ಹೊಸ ಫುಲ್‌ಸೈಜ್ ಎಸ್‌ಯುವಿ ಬಿಡುಗಡೆಯಾಗಲಿದೆ... ಟೆಸ್ಟಿಂಗ್ ವೇಳೆ ಕ್ಯಾಮರಾ ಕಣ್ಣಿಗೆ ಬಿತ್ತು!

ಎಂಜಿ ಮೋಟಾರ್ ಇಂಡಿಯಾ ಶೀಘ್ರದಲ್ಲೇ ಅಂತರಾಷ್ಟ್ರೀಯ ಮಾರುಕಟ್ಟೆಯಲ್ಲಿ LDV D90/Maxus D90 ಹೆಸರಿನಲ್ಲಿ ಮಾರಾಟವಾಗುತ್ತಿರುವ ಗ್ಲೋಸ್ಟರ್‌ನ ಫೇಸ್ ಲಿಫ್ಟ್ ಎಸ್‌ಯುವಿಯನ್ನು ಭಾರತದಲ್ಲಿ ಪರಿಚಯಿಸಲಿದೆ. ಈ ರೀಬ್ಯಾಡ್ಜ್ ಆವೃತ್ತಿಯನ್ನು ಭಾರತದಲ್ಲಿ ಸೂಕ್ಷ್ಮ ಇಂಟೀರಿಯರ್ ಪರಿಷ್ಕರಣೆಗಳೊಂದಿಗೆ ಗಮನಾರ್ಹ ವಿನ್ಯಾಸ ನವೀಕರಣಗಳನ್ನು ಮಾಡಿ ಬಿಡುಗಡೆ ಮಾಡುವುದಾಗಿ ಮೂಲಗಳಿಂದ ತಿಳಿದುಬಂದಿದೆ. ಈ ಕಾರು ಈಗಾಗಲೇ ಭಾರತದಲ್ಲಿ ಹಲವೆಡೆ ಟೆಸ್ಟಿಂಗ್ ಮಾಡುವಾಗ ಕಾಣಿಸಿಕೊಂಡಿದೆ. ಶೀಘ್ರದಲ್ಲೇ ಕಾರಿನ ಬಗ್ಗೆ ಕಂಪನಿ ಹೆಚ್ಚಿನ ಮಾಹಿತಿಯನ್ನು ಹಂಚಿಕೊಳ್ಳಲಿದೆ. ಅದಕ್ಕೂ ಮುನ್ನ ಶೀಘ್ರದಲ್ಲೇ ಬಿಡುಗಡೆಗೆಯಾಗಲಿರುವ ಎಂಜಿ ಗ್ಲೋಸ್ಟರ್ ಫೇಸ್‌ಲಿಫ್ಟ್ ಬಗ್ಗೆ ನಮಗಿರುವ ಮಾಹಿತಿಯನ್ನು ಇಲ್ಲಿ ಹಂಚಿಕೊಂಡಿದ್ದೇವೆ.

ಹೊಸ ಮುಂಬರಲಿರುವ ಗ್ಲೋಸ್ಟರ್‌ನ ಫೇಸ್ ಲಿಫ್ಟ್ ಆವೃತ್ತಿಯು ಬೆಂಗಳೂರು ಸೇರಿದಂತೆ ಹಲವೆಡೆ ರೋಡ್ ಟೆಸ್ಟ್ ಮಾಡುವಾಗ ಕ್ಯಾಮರಾ ಕಣ್ಣಿಗೆ ಬಿದ್ದಿತ್ತು. ಈ ಫೋಟೋಗಳ ಆಧಾರದ ಮೇಲೆ ಅದರ ವಿನ್ಯಾಸ ಹಾಗೂ ವಿಶೇಷತೆಗಳನ್ನು ವಿವರಿಸುತ್ತಿದ್ದೇವೆ. ಫೋಟೋದಲ್ಲಿ ನೋಡಿದಂತೆ, ಎಂಜಿ ಗ್ಲೋಸ್ಟರ್ ಫೇಸ್‌ಲಿಫ್ಟ್ ಬೃಹತ್ ಮೂರು - ಸ್ಲಾಟ್ ಗ್ರಿಲ್ ಮತ್ತು ಬ್ರಾಂಡ್ ಲೋಗೋವನ್ನು ಕೇಂದ್ರಬಿಂದುವಾಗಿ ಹೊಂದಿದೆ.

new-mg-gloster-facelift-india-launch-details

ಇದಲ್ಲದೆ, ಹೆಡ್ ಲೈಟ್‌ಗಳು ಕ್ಯೂಬ್ ಆಕಾರದ ಸ್ಪ್ಲಿಟ್ ಹೆಡ್ ಲ್ಯಾಂಪ್ ಸೆಟಪ್‌ನೊಂದಿಗೆ ಹೊಸ ಆಕರ್ಷಕ ವಿನ್ಯಾಸವನ್ನು ಪಡೆದಿವೆ. ನಂತರ, ಎಲ್ಇಡಿ ಡಿಆರ್ಎಲ್‌ಗಳು ಗ್ರಿಲ್‌ವೆರಗೆ ವಿಸ್ತರಿಸಿವೆ. ಇವು ನವೀಕರಿಸಿದ ಗ್ಲೋಸ್ಟರ್‌ನ ಮುಂಭಾಗದ ಪ್ರೊಫೈಲ್‌ಗೆ ಮತ್ತಷ್ಟು ಆಕರ್ಷಣೆಯನ್ನು ಹೆಚ್ಚಿಸುತ್ತವೆ. ಒಟ್ಟಾರೆ ಫ್ರಂಟ್ ಲುಕ್ ಐರಾವತದಂತೆ ಕಾಣುತ್ತದೆ.

ಬದಿಗಳಲ್ಲಿ ಡಿಸೈನ್ ಅನ್ನು ನೋಡಿದ್ರೆ ಈಗ ಮಾರಾಟದಲ್ಲಿರುವ ಎಂಜಿ ಗ್ಲೋಸ್ಟರ್‌ನಂತೆ ಅದೇ ಅಲಾಯ್ ವೀಲ್‌ಗಳನ್ನು ಹೊಂದಿದೆ. ಆದರೆ ಈ ಮಾದರಿಯು ಬಿಡುಗಡೆಯ ಸಮಯದಲ್ಲಿ ಹೊಸ ಅಲಾಯ್ ವೀಲ್‌ಗಳನ್ನು ಪಡೆಯುವ ಸಾಧ್ಯತೆ ಕೂಡ ಇದೆ. ಹಿಂಭಾಗದಲ್ಲಿ, ಪೂರ್ಣ ಗಾತ್ರದ ಎಸ್‌ಯುವಿ ಕನೆಕ್ಟಿಂಗ್ ಲೈಟ್ ಬಾರ್‌ನೊಂದಿಗೆ ಪರಿಷ್ಕೃತ ಎಲ್ಇಡಿ ಟೈಲ್ ಲ್ಯಾಂಪ್‌ಗಳನ್ನು ನೀಡಲಾಗಿದೆ.

new-mg-gloster-facelift-india-launch-details

ವೈಶಿಷ್ಟ್ಯಗಳ ವಿಷಯಕ್ಕೆ ಬಂದರೆ, ಗ್ಲೋಸ್ಟರ್ ಫೇಸ್‌ಲಿಫ್ಟ್ ದೊಡ್ಡ ಟಚ್ ಸ್ಕ್ರೀನ್ ಇನ್ಫೋಟೈನ್ ಮೆಂಟ್ ಸಿಸ್ಟಮ್, ವೈರ್‌ಲೆಸ್ ಸ್ಮಾರ್ಟ್ ಫೋನ್ ಕನೆಕ್ಷನ್, ಡಿಜಿಟಲ್ ಇನ್ಸ್‌ಟ್ರೂಮೆಂಟ್ ಕ್ಲಸ್ಟರ್, ವೆಂಟಿಲೇಟೆಡ್ ಮತ್ತು ಪವರ್ಡ್ ಫ್ರಂಟ್ ಸೀಟ್‌ಗಳು, ವೈರ್‌ಲೆಸ್ ಚಾರ್ಜರ್, 360 ಡಿಗ್ರಿ ಸರೌಂಡ್ ಕ್ಯಾಮೆರಾ, ಪನೋರಮಿಕ್ ಸನ್ ರೂಫ್ ಮತ್ತು ಲೆವೆಲ್ 2 ADAS ಸೂಟ್ ಅನ್ನು ಹೊಂದಿರಲಿದೆ.

ಎಂಜಿನ್ ಬಗ್ಗೆ ಹೇಳುವುದಾದ್ರೆ, ಎಂಜಿ ಪವರ್‌ಟ್ರೇನ್ ಆಯ್ಕೆಯಲ್ಲಿ ಯಾವುದೇ ಬದಲಾವಣೆಗಳನ್ನು ಮಾಡುವುದಿಲ್ಲ ಎನ್ನಲಾಗಿದೆ. ಅದೇ 2.0-ಲೀಟರ್ ಡೀಸೆಲ್ ಎಂಜಿನ್ ನೊಂದಿಗೆ 8-ಸ್ಪೀಡ್ ಆಟೋಮ್ಯಾಟಿಕ್ ಗೇರ್ ಬಾಕ್ಸ್ ಹೊಂದಿರಲಿದೆ. ಈ ಎಂಜಿನ್ ಅನ್ನು ಟರ್ಬೊ ಮತ್ತು ಟ್ವಿನ್ ಟರ್ಬೊ ಎಂಬ ಎರಡು ರೂಪಾಂತರಗಳಲ್ಲಿ ನೀಡಲಾಗುವುದು, ಇದು 213 ಬಿಹೆಚ್‌ಪಿ ಮತ್ತು 478 ಎನ್ಎಂ ಪೀಕ್ ಟಾರ್ಕ್ ಅನ್ನು ಉತ್ಪಾದಿಸುತ್ತದೆ.

new-mg-gloster-facelift-india-launch-details

ಎಂಜಿ ಗ್ಲೋಸ್ಟರ್ ಭಾರತದಲ್ಲಿ ಎಂಜಿ ಮೋಟಾರ್‌ ಲೈನ್‌ಅಪ್‌ನಲ್ಲಿಯೇ ಅಗ್ರಸ್ಥಾನವನ್ನು ಪಡೆದುಕೊಂಡಿದೆ. ಪ್ರಸ್ತುತ ಭಾರತದಲ್ಲಿ ಮಾರಾಟದಲ್ಲಿರುವ MG ಗ್ಲೋಸ್ಟರ್ SUV ಬೆಲೆಯು ರೂ. 48.39 ಲಕ್ಷದಿಂದ ರೂ. 54.66 ಲಕ್ಷವಿದೆ. ಇದು 9 ರೂಪಾಂತರಗಳಲ್ಲಿ ಲಭ್ಯವಿದೆ. ಗ್ಲೋಸ್ಟರ್ ಸುರಕ್ಷತೆಯಲ್ಲಿ 5-ಸ್ಟಾರ್‌ NCAP ರೇಟಿಂಗ್ ಅನ್ನು ಗಳಿಸಿದೆ. 6 ಏರ್‌ಬ್ಯಾಗ್‌ಗಳೊಂದಿಗೆ ಬರುವ ಈ ಕಾರು 4 ಬಣ್ಣಗಳಲ್ಲಿ ಲಭ್ಯವಿದೆ.

ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.

More from DriveSpark

Article Published On: Wednesday, May 29, 2024, 12:08 [IST]
English summary
New mg gloster facelift india launch details
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+