ಡಾಕ್ಟರ್, ಎಂಜಿನಿಯರ್‌ಗಳ ಫೇವರೆಟ್ ಕಾರು: ಕೇವಲ 5.55 ಲಕ್ಷ ಬೆಲೆ, ಫುಲ್ ಡಿಮ್ಯಾಂಡ್!
ಭಾರತದ ಅತಿದೊಡ್ಡ ವಾಹನ ತಯಾರಕರಾದ ಮಾರುತಿ ಸುಜುಕಿ, ನವೆಂಬರ್ 2024 ರ ಮಾರಾಟ ಪಟ್ಟಿಯಲ್ಲಿ ತನ್ನ ನಂ.1 ಸ್ಥಾನವನ್ನು ಮತ್ತೊಮ್ಮೆ ಭದ್ರಪಡಿಸಿಕೊಂಡಿದೆ. ಒಟ್ಟು ತನ್ನ ಎಲ್ಲಾ ವಾಹನಗಳು ಸೇರಿದಂತೆ ನವೆಂಬರ್ ತಿಂಗಳಲ್ಲಿ 1,41,312 ಯುನಿಟ್ ವಾಹನಗಳನ್ನು ಮಾರಾಟ ಮಾಡಿದೆ. ಕಳೆದ ವರ್ಷ ಇದೇ ಅವಧಿ (2023 ನವೆಂಬರ್) ಯಲ್ಲಿ 1,34,158 ವಾಹನಗಳನ್ನು ಮಾರಾಟ ಮಾಡಿತ್ತು. ಒಟ್ಟಾರೆ ಕಳೆದ ವರ್ಷಕ್ಕೆ ಹೋಲಿಸಿದರೆ, ಶೇ5 ರಷ್ಟು ಬೆಳವಣಿಗೆ ಸಾಧಿಸಿದೆ. ಪ್ರತಿ ತಿಂಗಳ ಮಾರಾಟದಲ್ಲಿ ಪ್ರಮುಖ ಪಾತ್ರ ವಹಿಸುವ ಮಾರುತಿ ವ್ಯಾಗನ್‌ಆರ್ ಬಗ್ಗೆ ಬಗ್ಗೆ, ನವೆಂಬರ್ ತಿಂಗಳಲ್ಲಿ ಗ್ರಾಹಕರು ಮುಗಿಬಿದ್ದು ಖರೀದಿಸಿದ್ದಾರೆ.
ಅಗ್ಗದ ಬೆಲೆ, ಅತ್ಯುತ್ತಮ ಮೈಲೇಜ್, ಉತ್ತಮ ಪ್ರಯಾಣ ಅನುಭವ, ಬೆಸ್ಟ್ ಫೀಚರ್ಸ್ ಹೊಂದಿರುವ ಕಾರಾಗಿ ಜನಪ್ರಿಯತೆ ಪಡೆದಿರುವ ಮಾರುತಿ ವ್ಯಾಗನ್‌ಆರ್, ನವೆಂಬರ್ ತಿಂಗಳಲ್ಲಿ 13,982 ಯುನಿಟ್ ಕಾರುಗಳು ಮಾರಾಟವಾಗಿವೆ. ಇದು ಕಳೆದ ಅಕ್ಟೋಬರ್‌ನಲ್ಲಿ 13,922 ಕಾರುಗಳು ಮಾರಾಟವಾಗಿದ್ದವು. ತಿಂಗಳಿನಿಂದ ತಿಂಗಳಿಗೆ ಅಷ್ಟೇನು ಹೆಚ್ಚಿನ ವ್ಯತ್ಯಾಸವಿಲ್ಲದೇ ಉತ್ತಮ ಮಾರಾಟ ಅಂಕಿಅಂಶಗಳನ್ನು ದಾಖಲಿಸಿದೆ.

ಮಾರುತಿ ವ್ಯಾಗನ್-ಆರ್ ವಿಶೇಷತೆಗಳು: LXi, VXi, ZXi, ಮತ್ತು ZXi+ ಎಂಬ ನಾಲ್ಕು ವೇರಿಯೆಟ್‌ಗಳ ಜೊತೆಗೆ LXi ಮತ್ತು VXi ಟ್ರಿಮ್‌ಗಳು CNG ಆಯ್ಕೆಯಲ್ಲಿ ಖರೀದಿಗೆ ಲಭ್ಯವಿದೆ. ಭಾರತದಲ್ಲಿ ಮಾರುತಿ ವ್ಯಾಗನ್ ಆರ್ ಬೆಲೆಯು ಬೇಸ್ ವೇರಿಯೆಂಟ್‌ಗೆ ರೂ.5.55 ಲಕ್ಷ ದಿಂದ ಟಾಪ್ ಎಂಡ್ ವೇರಿಯೆಂಟ್‌ಗೆ ರೂ.7.33 ಲಕ್ಷ (ಎಕ್ಸ್ ಶೋ ರೂಂ) ಇದೆ.
ಮಾರುತಿ ವ್ಯಾಗನ್ ಆರ್ ಕಾರು ಬ್ರೌನ್, ಸಿಲ್ಕಿ ಸಿಲ್ವರ್, ಮಿಡ್ನೈಟ್ ಬ್ಲ್ಯಾಕ್, ಮ್ಯಾಗ್ಮಾ ಗ್ರೇ, ಗ್ಯಾಲಂಟ್ ರೆಡ್, ಪೂಲ್ಸೈಡ್ ಬ್ಲೂ, ಸುಪೀರಿಯರ್ ವೈಟ್, ಮಿಡ್ನೈಟ್ ಬ್ಲ್ಯಾಕ್ ರೂಫ್‌ನೊಂದಿಗೆ ಮ್ಯಾಗ್ಮಾ ಗ್ರೇ, ಮತ್ತು ಮಿಡ್ನೈಟ್‌ನೊಂದಿಗೆ ಗ್ಯಾಲಂಟ್ ರೆಡ್ ಬ್ಲಾಕ್ ರೂಫ್ ಸೇರಿದಂತೆ ಏಳು ಮೊನೊಟೋನ್ ಮತ್ತು ಎರಡು ಡ್ಯುಯಲ್-ಟೋನ್ ಬಣ್ಣಗಳಲ್ಲಿ ಖರೀದಿಗೆ ಲಭ್ಯವಿದೆ.

ಮಾರುತಿ ವ್ಯಾಗನ್-ಆರ್ 1-ಲೀಟರ್ ಮತ್ತು 1.2-ಲೀಟರ್ ಪೆಟ್ರೋಲ್ ಎಂಜಿನ್ ಆಯ್ಕೆಗಳಲ್ಲಿ ಬರುತ್ತದೆ. ಇದರಲ್ಲಿ 1.2-ಲೀಟರ್ ಎಂಜಿನ್ 90 PS ಪವರ್ ಮತ್ತು 113 Nm ಟಾರ್ಕ್ ಉತ್ಪಾದಿಸುತ್ತದೆ. 1-ಲೀಟರ್ ಎಂಜಿನ್ 67 PS ಪವರ್ ಮತ್ತು 89 Nm ಟಾರ್ಕ್ ಉತ್ಪಾದಿಸುತ್ತದೆ. ಇವೆರಡೂ 5-ಸ್ಪೀಡ್ ಮ್ಯಾನುವಲ್‌ನೊಂದಿಗೆ ಬರುತ್ತವೆ. ಇನ್ನು CNG ಆಯ್ಕೆಯಲ್ಲಿ 57 PS ಪವರ್ ಮತ್ತು 82 Nm ಟಾರ್ಕ್ ಉತ್ಪಾದಿಸಲಿದ್ದು, ಇದು ಮ್ಯಾನ್ಯುವಲ್ ಆಗಿದೆ.
ಮಾರುತಿ ವ್ಯಾಗನ್ ಆರ್ ಮೈಲೇಜ್ ವಿಷಯಕ್ಕೆ ಬಂದರೆ, 1.2-ಲೀಟರ್ AMT ನಲ್ಲಿ 24.43 ಕಿ.ಮೀ ಮೈಲೇಜ್, 1-ಲೀಟರ್ MT ನಲ್ಲಿ 24.35 kmpl ಮೈಲೇಜ್, 1-ಲೀಟರ್ AMT ನಲ್ಲಿ 25.19 ಕಿ.ಮೀ ಮೈಲೇಜ್, 1.2-ಲೀಟರ್ MT ನಲ್ಲಿ 23.56 ಕಿ.ಮೀ ಮೈಲೇಜ್ ಮತ್ತು 1-ಲೀಟರ್ CNG ನಲ್ಲಿ 33.47 ಕಿ.ಮೀ/ಕೆ.ಜಿ ಮೈಲೇಜ್ ನೀಡುವುದಾಗಿ ಕಂಪನಿ ಹೇಳಿಕೊಂಡಿದೆ.

ಮಾರುತಿ ವ್ಯಾಗನ್-ಆರ್ ಕಾರು ಸ್ಮಾರ್ಟ್ ಫೋನ್ ನ್ಯಾವಿಗೇಷನ್, 7 ಇಂಚಿನ ಟಚ್ ಸ್ಕ್ರೀನ್ ಡಿಸ್‌ಪ್ಲೇ, 4-ಸ್ಪೀಕರ್ ಮ್ಯೂಸಿಕ್ ಸಿಸ್ಟಮ್, ಸ್ಟೀರಿಂಗ್-ಮೌಂಟೆಡ್ ಆಡಿಯೊ ಕಂಟ್ರೋಲ್‌ಗಳು ನಂತಹ ವೈಶಿಷ್ಟ್ಯಗಳನ್ನು ಹೊಂದಿದೆ. ಸೇಫ್ಟಿಗಾಗಿ ರಿಯರ್ ಪಾರ್ಕಿಂಗ್ ಸೆನ್ಸಾರ್, ಹಿಲ್-ಹೋಲ್ಡ್ ಅಸಿಸ್ಟ್ (AMT ವೇರಿಯೆಂಟ್ ಮಾತ್ರ), ಡ್ಯುಯಲ್ ಫ್ರಂಟ್ ಏರ್ ಬ್ಯಾಗ್‌ಗಳು, ಇಬಿಡಿಯೊಂದಿಗೆ ಎಬಿಎಸ್ ಇವೆ.
ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊ ಗಳನ್ನು ಪಡೆಯಲು ನಮ್ಮ ಫೇಸ್ ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.


Click it and Unblock the Notifications