ಮಾರುತಿ ವ್ಯಾಗನ್‌ಆರ್‌ನಲ್ಲಿ ADAS: ಬಜೆಟ್ ಕಾರಿನಲ್ಲಿ ಅಡ್ವಾನ್ಸ್ಡ್ ಫೀಚರ್: ನೀವು ಮಾಡಬಹುದು!
ಸುಧಾರಿತ ಚಾಲಕ ಸಹಾಯ ವ್ಯವಸ್ಥೆ (ADAS) ಎಂಬುದು ಕಾರಿನಲ್ಲಿ ಚಾಲಕನ ಪ್ರಮೇಯವಿಲ್ಲದೇ ಸುರಕ್ಷಿತ ಪ್ರಯಾಣಕ್ಕಾಗಿ ಹಲವು ಕಾರ್ಯಗಳನ್ನು ನಿರ್ವಹಿಸುತ್ತದೆ. ಈ ಫಿಚರ್ ಕೇವಲ ದುಬಾರಿ ಕಾರುಗಳಲ್ಲಿ ಮಾತ್ರ ಲಭ್ಯವಿರುತ್ತದೆ. ಅಂತಹ ವೈಶಿಷ್ಟ್ಯವನ್ನು ಈಗ ಮಾರುತಿ ಸುಜುಕಿ ವ್ಯಾಗನ್‌ಆರ್ (Maruti suzuki wagonr)ನಲ್ಲಿ ಅಳವಡಿಸಿರುವ ಬಗ್ಗೆ ಈ ಲೇಖನದಲ್ಲಿ ನೋಡೋಣ.
ಭಾರತದಲ್ಲಿ ಮೊದಲಿಗೆ ಎಂಜಿ ಆಸ್ಟರ್ ಮತ್ತು ಮಹೀಂದ್ರಾ ಎಕ್ಸ್ ಯುವಿ 700 ಕಾರುಗಳು ಈ ADAS ಅನ್ನು ಪರಿಚಯಿಸುವ ಮೂಲಕ ವಾಹನ ಮಾರುಕಟ್ಟೆಯಲ್ಲಿ ಸದ್ಯ ಎಲ್ಲವೂ ಬದಲಾಗಿವೆ. ಈ ಸೆಗ್ಮೆಂಟ್‌ನಲ್ಲಿ ಈಗ ಬಹುತೇಕ ಕಾರುಗಳು ಈ ವೈಶಿಷ್ಟ್ಯವನ್ನು ನೀಡುತ್ತಿವೆ. ಇದರ ಮುಖ್ಯ ಉದ್ದೇಶ ಕಾರು ಚಾಲಕ ತನ್ನ ನಿಯಂತ್ರಣ ಕಳೆದುಕೊಂಡರೂ, ADAS ಸಿಸ್ಟಮ್ ನಿಯಂತ್ರಣ ಕಳೆದುಕೊಳ್ಳದೇ ಸಂಭವನೀಯ ಅಪಘಾತಗಳಿಂದ ಪ್ರಯಾಣಿಕರನ್ನು ರಕ್ಷಿಸುವುದಾಗಿದೆ.

ವ್ಯಾಗನ್‌ಆರ್‌ನಲ್ಲಿ ಲೆವಲ್ 1 ADAS: ಯ್ಯೂಟ್ಯೂಬ್ ಚಾನಲ್ ಒಂದರಲ್ಲಿ ವೈರಲ್ ಆಗಿರುವ ಮಾರುತಿ ಸುಜುಕಿ ವ್ಯಾಗನ್ ಆರ್ (Maruti suzuki wagonr) ಕಾರಿನ ADAS ಸಿಸ್ಟಮ್, ವಾಸ್ತವವಾಗಿ ಡ್ಯಾಶ್ ಕ್ಯಾಮೆರಾವಾಗಿದ್ದು, ಲೆವೆಲ್ 1 ADAS ವೈಶಿಷ್ಟ್ಯಗಳೊಂದಿಗೆ ಬರುತ್ತದೆ. ಇದು ಇನ್ಫೋಟೈನ್ ಮೆಂಟ್ ಸಿಸ್ಟಮ್ ಆಗಿಯೂ ಕಾರ್ಯನಿರ್ವಹಿಸುತ್ತದೆ. ಇದರ ಸ್ಕ್ರೀನ್ ಮುಂಭಾಗ ಮತ್ತು ಹಿಂಭಾಗದ ಕ್ಯಾಮೆರಾಗಳಿಂದ ಬರುವ ಫೀಡ್‌ಗಳನ್ನು ತೋರಿಸುತ್ತದೆ.
ಮುಂಭಾಗದಲ್ಲಿರುವ ಕ್ಯಾಮರಾವು ಕಾರನ್ನು ಓಡಿಸಲು ಪ್ರಾರಂಭಿಸಿದ ಕೂಡಲೇ ರಸ್ತೆಯನ್ನು ಪರಿಶೀಲಿಸಲು ಮುಂದಾಗುತ್ತದೆ. ರಸ್ತೆಯಲ್ಲಿ ಯಾವುದೇ ಕಾರಿಗೆ ನೀವು ತುಂಬಾ ಹತ್ತಿರವಾಗುತ್ತಿದ್ದಂತೆ ಸೆನ್ಸಾರ್‌ಗಳು ನಿಮಗೆ ಬೀಪ್ ಶಬ್ದವನ್ನು ನೀಡಿ ಎಚ್ಚರಿಸುತ್ತವೆ. ಇದನ್ನು ಕಾರಿನ ಡ್ಯಾಷ್ ಕ್ಯಾಮ್‌ನಲ್ಲಿ ನೋಡಬಹುದು, ಸ್ಕ್ರೀನ್‌ನಲ್ಲಿ ಯಾವುದೇ ವಾಹನವು ವ್ಯಾಪ್ತಿಯಿಂದ ಹೊರಬಂದ ನಂತರ ಚಾಲಕನಿಗೆ ಮುಂದೆ ಹೋಗಲು ಸೂಚನೆ ನೀಡುತ್ತದೆ.

ಇದು ಲೆವಲ್ 1 ADAS: ಈ ವ್ಯವಸ್ಥೆಯು ಕೊಲಿಷನ್ ಅಲರ್ಟ್ ವಾರ್ನಿಂಗ್, ಲೇನ್ ಡಿಪಾರ್ಚರ್ ವಾರ್ನಿಂಗ್, ಲೀಡಿಂಗ್ ವೆಹಿಕಲ್ ಡಿಪಾರ್ಚರ್ ವಾರ್ನಿಂಗ್ ಮುಂತಾದ ADAS (Advanced Driver Assistance System) ವೈಶಿಷ್ಟ್ಯಗಳೊಂದಿಗೆ ಬರುತ್ತದೆ. ಇದು ಲೆವಲ್ 1 ADAS ಆಗಿರುವುದರಿಂದ ಚಾಲಕನಿಗೆ ಕೇವಲ ಎಚ್ಚರಿಕೆ ಮಾತ್ರ ನೀಡುತ್ತದೆ. ಬ್ರೇಕ್‌ಗಳು ಅಥವಾ ಸ್ಟೀರಿಂಗ್ ಅನ್ನು ನಿಯಂತ್ರಿಸುವುದಿಲ್ಲ. ಆದರೆ ಲೆವಲ್ 2 ADAS ಎಲ್ಲಾ ಕಾರ್ಯಗಳನ್ನು ಮಾಡುತ್ತದೆ.
ಇದು ಎಒಸಿಸಿಐ ಎಂಬ ಬ್ರಾಂಡ್‌ನ ಆಫ್ಟರ್ ಮಾರ್ಕೆಟ್ ಅಕ್ಸೆಸೊರಿಯಾಗಿದ್ದು, ಎಲ್ಲಾ ವಾಹನಗಳೊಂದಿಗೆ ಹೊಂದಿಕೆಯಾಗುತ್ತದೆ. ನಾವು ಮಾರುಕಟ್ಟೆಯಲ್ಲಿ ಹಲವಾರು ಡ್ಯಾಶ್ ಕ್ಯಾಮೆರಾಗಳನ್ನು ನೋಡಿದ್ದರೂ, ADAS ತರಹದ ಸುರಕ್ಷತಾ ವೈಶಿಷ್ಟ್ಯಗಳೊಂದಿಗೆ ಬರುವ ಮಾದರಿಯನ್ನು ನಾವು ನೋಡುತ್ತಿರುವುದು ಇದೇ ಮೊದಲು. ಈ ಕ್ಯಾಮೆರಾ ಎಲ್ಲಾ ಲೆವೆಲ್ 1 ADAS ಫೀಚರ್‌ಗಳನ್ನು ನೀಡುವುದಿಲ್ಲವಾದರೂ ಅವುಗಳಲ್ಲಿ ಕೆಲವನ್ನು ತಕ್ಕಮಟ್ಟಿಗೆ ನಿರ್ವಹಿಸುತ್ತಿದೆ.

ಪ್ರಸ್ತುತದ ದಿನಗಳಲ್ಲಿ ವಾಹನದಲ್ಲಿ ಡ್ಯಾಶ್ ಕ್ಯಾಮೆರಾ ಇರುವುದು ತುಂಬಾ ಮುಖ್ಯ. ರಸ್ತೆಗಳಲ್ಲಿ ವಾಹನಗಳ ಸಂಖ್ಯೆ ಹೆಚ್ಚಾದಂತೆ, ನೀವು ಅಪಘಾತಗಳಲ್ಲಿ ಸಿಲುಕುವ ಸಾಧ್ಯತೆಗಳು ಸಾಮಾನ್ಯವಾಗಿದೆ. ಹಾಗಾಗಿ ಕೆಲವು ಅಪಘಾತಗಳು ನಿಮ್ಮ ತಪ್ಪಿಲ್ಲದಿದ್ದರೂ ಅಪರಾಧಿಯಂತೆ ಬಿಂಬಿಸಬಹುದು, ಹಾಗಾಗಿ ಡ್ಯಾಷ್ ಕ್ಯಾಮ್ ಇದ್ದರೇ ನಿಮ್ಮ ನಿರಪರಾಧಿತ್ವವನ್ನು ಸಾಬೀತುಪಡಿಸಬಹುದು. ಡ್ಯಾಶ್ ಕ್ಯಾಮೆರಾದಿಂದ ವೀಡಿಯೊ ರೆಕಾರ್ಡಿಂಗ್ ಅನ್ನು ಪುರಾವೆಯಾಗಿ ಬಳಸಬಹುದು.
ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.


Click it and Unblock the Notifications








