ನಿಮ್ಮ ಕಾರಿಗೆ ನೀವೇ ಜವಾಬ್ದಾರರು: ರಸ್ತೆಬದಿಯಲ್ಲಿದ್ದ ಎಲಿವೇಟ್‌ ಮೇಲೆ ಬಿದ್ದ ಮರ, ಕಾರಿನ ಪಾಡೇನು ಗೊತ್ತಾ!

ಭಾರತದಲ್ಲಿ ಹೋಂಡಾ ಕಂಪನಿ ಮಾರಾಟ ಮಾಡುತ್ತಿರುವ ಏಕೈಕ ಎಸ್‌ಯುವಿ ಹೋಂಡಾ ಎಲಿವೇಟ್. ಬಿಡುಗಡೆಯಾಗಿ ಕೆಲವೇ ಕೆಲವು ಸಮಯದಲ್ಲಿ ಅತೀ ಹೆಚ್ಚು ಜನರ ಮನ್ನಣೆಯನ್ನು ಗಳಿಸಿರುವ ಈ ಕಾರು ಇದೀಗ ಮತ್ತೆ ಸುದ್ದಿಯಲ್ಲಿದೆ. ತನ್ನಲ್ಲಿ ಬರೀ ಫೀಚರ್‌ಗಳು ಮಾತ್ರವಲ್ಲ, ಬಲಿಷ್ಟತೆಯೂ ಅಡಗಿದೆ ಎಂದು ಹೇಳುವಂತಿದೆ ಈ ಸುದ್ದಿ.

ಹೌದು, ಬೆಂಗಳೂರಿನ ರಸ್ತೆಗಳೆಂದರೆ ನಮಗೆ ನೆನಪಾಗುವುದು ದೊಡ್ಡ ದೊಡ್ಡ ಮರಗಳು. ಬಹುತೇಕ ಬೆಂಗಳೂರಿನ ಪ್ರಮುಖ ರಸ್ತೆಗಳಲ್ಲಿ ಸಾಲು ಸಾಲು ಮರಗಳನ್ನು ನಾವು ಕಾಣಬಹುದು. ಇಲ್ಲೊಂದು ಕಡೆ ದೊಡ್ಡದಾದಾ ಮರವೊಂದು ಹೋಂಡಾ ಎಲಿವೇಟ್‌ ಮೇಲೆ ಬಿದ್ದಿದ್ದು, ಕಾರು ಮಾತ್ರ ಆ ಆಘಾತವನ್ನು ಬಲಿಷ್ಟವಾಗಿ ಎದುರಿಸಿದೆ ಎಂದೇ ಹೇಳಬಹುದು. ಈ ಮೂಲಕ ಹೋಂಡಾ ಎಲಿವೇಟ್‌ ಕಾರಿನ ಬಿಲ್ಡ್‌ ಕ್ವಾಲಿಟಿಯನ್ನು ಸಾಬೀತು ಪಡಿಸಿದೆ.

Massive Tree Fall On Honda Elevate SUV A Message To The Car Owners

ಮಾಹಿತಿಗಳ ಪ್ರಕಾರ ಈ ಘಟನೆ ಬೆಂಗಳೂರಿನ ದಕ್ಷಿಣ ಹೋಂಡಾ ಡೀಲರ್‌ಶಿಪ್‌ ಮುಂಭಾಗದಲ್ಲಿ ನಡೆದಿದೆ ಎನ್ನಲಾಗುತ್ತಿದೆ. ಒಣಗಿದ್ದ ಮರವೊಂದು ಹೋಂಡಾ ಎಲಿವೇಟ್‌ (Honda Elevate SUV) ಕಾರಿನ ಮೇಲೆ ಬಿದ್ದಿದ್ದು ಕಾರಿಗ ರೂಫ್‌ಗೆ ಹಾನಿಯಾಗಿದೆ. ಫೋಟೋದಲ್ಲಿ ಕಾಣುವಂತೆ ಮರ ಗಾತ್ರದಲ್ಲಿ ದೊಡ್ಡದಾಗಿದ್ದು ಕಾರಿನ ಮುಂಭಾಗದ ಗಾಜು ಸಹ ಪುಡಿಯಾಗಿದೆ.

ಇನ್ನು ಘಟನೆ ನಡೆದ ಕೂಡಲೇ ಸ್ಥಳಕ್ಕೆ ಕಬ್ಬನ್‌ ಪಾರ್ಕ್‌ ಪೊಲೀಸರು ಆಗಮಿಸಿ ಪರಿಶೀಲನೆ ನಡೆಸಿದ್ದಾರೆ. ಮಾಹಿತಿಗಳ ಪ್ರಕಾರ ಈ ಮರ ಸಾಕಷ್ಟು ವರ್ಷಗಳ ಹಿಂದೆಯಿಂದಲೇ ಒಣಗಿ ನಿಂತಿತ್ತು. ಇತ್ತೀಚೆಗೆ ಬಿಸಿಲಿನ ಬೇಗೆ ಹೆಚ್ಚಾಗಿದ್ದರಿಂದ ಈ ಮರ ಬಿದ್ದಿದೆ ಎಂದು ತಿಳಿದು ಬಂದಿದೆ.

ಇನ್ನು ಹೋಂಡಾ ಎಲಿವೇಟ್‌ ಬಗ್ಗೆ ನೋಡುವುದಾದರೆ, ಭಾರತದಲ್ಲಿ ಹೋಂಡಾ ಕಂಪನಿಯ ಅಮೇಜ್ (Amaze) ಹಾಗೂ ಸಿಟಿ (City) ಸೆಡಾನ್ ರೀತಿಯಲ್ಲಿ ಎಲಿವೇಟ್ ಎಸ್‌ಯುವಿಯು ತನಗಾಗಿ ಪ್ರತ್ಯೇಕ ಸ್ಥಾನವನ್ನು ಸೃಷ್ಟಿಸಿಕೊಳ್ಳುತ್ತಿದ್ದು, ಗ್ರಾಹಕರಿಗೆ ಕೈಗೆಟುಕುವ ಬೆಲೆಯಲ್ಲಿ ಖರೀದಿಗೆ ಲಭ್ಯವಿದೆ. ಇದು ರೂ.11.58 ಲಕ್ಷದಿಂದ ರೂ.16.20 ಲಕ್ಷ ಎಕ್ಸ್ ಶೋರೂಂ ಬೆಲೆಯನ್ನು ಹೊಂದಿದ್ದು, ಅತ್ಯಾಧುನಿಕ ವಿನ್ಯಾಸವನ್ನು ಕೂಡ ಒಳಗೊಂಡಿದೆ.

ಹೋಂಡಾ ಎಲಿವೇಟ್ ಕಾರು ಎಸ್‌ವಿ, ವಿ, ವಿಎಕ್ಸ್ ಮತ್ತು ಝಡ್ಎಕ್ಸ್ ರೂಪಾಂತರ ಹಾಗೂ ಅಬ್ಸಿಡಿಯನ್ ಬ್ಲೂ ಪರ್ಲ್, ಫೀನಿಕ್ಸ್ ಆರೆಂಜ್ ಪರ್ಲ್, ರೇಡಿಯಂಟ್ ರೆಡ್ ಮೆಟಾಲಿಕ್, ಪ್ಲಾಟಿನಂ ವೈಟ್ ಪರ್ಲ್, ಲೂನಾರ್ ಸಿಲ್ವರ್ ಮೆಟಾಲಿಕ್, ಗೋಲ್ಡನ್ ಬ್ರೌನ್ ಮೆಟಾಲಿಕ್ ಸೇರಿದಂತೆ ವಿವಿಧ ಆಕರ್ಷಕ ಬಣ್ಣಗಳೊಂದಿಗೆ ಸಿಗುತ್ತದೆ. ಈ ಕಾರಿನಲ್ಲಿ 5 ಮಂದಿ ಆರಾಮದಾಯಕವಾಗಿ ಪ್ರಯಾಣಿಸಬಹುದು.

ನೂತನ ಹೋಂಡಾ ಎಲಿವೇಟ್ (Honda Elevate) ಎಸ್‌ಯುವಿ, 1.5-ಲೀಟರ್ ಪೆಟ್ರೋಲ್ ಎಂಜಿನ್ ಆಯ್ಕೆಯಲ್ಲಿ ದೊರೆಯಲಿದ್ದು, ರೂಪಾಂತರಗಳಿಗೆ ಅನುಗುಣವಾಗಿ 6-ಸ್ವೀಡ್ ಮ್ಯಾನುವಲ್/ ಸಿವಿಟಿ ಆಟೋಮೆಟಿಕ್ ಗೇರ್ ಬಾಕ್ಸ್ ಆಯ್ಕೆಯನ್ನು ಹೊಂದಿದೆ. 15.31 ರಿಂದ 16.92 ಕೆಎಂಪಿಎಲ್ ಮೈಲೇಜ್ ನೀಡುತ್ತದೆ. ಜೊತೆಗೆ FWD (ಫ್ರಂಟ್ ವೀಲ್ ಡ್ರೈವ್) ತಂತ್ರಜ್ಞಾನವನ್ನು ಒಳಗೊಂಡಿದೆ.

ಈ ಕಾರು ಯುವ ಗ್ರಾಹಕರನ್ನು ಆಕರ್ಷಿಸುವ ಹತ್ತಾರು ವೈಶಿಷ್ಟ್ಯಗಳನ್ನು ಒಳಗೊಂಡಿದೆ. ಪ್ರಮುಖವಾಗಿ 10.25-ಇಂಚಿನ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಮ್, 7-ಇಂಚಿನ ಸೆಮಿ ಡಿಜಿಟಲ್ ಡ್ರೈವರ್ ಡಿಸ್‌ಪ್ಲೇ, ಆಂಡ್ರಾಯ್ಡ್ ಆಟೋ, ಆಪಲ್ ಕಾರ್‌ ಪ್ಲೇ, ಆಟೋಮೆಟಿಕ್ ಕ್ಲೇಮೇಟ್ ಕಂಟ್ರೋಲ್, ವೈರ್‌ಲೆಸ್ ಫೋನ್ ಚಾರ್ಜರ್ ಹಾಗೂ ಸನ್‌ರೂಫ್ ಹೊಂದಿದೆ.

ಸುರಕ್ಷತೆಗೂ ಹೋಂಡಾ ಎಲಿವೇಟ್ ಕಾರು ಹೆಸರುವಾಗಿಯಾಗಿದೆ. 6 ಏರ್‌ಬ್ಯಾಗ್‌, ವೆಹಿಕಲ್ ಸ್ಟೆಬಿಲಿಟಿ ಅಸಿಸ್ಟ್, ಹಿಲ್ ಸ್ಟಾರ್ಟ್ ಅಸಿಸ್ಟ್, ಲೇನ್ ವಾಚ್ ಅಸಿಸ್ಟ್, ರೇರ್ ಪಾರ್ಕಿಂಗ್ ಕ್ಯಾಮೆರಾದಂತಹ ADAS (ಅಡ್ವಾನ್ಸ್ಡ್ ಡ್ರೈವರ್ ಅಸಿಸ್ಟೆನ್ಸ್ ಸಿಸ್ಟಮ್ಸ್) ವೈಶಿಷ್ಟ್ಯಗಳನ್ನು ಪಡೆದಿದೆ. ಈ ಕಾರಿಗೆ ಮಾರುತಿ ಸುಜುಕಿ ಗ್ರ್ಯಾಂಡ್ ವಿಟಾರಾ, ಟೊಯೊಟಾ ಫಾರ್ಚುನರ್, ಕಿಯಾ ಸೆಲ್ಟೋಸ್, ಸಿಟ್ರಸ್ ಸಿ3 ಏರ್‌ಕ್ರಾಸ್ ದೊಡ್ಡ ಎದುರಾಳಿಯಾಗಿವೆ.

ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.

Article Published On: Friday, May 3, 2024, 10:06 [IST]
English summary
Massive tree fall on honda elevate suv a message to the car owners
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+