ಕೇವಲ 6 ಲಕ್ಷ ಬೆಲೆ: ಆರಾಮದಾಯಕ ಇಂಟೀರಿಯರ್: 33 ಕಿ.ಮೀ ಮೈಲೇಜ್!

ಮಾರುತಿ ವ್ಯಾಗನ್-ಆರ್ (Maruti Wagon-R) ಬಿಡುಗಡೆಯಾಗಿ 24 ವರ್ಷಗಳಾಗುತ್ತಿದ್ದರೂ, ಇಂದಿಗು ಉತ್ತಮ ಮಾರಾಟ ಕಾಣುತ್ತಿದೆ. ಕಡಿಮೆ ಬಜೆಟ್‌ನಲ್ಲಿ ಉತ್ತಮ ಮೈಲೇಜ್, ಕಡಿಮೆ ನಿರ್ವಹಣಾ ವೆಚ್ಚದ ಜೊತೆಗೆ ಅನೇಕ ವೃತ್ತಿಪರರ ಆಯ್ಕೆಯಾಗಿರುವ ಕಾರಣ ಭಾರತದಲ್ಲಿ ಸಾಮಾನ್ಯ ಜನರ ಪ್ರಮುಖ ಆಯ್ಕೆಯಾಗಿ ಮಾರುತಿ ವ್ಯಾಗನ್-ಆರ್ ಮುಂದುವರಿಯುತ್ತಿದೆ. ಈ ಕಾರು 6 ರಿಂದ 8 ಲಕ್ಷ ರೂ.ಗಳ ಬಜೆಟ್‌ನಲ್ಲಿ ಸಿಗುತ್ತದೆ. 5 ಜನರಿಗೆ ಸಾಕಷ್ಟು ಸ್ಥಳಾವಕಾಶವನ್ನು ನೀಡುವುದರ ಜೊತೆಗೆ ಉತ್ತಮ ಲೆಗ್ ರೂಮ್ ಮತ್ತು ಹೆಡ್ ರೂಮ್, ಸರಿಹೊಂದಿಸಿಕೊಳ್ಳಬಹುದಾದ ಡ್ರೈವರ್ ಸೀಟ್‌ನಂತಹ ಸೌಕರ್ಯಯುತ ವೈಶಿಷ್ಟ್ಯಗಳಿಂದಾಗಿ ದೀರ್ಘ ಪ್ರಯಾಣಕ್ಕೂ ಸೈ ಎನಿಸಿಕೊಂಡಿದೆ.

ಬೆಲೆ & ವೇರಿಯೆಂಟ್‌ಗಳು: ಮಾರುತಿ ವ್ಯಾಗನ್-ಆರ್ ಬೆಲೆಯು ರೂ.5.55 ಲಕ್ಷ ದಿಂದ ರೂ.7.33 ಲಕ್ಷ (ಎಕ್ಸ್ ಶೋ ರೂಂ ದೆಹಲಿ) ಇದೆ. LXi, VXi, ZXi, ಮತ್ತು ZXi+ ಎಂಬ ನಾಲ್ಕು ವೇರಿಯೆಟ್‌ಗಳಲ್ಲಿ ಲಭ್ಯವುದೆ. ಜೊತೆಗೆ LXi ಮತ್ತು VXi ಟ್ರಿಮ್‌ಗಳು CNG ಆಯ್ಕೆಯಲ್ಲಿ ಸಿಗುತ್ತವೆ.

maruti-suzuki-wagon-r-price-features-variants-mileage-details

ವೈಶಿಷ್ಟ್ಯಗಳು: ಮಾರುತಿ ವ್ಯಾಗನ್-ಆರ್ ಕಾರು 7 ಇಂಚಿನ ಟಚ್ ಸ್ಕ್ರೀನ್ ಡಿಸ್‌ಪ್ಲೇ, 4-ಸ್ಪೀಕರ್ ಮ್ಯೂಸಿಕ್ ಸಿಸ್ಟಮ್, ಸ್ಟೀರಿಂಗ್-ಮೌಂಟೆಡ್ ಆಡಿಯೊ ಕಂಟ್ರೋಲ್‌ಗಳು ಮತ್ತು ಸ್ಮಾರ್ಟ್ ಫೋನ್ ನ್ಯಾವಿಗೇಷನ್ ನಂತಹ ವೈಶಿಷ್ಟ್ಯಗಳನ್ನು ಹೊಂದಿದೆ. ಡ್ಯುಯಲ್ ಫ್ರಂಟ್ ಏರ್ ಬ್ಯಾಗ್‌ಗಳು, ಇಬಿಡಿಯೊಂದಿಗೆ ಎಬಿಎಸ್, ರಿಯರ್ ಪಾರ್ಕಿಂಗ್ ಸೆನ್ಸಾರ್, ಹಿಲ್-ಹೋಲ್ಡ್ ಅಸಿಸ್ಟ್ (AMT ವೇರಿಯೆಂಟ್ ಮಾತ್ರ) ಇವೆ.

ಎಂಜಿನ್: ಮಾರುತಿ ವ್ಯಾಗನ್-ಆರ್ 1-ಲೀಟರ್ ಮತ್ತು 1.2-ಲೀಟರ್ ಪೆಟ್ರೋಲ್ ಎಂಜಿನ್ ಆಯ್ಕೆಗಳಲ್ಲಿ ಬರುತ್ತದೆ. ಇದರಲ್ಲಿ 1-ಲೀಟರ್ ಎಂಜಿನ್ 67 PS ಪವರ್ ಮತ್ತು 89 Nm ಟಾರ್ಕ್ ಉತ್ಪಾದಿಸುತ್ತದೆ. 1.2-ಲೀಟರ್ ಎಂಜಿನ್ 90 PS ಪವರ್ ಮತ್ತು 113 Nm ಟಾರ್ಕ್ ಉತ್ಪಾದಿಸುತ್ತದೆ. ಇವೆರಡೂ 5-ಸ್ಪೀಡ್ ಮ್ಯಾನುವಲ್‌ನೊಂದಿಗೆ ಬರುತ್ತವೆ. ಇನ್ನು CNG ಆಯ್ಕೆಯಲ್ಲಿ 57 PS ಪವರ್ ಮತ್ತು 82 Nm ಟಾರ್ಕ್ ಉತ್ಪಾದಿಸಲಿದ್ದು, ಇದು ಮ್ಯಾನ್ಯುವಲ್ ಆಗಿದೆ.

maruti-suzuki-wagon-r-price-features-variants-mileage-details

ಮೈಲೇಜ್: ಮಾರುತಿ ವ್ಯಾಗನ್-ಆರ್ 1-ಲೀಟರ್ AMT ನಲ್ಲಿ 25.19 ಕಿ.ಮೀ ಮೈಲೇಜ್, 1.2-ಲೀಟರ್ MT ನಲ್ಲಿ 23.56 ಕಿ.ಮೀ ಮೈಲೇಜ್, 1.2-ಲೀಟರ್ AMT ನಲ್ಲಿ 24.43 ಕಿ.ಮೀ ಮೈಲೇಜ್, 1-ಲೀಟರ್ MT ನಲ್ಲಿ 24.35 kmpl ಮೈಲೇಜ್ ಮತ್ತು 1-ಲೀಟರ್ CNG ನಲ್ಲಿ 33.47 ಕಿ.ಮೀ/ಕೆ.ಜಿ ಮೈಲೇಜ್ ನೀಡುವುದಾಗಿ ಕಂಪನಿ ಹೇಳಿಕೊಂಡಿದೆ.

ಬಣ್ಣದ ಆಯ್ಕೆಗಳು: ಮಾರುತಿ ವ್ಯಾಗನ್-ಆರ್ ಏಳು ಮೊನೊಟೋನ್ ಮತ್ತು ಎರಡು ಡ್ಯುಯಲ್-ಟೋನ್ ಬಣ್ಣಗಳಲ್ಲಿ ಖರೀದಿಗೆ ಲಭ್ಯವಿದೆ. ಅವುಗಳನ್ನು ನೋಡುವುದಾದ್ರೆ ಗ್ಯಾಲಂಟ್ ರೆಡ್, ಪೂಲ್ಸೈಡ್ ಬ್ಲೂ, ಸುಪೀರಿಯರ್ ವೈಟ್, ಬ್ರೌನ್, ಸಿಲ್ಕಿ ಸಿಲ್ವರ್, ಮಿಡ್ನೈಟ್ ಬ್ಲ್ಯಾಕ್, ಮ್ಯಾಗ್ಮಾ ಗ್ರೇ, ಮಿಡ್ನೈಟ್ ಬ್ಲ್ಯಾಕ್ ರೂಫ್‌ನೊಂದಿಗೆ ಮ್ಯಾಗ್ಮಾ ಗ್ರೇ, ಮತ್ತು ಮಿಡ್ನೈಟ್‌ನೊಂದಿಗೆ ಗ್ಯಾಲಂಟ್ ರೆಡ್ ಬ್ಲಾಕ್ ರೂಫ್.

maruti-suzuki-wagon-r-price-features-variants-mileage-details

ಮಾರುತಿ ವ್ಯಾಗನ್-ಆರ್ ಸದ್ಯ ಮಾರುಕಟ್ಟೆಯಲ್ಲಿ ಮಾರುತಿ ಸೆಲೆರಿಯೊ, ಟಾಟಾ ಟಿಯಾಗೊ ಮತ್ತು ಸಿಟ್ರೊಯೆನ್ C3 ನಂತಹ ಕಾರುಗಳೊಂದಿಗೆ ಸ್ಪರ್ಧಿಸುತ್ತದೆ. ಮಾರುತಿ ವ್ಯಾಗನ್-ಆರ್ ಎಲೆಕ್ಟ್ರಿಕ್ ಕಾರು ಕೂಡ ಬರಲಿದ್ದು, ಜನವರಿ 2026ರ ವೇಳೆಗೆ ವ್ಯಾಗನ್ ಆರ್-ಇವಿ ಮಾರುತಿಯ ಎಲೆಕ್ಟ್ರಿಕ್ ವಾಹನ ಶ್ರೇಣಿಯನ್ನು ಸೇರಲಿದೆ.

ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.

Article Published On: Wednesday, July 10, 2024, 12:59 [IST]
English summary
Maruti suzuki wagon r price features variants mileage details
Read more on maruti suzuki india
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+