ಅಗ್ಗದ ಐಷಾರಾಮಿ ಕಾರುಗಳಿಗೆ ಮುಗಿಬಿದ್ದ ಜನ... ಬೆಂಗಳೂರಿನಲ್ಲಿ ಒಂದೇ ದಿನ 201 ಮಂದಿಗೆ ಡೆಲಿವರಿ!
ಎಂಜಿ ಮೋಟಾರ್ (MG Motor) ಇಂಡಿಯಾ ಇಂದು ಬೆಂಗಳೂರಿನಲ್ಲಿ ಒಂದೇ ದಿನ 201 ಎಲೆಕ್ಟ್ರಿಕ್ ಕಾರುಗಳನ್ನು ಗ್ರಾಹಕರಿಗೆ ವಿತರಿಸಿದೆ. ಇದರಲ್ಲಿ ಹೊಸ ಎಂಜಿ ವಿಂಡ್ಸರ್(MG Windsor), ಎಂಜಿ ಝಡ್‌ಎಸ್ ಇವಿ(MG ZS EV) ಮತ್ತು ಎಂಜಿ ಕಾಮೆಟ್(MG Comet) ಕಾರುಗಳು ಸೇರಿವೆ. ಎಂಜಿ ಮೋಟಾರ್ ಇಂಡಿಯಾ ತನ್ನ ಬ್ಯಾಟರಿ-ಆಸ್-ಎ-ಸರ್ವಿಸ್(BaaS) ಕಾರ್ಯಕ್ರಮದ ಅಡಿಯಲ್ಲಿ ತನ್ನ ಕಾರನ್ನು ಗ್ರಾಹಕರಿಗೆ ಅಗ್ಗದ ಬೆಲೆಯಲ್ಲಿ ನೀಡುತ್ತಿದೆ. MG ಕಾಮೆಟ್ EV ಕಾರಿನ ಬೆಲೆಯು ರೂ. 4.99 ಲಕ್ಷವಿದ್ದರೇ ಇದರ ಬ್ಯಾಟರಿ ಬಾಡಿಗೆಯು ಪ್ರತಿ ಕಿ.ಮೀಗೆ 2.5 ರೂ. ಇದೆ.
ಹಾಗೆಯೇ ಎಂಜಿ ಮೋಟಾರ್ ಇತ್ತೀಚೆಗೆ ಬಿಡುಗಡೆ ಮಾಡಿರುವ ವಿಂಡ್ಸರ್ ಇವಿ ಬೆಲೆಯು 9.99 ಲಕ್ಷ ರೂ. ಇದ್ದು, ಇದರ ಬ್ಯಾಟರಿ ಬಾಡಿಗೆಯು ಪ್ರತಿ ಕಿ.ಮೀಗೆ 3.5 ರೂ. ಇದೆ. ಇನ್ನು ಎಂಜಿ ಮೋಟಾರ್‌ನ ಮೊದಲ ಎಲೆಕ್ಟ್ರಿಕ್ ಕಾರಾಗಿರುವ MG ZS EV ಬೆಲೆಯು 13.99 ಲಕ್ಷ ರೂ. ಇದ್ದು, ಇದರ ಬ್ಯಾಟರಿ ಬಾಡಿಗೆಯು ಪ್ರತಿ ಕಿ.ಮೀ 4.5 ರೂ. ಇದೆ.

ಎಂಜಿ ಕಾಮೆಟ್: ಇದು ಸಣ್ಣ ಸ್ಮಾರ್ಟ್ ಕಾರ್ ಆಗಿದ್ದು, (BICO) 55 ಕ್ಕೂ ಹೆಚ್ಚು ಸಂಪರ್ಕಿತ ವೈಶಿಷ್ಟ್ಯಗಳನ್ನು ಮತ್ತು i-SMART ತಂತ್ರಜ್ಞಾನವನ್ನು ಹೊಂದಿದೆ. ಇದರ ಚುರುಕು ಮತ್ತು ಪ್ರಾಯೋಗಿಕ ವಿನ್ಯಾಸವು ಹೆಚ್ಚು ಟ್ರಾಫಿಕ್ ಹಾಗೂ ಬಿಗಿಯಾದ ಪಾರ್ಕಿಂಗ್ ಸ್ಥಳಗಳಲ್ಲಿಯೂ ಸುಲಭವಾಗಿ ಓಡಿಸುವಂತೆ ಮಾಡುತ್ತದೆ. ನಗರ ಚಾಲನೆಗೆ ಹೇಳಿಮಾಡಿಸಿದಂತಿರುತ್ತದೆ.
ಎಂಜಿ ವಿಂಡ್ಸರ್: ಎಂಜಿ ಮೋಟಾರ್ ಇತ್ತೀಚೆಗೆ ಬುಕಿಂಗ್ ಘೋಷಿಸಿದ 24 ಗಂಟೆಗಳಲ್ಲಿ 15,176 ಬುಕಿಂಗ್‌ಗಳನ್ನು ಗಳಿಸಿದ ಭಾರತದ ಮೊದಲ ಪ್ರಯಾಣಿಕ EV ಆಗಿ ಎಂಜಿ ವಿಂಡ್ಸರ್ ದಾಖಲೆ ನಿರ್ಮಿಸಿದೆ. MG ವಿಂಡ್ಸರ್ ಸೆಡಾನ್‌ನ ಸೌಕರ್ಯ ಮತ್ತು SUV ಯ ವಿಸ್ತಾರವನ್ನು ಹೊಂದಿದೆ. ಐಷಾರಾಮಿ ಇಂಟೀರಿಯರ್, ಸುರಕ್ಷತೆ, ಸ್ಮಾರ್ಟ್ ಸಂಪರ್ಕ ಮತ್ತು 332 ಕಿ.ಮೀ ರೇಂಜ್ ನೀಡುವ ಮೂಲಕ ಗ್ರಾಹಕರನ್ನು ತನ್ನತ್ತ ಸೆಳೆದಿದೆ.

ಎಂಜಿ ಝಡ್‌ಎಸ್ ಇವಿ: MG ZS EV ಕಾರು ಪ್ರೀಮಿಯಂ ವೈಶಿಷ್ಟ್ಯಗಳು, ವಿಶಾಲವಾದ ಇಂಟೀರಿಯರ್, i-SMART ತಂತ್ರಜ್ಞಾನ ಮತ್ತು 75 ಕ್ಕೂ ಹೆಚ್ಚು ಸಂಪರ್ಕಿತ ಕಾರ್ ವೈಶಿಷ್ಟ್ಯಗಳೊಂದಿಗೆ ಬರುತ್ತದೆ. ಇದು ದೂರದ ಪ್ರಯಾಣಗಳಿಗೆ ಸೂಕ್ತವಾದ ಕಾರಾಗಿದ್ದು, ಸಿಂಗಲ್ ಚಾರ್ಜ್‌ನಲ್ಲಿ 461 ಕಿ.ಮೀ ರೇಂಜ್ ನೀಡುತ್ತದೆ.
ಒಟ್ಟಾರೆ ಭಾರತದಲ್ಲಿ JSW ಪಾಲುದಾರಿಕೆಯಲ್ಲಿ ಮುಂದುವರಿಯುತ್ತಿರುವ ಎಂಜಿ ಮೋಟಾರ್‌ಗೆ, ಇತ್ತೀಚೆಗೆ ಬಿಡುಗಡೆ ಮಾಡಿರುವ ಎಂಜಿ ವಿಂಡ್ಸರ್ (MG Windsor) ಕಾರುಗಳು ಭರ್ಜರಿ ಮಾರಾಟ ಕಾಣುತ್ತಿವೆ. ಈ ಹಿಂದೆ ಬೆಂಗಳೂರಿನಲ್ಲಿ 101 ಹಾಗೂ ಚೆನ್ನೈನಲ್ಲಿ 101 ಕಾರುಗಳ ಮೆಗಾ ಡೆಲಿವರಿ ನೀಡಲಾಗಿತ್ತು. ಇದೀಗ ಮತ್ತೊಮ್ಮೆ ಕಂಪನಿಯ ಎಲ್ಲಾ ಇವಿಗಳ ಸೇರಿ ಉತ್ತಮ ಡೆಲಿವರಿಗಳನ್ನು ಪಡೆದಿವೆ.

ಎಂಜಿ ವಿಂಡ್ಸರ್ ಬಗ್ಗೆ ಕೂಡ ವಿಶೇಷವಾಗಿ ಹೇಳಬೇಕು, ಕಳೆದ ಅಕ್ಟೋಬರ್ ತಿಂಗಳಲ್ಲಿ ಗಮನಾರ್ಹವಾದ ಮಾರಾಟವನ್ನು ದಾಖಲಿಸಿದ್ದು, ಕಂಪನಿಯು 3,116 ಕಾರುಗಳನ್ನು ಮಾರಾಟ ಮಾಡಿದೆ. ಅಕ್ಟೋಬರ್‌ನಲ್ಲಿ ಒಟ್ಟು ಪ್ಯಾಸೆಂಜರ್ ಎಲೆಕ್ಟ್ರಿಕ್ ಕಾರ್ ಮಾರಾಟದಲ್ಲಿ ಶೇ30 ರಷ್ಟು ಕೊಡುಗೆ ಎಂಜಿ ವಿಂಡ್ಸರ್‌ನದ್ದಾಗಿದೆ ಎಂದು ಕಂಪನಿ ಹೇಳಿಕೊಂಡಿದೆ.
ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.


Click it and Unblock the Notifications








