ಸ್ಟಾರ್ಮ್‌ ಎಡಿಷನ್‌ನಲ್ಲಿ ಎಂಜಿಯ ಈ ಕಾರು: ಹ್ಯುಂಡೈ ಕ್ರೇಟಾ ಎದುರಾಳಿಯ ವೈಭವದ ಟೀಸರ್‌ ಬಿಡುಗಡೆ!

ಭಾರತೀಯ ಆಟೋಮೊಬೈಲ್ ಕ್ಷೇತ್ರಕ್ಕೆ ದಿನಕ್ಕೊಂದು ವಿದೇಶಿ ಕಂಪನಿಗಳು ಕಾಲಿಡುತ್ತಿವೆ. ಭಾರತೀಯ ಆಟೋಮೊಬೈಲ್‌ ಕ್ಷೇತ್ರದಲ್ಲಿರುವ ಅವಕಾಶವನ್ನು ಕಂಡುಕೊಂಡು ವಿದೇಶಿ ಕಂಪನಿಗಳು ಲಗ್ಗೆ ಇಡುತ್ತಿವೆ ಎಂದರೆ ಎರ್ಳಳಷ್ಟೂ ತಪ್ಪಾಗಲಾರದು. ಇಂತಹ ಒಂದು ಕಂಪನಿಗಳ ಸಾಲಿಗೆ ಸೇರಿವ ಕಂಪನಿ ಎಲ್ಲರಿಗೂ ತಿಳಿದಿರುವ ಚೀನಾ ಮೂಲದ ಎಂಜಿ ಮೋಟಾರ್ಸ್‌.

ಈಗಾಗಲೇ ಕೆಲವು ವರ್ಷಗಳಿಂದ ಎಂಜಿ ಭಾರತೀಯ ಮಾರುಕಟ್ಟೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದು, ಹಲವಾರು ಕಾರು ಮಾದರಿಗಳನ್ನು ಜನರ ಮುಂದಿಟ್ಟು ಯಶಸ್ವಿಯಾಗಿದೆ. ಅದರಲ್ಲಿ ಒಂದು ಎಂಜಿ ಹೆಕ್ಟರ್‌ ಎಂಬ ಎಸ್‌ಯುವಿ. ಹಲವಾರು ಆಧುನಿಕ ಫೀಚರ್‌ಗಳಿಂದ ಕೂಡಿರುವ ಈ ಕಾರು ಇದೀಗ ಸ್ಟಾರ್ಮ್‌ ಎಡಿಷನ್‌ನಲ್ಲಿ ಜನರ ಮುಂದೆ ಬಂದಿದೆ. ಹೌದು, ಕಂಪನಿ ತನ್ನ ಪ್ರಸಿದ್ದ ಕಾರು ಮಾದರಿ ಎಂಜಿ ಹೆಕ್ಟರ್‌ನ ಸ್ಟಾರ್ಮ್ ಎಡಿಷನ್‌ ಅನ್ನು ಭಾರತೀಯ ಮಾರುಕಟ್ಟೆಯಲ್ಲಿ ಲಾಂಚ್ ಮಾಡಲಿದೆ.

MG Hector Storm Edition Teaser Released Ahead Of Its Launch

ಎಂಜಿ ಈಗಾಗಲೇ ಈ ಕಾರಿನ ಟೀಸರ್‌ ಅನ್ನು ಬಿಡುಗಡೆ ಮಾಡಿದ್ದು, ಈ ವಾಹನದ ಟೀಸರ್‌ ಆಕರ್ಷಕವಾಗಿ ಮೂಡಿ ಬಂದಿದೆ. ಹೌದು, ವಿಡಿಯೋದಲ್ಲಿ ಕಾಣುವಂತೆ ಮ್ಯಾಟ್‌ ಬ್ಲಾಕ್‌ ಬಣ್ಣದಲ್ಲಿ ಕಂಡು ಬಂದಿದ್ದು, ಅಲ್ಲಲ್ಲಿ ಕೆಂಪು ಬಣ್ಣದ ಇನ್ಸರ್ಟ್‌ಗಳನ್ನು ಸಹ ಕಾಣಬಹುದು. ಹೆಕ್ಟರ್‌ ಸ್ಟಾರ್ಮ್‌ ಎಡಿಷನ್‌ನಲ್ಲಿ(MG Hector Storm Edition) ಬ್ರೇಕ್ ಕ್ಯಾಲಿಪರ್‌ಗಳು ಸಹ ಕೆಂಪು ಬಣ್ಣದಲ್ಲಿ ಮೂಡಿ ಬಂದಿದ್ದು, ಇದು ಈ ಕಾರಿನ ಲುಕ್‌ ಅನ್ನು ಮತ್ತಷ್ಟು ಸ್ಪೋರ್ಟಿಯಾಗಿಸುತ್ತಿದೆ.

ಮಾಹಿತಿಗಳ ಪ್ರಕಾರ ಈ ಕಾರಿನ ಎಂಜಿನ್‌ ಮತ್ತು ಇತರ ವಿಷಯಗಳಲ್ಲಿ ಯಾವುದೇ ಬದಲಾವಣೆಗಳು ಕಡು ಬರುವುದಿಲ್ಲ ಎಂದು ತಿಳಿದು ಬಂದಿದೆ. ಸದ್ಯಕ್ಕೆ ಭಾರತೀಯ ಮಾರುಕಟ್ಟೆಯಲ್ಲಿ ಮಾರಾಟವಾಗುತ್ತಿರುವ ಎಂಜಿ ಹೆಕ್ಟರ್‌ ಬಗ್ಗೆ ನೋಡುವುದಾದರೆ, ಹೊಸ ವೇರಿಯೆಂಟ್‌ಗಳ ಬೆಲೆಗಳ ವಿಷಯಕ್ಕೆ ಬಂದರೆ, ಎಂಜಿ ಹೆಕ್ಟರ್ ಶೈನ್ ಪ್ರೊ ಕಾರಿನ ಬೆಲೆಯು ಭಾರತದ ಎಕ್ಸ್ ಶೋರೂಂ ಪ್ರಕಾರ ರೂ. 15.99 ಲಕ್ಷವಾದರೆ, ಎಂಜಿ ಹೆಕ್ಟರ್ ಸೆಲೆಕ್ಟ್ ಪ್ರೊ ಮಾದರಿಯ ಬೆಲೆಯು ರೂ. 17.29 ಲಕ್ಷವಾಗಿದೆ.

MG Hector Storm Edition Teaser Released Ahead Of Its Launch

ಇನ್ನು ಎಂಜಿ ಹೆಕ್ಟರ್ ಸೆಲೆಕ್ಟ್ ಪ್ರೊ ಡ್ಯುಯಲ್ - ಪ್ಯಾನ್ ಪನೋರಮಿಕ್ ಸನ್‌ರೂಫ್ ಹೊಂದಿದ್ದರೇ, ಎಂಜಿ ಹೆಕ್ಟರ್ ಶೈನ್ ಪ್ರೊ ರೂಪಾಂತರವು ಹೆಚ್ಚು ಮೂಲಭೂತ ಸಿಂಗಲ್-ಪ್ಯಾನ್ ಎಲೆಕ್ಟ್ರಿಕ್ ಸನ್ ರೂಫ್ ಅನ್ನು ಹೊಂದಿದೆ. ಎರಡೂ ರೂಪಾಂತರಗಳು ನವೀಕರಿಸಿದ ಡ್ಯಾಷ್ ಬೋರ್ಡ್ ವಿನ್ಯಾಸ ಮತ್ತು ವೈರ್‌ಲೆಸ್ ಆಂಡ್ರಾಯ್ಡ್ ಆಟೋ ಮತ್ತು ಆಪಲ್ ಕಾರ್‌ ಪ್ಲೇ ಸಂಪರ್ಕವನ್ನು ಹೊಂದಿವೆ.

ಪವರ್ ಟ್ರೇನ್‌ಗೆ ಸಂಬಂಧಿಸಿದಂತೆ, ಎಂಜಿ ಹೆಕ್ಟರ್ ಪೆಟ್ರೋಲ್ ಮತ್ತು ಡೀಸೆಲ್ ಎರಡೂ ರೂಪಾಂತರಗಳಲ್ಲಿ ನೀಡಲಾಗುತ್ತದೆ. ಪೆಟ್ರೋಲ್ ರೂಪಾಂತರವು 1.5 - ಲೀಟರ್ ಟರ್ಬೋಚಾರ್ಜ್ಡ್ ಎಂಜಿನ್ ಅನ್ನು ಹೊಂದಿದ್ದರೆ, ಡೀಸೆಲ್ ಎಂಜಿನ್ ಸ್ವಲ್ಪ ದೊಡ್ಡದಾದ 2.0 - ಲೀಟರ್ ಟರ್ಬೋಚಾರ್ಜ್ಡ್ ಘಟಕವನ್ನು ಹೊಂದಿದೆ.

MG Hector Storm Edition Teaser Released Ahead Of Its Launch

ಇದಲ್ಲದೆ, ಪೆಟ್ರೋಲ್ ಎಂಜಿನ್ ಅನ್ನು ಮ್ಯಾನುವಲ್ ಅಥವಾ ಸಿವಿಟಿ ಗೇರ್ ಬಾಕ್ಸ್ ಆಯ್ಕೆಗಳೊಂದಿಗೆ ನಿರ್ದಿಷ್ಟಪಡಿಸಬಹುದು. ಮತ್ತೊಂದೆಡೆ, ಡೀಸೆಲ್ ಎಂಜಿನ್ ಅನ್ನು 6 - ಸ್ಪೀಡ್ ಮ್ಯಾನುವಲ್ ಗೇರ್ ಬಾಕ್ಸ್ ನೊಂದಿಗೆ ಪ್ರತ್ಯೇಕವಾಗಿ ಜೋಡಿಸಲಾಗಿದೆ. ಒಟ್ಟಾರೆ ಹೆಕ್ಟಾರ್ ಎಲ್ಲಾ ರೀತಿಯ ಗ್ರಾಹಕರಿಗೆ ಉತ್ತಮ ಚಾಲನಾ ಅನುಭವ ನೀಡುತ್ತವೆ ಎಂದು ಕಂಪನಿ ಹೇಳಿದೆ.

ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.

More from DriveSpark

Article Published On: Tuesday, April 9, 2024, 16:02 [IST]
English summary
Mg hector storm edition teaser released ahead of its launch
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+