ಜನ ಶೋರೂಂ ಮುಂದೆ ಕ್ಯೂ ನಿಂತು ಖರೀದಿಸುತ್ತಿದ್ದ ಸ್ವಿಫ್ಟ್ ಕಾರಿನ ಮಾರಾಟದಲ್ಲಿ ಕುಸಿತ: ಕಾರಣವೇನು?
ಮಾರುತಿ ಸುಜುಕಿ ಸ್ವಿಫ್ಟ್ ದೀರ್ಘಕಾಲದಿಂದಲೇ ದೇಶದಲ್ಲಿ ಹೆಚ್ಚು ಮಾರಾಟವಾಗುವ ಕಾರುಗಳಲ್ಲಿ ಇದು ಕೂಡ ಒಂದಾಗಿದೆ. ಭಾರತದಲ್ಲಿ ಎಷ್ಟೇ ಅತ್ಯಾಧುನಿಕ ಕಾರುಗಳು ಮಾರುಕಟ್ಟೆಗೆ ಬಂದರೂ ಈ ಮಾರುತಿ ಸ್ವಿಫ್ಟ್ ಕಾರಿಗೆ ದೊಡ್ಡ ಅಭಿಮಾನಿಗಳ ಬಳಗವಿದೆ. ಈ ಬಹುಜನಪ್ರಿಯ ಮಾರುತಿ ಸುಜುಕಿ ಸ್ವಿಫ್ಟ್ (Maruti Suzuki Swift ) ಕಾರು ಭಾರತೀಯ ಮಾರುಕಟ್ಟೆಯಲ್ಲಿ ಮೊದಲ ಬಾರಿಗೆ 2005ರಲ್ಲಿ ಬಿಡುಗಡೆಯಾಗಿತ್ತು. ಮಾರುತಿ ಸುಜುಕಿ ಸ್ವಿಫ್ಟ್ ಭಾರತೀಯ ಮಾರುಕಟ್ಟೆಯಲ್ಲಿ ಅತ್ಯಂತ ಜನಪ್ರಿಯ ಹ್ಯಾಚ್‌ಬ್ಯಾಕ್ ಕಾರುಗಳಲ್ಲಿ ಒಂದಾಗಿದೆ. 2024ರ ಆಗಸ್ಟ್ ತಿಂಗಳ ಮಾರುತಿ ಸ್ವಿಫ್ಟ್ ಕಾರಿನ ಮಾರಾಟದ ಅಂಕಿ ಅಂಶಗಳನ್ನು ಬಹಿರಂಗಪಡಿಸಿದೆ.
2024ರ ಆಗಸ್ಟ್ ತಿಂಗಳಿನಲ್ಲಿ ಮಾರುತಿ ಸುಜುಕಿ ಸ್ವಿಫ್ಟ್ ಮಾದರಿಯ 12,844 ಯುನಿಟ್‌ಗಳು ಮಾರಾಟವಾಗಿವೆ. ಇನ್ನು ಕಳೆದ ವರ್ಷದ ಇದೇ ಆಗಸ್ಟ್ ತಿಂಗಳಿನಲ್ಲಿ 18,653 ಯುನಿಟ್‌ಗಳು ಮಾರಾಟವಾಗಿತ್ತು. ಇದನ್ನು ಕಳೆದ ತಿಂಗಳ ಮಾರಾಟಕ್ಕೆ ಹೋಲಿಸಿದರೆ ವರ್ಷದಿಂದ ವರ್ಷದ ಮಾರಾಟದಲ್ಲಿ ಶೇ.31ರಷ್ಟು ಕುಸಿತವನ್ನು ಕಂಡಿದೆ. 2024ರ ಆಗಸ್ಟ್ ತಿಂಗಳಿನಲ್ಲಿ ಟಾಪ್-10 ಅತ್ಯುತ್ತಮ ಮಾರಾಟವಾದ ಕಾರುಗಳ ಪಟ್ಟಿಯಲ್ಲಿ ಮಾರುತಿ ಸ್ವಿಫ್ಟ್ 7 ನೇ ಸ್ಥಾನದಲ್ಲಿದೆ.

ಈ ಜನಪ್ರಿಯ ಮಾರುತಿ ಸ್ವಿಫ್ಟ್ ಕಾರು LXi, VXi, VXi (O), ZXi, ಮತ್ತು ZXi+ ಎಂಬ ರೂಪಾಂತರಗಳಲ್ಲಿ ಲಭ್ಯವಿದೆ. ಈ ಹೊಸ ಸ್ವಿಫ್ಟ್ ಕಾರಿನ ಬೆಲೆಯು ರೂ.6.49 ಲಕ್ಷದಿಂಡ ರೂ.9.64 ಲಕ್ಷವಾಗಿದೆ. ಈ ಎಲ್ಲಾ ಬೆಲೆಗಳು ಎಕ್ಸ್ ಶೋರೂಂ ಪ್ರಕಾರವಾಗಿದೆ. ಹಿಂದಿನ ಸ್ವಿಫ್ಟ್ ಕಾರಿನ ಬೆಲೆಗೆ ಹೋಲಿಸಿದರೆ ಅಂದಾಜು 25,000 ರೂ. ದುಬಾರಿಯಾಗಿದೆ. ಈ ಹೊಸ ಸ್ವಿಫ್ಟ್ ಕಾರಿನ ವಿನ್ಯಾಸ, ಒಳಭಾಗ ಮತ್ತು ತಾಂತ್ರಿಕ ವಿಷಯದಲ್ಲಿ ಗಮನಾರ್ಹ ಬದಲಾವಣೆಗಳೊಂದಿಗೆ ಬಂದಿದೆ.
ಹೊಸ ಮಾರುತಿ ಸ್ವಿಫ್ಟ್ ಕಾರಿನಲ್ಲಿ ಹೊಸ Z-ಸೀರಿಸ್ 1.2 ಲೀಟರ್ ಪೆಟ್ರೋಲ್ ಎಂಜಿನ್ ಅನ್ನು ನೀಡಿದೆ. ಈ ಎಂಜಿನ್ 80.46 bhp ಪವರ್ ಮತ್ತು 111.7 Nm ಟಾರ್ಕ್ ಅನ್ನು ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದೆ. ಈ ಎಂಜಿನ್ ಅನ್ನು 5-ಸ್ಪೀಡ್ ಮ್ಯಾನ್ಯುವಲ್ ಟ್ರಾನ್ಸ್‌ಮಿಷನ್ ಅಥವಾ 5-ಸ್ಪೀಡ್ AMT ಯುನಿಟ್ (AGS) ಅನ್ನು ಜೋಡಿಸಲಾಗಿದೆ.

ಮಾರುತಿ ಸುಜುಕಿ ಸ್ವಿಫ್ಟ್ ಕಾರಿನ ಮ್ಯಾನುವಲ್ ರೂಪಾಂತರವು 24.80km ನಷ್ಟು ಮೈಲೇಜ್ ನೀಡಿದರೆ, AGS ರೂಪಾಂತರವು 25.75 ಕಿ.ಮೀ ಮೈಲೇಜ್ ಅನ್ನು ನೀಡುತ್ತದೆ. ನೂತನ ಮಾರುತಿ ಸ್ವಿಫ್ಟ್ ಭರಪೂರ ವೈಶಿಷ್ಟ್ಯಗಳೊಂದಿಗೆ ಕೈಗೆಟುಕುವ ದರದಲ್ಲಿ ಸಿಗುವುದರಿಂದ ಹಲವರ ಕುಟುಂಬದ ಆಯ್ಕೆಯ ವಾಹನವಾಗುವುದರಲ್ಲಿ ಎರಡು ಮಾತಿಲ್ಲ.
ಮಾರುತಿ ಸ್ವಿಫ್ಟ್ ಅನ್ನು ಸಿಜ್ಲಿಂಗ್ ರೆಡ್, ಲುಸ್ಟರ್ ಬ್ಲೂ, ನಾವೆಲ್ ಆರೆಂಜ್, ಮ್ಯಾಗ್ಮಾ ಗ್ರೇ, ಸ್ಪ್ಲೆಂಡಿಡ್ ಸಿಲ್ವರ್ ಮತ್ತು ಪರ್ಲ್ ಆರ್ಕ್ಟಿಕ್ ವೈಟ್ ಎಂಬ ಆರು ಮೊನೊಟೋನ್ ಪೇಂಟ್ ಸ್ಕೀಮ್‌ಗಳಲ್ಲಿ ಲಬ್ಯವಿದೆ. ಇನ್ನು ಮಿಡ್ನೈಟ್ ಬ್ಲ್ಯಾಕ್ ರೂಫ್ನೊಂದಿಗೆ ಸಿಜ್ಲಿಂಗ್ ರೆಡ್, ಮಿಡ್ನೈಟ್ ಬ್ಲ್ಯಾಕ್ ರೂಫ್ನೊಂದಿಗೆ ಲುಸ್ಟರ್ ಬ್ಲೂ ಮತ್ತು ಮಿಡ್ನೈಟ್ ಬ್ಲ್ಯಾಕ್ ರೂಫ್ನೊಂದಿಗೆ ಪರ್ಲ್ ಆರ್ಕ್ಟಿಕ್ ವೈಟ್ ಎಂಬ ಮೂರು ಡ್ಯುಯಲ್-ಟೋನ್ ಬಣ್ಣ ಆಯ್ಕೆಗಳನ್ನು ಹೊಂದಿವೆ.

ಈ ಮಾರುತಿ ಸುಜುಕಿ ಸ್ವಿಫ್ಟ್ ಕಾರಿನಲ್ಲಿ 9 - ಇಂಚಿನ ಇನ್ಫೋಟೈನ್‌ಮೆಂಟ್ ಸ್ಕ್ರೀನ್, ಆಂಡ್ರಾಯ್ಡ್ ಆಟೋ, ಆಪಲ್ ಕಾರ್ ಪ್ಲೇ, ಆಟೋ ಕ್ಲೇಮೇಟ್ ಕಂಟ್ರೋಲ್, ಸೆಮಿ ಡಿಜಿಟಲ್ ಇನ್ಸ್ಟ್ರುಮೆಂಟ್ ಕ್ಲಸ್ಟರ್, ವೈರ್‌ಲೆಸ್ ಚಾರ್ಜರ್, ಅರ್ಕಾಮಿಸ್ ಟ್ಯೂನ್ಡ್ ಸೌಂಡ್ ಸಿಸ್ಟಮ್ ಸೇರಿದಂತೆ ವಿವಿಧ ವೈಶಿಷ್ಟ್ಯಗಳನ್ನು ಹೊಂದಿದೆ. ಜೊತೆಗೆ ಸುರಕ್ಷತೆಗಾಗಿ 6 ಏರ್‌ಬ್ಯಾಗ್,ಅನ್ನು ಪಡೆದಿದೆ.
ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.


Click it and Unblock the Notifications