ನಿಮ್ಮ ಬಜೆಟ್ 7 ಲಕ್ಷವಾದರೆ.. ಮೈಲೇಜ್ ಮಾತ್ರವಲ್ಲ ಬೆಸ್ಟ್ ಫೀಚರ್ಸ್‌ನೊಂದಿಗೆ 2 ಕಾರುಗಳಿವೆ
5 ರಿಂದ 7 ಲಕ್ಷ ರೂ. ಶ್ರೇಣಿಯಲ್ಲಿ ಅತ್ಯುತ್ತಮ ಮೈಲೇಜ್ ನೀಡುವ ಮತ್ತು ಉತ್ತಮ ಎಂಜಿನ್ ಹೊಂದಿರುವ ಕಾರುಗಳನ್ನು ನೀಡುವ ಮೂಲಕ ಮಾರುತಿ ಸುಜುಕಿಯು ಬಜೆಟ್ ವಿಭಾಗದ ಪ್ರಾಬಲ್ಯ ಹೊಂದಿದೆ. ನಾವು ಪ್ರಾಯೋಗಿಕ ಕಾರುಗಳ ಬಗ್ಗೆ ಮಾತನಾಡುವುದಾದ್ರೆ ಮಾರುತಿ ವ್ಯಾಗನ್ಆರ್ ಹೆಸರು ಮೊದಲು ಬರುತ್ತದೆ.
ಆದರೆ ಮಾರುತಿಯ ಮತ್ತೊಂದು ಹ್ಯಾಚ್‌ಬ್ಯಾಕ್ ಸೆಲೆರಿಯೊ ಕೂಡ ಅದೇ ಬೆಲೆಯಲ್ಲಿ ಲಭ್ಯವಿದ್ದು, ಅದೇ ಬಜೆಟ್‌ನಲ್ಲಿ ಉತ್ತಮ ಫೀಚರ್ಸ್ ಹಾಗೂ ಮೈಲೇಜ್ ನಲ್ಲಿ ಹೊಸ ಕಾರನ್ನು ಖರೀದಿಸಲು ಯೋಜಿಸುತ್ತಿದ್ದರೆ ವ್ಯಾಗನ್ಆರ್ ಮತ್ತು ಸೆಲೆರಿಯೊ ನಡುವೆ ಯಾವ ಕಾರು ಉತ್ತಮವಾಗಿದೆ ಎಂಬುದನ್ನು ಇಲ್ಲಿ ನೋಡೋಣ.

ವೈಶಿಷ್ಟ್ಯಗಳು: ಮಾರುತಿ ವ್ಯಾಗನ್ಆರ್ 7-ಇಂಚಿನ ಟಚ್‌ಸ್ಕ್ರೀನ್ ಡಿಸ್ಪ್ಲೇ, 4-ಸ್ಪೀಕರ್ ಮ್ಯೂಸಿಕ್ ಸಿಸ್ಟಮ್, ಸ್ಟೀರಿಂಗ್-ಮೌಂಟೆಡ್ ಆಡಿಯೊ ಕಂಟ್ರೋಲ್‌ಗಳು, ಸ್ಮಾರ್ಟ್‌ಫೋನ್ ನ್ಯಾವಿಗೇಶನ್‌ನಂತಹ ವೈಶಿಷ್ಟ್ಯಗಳೊಂದಿಗೆ ಬರುತ್ತದೆ. ಪ್ರಯಾಣಿಕರ ಸುರಕ್ಷತೆಗಾಗಿ, ಡ್ಯುಯಲ್ ಫ್ರಂಟ್ ಏರ್‌ಬ್ಯಾಗ್‌ಗಳು, EBD ಜೊತೆಗೆ ABS, ಹಿಂಭಾಗದ ಪಾರ್ಕಿಂಗ್ ಸೆನ್ಸಾರ್, ಹಿಲ್-ಹೋಲ್ಡ್ ಅಸಿಸ್ಟ್ (AMT ವೇರಿಯೆಂಟ್‌ನಲ್ಲಿ ಮಾತ್ರ ಲಭ್ಯವಿದೆ).
ಸೆಲೆರಿಯೊ ವೈಶಿಷ್ಟ್ಯಗಳ ಬಗ್ಗೆ ಮಾತನಾಡುವುದಾದ್ರೆ 7-ಇಂಚಿನ ಟಚ್‌ಸ್ಕ್ರೀನ್, ಪುಶ್ - ಬಟನ್ ಸ್ಟಾರ್ಟ್/ಸ್ಟಾಪ್, ಕೀಲೆಸ್ ಎಂಟ್ರಿ, ಮ್ಯಾನ್ಯುವಲ್ ಎಸಿ ಸೇರಿವೆ. ಸುರಕ್ಷತೆಯ ದೃಷ್ಟಿಯಿಂದ, ಇದು ಡ್ಯುಯಲ್ ಫ್ರಂಟ್ ಏರ್‌ಬ್ಯಾಗ್‌ಗಳು, ಹಿಲ್-ಹೋಲ್ಡ್ ಅಸಿಸ್ಟ್, EBD ಜೊತೆಗೆ ABS, ಹಿಂಭಾಗದ ಪಾರ್ಕಿಂಗ್ ಸೆನ್ಸಾರ್‌ಗಳನ್ನು ಪಡೆಯುತ್ತದೆ.

ಎಂಜಿನ್: ಮಾರುತಿ ವ್ಯಾಗನ್ಆರ್ ಎರಡು ಎಂಜಿನ್ ಆಯ್ಕೆಗಳಲ್ಲಿ ಬರುತ್ತದೆ. ಇದರ ಮೂಲ ಮಾದರಿಗಳು 1.0 ಲೀಟರ್ ಕೆ-ಸಿರೀಸ್ ಎಂಜಿನ್‌ನೊಂದಿಗೆ ಬರುತ್ತವೆ. ಉನ್ನತ ಮಾದರಿಗಳನ್ನು 1.2-ಲೀಟರ್ ಎಂಜಿನ್ನೊಂದಿಗೆ ನೀಡಲಾಗುತ್ತದೆ. 1.0-ಲೀಟರ್ ಎಂಜಿನ್‌ನಲ್ಲಿ ಸಿಎನ್‌ಜಿ ಆಯ್ಕೆಯೊಂದಿಗೆ ಕಾರು ಲಭ್ಯವಿದೆ. ಎರಡೂ ಎಂಜಿನ್‌ಗಳನ್ನು 5-ಸ್ಪೀಡ್ ಆಟೋಮ್ಯಾಟಿಕ್ ಮತ್ತು 5-ಸ್ಪೀಡ್ ಮ್ಯಾನುವಲ್ ಗೇರ್‌ಬಾಕ್ಸ್‌ಗಳಿಗೆ ಜೋಡಿಸಲಾಗಿದೆ.
ಸೆಲೆರಿಯೊಗೆ ಸಂಬಂಧಿಸಿದಂತೆ, ಇದು ಕೇವಲ 1.0 ಲೀಟರ್ ಎಂಜಿನ್ ಹೊಂದಿದೆ. ಈ ಎಂಜಿನ್‌ನೊಂದಿಗೆ ಸಿಎನ್‌ಜಿ ಆಯ್ಕೆಯೂ ಲಭ್ಯವಿದೆ. ಪೆಟ್ರೋಲ್ ನಲ್ಲಿ ಈ ಎಂಜಿನ್ 67 bhp ಪವರ್ ಮತ್ತು 89 Nm ಟಾರ್ಕ್ ಅನ್ನು ಉತ್ಪಾದಿಸುತ್ತದೆ. ಈ ಎಂಜಿನ್‌ನೊಂದಿಗೆ 5-ಸ್ಪೀಡ್ ಮ್ಯಾನುವಲ್, 5-ಸ್ಪೀಡ್ ಆಟೋಮ್ಯಾಟಿಕ್ ಗೇರ್‌ಬಾಕ್ಸ್ ಆಯ್ಕೆ ಲಭ್ಯವಿದೆ.

ಮೈಲೇಜ್: ಮೊದಲಿಗೆ ವ್ಯಾಗನ್ಆರ್ ಮೈಲೇಜ್ ನೋಡುವುದಾದ್ರೆ 1-ಲೀಟರ್ ಪೆಟ್ರೋಲ್ MT 24.35 ಕಿ.ಮೀ ಮೈಲೇಜ್ ನೀಡುತ್ತದೆ. 1-ಲೀಟರ್ ಪೆಟ್ರೋಲ್ AMT 25.19 ಕಿ.ಮೀ ಮೈಲೇಜ್ ನೀಡುತ್ತದೆ. 1-ಲೀಟರ್ ಪೆಟ್ರೋಲ್ ಸಿಎನ್‌ಜಿ 34.05 ಕಿ.ಮೀ/ಕೆಜಿ ಮೈಲೇಜ್ ನೀಡುತ್ತದೆ. 1.2-ಲೀಟರ್ ಪೆಟ್ರೋಲ್ MT 23.56 ಕಿ.ಮೀ ಮೈಲೇಜ್ ಹಾಗೂ 1.2-ಲೀಟರ್ AMT ಪೆಟ್ರೋಲ್ 24.43 ಕಿ.ಮೀ ಮೈಲೇಜ್ ನೀಡುತ್ತದೆ.
ಇನ್ನು ಸೆಲೆರಿಯೊ ಮೈಲೇಜ್ ಬಗ್ಗೆ ಹೇಳುವುದಾದ್ರೆ, ಪೆಟ್ರೋಲ್ MT 25.24 ಕಿ.ಮೀ ಮೈಲೇಜ್ ನೀಡುತ್ತದೆ. ಹಾಗೆಯೇ ಪೆಟ್ರೋಲ್ AMT 26.68 ಕಿ.ಮೀ ಮೈಲೇಜ್ ಹಾಗೂ CNG 34.43 ಕಿ.ಮೀ ಮೈಲೇಜ್ ನೀಡುತ್ತದೆ. ಮೈಲೇಜ್ ವಿಷಯದಲ್ಲಿ ಎರಡೂ ಮಾದರಿಗಳಲ್ಲಿ ನಮಗೆ ತೀರಾ ದೊಡ್ಡ ಅಂತರ ಕಾಣುವುದಿಲ್ಲ.

ಬೆಲೆ: ವ್ಯಾಗನ್ಆರ್ ಬೆಲೆ ರೂ. 5.54 ಲಕ್ಷದಿಂದ ರೂ. 7.42 ಲಕ್ಷ (ಎಕ್ಸ್ ಶೋ ರೂಂ ದೆಹಲಿ) ವರೆಗೆ ಇದೆ. ಸೆಲೆರಿಯೊ ಬೆಲೆ ರೂ. 5.37 ಲಕ್ಷದಿಂದ ರೂ. 7.15 ಲಕ್ಷ (ಎಕ್ಸ್ ಶೋ ರೂಂ ದೆಹಲಿ)ವರೆಗೆ ಇದೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ.


Click it and Unblock the Notifications