ಎಂಜಿ ಮೋಟಾರ್‌ ಹೊಸ ಕಾರಿನ ಟೀಸರ್ ಬಿಡುಗಡೆ: ಪ್ರೀಮಿಯಂ ಫೀಷರ್ಸ್, ಸನ್‌ರೂಫ್!

ಎಂಜಿ ಮೋಟಾರ್‌ನ ಕ್ಲೌಡ್ ಇವಿ ಈಗಾಗಲೇ ಅಂತರಾಷ್ಟ್ರೀಯ ಮಾರುಕಟ್ಟೆಯಲ್ಲಿ ಭರ್ಜರಿ ಮಾರಾಟ ಕಾಣುತ್ತಿದೆ. ಆದರೆ ಭಾರತಕ್ಕೆ ಮಾತ್ರ ಪರಿಚಯಿಸಿರಲಿಲ್ಲ, ಇದೀಗ ಆ ಸಮಯ ಬಂದಿದ್ದು ಭಾರತೀಯ ರಸ್ತೆಗಳಲ್ಲಿ ಜೋರಾಗಿ ಪರೀಕ್ಷೆಗಳನ್ನು ನಡೆಸಲಾಗಿದೆ. ಬಹುತೇಕ ಎಲ್ಲಾ ಪರೀಕ್ಷೆಗಳು ಮುಗಿದಂತೆ ಕಾಣುತ್ತಿದ್ದು, ಇತ್ತೀಚೆಗೆ ಇಂಟೀರಿಯರ್ ಬಗ್ಗೆ ವಿವರಗಳನ್ನು ಒದಗಿಸುವ ಹೊಸ ಚಿತ್ರಗಳು ಬೆಳಕಿಗೆ ಬಂದಿವೆ. ಈ ವರ್ಷದ ಹಬ್ಬದ ವೇಳೆಗೆ ಕ್ಲೌಡ್ ಇವಿ ಬೆಲೆಗಳನ್ನು ಬಹಿರಂಗಪಡಿಸುವ ಸಾಧ್ಯತೆಯಿದ್ದು, ಅದಕ್ಕೂ ಮುನ್ನ ಎಂಜಿ ಮೋಟಾರ್ ಇಂಡಿಯಾ ತನ್ನ ಮುಂಬರುವ ಇವಿಯ ಹೊಸ ಟೀಸರ್ ಬಿಡುಗಡೆ ಮಾಡಿದೆ.

ವಿಶಿಷ್ಟವಾದ ಒಳಾಂಗಣದ ಪ್ಯಾಕೇಜ್‌ನೊಂದಿಗೆ ಬರುವ ಅಂತರಾಷ್ಟ್ರೀಯ ಮಾಡೆಲ್, 5-ಸೀಟರ್‌ನಲ್ಲಿ ಬರುತ್ತದೆ. ಸಂಪೂರ್ಣ ರಿಕ್ಲೈನಬಲ್ ಫ್ರಂಟ್ ಸೀಟುಗಳು ('ಸೋಫಾ ಮೋಡ್'), ವೃತ್ತಾಕಾರದ ಡೋರ್-ಮೌಂಟೆಡ್ ಸ್ಪೀಕರ್‌ಗಳು, 360-ಡಿಗ್ರಿ ಕ್ಯಾಮೆರಾ ಮತ್ತು ADAS ತಂತ್ರಜ್ಞಾನದೊಂದಿಗೆ ಬರುತ್ತದೆ. ಆದರೆ ಭಾರತದಲ್ಲಿ ಬಿಡುಗಡೆಯಾಗಲಿರುವ ಕ್ಲೌಡ್ ಇವಿನಲ್ಲಿ ಈ ವೈಶಿಷ್ಟ್ಯಗಳು ಇರಲಿವೆಯೇ ಕಾದು ನೋಡಬೇಕಾಗಿದೆ.

mg-cloud-ev-teased-before-launch-sunroof-and-premium-features

ಎಂಜಿ ಮೋಟಾರ್ ಇಂಡಿಯಾ ಬಿಡುಗಡೆ ಮಾಡಿದ ಹೊಸ ಟೀಸರ್‌ನಲ್ಲಿ ಸ್ಲಿಮ್ ಆಲ್-ಎಲ್ಇಡಿ ಹೆಡ್ಲೈಟ್‌ಗಳನ್ನು ಹೊಂದಿದೆ. ಗ್ರಿಲ್ ಪ್ರದೇಶದ ಮೇಲೆ ಎಲ್ಇಡಿ ಲೈಟ್ ಬಾರ್ ಅನ್ನು ಹೊಂದಿದೆ. ಎಂಜಿ ಲೋಗೋ ಕೂಡ ಪ್ರಕಾಶಮಾನವಾಗಿದೆ ಎಂದು ಸೂಚಿಸುವಂತೆ ಟೀಸರ್‌ನಲ್ಲಿ ತೋರಿಸಲಾಗಿದೆ. ಹಾಗಯೇ ಇದು ಸನ್‌ರೂಫ್‌ನೊಂದಿಗೆ ಬರಲಿದೆ ಎಂದು ಸೂಚಿಸುತ್ತಿದೆ.

ಬಾಹ್ಯ ವಿನ್ಯಾಸ: ರಸ್ತೆ ಪರೀಕ್ಷೆಯಲ್ಲಿ ಈಗಾಗಲೇ ಕ್ಯಾಮರಾ ಕಣ್ಣಿಗೆ ಬಿದ್ದಿರುವ ಕ್ಲೌಡ್ ಇವಿ ಒಟ್ಟಾರೆ ಎಂಪಿವಿ ಮತ್ತು ಹ್ಯಾಚ್‌ಬ್ಯಾಕ್ ಮಿಶ್ರಣವಿರುವುದು ತಿಳಿದಿದೆ. ಆದರೂ ಇದನ್ನು ಕಂಪನಿ CUV (ಕ್ರಾಸ್ಒವರ್ ಯುಟಿಲಿಟಿ ವಾಹನ) ಎಂದು ಹೆಸರಿಸಿದೆ. ಫ್ಲಶ್ ಡೋರ್ ಹ್ಯಾಂಡಲ್‌ಗಳು, ಹಿಂಭಾಗ ಮತ್ತು ಮುಂಭಾಗದಲ್ಲಿ ಪೂರ್ಣ-ಅಗಲದ ಎಲ್ಇಡಿ ಲೈಟ್ ಬಾರ್‌ಗಳೊಂದಿಗೆ ಸ್ಟೈಲಿಷ್ ಆಗಿ ಕಾಣುತ್ತದೆ.

mg-cloud-ev-teased-before-launch-sunroof-and-premium-features

ಎಂಜಿ ಕ್ಲೌಡ್ ಬೆಲೆ: ನಾವು ಈ ಹಿಂದೆ ಹೇಳಿದಂತೆ, ಎಂಜಿ ಮೋಟಾರ್ ಇಂಡಿಯಾ ಈ ಹಬ್ಬದ ಸೀಸನ್‌ನಲ್ಲಿ ಕ್ಲೌಡ್ ಇವಿ ಬಿಡುಗಡೆಗೆ ಯೋಜನೆ ರೂಪಿಸಿಕೊಂಡಿದೆ. 20 ಲಕ್ಷ ರೂ.ಗಿಂತ ಕಡಿಮೆ ಬೆಲೆಯಲ್ಲಿ ಬಿಡುಗಡೆ ಮಾಡಲಿದ್ದಾರೆ. ಇದರರ್ಥ ಇದು ಎಂಜಿ ಕಾಮೆಟ್ ಮತ್ತು ಎಂಜಿ ZS EV ನಡುವೆ ಬೆಲೆಗಳನ್ನು ಹೊಂದಿರುತ್ತದೆ.

ಟಾಟಾ ನೆಕ್ಸಾನ್ ಇವಿ ಮತ್ತು ಮಹೀಂದ್ರಾ ಎಕ್ಸ್ ಯುವಿ 400 ನಂತಹ ಎಲೆಕ್ಟ್ರಿಕ್ ಕಾಂಪ್ಯಾಕ್ಟ್ ಎಸ್‌ಯುವಿಗಳಿಗೆ ಎಂಜಿ ಕ್ಲೌಡ್ ಇವಿ ಬಿಡುಗಡೆ ನಂತರ ಪೈಪೋಟಿ ನೀಡಲಿದೆ. ಆಕ್ರಮಣಕಾರಿ ಬೆಲೆಯನ್ನು ಸಾಧಿಸಲು ಎಂಜಿಗೆ ಉತ್ತಮ ಬ್ಯಾಟರಿ ಪ್ಯಾಕ್ ನೀಡುವ ಅತ್ಯಗತ್ಯವು ಸಹ ಇದೆ.

MG ಕ್ಲೌಡ್ ಬ್ಯಾಟರಿ & ರೇಂಜ್: ಬ್ಯಾಟರಿ ವಿಶೇಷತೆಗಳು ರಹಸ್ಯವಾಗಿದ್ದರೂ, ಅಂತರರಾಷ್ಟ್ರೀಯ ಮಾರುಕಟ್ಟೆಗಳಲ್ಲಿ, ಕ್ಲೌಡ್ ಎರಡು ಬ್ಯಾಟರಿ ಪ್ಯಾಕ್ ಆಯ್ಕೆಗಳನ್ನು ಹೊಂದಿದೆ. 37.9 ಕಿಲೋವ್ಯಾಟ್ ಬ್ಯಾಟರಿಯೊಂದಿಗೆ 360 ಕಿ.ಮೀ ಮತ್ತು 50.6 ಕಿಲೋವ್ಯಾಟ್ 460 ಕಿ.ಮೀವರೆಗೆ ರೇಂಜ್ ನೀಡಬಲ್ಲದು. 134 ಬಿಹೆಚ್‌ಪಿ ಪವರ್ ಮುಂಭಾಗದ ಆಕ್ಸಲ್-ಮೌಂಟೆಡ್ ಎಲೆಕ್ಟ್ರಿಕ್ ಮೋಟರ್‌ಗೆ ಶಕ್ತಿ ನೀಡುತ್ತದೆ.

ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊ ಗಳನ್ನು ಪಡೆಯಲು ನಮ್ಮ ಫೇಸ್‌ ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.

More from DriveSpark

Article Published On: Friday, July 26, 2024, 15:58 [IST]
English summary
Mg cloud ev teased before launch sunroof and premium features
Read more on mg motor india
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+