Maruti Suzuki: ಈ ಕಾರಿಗೆ ಭಾರೀ ರಿಯಾಯಿತಿ.. ರೂ.5.54 ಲಕ್ಷ ಬೆಲೆ, 34 ಕಿ.ಮೀ ಮೈಲೇಜ್

ದೇಶದಲ್ಲಿ ಅತಿದೊಡ್ಡ ಕಾರು ತಯಾರಕ ಕಂಪನಿಯಾಗಿ ಮಾರುತಿ ಸುಜುಕಿ (Maruti Suzuki) ಜನಪ್ರಿಯತೆ ಗಳಿಸಿದೆ. ಬಜೆಟ್ ಬೆಲೆಗೆ ಕಾರುಗಳನ್ನು ಮಾರಾಟಗೊಳಿಸುತ್ತಿದ್ದು, ಗ್ರಾಹಕರು ಕೂಡ ಹೆಚ್ಚಿನ ಸಂಖ್ಯೆಯಲ್ಲಿ ತಾಮುಂದು, ನಾಮುಂದು ಎಂದು ಇಷ್ಟಪಟ್ಟು ಖರೀದಿಸುತ್ತಾರೆ. ಈ ಏಪ್ರಿಲ್‌ನಲ್ಲಿಯೂ ಕಂಪನಿಯ ವಿವಿಧ ಕಾರುಗಳು ಭರ್ಜರಿ ರಿಯಾಯಿತಿಯನ್ನು ಪಡೆದಿವೆ.

ಮಾರುತಿ ಸುಜುಕಿಯ ಪ್ರಮುಖ ಹ್ಯಾಚ್‌ಬ್ಯಾಕ್‌ಗಳಲ್ಲಿ ಒಂದಾಗಿರುವ ವ್ಯಾಗನ್ಆರ್ (Wagon R) ಸಹ ಭಾರೀ ಡಿಸ್ಕೌಂಟ್ ಆಫರ್ ಹೊಂದಿದೆ. ಇದರ ಆಟೋಮೆಟಿಕ್ (Automatic) ರೂಪಾಂತರಗಳು ಒಟ್ಟು ರೂ.61,000, ಮ್ಯಾನುವಲ್ (Manual) ಮಾದರಿಗಳು ರೂ.56,000 ಮತ್ತು ಸಿಎನ್‌ಜಿ (CNG) ಚಾಲಿತ ಆವೃತ್ತಿಗಳು ರೂ.36,000 ವರೆಗೆ ರಿಯಾಯಿತಿ ಪ್ರಯೋಜನವನ್ನು ಒಳಗೊಂಡಿವೆ.

Maruti Suzuki Wagon R Get Huge Discount in April 2024 Rs 5 Lakh Starting Price 34 Km Mileage

ಭಾರತದ ಮಾರುಕಟ್ಟೆಯಲ್ಲಿ ಮಾರುತಿ ಸುಜುಕಿ ವ್ಯಾಗನ್ಆರ್ (Maruti Suzuki Wagon R) ಹ್ಯಾಚ್‌ಬ್ಯಾಕ್‌, ರೂ.5.54 ಲಕ್ಷದಿಂದ ರೂ.7.38 ಲಕ್ಷ ಎಕ್ಸ್ ಶೋರೂಂ ಬೆಲೆಯನ್ನು ಹೊಂದಿದೆ. ಎಲ್ಎಕ್ಸ್ಐ, ವಿಎಕ್ಸ್ಐ, ಝಡ್ಎಕ್ಸ್ಐ ಸೇರಿದಂತೆ ವಿವಿಧ ರೂಪಾಂತರ ಹಾಗೂ ಸುಪೀರಿಯರ್ ವೈಟ್, ಸಿಲ್ಕಿ ಸಿಲ್ವರ್, ಮಿಡ್‌ನೈಟ್ ಬ್ಲಾಕ್ ಒಳಗೊಂಡಂತೆ ಆಕರ್ಷಕ ಬಣ್ಣಗಳೊಂದಿಗೂ ಸಿಗುತ್ತದೆ. ವಿನ್ಯಾಸದಲ್ಲೂ ಈ ಕಾರು ಅತ್ಯುತ್ತಮವಾಗಿದ್ದು, 5 ಮಂದಿ ಆರಾಮದಾಯಕವಾಗಿ ಪ್ರಯಾಣಿಸಬಹುದು.

ಈ ಕಾರು ಹಲವು ಪವರ್ ಟ್ರೈನ್ ಆಯ್ಕೆಯಲ್ಲಿ ಲಭ್ಯವಿದೆ. ಇದರ 1-ಲೀಟರ್ ಪೆಟ್ರೋಲ್ ಎಂಜಿನ್, 67 ಪಿಎಸ್ ಗರಿಷ್ಠ ಪವರ್ (ಶಕ್ತಿ) ಮತ್ತು 89 ಎನ್ಎಂ ಪೀಕ್ ಟಾರ್ಕ್ ಹೊರಹಾಕುವ ಸಾಮರ್ಥ್ಯವನ್ನು ಹೊಂದಿದೆ. 5-ಸ್ವೀಡ್ ಮ್ಯಾನುವಲ್ ಅಥವಾ 5-ಸ್ವೀಡ್ ಆಟೋಮೆಟಿಕ್ ಗೇರ್ ಬಾಕ್ಸ್ ನೊಂದಿಗೆ ದೊರೆಯುತ್ತದೆ.

Maruti Suzuki Wagon R Get Huge Discount in April 2024 Rs 5 Lakh Starting Price 34 Km Mileage

ಮತ್ತೊಂದು 1.2-ಲೀಟರ್ ಪೆಟ್ರೋಲ್ ಎಂಜಿನ್, 90 ಪಿಎಸ್ ಪವರ್ ಮತ್ತು 113 ಎನ್ಎಂ ಪೀಕ್ ಟಾರ್ಕ್ ಉತ್ಪಾದಿಸುತ್ತದೆ. ಇದು ಕೂಡ 5-ಸ್ವೀಡ್ ಮ್ಯಾನುವಲ್/ ಆಟೋಮೆಟಿಕ್ ಗೇರ್ ಬಾಕ್ಸ್ ಆಯ್ಕೆಯಲ್ಲಿ ಲಭ್ಯವಿದೆ. ಸಿಎನ್‌ಜಿ ಕಿಟ್ ಹೊಂದಿರುವ ಕಾರು 998 ಸಿಸಿ ಎಂಜಿನ್, 5-ಸ್ವೀಡ್ ಮ್ಯಾನುವಲ್ ಗೇರ್ ಬಾಕ್ಸ್ ಹೊಂದಿದೆ. ಪೆಟ್ರೋಲ್ ರೂಪಾಂತರಗಳು 24.35 ರಿಂದ 25.19 ಕೆಎಂಪಿಎಲ್, ಸಿಎನ್‌ಜಿ ಮಾದರಿಗಳು 34.05 ಕೆಎಂ/ಕೆಜಿ ಮೈಲೇಜ್ ಕೊಡುತ್ತವೆ.

ಮಾರುತಿ ಸುಜುಕಿ ವ್ಯಾಗನ್ಆರ್, 7-ಇಂಚಿನ ಟಚ್‌ಸ್ಕ್ರೀನ್ ಡಿಸ್ಪ್ಲೇ, 4-ಸ್ಪೀಕರ್ ಮ್ಯೂಸಿಕ್ ಸಿಸ್ಟಮ್, ಸ್ಟೀರಿಂಗ್ ಮೌಂಟೆಡ್ ಆಡಿಯೋ ಹಾಗೂ ಫೋನ್ ಕಂಟ್ರೋಲ್ಸ್ ಅನ್ನು ಹೊಂದಿದೆ. ಸುರಕ್ಷತೆಗಾಗಿ ಡುಯಲ್ ಫ್ರಂಟ್ ಏರ್‌ಬ್ಯಾಗ್‌, ABS (ಆಂಟಿಲಾಕ್ ಬ್ರೇಕಿಂಗ್ ಸಿಸ್ಟಮ್), EBD (ಎಲೆಕ್ಟ್ರಾನಿಕ್ ಬ್ರೇಕ್‌ಫೋರ್ಸ್ ಡಿಸ್ಟ್ರಿಬ್ಯೂಷನ್), ರೇರ್ ಪಾರ್ಕಿಂಗ್ ಸೆನ್ಸರ್ಸ್ & ಹಿಲ್ ಹೋಲ್ಡ್ ಅಸಿಸ್ಟ್ ಅನ್ನು ಹೊಂದಿದೆ.

ದೇಶೀಯ ಮಾರುಕಟ್ಟೆಯಲ್ಲಿ ಈ ಕಾರಿಗೆ ಟಾಟಾ ಟಿಯಾಗೊ ಮತ್ತು ಸಿಟ್ರಸ್ ಸಿ3 ಕಾರುಗಳು ಪ್ರಬಲ ಪ್ರತಿಸ್ಪರ್ಧಿಯಾಗಿವೆ. ನಿಮ್ಮ ಗಮನಕ್ಕೆ ಮಾರುತಿ ಸುಜುಕಿ ವ್ಯಾಗನ್ಆರ್ ಪಡೆದಿರುವ ರಿಯಾಯಿತಿ ಸೌಲಭ್ಯಗಳು ರಾಜ್ಯದಿಂದ ರಾಜ್ಯಕ್ಕೆ ರೂಪಾಂತರ ಹಾಗೂ ಬಣ್ಣಗಳನ್ನು ಆಧರಿಸಿ, ಬೇರೆಯಿರಲಿದ್ದು, ಹೆಚ್ಚಿನ ಮಾಹಿತಿಗೆ ಸಮೀಪದ ಶೋರೂಂಗೆ ಭೇಟಿ ನೀಡಿರಿ.

ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.

Article Published On: Wednesday, April 3, 2024, 17:57 [IST]
English summary
Maruti suzuki wagon r get huge discount in april 2024 rs 5 lakh starting price 34 km mileage
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+