5-ಸ್ಟಾರ್ ಸೇಫ್ಟಿ ಕಾರ್ ಆಯ್ತು ಈಗ ಮಾರುತಿಯಿಂದ ಹೊಸ ಎಲೆಕ್ಟ್ರಿಕ್ ಕಾರು: ಟಾಟಾ ಪಾಳಯದಲ್ಲಿ ನಡುಕ ಶುರು!

ಭಾರತದಲ್ಲಿ ಎಲೆಕ್ಟ್ರಿಕ್ ವಾಹನಗಳಿಗೆ ಬೇಡಿಕೆಯು ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಪ್ರಪಂಚದ ಇತರ ಅಂತರರಾಷ್ಟ್ರೀಯ ಮಾರುಕಟ್ಟೆಗಳ ರೀತಿಯಲ್ಲೇ ಭಾರತದಲ್ಲೂ ಐಷಾರಾಮಿ ಕಾರು ಬ್ರಾಂಡ್‌ಗಳು ತಮ್ಮ ತಮ್ಮ ಎಲೆಕ್ಟ್ರಿಕ್ ಕಾರುಗಳನ್ನು ಮಾರಾಟ ಮಾಡುತ್ತಿವೆ. ಇದೀಗ ದೇಶದ ಅತಿದೊಡ್ಡ ಕಾರು ತಯಾರಕ ಕಂಪನಿಯಾದ ಮಾರುತಿ ಸುಜುಕಿ (Maruti Suzuki) ಕಂಪನಿಯು ಭಾರತದಲ್ಲಿ ತನ್ನ ಮೊದಲ ಎಲೆಕ್ಟ್ರಿಕ್ ಕಾರನ್ನು ಬಿಡುಗಡೆಗೊಳಿಸಲಿದೆ ಎಂದು ಭಾರೀ ಸುದ್ದಿಯಾಗಿದೆ. ಈ ನಡುವೆ ಸುಜುಕಿ ಮೋಟಾರ್ ಕಾರ್ಪೊರೇಷನ್ (Suzuki Motor Corporation) ತನ್ನ ಮೊದಲ ಎಲೆಕ್ಟ್ರಿಕ್ ವಾಹನವಾದ ಇವಿಟಾರಾವನ್ನು ಇಟಲಿಯ ಮಿಲನ್‌ನಲ್ಲಿ ಅನಾವರಣಗೊಳಿಸಿದೆ.

ಹೊಸ ಎಲೆಕ್ಟ್ರಿಕ್ ಕಾರನ್ನು ಅನಾವರಣಗೊಳಿಸುವ ಮೂಲಕ ಜಾಗತಿಕ ಎಲೆಕ್ಟ್ರಿಕ್ ವಾಹನ ಮಾರುಕಟ್ಟೆಗೆ ಸುಜುಕಿಯ ಪ್ರವೇಶವನ್ನು ಮಾಡಿದೆ. 2025ರ ವೇಳೆಗೆ ಭಾರತದಲ್ಲಿ ಸುಜುಕಿ ಮೋಟಾರ್ ಗುಜರಾತ್‌ನಲ್ಲಿ ಉತ್ಪಾದನೆಯು ಪ್ರಾರಂಭವಾಗಲಿದೆ ಎಂದು ಹೇಳಲಾಗುತ್ತಿದೆ. 2025ರಲ್ಲಿ ಈ ಹೊಸ ಎಲೆಕ್ಟ್ರಿಕ್ ಕಾರು ಯುರೋಪ್, ಭಾರತ ಮತ್ತು ಜಪಾನ್‌ನಲ್ಲಿ ಮಾರಾಟವಾಗುವ ನಿರೀಕ್ಷಿಯಿದೆ. ಭಾರತದಲ್ಲಿ ಬಿಡುಗಡೆಯಾದ ನಂತರ ಟಾಟಾ ಕರ್ವ್ ಇವಿ ಮತ್ತು ಎಂಜಿ ZS ಎಲೆಕ್ಟ್ರಿಕ್ ಕಾರುಗಳಿಗೆ ಪೈಪೋಟಿ ನೀಡುತ್ತದೆ.

Evitara Electric Suv

2023ರ ಜನವರಿ ಭಾರತದ ಆಟೋ ಎಕ್ಸ್‌ಪೋದಲ್ಲಿ ಮತ್ತು ನಂತರ ಅಕ್ಟೋಬರ್‌ನಲ್ಲಿ ಜಪಾನ್ ಮೊಬಿಲಿಟಿ ಶೋನಲ್ಲಿ ಪ್ರದರ್ಶಿಸಲಾದ ಮಾರುತಿ ಇವಿಎಕ್ಸ್ ಕಾನ್ಸೆಪ್ಟ್ ನಿಂದ ಸ್ಫೂರ್ತಿ ಪಡೆದಿದೆ. ಇದು ಬಹುಮುಖ ಮತ್ತು ಪರಿಸರ ಸ್ನೇಹಿ ಎಸ್‍ಯುವಿಗಾಗಿ ಸುಜುಕಿಯು ಆಕರ್ಷಕವಾಗಿ ವಿನ್ಯಾಸಗೊಳಿಸಲಾಗಿದೆ. ಈ ಸುಜುಕಿ ಮಾದರಿಯು "ಎಮೋಷನಲ್ ವರ್ಸಟೈಲ್ ಕ್ರೂಸರ್" ಎಂದು ಕರೆಯಲ್ಪಡುವ ಇದು ಸುಧಾರಿತ ತಂತ್ರಜ್ಞಾನವನ್ನು ಹೊಂದಿದೆ.

ಆಯಾಮಗಳಿಗೆ ಸಂಬಂಧಿಸಿದಂತೆ, ಮಾರುತಿ ಇ-ವಿಟಾರಾ 4,275 ಎಂಎಂ ಉದ್ದ, 1,800 ಎಂಎಂ ಅಗಲ, 1,635 ಎಂಎಂ ಎತ್ತರ, 2,700 ಎಂಎಂ ವೀಲ್‌ಬೇಸ್ ಮತ್ತು 180 ಎಂಎಂ ಗ್ರೌಂಡ್ ಕ್ಲಿಯರೆನ್ಸ್ ಅನ್ನು ಹೊಂದಿದೆ. ಈ ಎಲೆಕ್ಟ್ರಿಕ್ ಕಾರಿನ ಹೊರಭಾಗದಂತೆಯೇ ಒಳಾಂಗಣವನ್ನು ಸ್ಟೈಲಿಶ್ ಆಗಿ ವಿನ್ಯಾಸಗೊಳಿಸಲಾಗಿದೆ. ಈ ಕಾರಿನಲ್ಲಿ ಒನ್-ಪೀಸ್ ಡಿಸ್ ಪ್ಲೇ, ಸೆಂಟರ್ ಕನ್ಸೋಲ್‌ಗೆ ವಿನ್ಯಾಸ, ವರ್ಟಿಕಲ್ ಏರ್ ವೆಂಟ್‌ಗಳು ಮತ್ತು ಫ್ಲಾಟ್-ಬಾಟಮ್ ಸ್ಟೀರಿಂಗ್ ವೀಲ್ ಅನ್ನು ಹೊಂದಿದೆ.

Evitara Electric Suv I

ಸುಜುಕಿ ಇವಿಟಾರಾ (eVitara) ವಿನ್ಯಾಸವು ಒರಟಾದ ಎಸ್‍ಯುವಿ ಅಂಶಗಳೊಂದಿಗೆ ಹೈಟೆಕ್ ಫೀಚರ್ಸ್ ಗಳನ್ನು ಹೊಂದಿವೆ. ಈ ಮಾದರಿಯು ದೊಡ್ಡ ಟೈರ್‌ಗಳು, ಉದ್ದವಾದ ವೀಲ್‌ಬೇಸ್ ಮತ್ತು ಸಾಹಸಮಯ ಡ್ರೈವ್‌ಗಾಗಿ ದೃಢವಾದ ನಿಲುವನ್ನು ಹೊಂದಿದೆ. ಒಳಗೆ, ಇದು ಕಠಿಣ ಪ್ಯಾನೆಲ್‌ಗಳು ಮತ್ತು ಗಟ್ಟಿಮುಟ್ಟಾದ ಸೆಂಟರ್ ಕನ್ಸೋಲ್‌ನೊಂದಿಗೆ ಸಂಯೋಜಿತ ಡಿಸ್ ಪ್ಲೇಯನ್ನು ಹೊಂದಿದೆ. ಇನ್ನು ಈ ಎಸ್‍ಯುವಿಯಲ್ಲಿ "ಹೈ-ಟೆಕ್ & ಅಡ್ವೆಂಚರ್" ಥೀಮ್ ಹೊಂದಿದೆ.

ಈ ಸುಜುಕಿ ಇವಿಟಾರಾ (Suzuki eVitara) ಕಾರಿನಲ್ಲಿ ಸುಧಾರಿತ BEV ಪವರ್‌ಟ್ರೇನ್‌ನಿಂದ ಚಾಲಿತವಾಗಿದೆ. ಇದು ಸುರಕ್ಷತೆ ಮತ್ತು ವಿಶ್ವಾಸಾರ್ಹತೆಗೆ ಹೆಸರುವಾಸಿಯಾದ ಲಿಥಿಯಂ ಐರನ್-ಫಾಸ್ಫೇಟ್ ಬ್ಯಾಟರಿಗಳಿಂದ ನಡೆಸಲ್ಪಡುವ ಮೋಟಾರ್ ಮತ್ತು ಇನ್ವರ್ಟರ್ ಅನ್ನು ಸಂಯೋಜಿಸುವ ದಕ್ಷವಾದ ಇಆಕ್ಸಲ್ ಅನ್ನು ಬಳಸುತ್ತದೆ. ಈ ಸೆಟಪ್ ಸ್ಟಾಪ್ ಆಗಿರುವುದಕ್ಕೆ ಎಕ್ಸೆಲೆಟರ್ ಮಾಡುತ್ತದೆ ಮತ್ತು ಇದು ಪ್ರಬಲವಾದ ಓವರ್‌ಟೇಕಿಂಗ್ ಪವರ್ ನೀಡುತ್ತದೆ.

Evitara Electric Suv I

ಸುಜುಕಿಯ ಎಲೆಕ್ಟ್ರಿಕ್ 4WD ಸಿಸ್ಟಮ್, "ALLGRIP-e," eVita ಪರ್ಫಾಮೆನ್ಸ್ ಅನ್ನು ಹೆಚ್ಚಿಸುತ್ತದೆ. ಇನ್ನು ಈ ಕಾರಿನ ಮುಂಭಾಗ ಮತ್ತು ಹಿಂಭಾಗದಲ್ಲಿ ಎರಡು eAxles ನೊಂದಿಗೆ, ಇದು ಸ್ಪಂದಿಸುವ ನಿರ್ವಹಣೆ ಮತ್ತು ಪ್ರಭಾವಶಾಲಿ ಆಫ್-ರೋಡ್ ಸಾಮರ್ಥ್ಯವನ್ನು ನೀಡುತ್ತದೆ. ಈ ALLGRIP-e ಸಿಸ್ಟಂ ಅನ್ನು ಟ್ರಯಲ್ ಮೋಡ್ ಅನ್ನು ಒಳಗೊಂಡಿದೆ.

ಯುರೋಪ್‌ಗಾಗಿ ಮಾರುತಿ ಸುಜುಕಿ ಇವಿಟಾರಾ ಕಾರಿನಲ್ಲ್ 49 kWh ಮತ್ತು 61 kWh ಬ್ಯಾಟರಿ ಆಯ್ಕೆಗಳನ್ನು 2WD ಮತ್ತು 4WD ಎರಡೂ ಸಿಸ್ಟಂಗಳೊಂದಿಗೆ ಒದಗಿಸುತ್ತದೆ. ಇನ್ನು ಮೋಟಾರ್ ಔಟ್‌ಪುಟ್ 106 kW ನಿಂದ 135 kW ವರೆಗೆ 2WD ಮಾದರಿಗಳಿಗೆ 189 Nm ಟಾರ್ಕ್ ಮತ್ತು 4WD ಮಾದರಿಗಳಿಗೆ 300 Nm ವರೆಗೆ ಇರುತ್ತದೆ.

ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊ ಗಳನ್ನು ಪಡೆಯಲು ನಮ್ಮ ಫೇಸ್‌ ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.

Article Published On: Wednesday, November 13, 2024, 17:11 [IST]
English summary
Maruti suzukis next biggest launch new evitara electric suv details
Read more on maruti suzuki india
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+