25 ಕಿ.ಮೀ ಮೈಲೇಜ್ ನೀಡುವ ಹೊಸ ಪೆಟ್ರೋಲ್ ಕಾರು: ಹ್ಯುಂಡೈ, ಸಿಟ್ರನ್‌ಗಿಂತ ಬೆಸ್ಟ್!
ಮಾರುತಿ ಸುಜುಕಿ ಇತ್ತೀಚೆಗೆ ತನ್ನ ನಾಲ್ಕನೇ ತಲೆಮಾರಿನ ಮಾರುತಿ ಸುಜುಕಿ ಸ್ವಿಫ್ಟ್ ಅನ್ನು ಬಿಡುಗಡೆ ಮಾಡಿದ್ದಾರೆ. ಈ ಹ್ಯಾಚ್‌ಬ್ಯಾಕ್‌ನ ಪ್ರಮುಖ ಹೈಲೆಟ್ ಎಂದರೆ ಒಂದು ಲೀಟರ್‌ಗೆ 25 ಕಿ.ಮೀ.ಗಿಂತ ಹೆಚ್ಚು ಮೈಲೇಜ್ ನೀಡುವುದಾಗಿ ಕಂಪನಿ ಹೇಳಿರುವುದು. ಈ ಹೊಸ ಸ್ವಿಫ್ಟ್ ಕುರಿತ ಹೆಚ್ಚಿನ ಮಾಹಿತಿಯನ್ನು ಇಲ್ಲಿ ನೋಡೋಣ.
2024ರ ಮಾರುತಿ ಸುಜುಕಿ ಸ್ವಿಫ್ಟ್ ಕಾರಿನ ಬೆಲೆಯು ಭಾರತದ ಎಕ್ಸ್ ಶೋರೂಂ ದರದಂತೆ ರೂ.6.49 ಲಕ್ಷದಿಂದ ಪ್ರಾರಂಭವಾಗಿ ರೂ.9.64 ಲಕ್ಷಗಳವರೆಗೆ ಹೋಗುತ್ತದೆ. ಮಾರುತಿ ಸುಜುಕಿ ದೇಶಿಯ ಮಾರಾಟಕ್ಕಾಗಿ ಇದನ್ನು ತನ್ನ ಗುಜರಾತ್ ಘಟಕದಲ್ಲಿ ಉತ್ಪಾದಿಸುತ್ತಿದೆ. ಮಾರುತಿ ಸ್ವಿಫ್ಟ್ MT ಆವೃತ್ತಿಯು 24.8 ಕಿ.ಮೀ ಮೈಲೇಜ್ ನೀಡಿದರೆ, ಸ್ವಿಫ್ಟ್ AMT 25.75 ಕಿ.ಮೀ ಮೈಲೇಜ್ ನೀಡುವುದಾಗಿ ಕಂಪನಿ ಹೇಳಿದೆ. ಟ್ರಾನ್ಸ್ ಮಿಷನ್ ಆಯ್ಕೆಗಳು ಒಂದೇ ರೀತಿಯಾಗಿದ್ದು, 5-ಸ್ಪೀಡ್ MT ಮತ್ತು 5-ಸ್ಪೀಡ್ AMT ನೀಡಲಾಗಿದೆ. ಈ ಕಾರಿನಲ್ಲಿ 5 ಮಂದಿ ಆರಾಮದಾಯಕವಾಗಿ ಕುಳಿತುಕೊಂಡು ಪ್ರಯಾಣಿಸಬಹುದು.

ಹೊಸ ಮಾರುತಿ ಸುಜುಕಿ ಸ್ವಿಫ್ಟ್‌ನಲ್ಲಿ 9-ಇಂಚಿನ ಇನ್ಫೋಟೈನ್‌ಮೆಂಟ್ ಸ್ಕ್ರೀನ್, ಆಂಡ್ರಾಯ್ಡ್ ಆಟೋ, ಆಪಲ್ ಕಾರ್ ಪ್ಲೇ, ಯುಎಸ್‌ಬಿ ಟೈಪ್-ಎ & ಟೈಪ್-ಸಿ ಪೋರ್ಟ್, ಸೆಮಿ ಡಿಜಿಟಲ್ ಇನ್ಸ್ಟ್ರುಮೆಂಟ್ ಕ್ಲಸ್ಟರ್, ವೈರ್‌ಲೆಸ್ ಚಾರ್ಜರ್, ಅರ್ಕಾಮಿಸ್ ಟ್ಯೂನ್ಡ್ ಸೌಂಡ್ ಸಿಸ್ಟಮ್, ಆಟೋ ಕ್ಲೇಮೇಟ್ ಕಂಟ್ರೋಲ್ ಸೇರಿದಂತೆ ವಿವಿಧ ವೈಶಿಷ್ಟ್ಯಗಳನ್ನು ಹೊಂದಿದೆ.
ಇದರ ಹಳೆಯ ಕೆ-ಸೀರಿಸ್ 1.2-ಲೀಟರ್ 4-ಸಿಲಿಂಡರ್ ಪೆಟ್ರೋಲ್ ಎಂಜಿನ್ (90 ಪಿಎಸ್ ಮತ್ತು 113 ಎನ್ಎಂ) ಅನ್ನು ಸ್ಥಗಿತಗೊಳಿಸಿ, 2024ರ ಮಾರುತಿ ಸುಜುಕಿ ಸ್ವಿಫ್ಟ್‌ನಲ್ಲಿ ಹೊಸ ಝಡ್-ಸೀರಿಸ್ 1.2-ಲೀಟರ್ 3-ಸಿಲಿಂಡರ್ ಪೆಟ್ರೋಲ್ ಎಂಜಿನ್ (82 ಪಿಎಸ್ ಮತ್ತು 112 ಎನ್ಎಂ) ಅನ್ನು ನೀಡಲಾಗಿದೆ. ಪವರ್ ಮತ್ತು ಟಾರ್ಕ್ ಅಂಕಿಅಂಶಗಳನ್ನು ಕಡಿಮೆ ಮಾಡಲಾಗಿದೆ.

ಹೊಸ ಮಾರುತಿ ಸ್ವಿಫ್ಟ್ ಸುರಕ್ಷತೆಗೂ ಹೆಸರುವಾಸಿಯಾಗಿದೆ. ಎಲ್ಲ ಮಾದರಿಗಳು 6 ಏರ್‌ಬ್ಯಾಗ್, ABS (ಆಂಟಿಲಾಕ್ ಬ್ರೇಕಿಂಗ್ ಸಿಸ್ಟಮ್), EBD (ಎಲೆಕ್ಟ್ರಾನಿಕ್ ಬ್ರೇಕ್‌ಫೋರ್ಸ್ ಡಿಸ್ಟ್ರಿಬ್ಯೂಷನ್), 3-ಪಾಯಿಂಟ್ ಸೀಟ್‌ಬೆಲ್ಟ್‌ಗಳು, ಸೀಟ್ ಬೆಲ್ಟ್ ರಿಮೈಂಡರ್ ಒಳಗೊಂಡಂತೆ ಹಲವು ರಕ್ಷಣಾತ್ಮಕ ವೈಶಿಷ್ಟ್ಯಗಳನ್ನು ಹೊಂದಿದೆ. ಈ ಕಾರು ಎಲ್ಇಡಿ ಪ್ರೊಜೆಕ್ಟರ್ ಹೆಡ್‌ಲ್ಯಾಂಪ್‌ಗಳು, ಎಲ್ಇಡಿ ಡಿಆರ್‌ಎಲ್‌ಗಳು ಮತ್ತು ಅಲಾಯ್ ವೀಲ್‌ಗಳನ್ನು ಹೊಂದಿದೆ. ಜೊತೆಗೆ ಸಿಜ್ಲಿಂಗ್ ರೆಡ್, ಪರ್ಲ್ ಆರ್ಕ್ಟಿಕ್ ವೈಟ್ ಸೇರಿದಂತೆ ವಿವಿಧ ಬಣ್ಣಗಳ ಆಯ್ಕೆಯಲ್ಲಿಯೂ ಸಿಗುತ್ತದೆ. ಮಾರುತಿ ಸುಜುಕಿ ಸ್ವಿಫ್ಟ್ ಹ್ಯಾಚ್‌ಬ್ಯಾಕ್‌ಗೆ ಹುಂಡೈ ಎಕ್ಸ್‌ಟರ್ ಹಾಗೂ ಟಾಟಾ ಪಂಚ್ ಕಾರುಗಳು ಪ್ರಬಲ ಪ್ರತಿಸ್ಪರ್ಧಿಯಾಗಿವೆ.
ಬೆಂಗಳೂರು ಆನ್‌ರೋಡ್ ಬೆಲೆ & EMI: ಬೆಂಗಳೂರಿನಲ್ಲಿ ಬೇಸ್ ವೇರಿಯೆಂಟ್ (ಆರಂಭಿಕ ರೂಪಾಂತರ) 'ಎಲ್ಎಕ್ಸ್ಐ' ರೂ.7.86 ಲಕ್ಷ, 'ವಿಎಕ್ಸ್ಐ' ರೂ.8.82 ಲಕ್ಷ, 'ಝಡ್ಎಕ್ಸ್ಐ' ರೂ.10.02 ಲಕ್ಷ ಮತ್ತು ಟಾಪ್ ಎಂಡ್ ಮಾಡೆಲ್ (ಗರಿಷ್ಠ ಶ್ರೇಣಿ) ಆಗಿರುವ 'ಝಡ್ಎಕ್ಸ್ಐ ಪ್ಲಸ್' ಎಎಂಟಿ ಡಿಟಿ ರೂ.11.63 ಲಕ್ಷ ಆನ್-ರೋಡ್ ಬೆಲೆಯನ್ನು ಹೊಂದಿದೆ.

ನೀವು ಈ ಕಾರನ್ನು ರೂ. 2 ಲಕ್ಷ ಡೌನ್ ಪೇಮೆಂಟ್ ಪಾವತಿಸಿ, ಖರೀದಿಸಿದರೆ ಶೇಕಡ 9.8% ಬಡ್ಡಿ ದರದಲ್ಲಿ 5 ವರ್ಷದ ಅವಧಿಗೆ ತಿಂಗಳಿಗೆ ರೂ.12,404 ಇಎಂಐ (EMI) ಕಟ್ಟಬೇಕು. ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ.
ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.


Click it and Unblock the Notifications