ಆಕರ್ಷಕ ವಿನ್ಯಾಸದ ಎಂಜಿ ಗ್ಲೋಸ್ಟರ್ ಎಸ್‍ಯುವಿಯ ಹೊಸ ರೂಪಾಂತರಗಳು ಬಿಡುಗಡೆ

ಜನಪ್ರಿಯ ಟೊಯೊಟಾ ಫಾರ್ಚುನರ್ ಎಸ್‍ಯುವಿಯ ಪ್ರಬಲ ಪ್ರತಿಸ್ಪರ್ಧಿಯಾದ ಎಂಜಿ ಗ್ಲೋಸ್ಟರ್ ಎಸ್‍ಯುವಿಯ ಬಗ್ಗೆ ಹೊಸ ಅಪ್ದೇಟ್ ಗಳು ಇಲ್ಲದೇ ಕೆಲವು ದಿನಗಳಾಗಿವೆ. ಇದೇ ವಿಭಾಗದ ಫೋರ್ಡ್ ಎಂಡೀವರ್ ಕೂಡ ಭಾರತವನ್ನು ಬಿಟ್ಟು ಹೋಗಿದೆ. ಆದರೂ ಎಂಜಿ ಗ್ಲೋಸ್ಟರ್ ಮಾರಾಟದಲ್ಲಿ ದೊಡ್ಡ ಸಂಚಲನವನ್ನು ಸೃಷ್ಟಿಸಲು ಸಾಧ್ಯವಾಗಿಲ್ಲ. ಆದರೂ ಎಂಜಿ ಕಂಪನಿಯು ಹಿಂದೆ ಸರಿಯುವ ಉದ್ದೇಶವನ್ನು ಹೊಂದಿಲ್ಲ. ಫಾರ್ಚುನರ್ (Fortuner) ಅನ್ನು ಎದುರಿಸಲು ಬಿಡುಗಡೆಯಾದ ಎಂಜಿ ಗ್ಲೋಸ್ಟರ್ (MG Gloster) ನಿರಂತರವಾಗಿ ಬದಲಾವಣೆಗಳನ್ನು ತರುವ ಮೂಲಕ ಕಂಪನಿಯು ಮಾರುಕಟ್ಟೆಯಲ್ಲಿ ಸದ್ದು ಮಾಡಲು ಪ್ರಯತ್ನಿಸುತ್ತಿದೆ.

ಐಷಾರಾಮಿ ಮತ್ತು ತಂತ್ರಜ್ಞಾನದಿಂದ ತುಂಬಿರುವ ದೊಡ್ಡ ಎಸ್‌ಯುವಿ ಖರೀದಿಸಲು ಬಯಸುವವರಿಗೆ ಗ್ಲೋಸ್ಟರ್ ನಿಸ್ಸಂದೇಹವಾಗಿ ಉತ್ತಮ ಮಾದರಿಯಾಗಿದೆ ಎಂದು ಹೇಳಬಹುದು. ಹೆಚ್ಚಿನ ಗ್ರಾಹಕರನ್ನು ಪ್ಲಾಟ್‌ಫಾರ್ಮ್‌ಗೆ ಕರೆತರಲು, ಕಂಪನಿಯು ಎಸ್‌ಯುವಿಯ ಎರಡು ವಿಶೇಷ ಆವೃತ್ತಿಯ ಮಾದರಿಗಳನ್ನು ಬಿಡುಗಡೆ ಮಾಡಿದೆ. ಎಂಜಿ ಮೋಟಾರ್ಸ್ ಗ್ಲೋಸ್ಟರ್ ಮಾದರಿಯ ಹೊಸ ಬಣ್ಣ ಆಯ್ಕೆಗಳು, ಬಾಹ್ಯ ಮುಖ್ಯಾಂಶಗಳು ಮತ್ತು ನವೀಕರಿಸಿದ ಕ್ಯಾಬಿನ್ ಥೀಮ್‌ನೊಂದಿಗೆ ಬರುವ ಡೆಸರ್ಟ್‌ಸ್ಟಾರ್ಮ್ ಮತ್ತು ಸ್ನೋಸ್ಟಾರ್ಮ್ ವಿಶೇಷ ಆವೃತ್ತಿಯ ಮಾದರಿಗಳನ್ನು ಪರಿಚಯಿಸಿದೆ.

MG Gloster

ಎಂಜಿ ಗ್ಲೋಸ್ಟರ್ ಎಸ್‍ಯುವಿಯ ಸ್ಟ್ಯಾಂಡರ್ಡ್ ರೂಪಾಂತರಗಳು 38.80 ಲಕ್ಷದಿಂದ ಪ್ರಾರಂಭವಾಗುತ್ತವೆ, ಆದರೆ ಇತ್ತೀಚಿನ ವಿಶೇಷ ಆವೃತ್ತಿಗಳ ಬೆಲೆಯು ಎಕ್ಸ್ ಶೋರೂಂ ಪ್ರಕಾರ 41 ಲಕ್ಷವಾಗಿದೆ. ಎರಡೂ ಹೊಸ ರೂಪಾಂತರಗಳನ್ನು ಬಿಡುಗಡೆ ಮಾಡಿದ ಗ್ಲೋಸ್ಟರ್ ಬ್ಲ್ಯಾಕ್‌ಸ್ಟಾರ್ಮ್‌ನ ಅದೇ ಮಾದರಿಯಲ್ಲಿ ನಿರ್ಮಿಸಲಾಗಿದೆ. ಇದರರ್ಥ ಬಾಹ್ಯ ಮತ್ತು ಒಳಭಾಗವು ಸಣ್ಣ ನವೀಕರಣಗಳನ್ನು ಮಾತ್ರ ಪಡೆಯುತ್ತದೆ.

ಎಂಜಿ ಗ್ಲೋಸ್ಟರ್ ಡೆಸರ್ಟ್‌ಸ್ಟಾರ್ಮ್ ಆವೃತ್ತಿಯ ಹೊರಭಾಗವನ್ನು ಅಲಂಕರಿಸಲು ಡಾರ್ಕ್ ಥೀಮ್‌ಗಳ ORVM ಗಳ ಜೊತೆಗೆ, ಸ್ವಲ್ಪ ಟ್ವೀಕ್ ಮಾಡಿದ ಹೆಡ್‌ಲೈಟ್‌ಗಳು ಮತ್ತು ಟೈಲ್ ಲೈಟ್‌ಗಳು ಬಂದಿಲ್ಲ. ಡಾಲ್ಡನ್ ಬಣ್ಣದೊಂದಿಗೆ ಬ್ಲ್ಯಾಕ್ ಬಣ್ಣದ ಸಂಯೋಜನೆಯು ಎಸ್‍ಯುವಿಯ ಹೆಚ್ಚು ಒರಟಾದ ನೋಟವನ್ನು ಹೊಂದಲು ಸಹಾಯ ಮಾಡಿದೆ. ಒಳಭಾಗದಲ್ಲಿ, ಕಂಪನಿಯು ಕಪ್ಪು ಸ್ಟೀರಿಂಗ್ ವೀಲ್ ಮತ್ತು ಡಾರ್ಕ್ ಥೀಮ್ ಅಪ್ಹೋಲ್ಸ್ಟರಿಯೊಂದಿಗೆ ನವೀಕರಿಸಿದೆ.

MG Gloster

ಎಂಜಿ ಗ್ಲೋಸ್ಟರ್ ಸ್ನೋಸ್ಟಾರ್ಮ್ಗೆ ಬಂದಾಗ ಅದೇ ಮಾದರಿಯನ್ನು ಕಾಣಬಹುದು. ಬಿಳಿ ಬಣ್ಣದಲ್ಲಿ ಕಪ್ಪು ಮತ್ತು ಕೆಂಪು ಅಸ್ಸೆಂಟ್ ಸೇರ್ಪಡೆಯು 7-ಸೀಟುಗಳ ಎಸ್‍ಯುವಿಯ ಸ್ಪೋರ್ಟಿನೆಸ್ ಅನ್ನು ಹೆಚ್ಚಿಸಲು ಸಹಾಯ ಮಾಡಿದೆ. ಡ್ಯುಯಲ್ ಟೋನ್ ಶೇಡ್ ನಲ್ಲಿ ಬರುತ್ತಿರುವ ಇದು ಬೀದಿಗಳಲ್ಲಿ ಹಿಟ್ ಆಗುವುದರಲ್ಲಿ ಅನುಮಾನವಿಲ್ಲ. ಹೆಡ್‌ಲ್ಯಾಂಪ್‌ಗಳ ಒಳಗೆ ಕೆಂಪು ಒಳಸೇರಿಸುವಿಕೆಯನ್ನು ಸಹ ಕಾಣಬಹುದು.

ಈ ಎಸ್‍ಯುವಿ ಮುಂಭಾಗ ಮತ್ತು ಹಿಂಭಾಗದ ಬಂಪರ್‌ಗಳು ಕೆಂಪು ಅಸ್ಸೆಂಟ್ ಅನ್ನು ಪಡೆಯುತ್ತವೆ. ಮುಂಭಾಗದ ಗ್ರಿಲ್, ಅಲಾಯ್ ವ್ಹೀಲ್ ಗಳು ಮತ್ತು ಹಿಂಭಾಗದ ಸ್ಪಾಯ್ಲರ್ ಅನ್ನು ಕಪ್ಪು ಬಣ್ಣದಲ್ಲಿ ಮಾಡಲಾಗಿದೆ. ಎಂಜಿ ಗ್ಲೋಸ್ಟರ್‌ನ ವಿಶೇಷ ಆವೃತ್ತಿಯ ಮಾದರಿಯು ಸೀಟ್ ಮಸಾಜರ್, ಥೀಮ್ ಕಾರ್ಪೆಟ್ ಮ್ಯಾಟ್ಸ್, ಡ್ಯಾಶ್‌ಬೋರ್ಡ್ ಮ್ಯಾಟ್ಸ್, JBL ಸ್ಪೀಕರ್‌ಗಳು ಮತ್ತು ಡೆಸರ್ಟ್ ಸ್ಟಾರ್ಮ್ ಮತ್ತು ಸ್ನೋಸ್ಟಾರ್ಮ್ ಬ್ಯಾಡ್ಜ್‌ಗಳನ್ನು ಒಳಗೊಂಡಂತೆ ಆಯ್ಕೆಯ ಡೀಲರ್-ಹೊಂದಿಸಿದ ಬಿಡಿಭಾಗಗಳನ್ನು ಸಹ ಪಡೆಯುತ್ತದೆ.

MG Gloster

ಎಂಜಿ ಗ್ಲೋಸ್ಟರ್ ಎಸ್‍ಯುವಿಯಲ್ಲಿ 2.0-ಲೀಟರ್ ಟರ್ಬೊ ಡೀಸೆಲ್ ಮತ್ತು 2.0-ಲೀಟರ್ ಟ್ವಿನ್-ಟರ್ಬೊ ಡೀಸೆಲ್ ಎಂಜಿನ್ ಆಯ್ಕೆಗಳಿಂದ ಚಾಲಿತವಾಗುತ್ತವೆ. ಈ ಎಸ್‍ಯುವಿಯ ಟರ್ಬೊ ಡೀಸೆಲ್ ಆವೃತ್ತಿಯು 161 bhp ಪವರ್ ಮತ್ತು 375 Nm ಗರಿಷ್ಠ ಟಾರ್ಕ್ ಅನ್ನು ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದೆ. ಇನ್ನು ಗ್ಲೋಸ್ಟರ್‌ನ ಟ್ವಿನ್-ಟರ್ಬೊ ಆವೃತ್ತಿಯು 215 bhp ಪವರ್ ಮತ್ತು 480 Nm ಟಾರ್ಕ್ ಅನ್ನು ಅಭಿವೃದ್ಧಿಪಡಿಸುವ ಸಾಮರ್ಥ್ಯವನ್ನು ಹೊಂದಿದೆ.

ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತ ಆಟೋಮೊಬೈಲ್ ಸುದ್ದಿಗಳನ್ನು ಒದಗಿಸುತ್ತದೆ, ಎಲ್ಲಾ ಸಾಮಾಜಿಕ ಮಾಧ್ಯಮಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಹಂಚಿಕೊಳ್ಳುತ್ತದೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್ ಮತ್ತು ಯೂಟ್ಯೂಬ್ ಪೇಜ್‌ಗಳೊಂದಿಗೆ ಸಂಪರ್ಕದಲ್ಲಿರಿ. ನಿಮಗೆ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.

More from DriveSpark

Article Published On: Tuesday, June 4, 2024, 18:27 [IST]
English summary
Mg gloster suv snowstorm desertstorm editions launched in india details
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+