ಅದ್ಭುತ ಫೀಚರ್ಸ್ ಹೊಂದಿರುವ ಹೊಸ ಮರ್ಸಿಡಿಸ್ EQA ವಿಡಿಯೋ ರಿವ್ಯೂ: ಹೇಗಿದೆ ನೋಡಿ
ಮರ್ಸಿಡಿಸ್ ಬೆಂಝ್ ಕಂಪನಿಯು ಪ್ರಪಂಚದಾದ್ಯಂತದ ಅಂತರರಾಷ್ಟ್ರೀಯ ಮಾರುಕಟ್ಟೆಗಳಲ್ಲಿ ಎಲೆಕ್ಟ್ರಿಕ್ ಕ್ರಾಂತಿಯು ವೇಗವಾಗಿ ನಿರ್ಮಾಣವಾಗುತ್ತಿದೆ. ಮರ್ಸಿಡಿಸ್ ತನ್ನ ಮೂರು ಇವಿಗಳಾದ EQS, EQE ಎಸ್‍ಯುವಿ ಮತ್ತು EQB ಮಾದರಿಗಳನ್ನು ಮಾರಾಟ ಮಾಡುತ್ತಿದೆ. ಇದೀಗ ಮರ್ಸಿಡಿಸ್ ಬೆಂಝ್ ಕಂಪನಿಯು ನಾಲ್ಕನೇ ಎಲೆಕ್ಟ್ರಿಕ್ ಕಾರನ್ನು ಭಾರತೀಯ ಮಾರುಕಟ್ಟೆಗೆ ತಂದಿದೆ. ಈ ಹೊಸ ಮರ್ಸಿಡಿಸ್ EQA 250+ (Mercedes EQA 250+) ಯುರೋಪ್‌ಗೆ ಆಗಮಿಸಿದ ಸುಮಾರು ಒಂದು ವರ್ಷದ ನಂತರ ಭಾರತೀಯ ಮಾರುಕಟ್ಟೆಗೆ ಬಂದಿದೆ. ಇದು ಮರ್ಸಿಡಿಸ್ ಬೆಂಝ್ ಕಂಪನಿಯ ಚಿಕ್ಕದಾದ ಎಲೆಕ್ಟ್ರಿಕ್ ಎಸ್‍ಯುವಿ ಆಗಿದೆ.
ಈ EQA 250+ ಎಲೆಕ್ಟ್ರಿಕ್ ಕಾರು GLA ಮಾದರಿಯನ್ನು ಆಧರಿಸಿದೆ. ಮರ್ಸಿಡಿಸ್ EQA 250+ ಮಾದರಿಯು ಬಿಎಂಡಬ್ಲ್ಯು iX1 ಮತ್ತು ವೋಲ್ವೊ XC40 ರೀಚಾರ್ಜ್ ಎಲೆಕ್ಟ್ರಿಕ್ ಕಾರುಗಳಿಗೆ ಪೈಪೋಟಿ ನೀಡುತ್ತದೆ. ಈ ಹೊಸ EQA 250+ ಎಲೆಕ್ಟ್ರಿಕ್ ಕಾರನ್ನು ಪಿಂಕ್ ಸಿಟಿ ಜೈಪುರದಲ್ಲಿ ನಾವು ಡ್ರೈವ್ ಮಾಡಿದ್ದೇವೆ. ಈ ಎಲೆಕ್ಟ್ರಿಕ್ ಕಾರಿನ ವಿನ್ಯಾಸ, ಫೀಚರ್ಸ್, ಪರ್ಫಾಮೆನ್ಸ್ ಮತ್ತು ಡ್ರೈವಿಂಗ್ ಅನುಭವದ ಬಗ್ಗೆ ಹೆಚ್ಚಿನ ಮಾಹಿತಿಗಾಗಿ ವೀಡಿಯೋ ನೋಡಿ.
ಹೊಸ ಮರ್ಸಿಡಿಸ್ EQA 250+ ರೇಂಜ್ ಮತ್ತು ಚಾರ್ಜಿಂಗ್ ಸಮಯಗಳು: ಈ ಮರ್ಸಿಡಿಸ್ EQA ಕಾರು EQ ಲೈನ್‌ಅಪ್‌ನಲ್ಲಿ ಚಿಕ್ಕದಾಗಿದೆ. ಈ ಮರ್ಸಿಡಿಸ್ EQA ಕಾರು 4,463mm ಉದ್ದ, 1,834mm ಅಗಲ ಮತ್ತು 1,624mm ಎತ್ತರವನ್ನು ಹೊಂದಿದೆ ಮತ್ತು 2,729mm ಉದ್ದದ ವೀಲ್‌ಬೇಸ್ ಅನ್ನು ಹೊಂದಿದೆ. ಇನ್ನು ಮರ್ಸಿಡಿಸ್ EQA 250+ ವಾಹನದ ಮುಂಭಾಗದ ಆಕ್ಸಲ್‌ಗೆ ಅಳವಡಿಸಲಾಗಿರುವ ಏಕೈಕ ಎಲೆಕ್ಟ್ರಿಕ್ ಮೋಟರ್‌ನಿಂದ ಚಾಲಿತವಾಗಿದೆ.
ಈ ಮರ್ಸಿಡಿಸ್ ಎಲೆಕ್ಟ್ರಿಕ್ ಕಾರಿನ ಸಿಂಗಲ್ ಮೋಟಾರು 190bhp ಮತ್ತು 385Nm ಪೀಕ್ ಟಾರ್ಕ್ ಅನ್ನು ಉತ್ಪಾದಿಸುತ್ತದೆ. ಈ ಮರ್ಸಿಡಿಸ್ EQA 250+ ಎಲೆಕ್ಟ್ರಿಕ್ ಕಾರು 8.6 ಸೆಕೆಂಡುಗಳಲ್ಲಿ 0-100 ಕಿ.ಮೀ ವೇಗವನ್ನು ಪಡೆದುಕೊಳ್ಳುತ್ತದೆ. ಈ ಮರ್ಸಿಡಿಸ್ ಎಲೆಕ್ಟ್ರಿಕ್ ಕಾರಿನ ಟಾಪ್ ಸ್ಪೀಡ್ 160 ಕಿ.ಮೀ ಟಾಪ್ ಸ್ಪೀಡ್ ಅನ್ನು ಹೊಂದಿದೆ.

ಈ ಮೋಟಾರ್ 70.5kWh (ಬಳಸಬಹುದಾದ) ಲಿಥಿಯಂ-ಐಯಾನ್ ಬ್ಯಾಟರಿ ಪ್ಯಾಕ್ ಅನ್ನು ಹೊಂದಿದೆ. ಇದು ಸಿಂಗಲ್ ಚಾರ್ಜ್‌ನಲ್ಲಿ 560 ಕಿ.ಮೀ ರೇಂಜ್ ಅನ್ನು ನೀಡುತ್ತದೆ. ಇನ್ನು ಬ್ಯಾಟರಿ ಪ್ಯಾಕ್ 100kW ವೇಗದ ಚಾರ್ಜಿಂಗ್ ಅನ್ನು ಬೆಂಬಲಿಸುತ್ತದೆ ಇದು ಕೇವಲ 35 ನಿಮಿಷಗಳಲ್ಲಿ ಚಾರ್ಜ್ ಮಟ್ಟವನ್ನು 10 ರಿಂದ 80 ಪ್ರತಿಶತಕ್ಕೆ ಹೆಚ್ಚಿಸುತ್ತದೆ. 11kW AC ಹೋಮ್ ಚಾರ್ಜರ್‌ನಲ್ಲಿ ಪೂರ್ಣ ಚಾರ್ಜ್ ಆಗಲು ಏಳು ಗಂಟೆ 15 ನಿಮಿಷಗಳನ್ನು ತೆಗೆದುಕೊಳ್ಳುತ್ತದೆ.
ಈ ಎಲೆಕ್ಟ್ರಿಕ್ ಕಾರಿನಲ್ಲಿ ಸುರಕ್ಷತೆಗಾಗಿ, ರನ್-ಫ್ಲಾಟ್ ಟೈರ್‌ಗಳು ಮತ್ತು ಬ್ಲೈಂಡ್ ಸ್ಪಾಟ್ ಮಾನಿಟರಿಂಗ್, ಆಕ್ಟಿವ್ ಬ್ರೇಕ್ ಅಸಿಸ್ಟ್, ಲೈವ್ ಟ್ರಾಫಿಕ್ ಮಾನಿಟರಿಂಗ್ ಮತ್ತು 360 ನಂತಹ ADAS ವೈಶಿಷ್ಟ್ಯಗಳನ್ನು ಒಳಗೊಂಡಂತೆ ಇತರ ಸುರಕ್ಷತಾ ಸಾಧನಗಳನ್ನು ಒಳಗೊಂಡಂತೆ ಬಹು ಏರ್‌ಬ್ಯಾಗ್‌ಗಳನ್ನು ಕೂಡ ನೀಡಲಾಗಿದೆ.


Click it and Unblock the Notifications








