ಕೈಗೆಟುಕುವ ಬೆಲೆಯಲ್ಲಿ MPV ಸೇರಿದಂತೆ 5 ಹೊಸ ಕಾರುಗಳನ್ನು ಬಿಡುಗಡೆಗೊಳಿಸಲಿದೆ ಮಾರುತಿ
ಭಾರತದ ಅತಿ ದೊಡ್ಡ ಕಾರು ತಯಾರಕ ಕಂಪನಿಯಾದ ಮಾರುತಿ ಸುಜುಕಿಗೆ (Maruti Suzuki) 2024ರ ವರ್ಷ ಮಹತ್ವಪೂರ್ಣವಾಗಿದೆ. ಈ ವರ್ಷ 5 ಅತ್ಯಂತ ನಿರೀಕ್ಷಿತ ಮಾದರಿಗಳನ್ನು ಬಿಡುಗಡೆ ಮಾಡಲಿದೆ. ಈ ಐದು ಹೊಸ ಕಾರುಗಳು ಯಾವುವು, ಈ ವರ್ಷ ಹೊರಬರಲಿರುವ ಹೊಸ ಮಾರುತಿ ಸುಜುಕಿ ಮಾಡೆಲ್‌ಗಳ ವಿವರಗಳು ಇಲ್ಲಿವೆ.
2024ರ ಸ್ವಿಫ್ಟ್: ಮಾರುತಿ ಸುಜುಕಿ ಮೊದಲು ಹೊಸ 2024ರ ಸ್ವಿಫ್ಟ್ ಅನ್ನು ಶೀಘ್ರದಲ್ಲೇ ಬಿಡುಗಡೆ ಮಾಡಲಿದೆ. ಈ ಬಾರಿ ಹೊಸ ಎಲ್‌ಇಡಿ ಹೆಡ್‌ಲೈಟ್‌ಗಳು ಮತ್ತು ಡಿಆರ್‌ಎಲ್‌ಗಳೊಂದಿಗೆ ಸಂಪೂರ್ಣ ಹೊಸ ಮುಂಭಾಗದ ಗ್ರಿಲ್ ಮತ್ತು ಹೊಸ ಬಂಪರ್‌ನೊಂದಿಗೆ ಬರಲಿದೆ. ಇಂಟೀರಿಯರ್ ಕೂಡ ಮರುವಿನ್ಯಾಸಗೊಳಿಸಲಾಗಿದೆ. ಇದೇ ಮಾರ್ಚ್‌ನಲ್ಲಿ ಹೊಸ ಸ್ವಿಫ್ಟ್ ಬಿಡುಗಡೆಯಾಗಬಹುದು. ರೂ. 6 ಲಕ್ಷದ ಆರಂಭಿಕ ಬೆಲೆಯೊಂದಿಗೆ ಬಿಡುಗಡೆ ಮಾಡಬಹುದು.

2024 eVX ಎಲೆಕ್ಟ್ರಿಕ್ SUV: 2024 ಅಕ್ಟೋಬರ್‌ನಲ್ಲಿ ಕಂಪನಿಯು ತನ್ನ ಮೊದಲ ಎಲೆಕ್ಟ್ರಿಕ್ SUV ಆದ eVX ಅನ್ನು ಭಾರತದಲ್ಲಿ ಅಧಿಕೃತವಾಗಿ ಬಿಡುಗಡೆ ಮಾಡಲಿದೆ. ಈ ಹೊಸ EV ಮುಂಬರುವ ಹ್ಯುಂಡೈ ಕ್ರೆಟಾ EV ಮತ್ತು ಮಹೀಂದ್ರ XUV.e9 ಗೆ ಪ್ರತಿಸ್ಪರ್ಧಿಯಾಗಲಿದೆ. ದೊಡ್ಡ ಇನ್ಫೋಟೈನ್‌ಮೆಂಟ್, 360-ಡಿಗ್ರಿ ಕ್ಯಾಮೆರಾ, ADAS ನಂತಹ ವೈಶಿಷ್ಟ್ಯಗಳೊಂದಿಗೆ ಬರಲಿದೆ. ಬೆಲೆ ಸುಮಾರು 23 ಲಕ್ಷ ರೂ. ಎಂದು ಅಂದಾಜಿಸಲಾಗಿದೆ.
ಸುಜುಕಿ ಸ್ಪೇಸಿಯಾ ಮೂಲದ MPV: ಸುಜುಕಿ ಸ್ಪೇಸಿಯಾ ಸಣ್ಣ ಜಪಾನೀಸ್ MPV ಆಧಾರಿತ ಕೈಗೆಟುಕುವ MPV ಆಗಿದೆ. ಈ SUV ಯ ನಿಖರವಾದ ಬಿಡುಗಡೆ ದಿನಾಂಕವನ್ನು ಬಹಿರಂಗಪಡಿಸಿಲ್ಲ. ವರದಿಗಳ ಪ್ರಕಾರ ಇದು 2024 ರ ಅಂತ್ಯದ ವೇಳೆಗೆ ಬಿಡುಗಡೆಯಾಗಲಿದೆ. ಆಂತರಿಕವಾಗಿ YDB MPV ಎಂಬ ಹೆಸರನ್ನು ಹೊಂದಿದ್ದು, ಜನಪ್ರಿಯ ಬಜೆಟ್ ಸ್ನೇಹಿ 7-ಸೀಟರ್ MPV ಆಗಿರುವ ರೆನಾಲ್ಟ್ ಟ್ರೈಬರ್‌ಗೆ ಪ್ರಮುಖ ಪ್ರತಿಸ್ಪರ್ಧಿಯಾಗಲಿದೆ.

2024 ಡಿಜೈರ್: ಮಾರುತಿ ಸುಜುಕಿ ಸ್ವಿಫ್ಟ್ ಹ್ಯಾಚ್‌ಬ್ಯಾಕ್ ಆಧಾರಿತ ಸಬ್-ಕಾಂಪ್ಯಾಕ್ಟ್ ಸೆಡಾನ್ ಹೊಸ ಡಿಜೈರ್ ಕೂಡ ಇದೇ ವರ್ಷ ಬಿಡುಗಡೆಯಾಗಲಿದೆ. ಹೊಸ ಸ್ವಿಫ್ಟ್ ಬಿಡುಗಡೆಯಾದ ನಂತರ, 2024 ರ ಮಧ್ಯದಲ್ಲಿ ಹೊಸ ಡಿಜೈರ್ ಅನ್ನು ಬಿಡುಗಡೆ ಮಾಡಲಿದೆ. ಸ್ವಿಫ್ಟ್‌ನಂತೆ ಡಿಜೈರ್ ಕೂಡ ಪ್ರೀಮಿಯಂ ಆಗಿಬರಬಹುದು. ಡಿಜೈರ್ ಕೂಡ ರೂ. 6.52 ಲಕ್ಷ ಆರಂಭಿಕ ಬೆಲೆಯಲ್ಲಿ ಬಿಡುಗಡೆಯಾಗಬಹುದು.
ಡಿಜೈರ್ ಬದಲಾವಣೆಗಳ ವಿಷಯಕ್ಕೆ ಬಂದರೆ, ಡಿಜೈರ್ ಹೊಸ ಆಧುನೀಕರಿಸಿದ ಹೊರಭಾಗ ಮತ್ತು ನವೀಕರಿಸಿದ ಒಳಾಂಗಣವನ್ನು ಸಹ ಪಡೆಯಲಿದೆ. ಡಿಜೈರ್ ಸಬ್-ಕಾಂಪ್ಯಾಕ್ಟ್ ಸೆಡಾನ್ ವಿಭಾಗದಲ್ಲಿ ಎಲೆಕ್ಟ್ರಿಕ್ ಸನ್‌ರೂಫ್ ನೀಡುವ ಮೊದಲ ಕಾರು ಆಗಲಿದೆ ಎಂದು ವರದಿಯಾಗಿದೆ. ಇದು ಹೋಂಡಾ ಅಮೇಜ್, ಟಾಟಾ ಟಿಗೋರ್ ಮತ್ತು ಹ್ಯುಂಡೈ ಔರಾ ಮುಂತಾದವುಗಳೊಂದಿಗೆ ಸ್ಪರ್ಧಿಸಲಿದೆ.

2024 ಗ್ರಾಂಡ್ ವಿಟಾರಾ 7-ಸೀಟರ್: ಮಹೀಂದ್ರಾ ಎಕ್ಸ್‌ಯುವಿ700, ಟಾಟಾ ಸಫಾರಿ ಮತ್ತು ಹ್ಯುಂಡೈ ಅಲ್ಕಾಜರ್‌ನಂತಹ ಪ್ರತಿಸ್ಪರ್ಧಿಗಳನ್ನು ಎದುರಿಸಲು, ಮಾರುತಿ ಸುಜುಕಿ ಗ್ರ್ಯಾಂಡ್ ವಿಟಾರಾದ 7-ಸೀಟರ್ ಅನ್ನು ತರಲು ಸಜ್ಜಾಗುತ್ತಿದೆ. ವರದಿಗಳ ಪ್ರಕಾರ, ಕಂಪನಿಯು ಈ SUV ಗೆ ಮಾರುತಿ Y17 ಎಂಬ ಸಂಕೇತನಾಮವನ್ನು ನೀಡಿದೆ.
ಈ ಹೊಸ SUV ಹೆಚ್ಚು ವಿಶಿಷ್ಟವಾದ ನೋಟವನ್ನು ನೀಡಲು ಮತ್ತು ಅದರ ಎರಡು-ಸಾಲಿನ ಗ್ರಾಂಡ್ ವಿಟಾರಗಿಂತ ವಿಭಿನ್ನವಾಗಿ ಕಾಣಲು ಕೆಲವು ಡಿಸೈನ್ ಬದಲಾವಣೆಗಳನ್ನು ಸಹ ಪಡೆಯಬಹುದು. ಹೆಚ್ಚಾಗಿ, ಇದು ಈಗಿರುವ ಗ್ರ್ಯಾಂಡ್ ವಿಟಾರಾ ಕಾಂಪ್ಯಾಕ್ಟ್ SUV ಯಂತೆಯೇ ಇಂಟಿರಿಯರ್ ಮತ್ತು ಪವರ್‌ಟ್ರೇನ್ ಆಯ್ಕೆಗಳನ್ನು ಪಡೆಯಬಹುದು ಎಂದು ಮೂಲಗಳು ಹೇಳುತ್ತಿವೆ.

ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಇನ್ನು ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಹಂಚಿಕೊಳ್ಳುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ. ಜೊತೆಗೆ ನಿಮ್ಮ ಸ್ನೇಹಿತರಿಗೂ ಶೇರ್ ಮಾಡಿ.


Click it and Unblock the Notifications