Maruti Suzuki: ಈ ಜನಪ್ರಿಯ ಫ್ಯಾಮಿಲಿ ಕಾರಿಗೆ ಭರ್ಜರಿ ರಿಯಾಯಿತಿ.. 11 ಲಕ್ಷ ಬೆಲೆ, 6 ಜನ ಹೋಗಬಹುದು!
ಮಾರುತಿ ಸುಜುಕಿ (Maruti Suzuki) ಅತಿದೊಡ್ಡ ವಾಹನ ತಯಾರಕ ಸಂಸ್ಥೆಯಾಗಿ ಗುರುತಿಸಿಕೊಂಡಿದೆ. ದೇಶೀಯ ಮಾರುಕಟ್ಟೆಯಲ್ಲಿ ಆಲ್ಟೊ ಕೆ10, ಸೆಲೆರಿಯೊ, ವ್ಯಾಗನ್ಆರ್, ಸ್ವಿಫ್ಟ್, ಇಗ್ನಿಸ್, ಬಲೆನೊ, ಫ್ರಾಂಕ್ಸ್, ಗ್ರ್ಯಾಂಡ್ ವಿಟಾರಾ ಮತ್ತು ಜಿಮ್ನಿ ಸೇರಿದಂತೆ ವಿವಿಧ ಕಾರುಗಳನ್ನು ಮಾರಾಟ ಮಾಡುತ್ತಿದೆ. ಈ ಆಗಸ್ಟ್ ತಿಂಗಳು ಹೊಸ ಕಾರುಗಳನ್ನು ಖರೀದಿಸುವ ಗ್ರಾಹಕರಿಗೆ ಭರ್ಜರಿ ಸಿಹಿಸುದ್ದಿ ನೀಡಿದ್ದು, ನೆಕ್ಸಾ (Nexa) ಡೀಲರ್‌ಶಿಪ್ ಮೂಲಕ ಮಾರಾಟಗೊಳಿಸುವ ಜನಪ್ರಿಯ ಎಕ್ಸ್ಎಲ್6 (XL6) ಎಂಪಿವಿಗೆ ದೊಡ್ಡ ರಿಯಾಯಿತಿ ಪ್ರಯೋಜನ ಘೋಷಣೆ ಮಾಡಿದೆ. ಆ ಬಗ್ಗೆ ಇಲ್ಲಿದೆ ಹೆಚ್ಚಿನ ಮಾಹಿತಿ.
ಬೆಂಗಳೂರಿನಲ್ಲಿ ಮಾರುತಿ ಸುಜುಕಿ ಎಕ್ಸ್ಎಲ್6 (Maruti Suzuki XL6) ಎಂಪಿವಿ, ರೂಪಾಂತರ (ವೇರಿಯೆಂಟ್)ಗಳನ್ನು ಅವಲಂಭಿಸಿ ರೂ.28,000 ದಿಂದ ರೂ.38,000ವರೆಗೆ ರಿಯಾಯಿತಿ ಹೊಂದಿದೆ. ಸದ್ಯ ಈ ಕಾರು ಅತ್ಯಂತ ಕೈಗೆಟುಕುವ ಬೆಲೆಯಲ್ಲಿ ಖರೀದಿಗೆ ಲಭ್ಯವಿದ್ದು, ರೂ.11.61 ಲಕ್ಷದಿಂದ ರೂ.14.77 ಲಕ್ಷ ಎಕ್ಸ್ ಶೋರೂಂ ಬೆಲೆಯನ್ನು ಹೊಂದಿದೆ.

ಈ ಎಕ್ಸ್ಎಲ್6 ಎಂಪಿವಿ ಜಿಟಾ, ಆಲ್ಫಾ ಸೇರಿದಂತೆ ಹಲವು ರೂಪಾಂತರಗಳ ಆಯ್ಕೆಯನ್ನು ಪಡೆದಿದೆ. ನೆಕ್ಸಾ ಬ್ಲೂ, ಒಪ್ಯುಲೆಂಟ್ ರೆಡ್, ಬ್ರೇವ್ ಖಾಕಿ, ಗ್ರ್ಯಾಂಡ್ಯೂರ್ ಗ್ರೇ ಹಾಗೂ ಸ್ಪ್ಲೆಂಡಿಡ್ ಸಿಲ್ವರ್ ಒಳಗೊಂಡಂತೆ ವಿವಿಧ ಬಣ್ಣಗಳೊಂದಿಗೂ ದೊರೆಯುತ್ತದೆ. ಇದರಲ್ಲಿ 6 ಮಂದಿ ಆರಾಮದಾಯಕವಾಗಿ ಪ್ರಯಾಣಿಸಬಹುದು. ವಾರಾಂತ್ಯ ಹಾಗೂ ರಜಾದಿನಗಳಲ್ಲಿ ಹೆಚ್ಚಿನ ಲಗೇಜ್ ಸಾಗಿಸಲು 209 ಲೀಟರ್ ಸಾಮರ್ಥ್ಯದ ಬೂಟ್ ಸ್ಪೇಸ್‌ನ್ನು ತನ್ನದಾಗಿಸಿಕೊಂಡಿದೆ.
ನೂತನ ಮಾರುತಿ ಸುಜುಕಿ ಎಕ್ಸ್ಎಲ್6 ಕಾರು ಎರಡು ಪವರ್‌ಟ್ರೇನ್‌ನೊಂದಿಗೆ ಸಿಗುತ್ತದೆ. ಇದರ 1.5-ಲೀಟರ್ ಪೆಟ್ರೋಲ್ ಎಂಜಿನ್ 103 ಪಿಎಸ್ ಗರಿಷ್ಠ ಶಕ್ತಿ (ಪವರ್) ಹಾಗೂ 137 ಎನ್ಎಂ ಪೀಕ್ ಟಾರ್ಕ್ ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದೆ. 5-ಸ್ಪೀಡ್ ಮ್ಯಾನುವಲ್/ 6-ಸ್ಪೀಡ್ ಆಟೋಮೆಟಿಕ್ ಗೇರ್‌ಬಾಕ್ಸ್ ಆಯ್ಕೆಯನ್ನು ಪಡೆದಿದೆ.

ಸಿಎನ್‌ಜಿ ಚಾಲಿತ ರೂಪಾಂತರವು ಇದೇ ಎಂಜಿನ್‌ನ್ನು ಒಳಗೊಂಡಿದೆ. ಆದರೆ 88 ಪಿಎಸ್ ಶಕ್ತಿ ಮತ್ತು 121.5 ಎನ್ಎಂ ಹೊರಹಾಕಲಷ್ಟೇ ಶಕ್ತವಾಗಿದೆ. ಕೇವಲ 5-ಸ್ಪೀಡ್ ಮ್ಯಾನುವಲ್ ಗೇರ್‌ಬಾಕ್ಸ್‌ನ್ನು ಮಾತ್ರ ದೊರೆಯುತ್ತದೆ. ಈ ಕಾರು ಅತ್ಯುತ್ತಮವಾದ ಇಂಧನ ದಕ್ಷತೆ (Fuel efficiency) ಹೊಂದಿದ್ದು, 20.27 ರಿಂದ 26.32 ಕೆಎಂಪಿಎಲ್‌ವರೆಗೆ ಮೈಲೇಜ್ ಕೊಡುತ್ತದೆ.
ಮಾರುತಿ ಎಕ್ಸ್ಎಲ್6 (Maruti Suzuki XL6) ಎಂಪಿವಿ ಯುವ ಗ್ರಾಹಕರನ್ನು ಆಕರ್ಷಿಸುವ ಹತ್ತಾರು ವೈಶಿಷ್ಟ್ಯಗಳನ್ನು ಒಳಗೊಂಡಿದೆ. 7-ಇಂಚಿನ ಇನ್ಫೋಟೈನ್‌ಮೆಂಟ್ ಸಿಸ್ಟಮ್, ಆಂಡ್ರಾಯ್ಡ್ ಆಟೋ, ಆಪಲ್ ಕಾರ್ ಪ್ಲೇ, ಪ್ಯಾಡಲ್ ಶಿಫ್ಟರ್ಸ್, ವೆಂಟಿಲೇಟೆಡ್ ಫ್ರಂಟ್ ಸೀಟ್ಸ್, ಆಟೋ ಎಸಿ, ಕ್ರೂಸ್ ಕಂಟ್ರೋಲ್ ಹಾಗೂ 360-ಡಿಗ್ರಿ ಕ್ಯಾಮೆರಾದಂತಹ ಹಲವು ವೈಶಿಷ್ಟ್ಯಗಳಿವೆ.

ಈ ಕಾರು ಪ್ರಯಾಣಿಕರಿಗೆ ಗರಿಷ್ಠ ಮಟ್ಟದಲ್ಲಿ ರಕ್ಷಣೆ ಒದಗಿಸುತ್ತದೆ. 4 ಏರ್‌ಬ್ಯಾಗ್, ಇಎಸ್‌ಪಿ (ಎಲೆಕ್ಟ್ರಾನಿಕ್ ಸ್ಟೆಬಿಲಿಟಿ ಪ್ರೋಗ್ರಾಂ) ಮತ್ತು ಟಿಪಿಎಂಎಸ್ (ಟೈರ್ ಪ್ರೆಶರ್ ಮಾನಿಟರಿಂಗ್ ಸಿಸ್ಟಮ್) ಹೊಂದಿದೆ. ನಿಮ್ಮ ಗಮನಕ್ಕೆ.. ಈ ರಿಯಾಯಿತಿ ಪ್ರಯೋಜನ ರಾಜ್ಯದಿಂದ ರಾಜ್ಯಕ್ಕೆ ಡೀಲರ್‌ಶಿಪ್‌ಗಳಿಗೆ ಅನುಗುಣವಾಗಿ ಬೇರೆಯಿರಲಿದ್ದು, ಹೆಚ್ಚಿನ ವಿವರಗಳಿಗೆ ನಿಮ್ಮ ಸಮೀಪದ ಶೋರೂಂಗೆ ಭೇಟಿ ನೀಡಿರಿ.
ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.


Click it and Unblock the Notifications