MG Comet ಇಎಂಐ, ಡೌನ್‌ ಪೇಮೆಂಟ್‌ ಎಷ್ಟು ಗೊತ್ತಾ?: ಕಾರು ಕೊಳ್ಳುವವರಿಗೆ ಇಲ್ಲಿದೆ ಸಂಪೂರ್ಣ ಮಾಹಿತಿ

ಎಂಜಿ ಕಾಮೆಟ್‌ ಎಲೆಕ್ಟ್ರಿಕ್‌ ಕಾರು ಯಾರುಗೆ ತಾನೇ ಗೊತ್ತಿಲ್ಲ ಹೇಳಿ. ವರ್ಷದ ಹಿಂದೆಯಷ್ಟೇ ಭಾರತದಲ್ಲಿ ಎಂಜಿ ಕಂಪನಿ ಕಾಮೆಟ್‌ ಕಾರನ್ನು ಲಾಂಚ್‌ ಮಾಡಿತ್ತು. ಲಾಂಚ್‌ ಆದ ಕೆಲವೇ ಸಮಯದಲ್ಲಿ ನಗರದ ಹಲವು ಕಡೆ ಈ ಕಾರುಗಳು ಕಾಣಲು ಆರಂಭವಾಗಿದ್ದವು. ಚಿಕ್ಕದಾದ ಚೊಕ್ಕದಾದ ಈ ಕಾರು ಹಲವರ ಫೇವರೀಟ್.

ಇಂದಿನ ಈ ಲೇಖನದಲ್ಲಿ ಎಂಜಿ ಕಾಮೆಟ್‌ (MG Comet) ಕಾರಿನ ಇಎಂಐ, ಡೌನ್‌ ಪೇಮೆಂಟ್, ಕಾರಿನ ಸಂಪೂರ್ಣ ಮಾಹಿತಿ ಮತ್ತು ಇತರ‌ ಬಗೆಗಿನ ವಿವರ ನಿಮ್ಮ ಮುಂದೆ ಇಡಲಿದ್ದೇವೆ. ಈ ಕಾರನ್ನು ಕೊಳ್ಳಬೇಕು ಎಂದುಕೊಂಡಿರುವವರಿಗೆ ಈ ಲೇಖನ ಬಹಳಷ್ಟು ಸಹಾಯವಾಗಲಿದ್ದು, ಸಂಪೂರ್ಣ ಮಾಹಿತಿಗಾಗಿ ಈ ಲೇಖನವನ್ನು ಕೊನೆಯವರೆಗೆ ಓದಿ.

MG Comet EV Downpayment EMI And Loan Details For You

ಎಂಜಿ ಕಾಮೆಟ್‌ ಬೇಸ್‌ ಮಾಡಲ್‌ನ ಎಕ್ಸ್‌ ಶೋ ರೂಮ್‌ ಬೆಲೆ ಬೆಂಗಳೂರಿನಲ್ಲಿ ಸುಮಾರು 698,800. ಆರ್‌ಟಿಒ ಟ್ಯಾಕ್ಸ್‌ ಮತ್ತು ಇನ್ಸ್ಯೂರೆನ್ಸ್‌ ಸೇರಿ ಆನ್‌ ರೋಡ್‌ ಬೆಲೆ ಸುಮಾರು 7,57,298 ಲಕ್ಷ ರೂಗಳು. ಇನ್ನು ಈ ಕಾರಿನ ಡೌನ್‌ ಪೇಮೆಂಟ್‌ ಬಗ್ಗೆ ನೋಡುವುದಾದರೆ ಕನಿಷ್ಟ 76,000 ರೂಗಳನ್ನು ಕಟ್ಟಬಹುದಾಗಿದೆ. 9.8 % ಬಡ್ಡಿ ದರದಲ್ಲಿ ಐದು ವರ್ಷದ ಲೋನ್‌ ಮಾಡಿದರೆ ಪ್ರತಿ ತಿಂಗಳು ನೀವು 14,409 ರೂಗಳನ್ನು ಕಟ್ಟಬೇಕಾಗುತ್ತದೆ.

ಎಂಜಿ ಕಾಮೆಟ್‌ ಎಲೆಕ್ಟ್ರಿಕ್‌ ಕಾರಿನ ಕುರಿತಾಗಿ ನೀಡುವುದಾದರೆ, ಎಂಜಿ ಕಾಮೆಟ್ ಎಲೆಕ್ಟ್ರಿಕ್ ಕಾರು ಪೂರ್ಣ-ಅಗಲ LED ಲೈಟ್ ಬಾರ್‌ನಂತಹ ಆಸಕ್ತಿದಾಯವಾದ ಬಾಕ್ಸ್ ವಿನ್ಯಾಸ ಭಾಷೆಯನ್ನು ಹೊಂದಿದೆ, ಜೊತೆಗೆ, ಎರಡೂ ವಿಂಗ್ ಮೀರರ್ಸ್ ಕ್ರೋಮ್ ಮತ್ತು ಪಿಯಾನೋ ಬ್ಲ್ಯಾಕ್ ಪಟ್ಟಿ ಇದೆ. ಇನ್ನು ಈ ಕಾಮೆಟ್ ಎಲೆಕ್ಟ್ರಿಕ್ ಕಾರಿನ ಚಾರ್ಜರ್ ಅನ್ನು ಲೈಟ್ ಬಾರ್ ಅಡಿಯಲ್ಲಿ ಮುಂಭಾಗದಲ್ಲಿ ಇರಿಸಲಾಗುತ್ತದೆ ಮತ್ತು ಅದರ ಫ್ಲಾಪ್ ಪ್ರಕಾಶಿತ MG ಲೋಗೋವನ್ನು ಹೊಂದಿದೆ.

MG Comet EV Downpayment EMI And Loan Details For You

ಫೀಚರ್ಸ್: ಈ ಹೊಸ ಎಂಜಿ ಕಾಮೆಟ್ ಎಲೆಕ್ಟ್ರಿಕ್ ಕಾರಿನಲ್ಲಿ ಒಳಭಾಗದಲ್ಲಿ, ಎರಡು 10.25-ಇಂಚಿನ ಸ್ಕ್ರೀನ್‌ಗಳಿಂದ ಹೈಲೈಟ್ ಮಾಡಲಾದ ಬಿಳಿ ಮತ್ತು ಬೂದು ಬಣ್ಣದ ಒಳಾಂಗಣವನ್ನು ಹೊಂದಿದೆ.ಇನ್ನು ಒಂದು ಇನ್ಫೋಟೈನ್‌ಮೆಂಟ್ ಸಿಸ್ಟಮ್‌ಗಾಗಿ ಮತ್ತು ಇನ್ನೊಂದು ಡಿಜಿಟಲ್ ಇನ್ಸ್ಟ್ರುಮೆಂಟ್ ಕ್ಲಸ್ಟರ್‌ಗಾಗಿ. ಮುಂಭಾಗದ ಪ್ರಯಾಣಿಕರ ಸೀಟ್ ಒನ್-ಟಚ್ ಟಂಬಲ್ ಮತ್ತು ಫೋಲ್ಡ್ ಫೀಚರ್ಸ್ ಅನ್ನು ಹೊಂದಿದೆ.

ಈ ಎಂಜಿ ಕಾಮೆಟ್ ಎಲೆಕ್ಟ್ರಿಕ್ ಕಾರಿನಲ್ಲಿ ಸುರಕ್ಷತೆ ಫೀಚರ್ಸ್ ಗಳಿಗೆ ಹೆಚ್ಚು ಪ್ರಾಮುಖ್ಯಯತೆಯನ್ನು ನೀಡಲಾಗಿದೆ. ಈ ಕಾರಿನಲ್ಲಿ ಸುರಕ್ಷತೆಗಾಗಿ, ABS, EBD, ಟೈರ್ ಪ್ರೆಶರ್ ಮಾನಿಟರಿಂಗ್ ಸಿಸ್ಟಮ್ (TPMS), ರಿವರ್ಸ್ ಕ್ಯಾಮೆರಾ ಮತ್ತು ಸೆನ್ಸರ್‌ಗಳು ಮತ್ತು ಡ್ಯುಯಲ್ ಫ್ರಂಟ್ ಏರ್‌ಬ್ಯಾಗ್‌ಗಳು ಸೇರಿವೆ.3-ಪಾಯಿಂಟ್ ಸೀಟ್‌ಬೆಲ್ಟ್‌ಗಳು ಮತ್ತು ISOFIX ಆಂಕರ್ ಪಾಯಿಂಟ್‌ಗಳು ಮಕ್ಕಳ ಸೀಟ್ ಗಳಿಗೆ ಅದರ ಸುರಕ್ಷತೆಯ ಆರ್ಸೆನಲ್‌ನ ಭಾಗವಾಗಿದೆ.

MG Comet EV Downpayment EMI And Loan Details For You

ಬ್ಯಾಟರಿ ಪ್ಯಾಕ್‌: ಈ ಎಂಜಿ ಕಾಮೆಟ್ ಎಲೆಕ್ಟ್ರಿಕ್ ಕಾರು 17.3kWh ಲಿಥಿಯಂ-ಐಯಾನ್ ಬ್ಯಾಟರಿ ಪ್ಯಾಕ್‌ನಿಂದ ಚಾಲಿತವಾಗಿದೆ, ಇದು ARAI- ಸ್ಟ್ಯಾಂಡರ್ಡ್ ಆಗಿ 230 ಕಿ.ಮೀ ರೇಂಜ್ ಅನ್ನು ನೀಡುತ್ತದೆ, ಕಾಮೆಟ್ ಇವಿ ಕೇವಲ AC ಚಾರ್ಜಿಂಗ್ ಅನ್ನು ಬೆಂಬಲಿಸುತ್ತದೆ ಮತ್ತು 3.3kW ಚಾರ್ಜಿಂಗ್ ಕೇಬಲ್‌ನೊಂದಿಗೆ ಬ್ಯಾಟರಿ ಪ್ಯಾಕ್ ಅನ್ನು ಚಾರ್ಜ್ ಮಾಡಲು 7 ಗಂಟೆಗಳನ್ನು ತೆಗೆದುಕೊಳ್ಳುತ್ತದೆ.

ಇನ್ನು ಈ ಕಾರಿನ ಚಾರ್ಜಿಂಗ್ ಕೇಬಲ್‌ನೊಂದಿಗೆ 10-80% ಚಾರ್ಜ್ 5 ಗಂಟೆಗಳನ್ನು ಸಮಯವನ್ನು ತೆಗೆದುಕೊಳ್ಳುತ್ತದೆ. ಈ ಬ್ಯಾಟರಿ ಪ್ಯಾಕ್ 41.4bhp ಮತ್ತು 110Nm ಪೀಕ್ ಟಾರ್ಕ್ ಅನ್ನು ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದೆ. ಈ ಎಲೆಕ್ಟ್ರಿಕ್ ಕಾರು ಸಿಂಗಲ್ ಎಲೆಕ್ಟಿಕ್ ಮೋಟರ್‌ಗೆ ಪವರ್ ಕಳುಹಿಸುತ್ತದೆ.

ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.

More from DriveSpark

Article Published On: Tuesday, March 26, 2024, 11:39 [IST]
English summary
Mg comet ev down payment emi and loan details for you
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+