Maruti Swift Hybrid: ಟೆಸ್ಟಿಂಗ್ ವೇಳೆ ಕ್ಯಾಮೆರಾ ಕಣ್ಣಿಗೆ ಬಿದ್ದ 'ಸ್ವಿಫ್ಟ್ ಹೈಬ್ರಿಡ್': ಬಿಡುಗಡೆ ಯಾವಾಗ?

ನಾಲ್ಕನೇ ತಲೆಮಾರಿನ ಮಾರುತಿ ಸುಜುಕಿ ಸ್ವಿಫ್ಟ್ (Maruti Suzuki Swift) ಕೆಲವು ತಿಂಗಳ ಹಿಂದೆ ದೇಶೀಯ ಮಾರುಕಟ್ಟೆಯಲ್ಲಿ ಬಿಡುಗಡೆಯಾಗಿದೆ. ಇತ್ತೀಚೆಗಷ್ಟೇ ಬಿಡುಗಡೆಯಾಗಿ ಭಾರೀ ಬೇಡಿಕೆ ಪಡೆದುಕೊಂಡಿರುವ ಹೊಸ ಸ್ವಿಫ್ಟ್‌ನ ಹೈಬ್ರಿಡ್ ಆವೃತ್ತಿ ಕೂಡ ಶೀಘ್ರದಲ್ಲೇ ಬಿಡುಗಡೆಯಾಗಲು ಸಜ್ಜಾಗುತ್ತಿದೆ. ಹೌದು, ಸ್ವಿಫ್ಟ್ ಹೈಬ್ರಿಡ್‌ (Maruti Swift Hybrid)ನ ಟೆಸ್ಟಿಂಗ್ ಮಾಡಲ್ ಇತ್ತೀಚೆಗೆ ಬೆಂಗಳೂರಿನಲ್ಲಿ ಕಂಡುಬಂದಿದೆ. ಕಾರಿನ ಮೇಲೆ 'ಹೈಬ್ರಿಡ್' ಬ್ಯಾಡ್ಜ್ ಸಹ ಕಾಣುತ್ತಿತ್ತು. ಚಾಲಕನ ಬಾಗಿಲಿನ ಮೇಲೆ "ಟೆಸ್ಟ್ ವೆಹಿಕಲ್" ಎಂದು ಬರೆದಿರುವ ಸ್ಟಿಕ್ಕರ್ ಕೂಡ ಇತ್ತು. ಅಲ್ಲಿಗೆ ಸ್ವಿಫ್ಟ್ ಹೈಬ್ರಿಡ್ ಬರುವುದು ಬಹುತೇಕ ಖಚಿತವಾಗಿದೆ.

ಪ್ರಸ್ತುತ ಭಾರತದಲ್ಲಿ ಹೊಸ ಸ್ವಿಫ್ಟ್ 1.2 ಲೀಟರ್ 3 - ಸಿಲಿಂಡರ್ ಝಡ್ ಸಿರೀಸ್ ಪೆಟ್ರೋಲ್ ಎಂಜಿನ್ ಅನ್ನು ಹೊಂದಿದೆ. ಭವಿಷ್ಯದಲ್ಲಿ ಸ್ಟ್ರಾಂಗ್ ಅಥವಾ ಮೈಲ್ಡ್ ಹೈಬ್ರಿಡ್ ಎಂಜಿನ್‌ ಪರಿಚಯಿಸುವ ಕುರಿತು ಬಹಳ ಹಿಂದಿನಿಂದಲೂ ಹೇಳಲಾಗುತ್ತಿದೆ. ಅಂತೆಯೇ ಈಗ ಹೈಬ್ರಿಡ್ ಟೆಸ್ಟಿಂಗ್ ಮಾಡಲ್ ಕಾಣಿಸಿಕೊಳ್ಳುವ ಮೂಲಕ ಹಲವರ ಗೊಂದಲಗಳಿಗೆ ಉತ್ತರ ಸಿಕ್ಕಂತಾಗಿದೆ.

maruti-swift-hybrid-seen-while-testing-in-bengaluru

ಈ ಮೂಲಕ ಮುಂಬರುವ ಸ್ವಿಫ್ಟ್ ಹೈಬ್ರಿಡ್ ಕಾರಿನಲ್ಲಿ ದೊಡ್ಡ ಬ್ಯಾಟರಿ ಪ್ಯಾಕ್ ಮತ್ತು ಮೈಲೇಜ್ ಹೆಚ್ಚಿಸುವ ವ್ಯವಸ್ಥೆಯ ಜೊತೆಗೆ ಇಂಧನ ಉಳಿಸುವ ತಂತ್ರಜ್ಞಾನದೊಂದಿಗೆ ಪ್ರತಿ ಲೀಟರ್‌ಗೆ ಕಾರು 35 ಕಿ.ಮೀ ಮೈಲೇಜ್ ನೀಡುವ ಸಾಧ್ಯತೆ ಇದೆ. ಈಗಾಗಲೇ ಭಾರತವಲ್ಲದಿದ್ದರೂ, ಸುಜುಕಿ ಕಂಪನಿಯು ಇತರ ಅಂತರಾಷ್ಟ್ರೀಯ ಮಾರುಕಟ್ಟೆಗಳಲ್ಲಿ ಸ್ವಿಫ್ಟ್ ಹೈಬ್ರಿಡ್ ಅನ್ನು ಮಾರಾಟ ಮಾಡುತ್ತಿದೆ.

ತನ್ನ ಅಂತರಾಷ್ಟ್ರೀಯ ಮಾದರಿಯಂತೆಯೇ ಭಾರತದಲ್ಲಿಯೂ ಹೊಸ ಸ್ವಿಫ್ಟ್ ಕಲವೇ ಬದಲಾವಣೆಗಳೊಂದಿಗೆ ಪರಿಚಯಿಸಬಹುದು. ಅಂದಹಾಗೆ ಅಂತರಾಷ್ಟ್ರೀಯ ಮಾರುಕಟ್ಟೆಯಲ್ಲಿ ಸುಜುಕಿ ತನ್ನ ಸ್ವಿಫ್ಟ್ ಅನ್ನು 1.2 ಲೀಟರ್ ಪೆಟ್ರೋಲ್ ಎಂಜಿನ್ ಮತ್ತು 1.2 ಲೀಟರ್ ಪೆಟ್ರೋಲ್-ಹೈಬ್ರಿಡ್ ಎಂಜಿನ್‌ ಆಯ್ಕೆಗಳೊಂದಿಗೆ ಮಾರಾಟ ಮಾಡುತ್ತಿದೆ. ಈ ಎಂಜಿನ್ 5-ಸ್ಪೀಡ್ ಮ್ಯಾನುವಲ್ ಮತ್ತು ಸಿವಿಟಿ ಗೇರ್ ಬಾಕ್ಸ್ ಆಯ್ಕೆ ಹೊಂದಿದೆ. 2-ವೀಲ್ ಹಾಗೂ 4 ವೀಲ್ ಡ್ರೈವ್‌ ಕಾನ್ಫಿಗರೇಶನ್‌ಗಳಲ್ಲಿ ಲಭ್ಯವಿದೆ.

maruti-swift-hybrid-seen-while-testing-in-bengaluru

ಬೆಂಗಳೂರಿನಲ್ಲಿ ಪರೀಕ್ಷಿಸಲ್ಪಟ್ಟಿರುವ ಹೊಸ ಸ್ವಿಫ್ಟ್ ಟೆಸ್ಟಿಂಗ್ ಮಾಡಲ್, ಮೈಲ್ಡ್ - ಹೈಬ್ರಿಡ್ ತಂತ್ರಜ್ಞಾನದೊಂದಿಗೆ ಅಂತರಾಷ್ಟ್ರೀಯ ಮಾರುಕಟ್ಟೆಯ ಸ್ವಿಫ್ಟ್‌ನಲ್ಲಿರುವ ಅದೇ ಪವರ್ ಟ್ರೇನ್ ಹಾಗೂ ಪರ್ಫಾಮೆನ್ಸ್ ನೀಡಲಿದೆ ಎಂದು ಅಂದಾಜಿಸಲಾಗಿದೆ. ಸ್ಥಳೀಯ ಪರಿಸ್ಥಿತಿಗಳಿಗೆ ಅನುಗುಣವಾಗಿ ADAS ಸಾಮರ್ಥ್ಯಗಳನ್ನು ಪರಿಶೀಲಿಸಲಾಗುತ್ತಿದೆ. ಇದು ಹಲವು ಸುರಕ್ಷತಾ ಫೀಚರ್‌ಗಳನ್ನು ಒಳಗೊಂಡು ಬರಲಿದೆ.

ಅಂದರೆ ಹೊಸ ADAS ನಲ್ಲಿ ಅಪಘಾತ ತಗ್ಗಿಸುವಿಕೆ (collision mitigation), ಲೇನ್ ನಿರ್ಗಮನ ಎಚ್ಚರಿಕೆ (Lane departure warning) ಮತ್ತು ಹೊಂದಾಣಿಕೆಯ ಕ್ರೂಸ್ ಕಂಟ್ರೋಲ್‌ನಂತಹ ಸುರಕ್ಷತಾ ವೈಶಿಷ್ಟ್ಯಗಳನ್ನು ಒಳಗೊಂಡಿರಲಿದೆ. ಈ ಮೂಲಕ ಭಾರತದಲ್ಲಿ ಮಾರುತಿ ಸುಜುಕಿ ಅಗ್ಗದ ಬೆಲೆಯಲ್ಲಿ ಹೈಬ್ರಿಡ್ ಹ್ಯಾಚ್‌ಬ್ಯಾಕ್‌ ಕಾರುಗಳನ್ನು ನೀಡಲು ಸಜ್ಜಾಗುತ್ತಿದೆ.

maruti-swift-hybrid-seen-while-testing-in-bengaluru

ಈಗಾಗಲೇ ಮಾರುತಿ ಸುಜುಕಿ ಕಾರುಗಳು ಭಾರತದಲ್ಲಿ ಭಾರೀ ಜನಪ್ರಿಯತೆ ಪಡೆದಿವೆ. ಅಗ್ಗದ ಬೆಲೆಗೆ ಉತ್ತಮ ಮೈಲೇಜ್ ನೀಡುವುದರ ಜೊತೆಗೆ ಬೆಸ್ಟ್ ಫೀಚರ್‌ಗಳನ್ನು ನೀಡುವ ಮೂಲಕ ಮಧ್ಯಮ ಹಾಗೂ ಬಡ ವರ್ಗದ ಜನರ ಕಾರು ಖರೀದಿಸುವ ಕನಸನ್ನು ನನಸು ಮಾಡಿದೆ. ಸುರಕ್ಷತೆಯಲ್ಲೂ ಹೊಸ ಡಿಜೈರ್ 5-ಸ್ಟಾರ್‌ ರೇಟಿಂಗ್‌ನೊಂದಿಗೆ ಭಾರತದಲ್ಲಿ ಹೊಸ ಅಲೆ ಎಬ್ಬಿಸಿದೆ. ಮುಂಬರುವ ದಿನಗಳಲ್ಲಿ ಭಾರತದಲ್ಲಿ ಮಾರುತಿ ಸಂಪೂರ್ಣ ಮಾರುಕಟ್ಟೆಯನ್ನು ಆಳುವ ವಿಶ್ವಾಸದಲ್ಲಿದೆ.

ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊ ಗಳನ್ನು ಪಡೆಯಲು ನಮ್ಮ ಫೇಸ್‌ ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.

Source: Team BHP
Link: https://www.team-bhp.com/news/scoop-maruti-swift-hybrid-spied-testing-india

Article Published On: Thursday, November 21, 2024, 16:08 [IST]
English summary
Maruti swift hybrid seen while testing in bengaluru
Read more on maruti suzuki india
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+