಕೂಡ ಹೊಂದಿದೆ. ಇದನ್ನು ಜಾಗತಿಕವಾಗಿ ಪ್ರದರ್ಶಿಸಲಾದ ಮಾದರಿಯಲ್ಲಿ ನೋಡಬಹುದು. ಸುರಕ್ಷತೆಯ ಸಲುವಾಗಿ ADAS (ಅಡ್ವಾನ್ಸ್ಡ್ ಡ್ರೈವರ್ ಅಸಿಸ್ಟೆನ್ಸ್ ಸಿಸ್ಟಮ್ಸ್) ವೈಶಿಷ್ಟ್ಯದೊಂದಿಗೆ ಲಾಂಚ್ ಆಗಬಹುದು ಎಂದು ಹೇಳಲಾಗಿದೆ.
ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.


Click it and Unblock the Notifications