ಬೆಂಝ್ ಪ್ರಿಯರ ಫೆವರೆಟ್ ಹೊಸ ಎಎಂಜಿ ಜಿಎಲ್‌ಸಿ 43 4ಮ್ಯಾಟಿಕ್ ಕೂಪೆ ವಿಶೇಷತೆಗಳು!
ಮರ್ಸಿಡಿಸ್ ಬೆಂಝ್ ಇಂಡಿಯಾ ಕಂಪನಿಯು ತನ್ನ ಎಎಂಜಿ ಜಿಎಲ್‌ಸಿ 43 4ಮ್ಯಾಟಿಕ್ ಕೂಪೆ (AMG GLC 43 4Matic Coupe) ಕಾರನ್ನು ಇತ್ತೀಚೆಗೆ ಭಾರತದಲ್ಲಿ ಬಿಡುಗಡೆ ಮಾಡಿದೆ. ಇದು ಸಿಬಿಯು (ಸಂಪೂರ್ಣ ನಿರ್ಮಿತ ಘಟಕ) ಮಾರ್ಗವಾಗಿ ಭಾರತದಲ್ಲಿ ಖರೀದಿಗೆ ಸಿಗಲಿದೆ. ಹೊಸ ಎಎಂಜಿ ಜಿಎಲ್‌ಸಿ 43 ಕೂಪೆ 4ಮ್ಯಾಟಿಕ್ ಬೆಲೆಯು (ಎಕ್ಸ್ ಶೋರೂಂ) ರೂ.1.11 ಕೋಟಿಗಳಾಗಿದೆ. ಈ ಐಷಾರಾಮಿ ಕಾರು 100 ಕಿ.ಮೀ ವೇಗವನ್ನು ಕೇವಲ 4.8 ಸೆಕೆಂಡುಗಳಲ್ಲಿ ಕ್ರಮಿಸಬಲ್ಲದು ಎಂದು ಮರ್ಸಿಡಿಸ್ ಹೇಳಿಕೊಂಡಿದೆ. ಈ ಕಾರಿನ ಕುರಿತ ಹೆಚ್ಚಿನ ವಿಶೇಷತೆಗಳನ್ನು ಇಲ್ಲಿ ನೋಡೋಣ.
ಡಿಸೈನ್: ಮರ್ಸಿಡಿಸ್ - ಎಎಂಜಿ ಜಿಎಲ್‌ಸಿ 43 ಕೂಪೆ 4ಮ್ಯಾಟಿಕ್ ಐಷಾರಾಮಿ ಕಾರನ್ನು ಸೆಪ್ಟೆಂಬರ್ 2023 ರಲ್ಲಿ ಜಾಗತಿಕವಾಗಿ ಅನಾವರಣಗೊಳಿಸಲಾಯಿತು. ಹೊಸ ಜಿಎಲ್‌ಸಿ 43 4ಮ್ಯಾಟಿಕ್ ಕಾರಿನಲ್ಲಿ ಇಳಿಜಾರಿನ ಹಿಂಭಾಗದ ತುದಿ, ಲಂಬವಾದ ಸ್ಟ್ರಟ್‌ಗಳೊಂದಿಗೆ ಎಎಂಜಿ - ನಿರ್ದಿಷ್ಟ ರೇಡಿಯೇಟರ್ ಗ್ರಿಲ್, ಫ್ಲಿಕ್ ಗಳೊಂದಿಗೆ ಸ್ಪೋರ್ಟಿ ಏಪ್ರನ್‌ಗಳನ್ನು ಹೊಂದಿದೆ.

ಇವಿಷ್ಟೇ ಅಲ್ಲದೇ ಸ್ಪೋರ್ಟಿ ಏರ್ ಇನ್‌ಟೇಕ್‌ಗಳು, ರೂಫ್-ಇಂಟಿಗ್ರೇಟೆಡ್ ಸ್ಪಾಯ್ಲರ್, ಎಎಂಜಿ-ನಿರ್ದಿಷ್ಟ ಸೈಡ್ ಸ್ಕರ್ಟ್ ಮತ್ತು ಕ್ವಾಡ್ ಎಕ್ಸಾಸ್ಟ್ ಟಿಪ್ಸ್ ಅನ್ನು ಸಹ ಹೊಂದಿದೆ. ಇದನ್ನು ಒಂಬತ್ತು ಬಣ್ಣಗಳ ಆಯ್ಕೆಗಳೊಂದಿಗೆ ನೀಡಲಾಗುತ್ತದೆ. ಇವೆಲ್ಲವು ಐಷಾರಾಮಿತನವನ್ನು ಹೆಚ್ಚಿಸುವ ಪ್ರೀಮಿಯಂ ಬಣ್ಣಗಳಾಗಿದ್ದು, ಗ್ರಾಹಕರ ಆಯ್ಕೆಯಂತೆ ನೀಡಲಾಗುತ್ತದೆ.
ವೈಶಿಷ್ಟ್ಯಗಳು: ಕೂಪೆ ಎಎಂಜಿ ಟ್ರ್ಯಾಕ್ ಪೇಸ್ ಸಾಫ್ಟ್‌ವೇರ್ ಅನ್ನು ಹೊಂದಿದೆ, ಇದು ಲ್ಯಾಪ್ ಸಮಯ ಮತ್ತು ಇತರ ವಿವರಗಳನ್ನು ಲೆಕ್ಕಹಾಕುತ್ತದೆ. ಎಚ್‌ಯುಡಿ ಡಿಸ್ಪ್ಲೇ, ಎಲ್ಇಡಿ ಡಿಜಿಟಲ್ ಲ್ಯಾಂಪ್‌ಗಳು, 360 ಡಿಗ್ರಿ ಕ್ಯಾಮೆರಾ, ಬರ್ಮರ್ 3ಡಿ ಸೌಂಡ್, ಕೀಲೆಸ್ ಗೋ ಪ್ಯಾಕೇಜ್ ಸೇರಿದಂತೆ ಹೆಚ್ಚಿನ ವೈಶಿಷ್ಟ್ಯಗಳನ್ನು ಹೊಂದಿದೆ.

ನಪ್ಪಾ ಲೆದರ್ ಹೊಂದಿರುವ ಬ್ಲಾಕ್ ಇಂಟೀರಿಯರ್, ಎಎಂಜಿ-ಸ್ಪೆಕ್ ಸ್ಟೀರಿಂಗ್ ವೀಲ್ ಮತ್ತು ರೆಡ್ ಸೀಟ್ ಬೆಲ್ಟ್, ಸ್ಪೋರ್ಟಿ ಬಕೆಟ್ ಸೀಟುಗಳನ್ನು ಹೊಂದಿದೆ. ಇನ್ಫೋಟೈನ್ ಮೆಂಟ್ ಸಿಸ್ಟಂ ಹೊಸ ಎಂಬಿಯುಎಕ್ಸ್ ಯುಐ, ಡಿಜಿಟಲ್ ಇನ್ಸ್ ಟ್ರೂಮೆಂಟ್ ಕ್ಲಸ್ಟರ್ ಮತ್ತು ಎಚ್‌ಯುಡಿ ಡಿಸ್ ಪ್ಲೇಯನ್ನು ಹೊಂದಿದೆ.
ಎಂಜಿನ್ ವಿಶೇಷತೆಗಳು: ಎಎಂಜಿ ಜಿಎಲ್‌ಸಿ 43 ಕೂಪೆ ಮೈಲ್ಡ್-ಹೈಬ್ರಿಡ್ 2.0-ಲೀಟರ್, 4 ಸಿಲಿಂಡರ್ ಟರ್ಬೋಚಾರ್ಜ್ಡ್ ಪೆಟ್ರೋಲ್ ಎಂಜಿನ್ ಹೊಂದಿದೆ. ಈ ಎಂಜಿನ್ ನೊಂದಿಗೆ 9-ಸ್ಪೀಡಿನ ಆಟೋಮ್ಯಾಟಿಕ್ ಗೇರ್ ಬಾಕ್ಸ್ ಅಳವಡಿಸಲಾಗಿದೆ. ಇದು 416 ಬಿಹೆಚ್‌ಪಿ ಪವರ್ ಮತ್ತು 500 ಎನ್ಎಂ ಟಾರ್ಕ್ ಉತ್ಪಾದಿಸುತ್ತದೆ.
100 ಕಿ.ಮೀ ವೇಗವನ್ನು ಕೇವಲ 4.8 ಸೆಕೆಂಡುಗಳಲ್ಲಿ ಕ್ರಮಿಸಬಲ್ಲದು. 250 ಕಿ.ಮೀ ಟಾಪ್ ಸ್ಪೀಡ್ ಅನ್ನು ಹೊಂದಿದೆ ಎಂದು ಮರ್ಸಿಡಿಸ್ ಹೇಳಿಕೊಂಡಿದೆ. ಈ ಕಾರಿನಲ್ಲಿ ಮರ್ಸಿಡಿಸ್ 4-ಮ್ಯಾಟಿಕ್ ಎಡಬ್ಲ್ಯುಡಿ ಸಿಸ್ಟಂ, ರಿಯರ್ ವೀಲ್ ಸ್ಟೀರಿಂಗ್, ರೈಡ್ ಕಂಟ್ರೋಲ್ ಸಸ್ಪೆಂಷನ್, ತ್ರೀ-ಸ್ಟೇಜ್ ಎಎಂಜಿ ಸ್ಟೀರಿಂಗ್ ಮತ್ತು ಕಂಫರ್ಟ್, ಸ್ಪೋರ್ಟ್, ಸ್ಪೋರ್ಟ್ ಪ್ಲಸ್ ಮತ್ತು ರೇಸ್ ಎಂಬ ಮೂರು ಮೋಡ್‌ಗಳನ್ನು ಸಹ ನೀಡಲಾಗಿದೆ.
ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊ ಗಳನ್ನು ಪಡೆಯಲು ನಮ್ಮ ಫೇಸ್ ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.


Click it and Unblock the Notifications








