MG Comet EV: ಎಂಜಿ ಕಾಮೆಟ್ ಇವಿ ಬೆಲೆ ಬರೋಬ್ಬರಿ 1 ಲಕ್ಷ ರೂಪಾಯಿ ಇಳಿಕೆ, ಇನ್ಮುಂದೆ ರೂ.6.99 ಲಕ್ಷಕ್ಕೆ ಲಭ್ಯ

ಭಾರತದಲ್ಲಿ ಮಾರುಕಟ್ಟೆಯಲ್ಲಿ ಕಳೆದ ವರ್ಷದ ಬಿಡುಗಡೆಗೊಂಡ ಎಂಜಿ ಕಾಮೆಟ್ ಇವಿ (MG Comet EV), ಆದಷ್ಟು ಬೇಗನೆ ಮನೆ ಮಾತಾಯಿತು. 2 - ಡೋರ್ ಆಯ್ಕೆಯಲ್ಲಿ ದೊರೆಯುವ ಈ ಎಲೆಕ್ಟ್ರಿಕ್ ಕಾರು, ನಗರ ಸಂಚಾರಕ್ಕೆ ಹೆಚ್ಚು ಸೂಕ್ತವಾಗುವುದರಿಂದ ಹಲವರ ಇಷ್ಟದ ವಾಹನವಾಗಿದೆ.

ಸದ್ಯ, ಎಂಜಿ ದೇಶೀಯ ಗ್ರಾಹಕರಿಗೆ ದೊಡ್ಡ ಸಿಹಿಸುದ್ದಿ ನೀಡಿದೆ. ಕಾಮೆಟ್ ಇವಿ (Comet EV) ಬೆಲೆಯನ್ನು ಬರೋಬ್ಬರಿ 99,000 ಇಳಿಕೆ ಮಾಡಿದೆ. ರೂ.7.98 ಲಕ್ಷವಿದ್ದ ಈ ಎಲೆಕ್ಟ್ರಿಕ್ ಕಾರಿನ ಆರಂಭಿಕ ಮಾದರಿ ಬೆಲೆ ರೂ.6.99 ಲಕ್ಷ (ಎಕ್ಸ್ ಶೋರೂಂ) ಆಗಿದೆ. ಈ ಮೂಲಕ ಎಂಜಿ ಕಾಮೆಟ್ ಇವಿ ದೇಶದಲ್ಲಿ ಖರೀದಿಗೆ ದೊರೆಯುವ ಅತ್ಯಂತ ಕಡಿಮೆ ಬೆಲೆಯ ಎಲೆಕ್ಟ್ರಿಕ್ ಕಾರಾಗಿ ಹೊರಹೊಮ್ಮಿದೆ.

MG Comet EV Price Cut: Rs 1 Lakh, Rs 6.99 Lakh Starting Price, 230 Km Range

ಈ ಕಾರು, ಪೇಸ್ (Pace), ​ಪ್ಲೇ (Play) ಮತ್ತು ಪ್ಲಸ್ (Plus) ಎಂಬ 3 ರೂಪಾಂತರದ ಆಯ್ಕೆಯಲ್ಲಿ ದೊರೆಯುತ್ತದೆ. ಪ್ರಾರಂಭಿಕ ಮಾದರಿ (ಎಂಟ್ರಿ ಲೆವೆಲ್) ಪೇಸ್ ರೂಪಾಂತರ (variant)ದ ಬೆಲೆಯನ್ನು ಮಾತ್ರ ಎಂಜಿ ಕಂಪನಿ ಬಹಿರಂಗಪಡಿಸಿದ್ದು, ಇನ್ನೆರೆಡು ರೂಪಾಂತರಗಳ ಬಗ್ಗೆ ಯಾವುದೇ ಮಾಹಿತಿಯಿಲ್ಲ. ಕಾಮೆಟ್ ಇವಿ ಅರೋರಾ ಸಿಲ್ವರ್, ಕ್ಯಾಂಡಿ ವೈಟ್ ಸೇರಿದಂತೆ 2 ಡುಯಲ್ ಟೋನ್, 3 ಮೊನೊ ಟೋನ್ ಬಣ್ಣಗಳೊಂದಿಗೆ ದೊರೆಯುತ್ತದೆ.

ವಿನ್ಯಾಸದ ದೃಷ್ಟಿಯಿಂದ ಸಹ ಎಂಜಿ ಕಾಮೆಟ್ ಇವಿ ಅತ್ಯಾಕರ್ಷಕವಾಗಿದ್ದು, 4 ಜನರು ಆರಾಮದಾಯವಾಗಿ ಪ್ರಯಾಣಿಸಬಹುದು. ವೈಶಿಷ್ಟ್ಯದ ವಿಚಾರವಾಗಿ ಹೇಳುವುದಾದರೆ, ಇನ್ಫೋಟೈನ್‌ಮೆಂಟ್ & ಇನ್‌ಸ್ಟ್ರುಮೆಂಟ್ ಕ್ಲಸ್ಟರ್ ಗಾಗಿ 10.25-ಇಂಚಿನ ಸ್ಕ್ರೀನ್ ಸೆಟಪ್, ವೈರ್‌ಲೆಸ್ ಆಂಡ್ರಾಯ್ಡ್ ಆಟೋ, ಆಪಲ್ ಕಾರ್‌ ಪ್ಲೇ, ಕೀಲೆಸ್ ಎಂಟ್ರಿ, 55ಕ್ಕೂ ಹೆಚ್ಚು ಕನೆಕ್ಟ್ದ್ ಕಾರ್ ಫೀಚರ್ಸ್ ಅನ್ನು ಒಳಗೊಂಡಿದೆ.

MG Comet EV Price Cut: Rs 1 Lakh, Rs 6.99 Lakh Starting Price, 230 Km Range

ಈ ಕಾರಿನಲ್ಲಿ 17.3 ಕೆಡಬ್ಲ್ಯೂಎಚ್ ಸಾಮರ್ಥ್ಯದ ಬ್ಯಾಟರಿ ಪ್ಯಾಕ್ ಬಳಕೆ ಮಾಡಲಾಗಿದ್ದು, ಪೂರ್ತಿ ಚಾರ್ಜ್ ನಲ್ಲಿ 230 ಕಿ.ಮೀ ರೇಂಜ್ (ಮೈಲೇಜ್) ಕೊಡುತ್ತದೆ. ಇದರಲ್ಲಿ ಬಳಕೆ ಮಾಡಿರುವ ಎಲೆಕ್ಟ್ರಿಕ್ ಮೋಟಾರ್, 42 ಪಿಎಸ್ ಮತ್ತು 110 ಎನ್ಎಂ ಪೀಕ್ ಟಾರ್ಕ್ ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದೆ. 3.3 ಕೆಡಬ್ಲ್ಯೂ ಚಾರ್ಜರ್ ಬಳಕೆಯಲ್ಲಿ 7 ಗಂಟೆಗಳಲ್ಲಿ ಕಾಮೆಟ್ ಇವಿ ಚಾರ್ಜ್ ಆಗುತ್ತದೆ.

ಎಂಜಿ ಕಾಮೆಟ್ ಇವಿ ಪುಟ್ಟ ಕಾರು ಆಗಿದ್ದರೂ ಸುರಕ್ಷತೆಯ ದೃಷ್ಟಿಯಿಂದ ಅತ್ಯುತ್ತಮವಾಗಿದ್ದು, ಡುಯಲ್ ಏರ್‌ಬ್ಯಾಗ್‌, EBD (ಎಲೆಕ್ಟ್ರಾನಿಕ್ ಬ್ರೇಕ್‌ಫೋರ್ಸ್ ಡಿಸ್ಟ್ರಿಬ್ಯೂಷನ್), ABS (ಆಂಟಿಲಾಕ್ ಬ್ರೇಕ್ ಸಿಸ್ಟಮ್), ISOFIX ಚೈಲ್ಡ್ ಸೀಟ್ ಆಂಕರ್ಸ್, ರೇರ್ ಪಾರ್ಕಿಂಗ್ ಕ್ಯಾಮೆರಾ, ರೇರ್ ಪಾರ್ಕಿಂಗ್ ಸೇನಾರ್ಸ್ ಅನ್ನು ಹೊಂದಿದೆ. ಈ ಕಾರಿಗೆ ಟಾಟಾ ಟಿಯಾಗೊ ಇವಿ ಹಾಗೂ ಸಿಟ್ರಸ್ ಇಸಿ3 ಪ್ರಬಲ ಪ್ರತಿಸ್ಪರ್ಧಿಯಾಗಿವೆ.

MG Comet EV Price Cut: Rs 1 Lakh, Rs 6.99 Lakh Starting Price, 230 Km Range

ಇನ್ನು, ಎಂಜಿ ಕಾಮೆಟ್ ಇವಿ (MG Comet EV) ಬೆಲೆ ಭಾರೀ ಇಳಿಕೆಯಾಗಿರುವುದು ಗ್ರಾಹಕರಿಗೆ ಹೆಚ್ಚು ಖುಷಿ ನೀಡಿದೆ. ನಗರ ಪ್ರಯಾಣಕ್ಕೆ ಈ ಕಾರು ಹೇಳಿ ಮಾಡಿಸಿದ ರೀತಿಯಲ್ಲಿ ಇದ್ದು, ಪಾರ್ಕಿಂಗ್ ಮಾಡಲು ಮಾಡಲು ಅಷ್ಟಾಗಿ ಸ್ಥಳಾವಕಾಶದ ಅಗತ್ಯವಿಲ್ಲ. ಕಾಮೆಟ್ ದರ ಕಡಿಮೆಯಾಗಿರುವುದರಿಂದ ಗ್ರಾಹಕರು ಹೆಚ್ಚಿನ ಸಂಖ್ಯೆಯಲ್ಲಿ ಖರೀದಿ ಮಾಡಬಹುದು. ಜೊತೆಗೆ ಕಂಪನಿಗೂ ಹೆಚ್ಚಿನ ಲಾಭವಾಗುವ ಸಾಧ್ಯತೆಯಿದೆ.

ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.

More from DriveSpark

Article Published On: Friday, February 2, 2024, 17:49 [IST]
English summary
Mg comet ev price cut rs 1 lakh rs 6 99 lakh starting price 230 km range
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+