ಹೊಸ ಮರ್ಸಿಡಿಸ್ ಕಾರು ಬಿಡುಗಡೆ: ಶ್ರೀಮಂತರು ಕೂಡ ಗುಲಾಮರಾಗಬೇಕು: ಬೆಲೆಗೆ ತಲೆ ತಿರುಗುತ್ತೆ!
ಐಷಾರಾಮಿ ಕಾರು ತಯಾರಕ ಕಂಪನಿಯಾದ ಮರ್ಸಿಡಿಸ್ ತನ್ನ ಬಹುನಿರೀಕ್ಷಿತ ಎಎಂಜಿ ಸಿ 63 ಎಸ್ ಇ-ಪರ್ಫಾಮೆನ್ಸ್ (Mercedes-AMG C 63 S E-PERFORMANCE) ಸೆಡಾನ್ ಕಾರನ್ನು ಭಾರತದಲ್ಲಿ 1.95 ಕೋಟಿ ರೂ.ಗೆ (ಎಕ್ಸ್ ಶೋರೂಂ) ಬಿಡುಗಡೆ ಮಾಡಿದೆ. ಇದರ ವಿಶೇಷತೆಯೆಂದರೆ ಹಿಂದಿನ ತಲೆಮಾರಿನ ಕಾರಿನಲ್ಲಿದ್ದ ಟ್ವಿನ್-ಟರ್ಬೊ 4.0-ಲೀಟರ್ ವಿ 8 ಎಂಜಿನ್ ಜಾಗದಲ್ಲಿ 4-ಸಿಲಿಂಡರ್ ಎಂಜಿನ್ ಮತ್ತು ಎಲೆಕ್ಟ್ರಿಕ್ ಮೋಟರ್ ಹೊಂದಿರುವ ಪ್ಲಗ್-ಇನ್ ಹೈಬ್ರಿಡ್ ಪವರ್‌ಟ್ರೇನ್ ಪರಿಚಯಿಸಲಾಗಿದೆ. ಹೊಸ ಕಾರಿನ ಕುರಿತು ಹೆಚ್ಚಿನ ಮಾಹಿತಿಯನ್ನು ಇಲ್ಲಿ ನೋಡೋಣ.
ಹೊಸ ಕಾರಿನ ವಿನ್ಯಾಸದ ಬಗ್ಗೆ ಹೇಳುವುದಾದರೆ, ಮರ್ಸಿಡಿಸ್-ಎಎಂಜಿ ಸಿ 63 ಎಸ್ ಇ-ಪರ್ಫಾಮೆನ್ಸ್ ಕಾರು ದೊಡ್ಡ ಪ್ಯಾನಮೆರಿಕಾನಾ ಗ್ರಿಲ್, ವಿಶಾಲವಾದ ಬಾಡಿ ಕಿಟ್, ಆಕ್ರಮಣಕಾರಿ ಮುಂಭಾಗ ಮತ್ತು ಹಿಂಭಾಗದ ಬಂಪರ್‌ಗಳು, 20-ಇಂಚಿನ ಅಲಾಯ್ ವೀಲ್‌ಗಳು ಮತ್ತು ಕ್ವಾಡ್ ಎಕ್ಸಾಸ್ಟ್ ಟಿಪ್ಸ್‌ಗಳೊಂದಿಗೆ ಸಿ-ಕ್ಲಾಸ್‌ನ ಅತ್ಯಂತ ಸ್ಪೋರ್ಟಿ ಆವೃತ್ತಿಯಂತೆ ಕಾಣುತ್ತದೆ.

ಹೊಸ ಮರ್ಸಿಡಿಸ್-ಎಎಂಜಿ ಸಿ 63 ಎಸ್ ಇ-ಪರ್ಫಾಮೆನ್ಸ್ ಕಾರಿನ ಒಳಾಂಗಣದಲ್ಲಿ ಇನ್ಸ್ಟ್ರುಮೆಂಟೇಶನ್‌ಗಾಗಿ ಡ್ಯುಯಲ್ ಡಿಸ್ಪ್ಲೇ ಸೆಟಪ್ ಮತ್ತು ಬರ್ಮೀಸ್ಟರ್ ಪ್ರೀಮಿಯಂ ಸೌಂಡ್ ಸಿಸ್ಟಮ್‌ಗೆ ಸಂಪರ್ಕಿಸಲಾದ ಎಂಬಿಯುಎಕ್ಸ್ ಚಾಲಿತ ಇನ್ಫೋಟೈನ್ ಮೆಂಟ್ ಸ್ಕ್ರೀನ್ ಅನ್ನು ನೀಡಲಾಗಿದೆ. ಜೊತೆಗೆ ಎಎಂಜಿ ಸ್ಪೋರ್ಟ್ಸ್ ಸ್ಟೀರಿಂಗ್ ವೀಲ್, ಕಾರ್ಬನ್ ಫೈಬರ್ ಅಂಶಗಳನ್ನು ನೀಡಲಾಗಿದೆ.
ಮೊದಲೇ ಹೇಳಿದಂತೆ ಎಂಜಿನ್‌ನಲ್ಲಿ ಬದಲಾವಣೆ ತಂದಿದ್ದು, ಇದು ಅತ್ಯಂತ ಶಕ್ತಿಯುತ ನಾಲ್ಕು ಸಿಲಿಂಡರ್ ಘಟಕವಾಗಿದೆ. ಎ 45 ಎಸ್‌ನ 2.0-ಲೀಟರ್ ಟರ್ಬೋಚಾರ್ಜ್ಡ್ ಎಂಜಿನ್‌ನ ಈ ಪರಿಷ್ಕೃತ ಆವೃತ್ತಿಯು ಎಲೆಕ್ಟ್ರಿಕ್ ಮೋಟರ್ ಚಾಲಿತ ಎಕ್ಸಾಸ್ಟ್ ಗ್ಯಾಸ್ ಟರ್ಬೊವನ್ನು ಕೂಡ ಹೊಂದಿದೆ. ಇದು ಕಂಪನಿಯ ಎಫ್1 ತಂಡದ ತಂತ್ರಜ್ಞಾನವಾಗಿದ್ದು, ಈ ಮೂಲಕ ಎಂಜಿನ್ 469 ಬಿಹೆಚ್ ಪವರ್ ಉತ್ಪಾದಿಸಬಲ್ಲದು.
ಈ ಎಂಜಿನ್ ಹೆಚ್ಚುವರಿಯಾಗಿ 201 ಬಿಹೆಚ್ ಪವರ್ ಕೂಡ ಉತ್ಪಾದಿಸುವ ಸಾಮರ್ಥ್ಯವಿದ್ದು, ಈ ಮೂಲಕ ಒಟ್ಟಾರೆ 671 ಬಿಹೆಚ್ ಪವರ್ ಉತ್ಪಾದಿಸಬಲ್ಲದು. ಹೊಸ ಸಿ-ಕ್ಲಾಸ್ ಆವೃತ್ತಿಯು ಕೇವಲ 3.3 ಸೆಕೆಂಡುಗಳಲ್ಲಿ 0-100 ಕಿ.ಮೀ ವೇಗವನ್ನು ತಲುಪಬಲ್ಲದು. ಹಾಗೆಯೇ ಗಂಟೆಗೆ 250 ಕಿ.ಮೀ ರಿಂದ 279 ಕಿ.ಮೀ. ಟಾಪ್ ಸ್ಪೀಡ್ ತಲುಪುವ ಸಾಮರ್ಥ್ಯವನ್ನು ಹೊಂದಿದೆ.
ಈ ಎಂಜಿನ್ ನೊಂದಿಗೆ 9-ಸ್ಪೀಡ್ ಆಟೋಮ್ಯಾಟಿಕ್ ಗೇರ್ ಬಾಕ್ಸ್ ಹಾಗೂ ಎಲೆಕ್ಟ್ರಿಕ್ ಮೋಟರ್‌ಗಾಗಿ 2-ಸ್ಪೀಡ್ ಟ್ರಾನ್ಸ್ ಮಿಷನ್ ನೀಡಲಾಗಿದೆ. ಬೂಟ್‌ನಲ್ಲಿ 89 ಕೆ.ಜಿ ತೂಕದ ಕಾಂಪ್ಯಾಕ್ಟ್ 6.1 ಕಿಲೋವ್ಯಾಟ್ ಬ್ಯಾಟರಿ ಪ್ಯಾಕ್ ಅನ್ನು ಅಳವಡಿಸಲಾಗಿದೆ. ಒಟ್ಟಾರೆ ಹೊಸ ಮರ್ಸಿಡಿಸ್-ಎಎಂಜಿ ಸಿ 63 ಎಸ್ ಇ-ಪರ್ಫಾಮೆನ್ಸ್ ಕಾರು 2,111 ಕೆ.ಜಿ ತೂಕವನ್ನು ಹೊಂದಿದೆ.
ಮರ್ಸಿಡಿಸ್-ಎಎಂಜಿ ಸಿ 63 ಎಸ್ ಇ-ಪರ್ಫಾಮೆನ್ಸ್ ಕಾರು ವಿವಿಧ ಎಲೆಕ್ಟ್ರಿಕ್ ಡ್ರೈವಿಂಗ್ ಮೋಡ್‌ಗಳನ್ನು ಸಹ ಹೊಂದಿದೆ. ಎಲೆಕ್ಟ್ರಿಕ್ ಮೋಡ್ ಕಾರಿನ ಟಾಪ್ ಸ್ಪೀಡ್ ಗಂಟೆಗೆ ಕೇವಲ 124 ಕಿ.ಮೀ ಆಗಿದೆ. ಬ್ಯಾಟರಿ ಖಾಲಿಯಾದ ನಂತರ, ಕಾರು ತಾನಾಗಿಯೇ ಕಂಫರ್ಟ್ ಮೋಡ್‌ಗೆ ಬದಲಾಗುತ್ತದೆ, ಹಾಗಯೇ ಅಗತ್ಯವಿದ್ದಾಗ ಹೈಬ್ರಿಡ್ ಮೋಡ್‌ಗೆ ಬದಲಾಗುತ್ತದೆ.
ಇವಿಷ್ಟೇ ಅಲ್ಲೇ ಸ್ಪೋರ್ಟ್ ಮತ್ತು ಸ್ಪೋರ್ಟ್ + ಮೋಡ್‌ಗಳು ಕೂಡ ಇವೆ, ಇದು ಪರ್ಫಾಮೆನ್ಸ್ ಮಟ್ಟವನ್ನು ಗರಿಷ್ಠ ಸಾಮರ್ಥ್ಯದ ಶೇ60 ಮತ್ತು 80 ಕ್ಕೆ ಹೆಚ್ಚಿಸುತ್ತದೆ. ಅಂದರೆ ಗರಿಷ್ಠ ಪರ್ಫಾಮೆನ್ಸ್‌ಗಾಗಿ ರೇಸ್ ಮೋಡ್ ಅನ್ನು ಬಳಸಿಕೊಳ್ಳುತ್ತದೆ. ಸ್ಟೀರಿಂಗ್ ಚಕ್ರದ ಬಟನ್ ಬಳಸಿ ಬೂಸ್ಟ್ ಮೋಡ್ ಆನ್ ಮಾಡಬಹುದು, ಅಂತಿಮವಾಗಿ "ಪರ್ಸನಲ್" ಮೋಡ್ ಸಹ ಇದ್ದು, ಚಾಲಕನ ಇಷ್ಟಕ್ಕೆ ಅನುಗುಣವಾಗಿ ಎಲ್ಲಾ ಸೆಟ್ಟಿಂಗ್ ಮಾಡಿಕೊಳ್ಳಬಹುದು.


Click it and Unblock the Notifications








