ಸುನಾಮಿಯಂತೆ ಬುಕ್ ಆಗುತ್ತಿದೆ ಸ್ವಿಫ್ಟ್‌ನ ಮಿಡ್ ವೇರಿಯಂಟ್: 7 ಲಕ್ಷಕ್ಕೆ 6 ಏರ್‌ಬ್ಯಾಗ್ಸ್, 27 ಕಿಮೀ ಮೈಲೇಜ್
ಮಾರುತಿ ಸುಜುಕಿ ಎಂದರೆ ಅದು ಜನರೊಂದಿಗೆ ಇರುವಂತಹ ಕಂಪನಿ. ಕಾಲಕ್ಕೆ ತಕ್ಕಂತೆ ಜನರ ಬೇಡಿಕೆಗಳನ್ನು ಪೂರೈಸುತ್ತಾ, ಅವರಿಗೆ ಬೇಕಾದ ರೀತಿಯಲ್ಲಿನ ಕಾರುಗಳನ್ನು ನಿರ್ಮಿಸುತ್ತಾ ಬಂದಿದೆ. ಇದೀಗ ಹೊಸದಾಗಿ ಹಲವಾರು ಬದಲಾವಣೆಗಳೊಂದಿಗೆ ಬಿಟ್ಟಿರುವ ಮಾರುತಿ ಸುಜುಕಿ ಸ್ವಿಫ್ಟ್ ಸಹ ಎಲ್ಲರ ಮೆಚ್ಚುಗೆಗೆ ಪಾತ್ರವಾಗುತ್ತಿದೆ. ಕಳೆದ ಬಾರಿಯ ಸ್ವಿಫ್ಟ್‌ಗಿಂತ ಹೆಚ್ಚು ಅಗ್ರೆಸಿವ್ ಲುಕ್ ಹೊಂದಿರುವ ಈ ಕಾರು ಇದೀಗ ಭಾರೀ ಸಂಖ್ಯೆಯಲ್ಲಿ ಭಾರತೀಯ ಮಾರುಕಟ್ಟೆಯಲ್ಲಿ ಬುಕ್ ಆಗುತ್ತಿದೆ. ಇನ್ನೇನು ಕೆಲವೇ ತಿಂಗಳಲ್ಲಿ ಮಾರುತಿ ಸುಜುಕಿ ಸ್ವಿಫ್ಟ್ ಸಿಎನ್‌ಜಿ ಸಹ ಮಾರುಕಟ್ಟೆಯನ್ನು ಪ್ರವೇಶಿಸಲಿದೆ.
ಆದರೆ ಸ್ವಿಫ್ಟ್ ಕುರಿತಾಗಿ ಬಂದಿರುವ ಹೊಸ ಮಾಹಿತಿಯೇನೆಂದು ಇಂದಿನ ಈ ಲೇಖನದಲ್ಲಿ ನೋಡೋಣ. ಮಾಹಿತಿಗಳ ಪ್ರಕಾರ ಮಾರುತಿ ಸುಜುಕಿ ಸ್ವಿಫ್ಟ್‌ನ ಮಿಡ್ ವೇರಿಯಂಟ್ ಸಾಕಷ್ಟು ಸಂಖ್ಯೆಯಲ್ಲಿ ಬುಕ್ ಆಗುತ್ತಿದೆ ಎಂದು ತಿಳಿದು ಬಂದಿದೆ. ಮಾರುತಿ ಸುಜುಕಿ ಸ್ವಿಫ್ಟ್ ಇಲ್ಲಿಯವರೆಗೆ ಸುಮಾರು 40 ಸಾವಿರಕ್ಕೂ ಅಧಿಕ ಬುಕಿಂಗ್‌ಗಳನ್ನು ಸ್ವೀಕರಿಸಿದೆ.

ಇಷ್ಟೂ ಬುಕಿಂಗ್‌ಗಳನ್ನು ಗಮನಿಸಿದರೆ ತಿಳಿದು ಬರುವ ವಿಷಯವೆಂದರೆ ಇದರ VXI ವೇರಿಯಂಟ್ ಸುಮಾರು 40% ನಷ್ಟು ಬುಕಿಂಗ್ ಅನ್ನು ಪಡೆದರೆ, ಸ್ವಿಫ್ಟ್‌ನ ಟಾಪ್ ಸ್ಪೆಕ್ ವೇರಿಯಂಟ್ ಆದ ZXI, ZXI+ 19% ಮತ್ತು ಇದರ AMT ವೇರಿಯಂಟ್ ಸುಮಾರು 17%ನಷ್ಟು ಬುಕ್ ಆಗಿದೆ. ಮಾಹಿತಿಗಳ ಪ್ರಕಾರ ಮುಂದಿನ ಕೆಲವೇ ವಾರಗಳಲ್ಲಿ ಸ್ವಿಫ್ಟ್ ಸಿಎನ್‌ಜಿ ಆವೃತ್ತಿಯನ್ನು ಸಹ ಮಾರುತಿ ಸುಜುಕಿ ಮಾರುಕಟ್ಟೆಗೆ ತರಲಿದೆ.
ನೂತನ ಮಾರುತಿ ಸುಜುಕಿ ಸ್ವಿಫ್ಟ್ (Maruti Suzuki Swift) ಕಾರು ರೂ.6.49 ಲಕ್ಷದಿಂದ ರೂ.9.65 ಲಕ್ಷ ಎಕ್ಸ್ ಶೋರೂಂ ಬೆಲೆಯನ್ನು ಪಡೆದಿದೆ. ಎಲ್ಎಕ್ಸ್ಐ, ವಿಎಕ್ಸ್ಐ, ವಿಎಕ್ಸ್ಐ (ಒ), ಝಡ್ಎಕ್ಸ್ಐ, ಝಡ್ಎಕ್ಸ್ಐ ಪ್ಲಸ್ ರೂಪಾಂತರ (ವೇರಿಯೆಂಟ್)ಗಳು ಮತ್ತು ಸಿಜ್ಲಿಂಗ್ ರೆಡ್, ಪರ್ಲ್ ಆರ್ಕ್ಟಿಕ್ ವೈಟ್, ಮ್ಯಾಗ್ಮಾ ಗ್ರೇ, ನಾವೆಲ್ ಆರೆಂಜ್ ಒಳಗೊಂಡಂತೆ ಆಕರ್ಷಕ ಬಣ್ಣಗಳೊಂದಿಗೂ ಲಭ್ಯವಿದೆ.

ಈ ಮಾರುತಿ ಸುಜುಕಿ ಸ್ವಿಫ್ಟ್ 1.2-ಲೀಟರ್ 3-ಸಿಲಿಂಡರ್ ಝಡ್ ಸೀರಿಯಸ್ ಪೆಟ್ರೋಲ್ ಎಂಜಿನ್ ಹೊಂದಿದ್ದು, 80 ಪಿಎಸ್ ಗರಿಷ್ಠ ಪವರ್ (ಶಕ್ತಿ) ಹಾಗೂ 112 ಎನ್ಎಂ ಪೀಕ್ ಟಾರ್ಕ್ ಹೊರಹಾಕುತ್ತದೆ. ಜೊತೆಗೆ 5-ಸ್ಪೀಡ್ ಮ್ಯಾನುವಲ್/ 5-ಸ್ಪೀಡ್ ಆಟೋಮೆಟಿಕ್ ಗೇರ್ ಬಾಕ್ಸ್ ಆಯ್ಕೆಯನ್ನು ಪಡೆದಿದೆ. 24.8 ರಿಂದ 25.72 ಕೆಎಂಪಿಎಲ್ ವರೆಗೆ ಮೈಲೇಜ್ ನೀಡುತ್ತದೆ.
ನೂತನ ಹ್ಯಾಚ್‌ಬ್ಯಾಕ್ ಒಳಭಾಗವು ಅತ್ಯಾಧುನಿಕ ವಿನ್ಯಾಸವನ್ನು ಹೊಂದಿದ್ದು, 5 ಮಂದಿ ಆರಾಮದಾಯಕವಾಗಿ ಕುಳಿತುಕೊಂಡು ಪ್ರಯಾಣಿಸಬಹುದು. ಈ ಕಾರು 9-ಇಂಚಿನ ಇನ್ಫೋಟೈನ್‌ಮೆಂಟ್ ಸ್ಕ್ರೀನ್, ಆಂಡ್ರಾಯ್ಡ್ ಆಟೋ, ಆಪಲ್ ಕಾರ್ ಪ್ಲೇ, ಆಟೋ ಕ್ಲೇಮೇಟ್ ಕಂಟ್ರೋಲ್, ಸೆಮಿ-ಡಿಜಿಟಲ್ ಇನ್ಸ್ಟ್ರುಮೆಂಟ್ ಕ್ಲಸ್ಟರ್, ವೈರ್‌ಲೆಸ್ ಚಾರ್ಜರ್, ಅರ್ಕಾಮಿಸ್-ಟ್ಯೂನ್ಡ್ ಸೌಂಡ್ ಸಿಸ್ಟಮ್, ಯುಎಸ್‌ಬಿ ಟೈಪ್-ಎ & ಟೈಪ್-ಸಿ ಪೋರ್ಟ್ ಸೇರಿದಂತೆ ವಿವಿಧ ವೈಶಿಷ್ಟ್ಯಗಳನ್ನು ಹೊಂದಿದೆ.

ಈ ಮಾರುತಿ ಸುಜುಕಿ ಸ್ವಿಫ್ಟ್ ಸುರಕ್ಷತೆಗೂ ಹೆಸರುವಾಸಿಯಾಗಿದೆ. ಎಲ್ಲ ಮಾದರಿಗಳು 6 ಏರ್‌ಬ್ಯಾಗ್, ABS (ಆಂಟಿಲಾಕ್ ಬ್ರೇಕಿಂಗ್ ಸಿಸ್ಟಮ್), EBD (ಎಲೆಕ್ಟ್ರಾನಿಕ್ ಬ್ರೇಕ್‌ಫೋರ್ಸ್ ಡಿಸ್ಟ್ರಿಬ್ಯೂಷನ್), TCS (ಟ್ರಾಕ್ಷನ್ ಕಂಟ್ರೋಲ್ ಸಿಸ್ಟಮ್), 3-ಪಾಯಿಂಟ್ ಸೀಟ್‌ಬೆಲ್ಟ್‌ಗಳು, ಸೀಟ್ ಬೆಲ್ಟ್ ರಿಮೈಂಡರ್ ಒಳಗೊಂಡಂತೆ ವಿವಿಧ ರಕ್ಷಣಾತ್ಮಕ ವೈಶಿಷ್ಟ್ಯಗಳನ್ನು ಪಡೆದಿದೆ. ಶೀಘ್ರದಲ್ಲಿಯೇ ಭಾರತ್ ಎನ್‌ಸಿಎಪಿ ಕ್ರ್ಯಾಶ್ ಟೆಸ್ಟ್‌ಗೂ ಒಳಪಡುವ ಸಾಧ್ಯತೆಯಿದೆ.
ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.


Click it and Unblock the Notifications