Maruti Suzuki: ಕಾಮಧೇನುವಾದ ಬ್ರೆಝಾ, ಗ್ರ್ಯಾಂಡ್ ವಿಟಾರಾ, ಫ್ರಾಂಕ್ಸ್ ಕಾರುಗಳು, ಮುಗಿಬಿದ್ದು ಖರೀದಿಸಿದ ಗ್ರಾಹಕರು!

ಮಾರುತಿ ಸುಜುಕಿ (Maruti Suzuki) ಅತಿದೊಡ್ಡ ಕಾರು ತಯಾರಕ ಕಂಪನಿಯಾಗಿ ಜನಪ್ರಿಯತೆ ಗಳಿಸಿದೆ. ಸೋಮವಾರ ಡಿಸೆಂಬರ್ (2023) ತಿಂಗಳ ಮಾರಾಟ ವರದಿಯನ್ನು ಪ್ರಕಟಿಸಿದ್ದು, ಕೊಂಚ ನಷ್ಟ ಅನುಭವಿಸಿದೆ. ಆದರೆ, ಯುಟಿಲಿಟಿ ವೆಹಿಕಲ್‌ಗಳಾದ ಬ್ರೆಝಾ, ಎರ್ಟಿಗಾ, ಫ್ರಾಂಕ್ಸ್, ಗ್ರ್ಯಾಂಡ್ ವಿಟಾರಾ, ಸೇಲ್‌ನಲ್ಲಿ ಭರ್ಜರಿ ಲಾಭವನ್ನು ಮಾಡಿದೆ.

ವರ್ಷಾಂತ್ಯವಾದರೂ ಡಿಸೆಂಬರ್ (2023) ತಿಂಗಳಲ್ಲಿ ಮಾರುತಿ ಸುಜುಕಿ ಸ್ವಲ್ಪ ಹಿನ್ನಡೆಯನ್ನು ಅನುಭವಿಸಿದೆ. ಒಟ್ಟು 1,37,551 ಯುನಿಟ್ ವಾಹನಗಳನ್ನು ಮಾರಾಟಗೊಳಿಸಿದ್ದು, 2022ರ ಇದೇ ಅವಧಿಗೆ ಹೋಲಿಕೆ ಮಾಡಿದರೆ (1,39,347 ಯುನಿಟ್‌) ವರ್ಷದಿಂದ ವರ್ಷಕ್ಕೆ (Y - O - Y) ಶೇಕಡ 1.28% ಕುಸಿತ ಕಂಡಿದೆ.

Maruti Suzuki: ಕಾಮಧೇನುವಾದ ಬ್ರೆಝಾ, ಗ್ರ್ಯಾಂಡ್ ವಿಟಾರಾ, ಫ್ರಾಂಕ್ಸ್ ಕಾರುಗಳು, ಮುಗಿಬಿದ್ದು ಖರೀದಿಸಿದ ಗ್ರಾಹಕರು!

ಪ್ರಯಾಣಿಕ ವಾಹನಗಳು (Domestic sales), ವಾಣಿಜ್ಯ ವಾಹನಗಳು (Commercial vehicles) ಒಳಗೊಂಡಂತೆ ದೇಶೀಯ ಮಾರುಕಟ್ಟೆಯಲ್ಲಿ ಕಳೆದ ತಿಂಗಳು 1,10,667 ಯುನಿಟ್‌ ವಾಹನಗಳನ್ನು ಮಾರಲಾಗಿದೆ. 2022ರ ಡಿಸೆಂಬರ್ ತಿಂಗಳಲ್ಲಿ ಸೇಲ್ ಮಾಡಿದ 1,17,551 ಯುನಿಟ್‌ಗೆ ಹೋಲಿಸಿದರೆ, ವರ್ಷದಿಂದ ವರ್ಷಕ್ಕೆ ಶೇಕಡ 5.86% ನಷ್ಟ ಅನುಭವಿಸಲಾಗಿದೆ ಎಂದು ಮಾರುತಿ ಸುಜುಕಿ ತನ್ನ ಹೇಳಿಕೆಯಲ್ಲಿ ತಿಳಿಸಿದೆ.

2023ರಲ್ಲಿ ಮಾರುತಿ ಸುಜುಕಿ ಐತಿಹಾಸಿಕ ಮೈಲಿಗಲ್ಲನ್ನು ಸಾಧಿಸಿದ್ದು, ಮೊದಲ ಬಾರಿಗೆ 20 ಲಕ್ಷ ಯುನಿಟ್ ವಾಹನಗಳನ್ನು ಮಾರಾಟ ಮಾಡಿದೆ. ಇದರಲ್ಲಿ 2,69,046 ವೆಹಿಕಲ್‌ಗಳನ್ನು ರಫ್ತು ಮಾಡಲಾಗಿದೆ. ಮಾರುತಿ ಸುಜುಕಿ ಸಣ್ಣ ಕಾರುಗಳ (Mini Cars) ಆರಂಭಿಕ ಮಾದರಿಗಳಾದ ಆಲ್ಟೊ, ಎಸ್-ಪ್ರೆಸ್ಸೊ ಸೇಲ್‌ನಲ್ಲಿಯೂ ತುಂಬಾ ಹಿನ್ನೆಡೆ ಅನುಭವಿಸಿದ್ದು, ಕಳೆದ ತಿಂಗಳು 2,557ಯುನಿಟ್‌ ಮಾರಾಟಗೊಳಿಸಿತ್ತು. ಅದೇ 2022ರಲ್ಲಿ 9,765 ಯುನಿಟ್‌ ಸೇಲ್ ಮಾಡಿತ್ತು.

Maruti Suzuki: ಕಾಮಧೇನುವಾದ ಬ್ರೆಝಾ, ಗ್ರ್ಯಾಂಡ್ ವಿಟಾರಾ, ಫ್ರಾಂಕ್ಸ್ ಕಾರುಗಳು, ಮುಗಿಬಿದ್ದು ಖರೀದಿಸಿದ ಗ್ರಾಹಕರು!

ಮಾರುತಿ ಸುಜುಕಿ, ಬಲೆನೊ, ಸೆಲೆರಿಯೊ, ಡಿಜೈರ್, ಇಗ್ನಿಸ್, ಸ್ವಿಫ್ಟ್, ಟೂರ್-ಎಸ್ ಮತ್ತು ವ್ಯಾಗನ್ಆರ್‌ ಕಾಂಪ್ಯಾಕ್ಟ್ ಕಾರುಗಳ ಮಾರಾಟದಲ್ಲೂ ನಷ್ಟವನ್ನು ಕಂಡಿದೆ. 2022ರ ಡಿಸೆಂಬರ್ ತಿಂಗಳಲ್ಲಿ ಮಾರಾಟಗೊಳಿಸಿದ 57,502 ಯುನಿಟ್‌ಗಳಿಗೆ ಹೋಲಿಸಿದರೆ, ಕಳೆದ ಡಿಸೆಂಬರ್ ನಲ್ಲಿ (2023) 45,741 ಯುನಿಟ್‌ಗಳಿಗೆ ಇಳಿಕೆಯಾಗಿದೆ. ಮಿಡ್ ಸೈಜ್ ಸೆಡಾನ್ ಸಿಯಾಜ್ (Ciaz), ಮಾರಾಟವೂ ಕುಸಿತವಾಗಿದ್ದು, 489 ಯುನಿಟ್ ಮಾತ್ರ ಸೇಲ್ ಮಾಡಿದೆ.

ಇವೆಲ್ಲ ಒಂದು ಕಡೆಯಾದರೆ, ಯುಟಿಲಿಟಿ ವೆಹಿಕಲ್‌ಗಳಾದ (utility vehicle) ಬ್ರೆಝಾ, ಎರ್ಟಿಗಾ, ಫ್ರಾಂಕ್ಸ್, ಗ್ರ್ಯಾಂಡ್ ವಿಟಾರಾ, ಇನ್ವಿಕ್ಟೊ, ಜಿಮ್ನಿ, ಎಸ್ - ಕ್ರಾಸ್ ಮತ್ತು ಎಕ್ಸ್‌ಎಲ್ 6 ಮಾರಾಟದಲ್ಲಿ ಮಾರುತಿ ಸುಜುಕಿ ಕಂಪನಿ ಉತ್ತಮ ಲಾಭವನ್ನು ಮಾಡಿದೆ. ಕಳೆದ ತಿಂಗಳು, 45,957 ಯುನಿಟ್‌ ಮಾರಾಟ ಮಾಡಿದ್ದು, 2022ರ ಇದೇ ಅವಧಿಯಲ್ಲಿ 33,008 ಯುನಿಟ್‌ ಸೇಲ್ ಮಾಡಲು ಮಾತ್ರ ಶಕ್ತವಾಗಿತ್ತು.

Maruti Suzuki: ಕಾಮಧೇನುವಾದ ಬ್ರೆಝಾ, ಗ್ರ್ಯಾಂಡ್ ವಿಟಾರಾ, ಫ್ರಾಂಕ್ಸ್ ಕಾರುಗಳು, ಮುಗಿಬಿದ್ದು ಖರೀದಿಸಿದ ಗ್ರಾಹಕರು!

ಮಾರುತಿ ಸುಜುಕಿ ಮಾರಾಟಗೊಳಿಸುವ ಪ್ರಮುಖ ಯುಟಿಲಿಟಿ ವೆಹಿಕಲ್‌ಗಳ ಬಗ್ಗೆ ಒಂದಷ್ಟು ವಿವರವನ್ನು ನೋಡುವುದಾದರೆ, ಬ್ರೆಝಾ ರೂ.8.29 ಲಕ್ಷದಿಂದ ರೂ.14.14 ಲಕ್ಷ ಎಕ್ಸ್ ಶೋರೂಂ ಬೆಲೆಯಲ್ಲಿ ಖರೀದಿಗೆ ಲಭ್ಯವಿದೆ. ಪೆಟ್ರೋಲ್ ಹಾಗೂ ಸಿಎನ್‌ಜಿ ಎಂಜಿನ್ ಆಯ್ಕೆಯಲ್ಲಿ ಸಿಗಲಿದ್ದು, 17.38 - 19.8 kmpl ಮೈಲೇಜ್ ನೀಡುತ್ತದೆ. 9 - ಇಂಚಿನ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಮ್ ಸೇರಿದಂತೆ ಹತ್ತಾರು ವೈಶಿಷ್ಟ್ಯಗಳನ್ನು ಒಳಗೊಂಡಿದೆ.

ಮಾರುತಿ ಸುಜುಕಿ ಗ್ರ್ಯಾಂಡ್ ವಿಟಾರಾ, ರೂ.10.70 - 19.99 ಲಕ್ಷ ಎಕ್ಸ್ ಶೋರೂಂ ದರದಲ್ಲಿ ಸಿಗುತ್ತದೆ. ಪೆಟ್ರೋಲ್ ಮತ್ತು ಸಿಎನ್‌ಜಿ ಎಂಜಿನ್ ನೊಂದಿಗೆ ದೊರೆಯುವ ಈ ಕಾರು, 7 - ಇಂಚಿನ ಡಿಜಿಟಲ್ ಡ್ರೈವರ್ ಡಿಸ್ಪ್ಲೇ, ಪನೋರಮಿಕ್ ಸನ್‌ರೂಫ್ ಒಳಗೊಂಡಂತೆ ವಿವಿಧ ಫೀಚರ್ಸ್ ಇವೆ. ಫ್ರಾಂಕ್ಸ್ ಎಸ್‌ಯುವಿ ರೂ.7.46 ಲಕ್ಷದಿಂದ ರೂ.13.13 ಲಕ್ಷ ದರದಲ್ಲಿ ಲಭ್ಯವಿದೆ.

ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.

Article Published On: Monday, January 1, 2024, 18:10 [IST]
English summary
Maruti suzuki total sales down 1 28 present december 2023 brezza fronx grand vitara huge demand
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+