ಕೇವಲ 25 ದಿನಗಳಷ್ಟೇ ಬಾಕಿ... 2024ರ ಮಾರುತಿ ಸ್ವಿಫ್ಟ್ ಬಿಡುಗಡೆ: ವಿಶೇಷತೆಗಳೇನು?
ಮಾರುತಿ ಸುಜುಕಿ ಕಂಪನಿಯು ತನ್ನ ಹೊಸ 2024ರ ಸ್ವಿಫ್ಟ್ (Maruti Suzuki Swift) ಕಾರನ್ನು ಮೇ 9, 2024ರಂದು ಬಿಡುಗಡೆಗೊಳಿಸಲು ಎಲ್ಲಾ ಸಿದ್ಧತೆಗಳನ್ನು ಮಾಡಿಕೊಂಡಿದೆ. ಈ ಮುಂಬರುವ ಹೊಸ ಕಾರುಗಳು ಕೇವಲ ನವೀಕರಣ ಮಾತ್ರವಲ್ಲದೇ ತಂತ್ರಜ್ಞಾನ, ಸುರಕ್ಷತೆ ಮತ್ತು ವಿನ್ಯಾಸ ವರ್ಧನೆಗಳನ್ನು ಹೊಂದಿರಲಿವೆ.
ಮುಂಬರುವ ಹೊಸ ಮಾರುತಿ ಸ್ವಿಫ್ಟ್ ಹ್ಯಾಚ್ ಬ್ಯಾಕ್ ಅನ್ನು ಮೊದಲಿಗೆ ಜಪಾನ್‌ನಲ್ಲಿ ಕಳೆದ ವರ್ಷ ಅನಾವರಣಗೊಳಿಸಲಾಗಿತ್ತು. ಆಗ ಮಾರುತಿ ಸುಜುಕಿ ಸ್ವಿಫ್ಟ್‌ನ ಹೊರಭಾಗವು ಮರುವಿನ್ಯಾಸಗೊಳಿಸಿದ ಫ್ರಂಟ್ ಗ್ರಿಲ್, ಸುಧಾರಿತ ಸುರಕ್ಷತಾ ವೈಶಿಷ್ಟ್ಯಗಳು, ಕ್ರೋಮ್ ಸ್ಟ್ರಿಪ್ ಮತ್ತು ಇಂಟಿಗ್ರೇಟೆಡ್ ರಾಡಾರ್ ಮಾಡ್ಯೂಲ್‌ನಂತಹ ಅಪ್‌ಡೇಟ್‌ಗಳು ಇರುವ ಮಾಹಿತಿ ಹೊರಬಿದ್ದಿತ್ತು. ಇದೀಗ ತನ್ನ ಹೊಸ ಪ್ಲಾಟ್ ಫಾರ್ಮ್, ಸುಧಾರಿತ ವೈಶಿಷ್ಟ್ಯಗಳು, ಹೊಸ ಪವರ್ ಟ್ರೇನ್ ಮತ್ತು ಸುಧಾರಿತ ಕಾರ್ಯಕ್ಷಮತೆಯೊಂದಿಗೆ ಭಾರತೀಯ ಗ್ರಾಹಕರನ್ನು ಆಕರ್ಷಿಸಲು ಸಜ್ಜಾಗಿದೆ. ಸದ್ಯ ನಮಗಿರುವ ಮಾಹಿತಿಯ ಪ್ರಕಾರ ಯಾವೆಲ್ಲಾ ನವೀಕರಣಗಳನ್ನು ಪಡೆಯಲಿದೆ ಎಂಬುದನ್ನು ಇಲ್ಲಿ ತಿಳಿಸಿದ್ದೇವೆ.

2024ರ ಮಾರುತಿ ಸ್ವಿಫ್ಟ್ ನವೀಕರಿಸಿದ ಎಲ್ಇಡಿ ಹೆಡ್‌ಲ್ಯಾಂಪ್‌ಗಳು ಮತ್ತು ಟೈಲ್‌ಲ್ಯಾಂಪ್‌ಗಳನ್ನು ಸಹ ಹೊಂದಿದೆ. ಇದು ಹೆಚ್ಚು ಆಧುನಿಕ ಮತ್ತು ಆಕರ್ಷಕ ನೋಟಕ್ಕೆ ಕೊಡುಗೆ ನೀಡಲಿದೆ. ಈ ಹ್ಯಾಚ್ ಬ್ಯಾಕ್ ಸ್ಪೋರ್ಟಿ ಅಲಾಯ್ ವೀಲ್‌ಗಳನ್ನು ಹೊಂದಿರಲಿದ್ದು, ಮಾರುತಿ ಸುಜುಕಿಯ ಜನಪ್ರಿಯ ಬಲೆನೊ ಮತ್ತು ಫ್ರಾಂಕ್ಸ್ ಮಾದರಿಗಳಂತೆ ಅಪ್‌ಡೇಟೆಡ್ ಇಂಟೀರಿಯರ್ ಪಡೆಯಲಿದೆ.
ಎಂಜಿನ್: 2024ರ ಸ್ವಿಫ್ಟ್ ಕಾರಿನಲ್ಲಿ 1.2 ಲೀಟರಿನ ಝಡ್ ಸೀರಿಸ್ ಪೆಟ್ರೋಲ್ ಎಂಜಿನ್ ಅಳವಡಿಸಲಾಗಿದ್ದು, ಈ ಎಂಜಿನ್ 83 ಬಿಹೆಚ್‌ಪಿ ಪವರ್ ಹಾಗೂ 108 ಎನ್‌ಎಂ ಟಾರ್ಕ್ ಉತ್ಪಾದಿಸಲಿದೆ. ಈ ಎಂಜಿನ್ ಸಿಎನ್‌ಜಿ ಸೇರಿದಂತೆ ಮ್ಯಾನುವಲ್ ಮತ್ತು ಆಟೋಮ್ಯಾಟಿಕ್ ಟ್ರಾನ್ಸ್ಮಿಷನ್ ಆಯ್ಕೆಗಳೊಂದಿಗೆ ಲಭ್ಯವಿದೆ, ಇದು ಪರ್ಫಾಮೆನ್ಸ್ ಮತ್ತು ಮೈಲೇಜ್ ಮಿಶ್ರಣದ ಭರವಸೆ ನೀಡುತ್ತದೆ.

ಹೊಸ ವೈಶಿಷ್ಟ್ಯಗಳು: 2024ರ ಮಾರುತಿ ಸ್ವಿಫ್ಟ್ ಕಾರಿನ ಒಳಭಾಗದಲ್ಲಿ ಆಂಡ್ರಾಯ್ಡ್ ಆಟೋ ಮತ್ತು ಆಪಲ್ ಕಾರ್ ಪ್ಲೇಗಾಗಿ ವೈರ್ ಲೆಸ್ ಕನೆಕ್ಟಿವಿಟಿಯೊಂದಿಗೆ ಅತ್ಯಾಧುನಿಕ 9.0 - ಇಂಚಿನ ಟಚ್ ಸ್ಕ್ರೀನ್ ಇನ್ಫೋಟೈನ್ ಮೆಂಟ್ ಅನ್ನು ಪಡೆಯುತ್ತದೆ. ಸುಧಾರಿತ ಚಾಲಕ ಸಹಾಯ ವ್ಯವಸ್ಥೆಗಳ (Advanced driver - assistance systems (ADAS) ಸಂಭಾವ್ಯ ಸೇರ್ಪಡೆಯೊಂದಿಗೆ ಆರು ಏರ್‌ಬ್ಯಾಗ್‌ಗಳು ಮತ್ತು ಎಲೆಕ್ಟ್ರಾನಿಕ್ ಸ್ಥಿರತೆ (Electronic stability) ಅನ್ನು ಸೇರಿಸುವುದರೊಂದಿಗೆ ಸುರಕ್ಷತೆಗೆ ಹೆಚ್ಚಿನ ಆದ್ಯತೆ ನೀಡಲಾಗುತ್ತದೆ ಎಂದು ಹೇಳಲಾಗಿದೆ. ಇವಿಷ್ಟೇ ಅಲ್ಲದೇ ಸನ್‌ರೂಫ್ ನೀಡುವ ಕುರಿತ ಮಾತುಗಳು ಬಲವಾಗಿ ಕೇಳಿಬರುತ್ತಿವೆ.
ಹೇಗಿರಲಿದೆ 2024ರ ಡಿಜೈರ್: ಸ್ವಿಫ್ಟ್ ಬಿಡುಗಡೆಯ ನಂತರ, ಗಮನವು ಹೊಸ ಮಾರುತಿ ಸುಜುಕಿ ಡಿಜೈರ್ ಕಡೆಗೆ ತಿರುಗುತ್ತದೆ. ಇದು ಸ್ವಿಫ್ಟ್‌ನ ಅನೇಕ ನವೀಕರಣಗಳನ್ನು ಪಡೆಯಲು ಸಜ್ಜಾಗಿದೆ. ಫೇಸ್ ಲಿಫ್ಟೆಡ್ ಡಿಜೈರ್ ಕಾರಿನಲ್ಲಿ ಮರುವಿನ್ಯಾಸಗೊಳಿಸಿದ ಎಲ್ಇಡಿ ಹೆಡ್‌ಲ್ಯಾಂಪ್‌ಗಳು, ನವೀಕರಿಸಿದ ಫ್ರಂಟ್ ಗ್ರಿಲ್ ಮತ್ತು ನಯವಾದ 16 ಇಂಚಿನ ಅಲಾಯ್ ವ್ಹೀಲ್‌ಗಳನ್ನು ಹೊಂದಿರಲಿದೆ.

ಒಳಭಾಗದಲ್ಲಿ, ಫ್ಲೋಟಿಂಗ್ ಇನ್ಫೋಟೈನ್‌ಮೆಂಟ್ ಸಿಸ್ಟಮ್ ಮತ್ತು ಸ್ಲಿಮ್ ಎಸಿ ವೆಂಟ್‌ಗಳು ಕ್ಯಾಬಿನ್ ಅನ್ನು ಆಧುನೀಕರಿಸುತ್ತವೆ. ಜೊತೆಗೆ ವರ್ಧಿತ ಇನ್ - ಕಾರ್ ಮನರಂಜನೆಗಾಗಿ ವೈರ್ ಲೆಸ್ ಸಂಪರ್ಕವನ್ನು ನೀಡಲಿದ್ದಾರೆ. ಡಿಜೈರ್‌ನ ಟಾಪ್ - ಸ್ಪೆಕ್ ರೂಪಾಂತರವು ಸಿಂಗಲ್ - ಪ್ಯಾನ್ ಸನ್ ರೂಫ್ ಅನ್ನು ಸಹ ಪಡೆಯಲಿದೆ.
ಸ್ವಿಫ್ಟ್ ನ 1.2-ಲೀಟರ್ ಝಡ್ ಸೀರಿಸ್ ಪೆಟ್ರೋಲ್ ಎಂಜಿನ್ ಅನ್ನು ಹಂಚಿಕೊಂಡಿರುವ ಡಿಜೈರ್ ಸುಧಾರಿತ ಮೈಲೇಜ್ ಮತ್ತು ಕ್ರಿಯಾತ್ಮಕ ಚಾಲನಾ ಪರ್ಫಾಮೆನ್ಸ್ ನೀಡುವ ಗುರಿಯನ್ನು ಹೊಂದಿದೆ. ಈ ನವೀಕರಣವು ಡಿಜೈರ್ ಅನ್ನು ಕಾಂಪ್ಯಾಕ್ಟ್ ಸೆಡಾನ್ ಮಾರುಕಟ್ಟೆಯಲ್ಲಿ ದೃಢವಾಗಿ ಸ್ಪರ್ಧಿಸುವಂತೆ ಮಾಡುತ್ತದೆ. ಪ್ರಮುಖ ಪ್ರತಿಸ್ಪರ್ಧಿಗಳಾದ ಹ್ಯುಂಡೈ ಔರಾ, ಟಾಟಾ ಟಿಗೋರ್ ಮತ್ತು ಹೋಂಡಾ ಅಮೇಜ್‌ಗೆ ಸವಾಲು ಹಾಕುತ್ತದೆ.


Click it and Unblock the Notifications