ಹೆಚ್ಚು ಕೈಗೆಟುಕುವ ದರದಲ್ಲಿ ಹೊಸ ಎಂಪಿವಿ ಕಾರು ಬಿಡುಗಡೆಗೊಳಿಸಲಿದೆ ಮಾರುತಿ ಸುಜುಕಿ
ಭಾರತದ ಅತಿದೊಡ್ಡ ವಾಹನ ತಯಾರಕ ಕಂಪನಿಯಾದ ಮಾರುತಿ ಸುಜುಕಿ ಇಂಡಿಯಾ ಲಿಮಿಟೆಡ್ ಭಾರತೀಯ ಮಾರುಕಟ್ಟೆಯಲ್ಲಿ ಹಲವಾರು ಮಾದರಿಗಳನ್ನು ಮಾರಾಟ ಮಾಡುತ್ತಿದೆ. ಇದೀಗ ಮಾರುತಿ ಸುಜುಕಿ ಕಂಪನಿಯು ತನ್ನ ಸರಣಿಯನ್ನು ವಿಸ್ತರಿಸಲು ಮುಂದಾಗಿದೆ. ಮಾರುತಿ ಸುಜುಕಿ (Maruti Suzuki) ಕಂಪನಿಯು ಹೊಸ ಎಂಪಿವಿಯನ್ನು (MPV) ತಯಾರಿಸುತ್ತಿದೆ.
ದೇಶದ ಅತಿ ದೊಡ್ಡ ಕಾರು ಉತ್ಪಾದಕ ಸಂಸ್ಥೆಯು ತನ್ನ UV ಪೋರ್ಟ್‌ಫೋಲಿಯೊವನ್ನು ವಿಸ್ತರಿಸಿದೆ ಮತ್ತು ಇದು ಪ್ರಸಕ್ತ ಹಣಕಾಸು ವರ್ಷದಲ್ಲಿ ಬ್ರ್ಯಾಂಡ್ ಭಾರತದಲ್ಲಿ ಹೆಚ್ಚು ಮಾರಾಟವಾದ ಎಸ್‍ಯುವಿ ತಯಾರಕರಾಗಲು ಕಾರಣವಾಗಿದೆ. ಮುಂದಿನ ಎರಡು ವರ್ಷಗಳಲ್ಲಿ, ಇಂಡೋ-ಜಪಾನೀಸ್ ಬ್ರ್ಯಾಂಡ್ ಅದನ್ನು ಮತ್ತಷ್ಟು ಬಲಪಡಿಸಲು ಅದರ ಸರಣಿಗೆ ಹೆಚ್ಚಿನ ಯುವಿಗಳನ್ನು ಸೇರಿಸಿಕೊಳ್ಳುತ್ತದೆ.

ನ್ಯೂ ಜನರೇಷನ್ ಸ್ವಿಫ್ಟ್ ಮತ್ತು ಡಿಜೈರ್ ಈ ಕ್ಯಾಲೆಂಡರ್ ವರ್ಷದಲ್ಲಿ ಬಿಡುಗಡೆ ಮಾಡಲಿರುವಾಗ, 2024 ರ ಕೊನೆಯಲ್ಲಿ ಮೊದಲ ಎಲೆಕ್ಟ್ರಿಕ್ ಎಸ್‍ಯುವಿ, eVX ಅನ್ನು ಅನುಸರಿಸುತ್ತದೆ. ಏಳು ಸೀಟುಗಳ ಮಾರುತಿ ಸುಜುಕಿ ಗ್ರ್ಯಾಂಡ್ ವಿಟಾರಾ ಕೋಡ್ ನೆಮ್ Y17 ಮಾದರಿಯು 2025 ರಲ್ಲಿ ಬರಲಿದೆ. ಬ್ರ್ಯಾಂಡ್ ಆಂತರಿಕವಾಗಿ YDB ಎಂಬ ಕೋಡ್ ನೆಮ್ ಹೊಂದಿರುವ ಕಾಂಪ್ಯಾಕ್ಟ್ ಎಂಪಿವಿಯನ್ನು ಅಭಿವೃದ್ಧಿಪಡಿಸುತ್ತಿದೆ ಎಂದು ಹೇಳಲಾಗುತ್ತಿದೆ.
ಈ ಹೊಸ ಮಾದರಿಯು ಜಪಾನ್‌ನಲ್ಲಿ ಮಾರಾಟವಾದ ಸುಜುಕಿ ಸ್ಪೇಸಿಯಾವನ್ನು ಆಧರಿಸಿದೆ.ಇದು JDM-ಸ್ಪೆಕ್ MPV ಗೆ ಹೋಲಿಸಿದರೆ ವಿಭಿನ್ನ ವಿನ್ಯಾಸವನ್ನು ಹೊಂದಿರುತ್ತದೆ ಮತ್ತು ದೊಡ್ಡ ಆಯಾಮಗಳನ್ನು ಹೊಂದಿರುತ್ತದೆ. ಪ್ರಸ್ತುತ ಮಾರಾಟವಾಗುತ್ತಿರುವ ಸ್ಪೇಸಿಯಾ ಒಟ್ಟಾರೆ 3,395 mm ಉದ್ದವನ್ನು ಹೊಂದಿದೆ ಮತ್ತು ಆದ್ದರಿಂದ ಮುಂಬರುವ ಕಾಂಪ್ಯಾಕ್ಟ್ ಎಂಪಿವಿಯು ಖಂಡಿತವಾಗಿಯೂ ಉದ್ದವಾಗಿರುತ್ತದೆ.

ಭಾರತದಲ್ಲಿ ಹೆಚ್ಚು ಮಾರಾಟವಾಗುವ ಎಂಪಿವಿ ಎರ್ಟಿಗಾಕ್ಕಿಂತ ಕೆಳಗಿರುತ್ತದೆ. ಮಾರುತಿ ಸುಜುಕಿ YDBಯು ನೇರವಾದ ಬಾಕ್ಸಿ ಅನುಪಾತಗಳನ್ನು ಸ್ಪೇಸಿಯಾದಂತೆ ಉಳಿಸಿಕೊಳ್ಳುತ್ತದೆ ಆದರೆ ಉತ್ಪಾದನಾ ವೆಚ್ಚವನ್ನು ತಗ್ಗಿಸಲು ಸಾಂಪ್ರದಾಯಿಕ ಹಿಂಬದಿಯ ಡೋರುಗಖ್ಳ ಪರವಾಗಿ ಸ್ಲೈಡಿಂಗ್ ಡೋರುಗಳನ್ನು ಆಯ್ಕೆಮಾಡಬಹುದು. ಎರ್ಟಿಗಾವನ್ನು ಸಾಮಾನ್ಯ ಅರೆನಾ ಡೀಲರ್‌ಶಿಪ್‌ಗಳ ಮೂಲಕ ಚಿಲ್ಲರೆ ಮಾರಾಟ ಮಾಡಲಾಗಿದ್ದರೂ, ಎಕ್ಸ್‌ಎಲ್ 6 ಮಾರಾಟವಾಗುವ ನೆಕ್ಸಾ ಪ್ರೀಮಿಯಂ ಔಟ್‌ಲೆಟ್‌ಗಳಲ್ಲಿ YDB ಅನ್ನು ನೀಡಬಹುದು.
ಹೆಚ್ಚಿನ ಪ್ರಾಯೋಗಿಕತೆಗಾಗಿ ಸ್ಪೇಸಿಯಾಕ್ಕೆ ಹೋಲಿಸಿದರೆ ಏಳು-ಸೀಟುಗಳ MPV ವಿಶಾಲವಾದ ಒಳಾಂಗಣವನ್ನು ಹೊಂದಿರುತ್ತದೆ ಮತ್ತು ಇದು ರೆನಾಲ್ಟ್ ಟ್ರೈಬರ್‌ನೊಂದಿಗೆ ಸ್ಪರ್ಧಿಸಬಹುದು. ಕಾರ್ಯಕ್ಷಮತೆಗೆ ಸಂಬಂಧಿಸಿದಂತೆ, ಮುಂಬರುವ ಸ್ವಿಫ್ಟ್‌ನಲ್ಲಿ ಪಾದಾರ್ಪಣೆ ಮಾಡಲಿರುವ 1.2LZ ಸೀರಿಸ್ ಮೂರು-ಸಿಲಿಂಡರ್ ಮೈಲ್ಡ್-ಹೈಬ್ರಿಡ್ ಪೆಟ್ರೋಲ್ ಎಂಜಿನ್ ಅನ್ನು ಬಳಸಿಕೊಳ್ಳಬಹುದು. ಇದು ಮ್ಯಾನ್ಯುವಲ್ ಮತ್ತು ಆಟೋಮ್ಯಾಟಿಕ್ ಟ್ರಾನ್ಸ್‌ಮಿಷನ್ ಆಯ್ಕೆಗೆ ಹೊಂದಿಕೆಯಾಗಲಿದೆ.

ಫೀಚರ್ಸ್ ವಿಷಯದಲ್ಲಿ ನಾಲ್ಕನೇ ತಲೆಮಾರಿನ ಸ್ವಿಫ್ಟ್ ಮತ್ತು ಮುಂಬರುವ ಮೈಕ್ರೋ ಎಸ್‍ಯುವಿಯೊಂದಿಗೆ ಬಹಳಷ್ಟು ಸಾಮ್ಯತೆ ಹೊಂದಿರಬಹುದು ಎಂದು ನಿರೀಕ್ಷಿಸುತ್ತೇವೆ. ಇನ್ನು ಹೊಸ ವರದಿಯ ಪ್ರಕಾರ, ಟಾಟಾ ಪಂಚ್ ಮತ್ತು ಹ್ಯುಂಡೈ ಎಕ್ಸ್‌ಟರ್‌ಗೆ ನೇರವಾಗಿ ಸ್ಪರ್ಧಿಸಲು ಬ್ರೆಜ್ಜಾ ಕಾಂಪ್ಯಾಕ್ಟ್ ಎಸ್‌ಯುವಿಗಿಂತ ಕೆಳಗಿರುತ್ತದೆ ಎಂದು ಹೇಳಲಾಗುತ್ತಿದೆ. ಪಂಚ್ ಭಾರಿ ಯಶಸ್ಸನ್ನು ಕಂಡಿದೆ ಮತ್ತು ಟಾಟಾಗೆ ಎರಡನೇ ಹೆಚ್ಚು ಮಾರಾಟವಾದ ಪಿವಿ ಆಗಿದೆ.
2023ರ ಪರಿಚಯಿಸಲಾದ ಎಕ್ಸ್‌ಟರ್ ಕಡಿಮೆ ಸಮಯದಲ್ಲಿ ಒಂದು ಲಕ್ಷ ಬುಕಿಂಗ್ ಮೈಲಿಗಲ್ಲನ್ನು ತಲುಪಿದೆ. ಇನ್ನು ಮಾರಾಟದಲ್ಲಿ ಯುಟಿಲಿಟಿ ವೆಹಿಕಲ್‌ಗಳಾದ ಬ್ರೆಝಾ, ಎರ್ಟಿಗಾ, ಫ್ರಾಂಕ್ಸ್, ಗ್ರ್ಯಾಂಡ್ ವಿಟಾರಾ, ಸೇಲ್‌ನಲ್ಲಿ ಭರ್ಜರಿ ಲಾಭವನ್ನು ಮಾಡಿದೆ. ವರ್ಷಾಂತ್ಯವಾದರೂ ಡಿಸೆಂಬರ್ (2023) ತಿಂಗಳಲ್ಲಿ ಮಾರುತಿ ಸುಜುಕಿ ಸ್ವಲ್ಪ ಹಿನ್ನಡೆಯನ್ನು ಅನುಭವಿಸಿದೆ.
ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಇನ್ನು ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಹಂಚಿಕೊಳ್ಳುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ. ಜೊತೆಗೆ ನಿಮ್ಮ ಸ್ನೇಹಿತರಿಗೂ ಶೇರ್ ಮಾಡಿ.


Click it and Unblock the Notifications