ಚೀನಾ ಕಾರಿಗೆ ಮುಗಿಬಿದ್ದ ಜನ: ಬೆಂಗಳೂರು, ಚೆನ್ನೈನಲ್ಲಿ ಒಂದೇ ದಿನ 202 ಕಾರುಗಳ ಡೆಲಿವರಿ!
ಭಾರತದಲ್ಲಿ JSW ಪಾಲುದಾರಿಕೆಯಲ್ಲಿ ಮುಂದುವರಿಯುತ್ತಿರುವ ಎಂಜಿ ಮೋಟಾರ್, ಇತ್ತೀಚೆಗೆ ಬಿಡುಗಡೆ ಮಾಡಿರುವ ಎಂಜಿ ವಿಂಡ್ಸರ್ (MG Windsor) ಕಾರುಗಳು ಭರ್ಜರಿ ಮಾರಾಟ ಕಾಣುತ್ತಿದೆ. ಇತ್ತೀಚೆಗೆ ಒಂದೇ ದಿನದಲ್ಲಿ ಬೆಂಗಳೂರಿನಲ್ಲಿ 101 ಹಾಗೂ ಚೆನ್ನೈನಲ್ಲಿ 101 ಕಾರುಗಳ ಮೆಗಾ ಡೆಲಿವರಿ ನೀಡಲಾಗಿದೆ. ಈ ಹೊಸ ಕಾರಿಗೆ ದಿನ ಕಳೆದಂತೆ ದೇಶದಲ್ಲಿ ಬೇಡಿಕೆ ಹೆಚ್ಚಾಗುತ್ತಲೇ ಇದೆ. ವಿಂಡ್ಸರ್ ಇತ್ತೀಚೆಗೆ ಬುಕ್ಕಿಂಗ್ ಘೋಷಣೆಯಾದ 24 ಗಂಟೆಗಳಲ್ಲಿ 15,176 ಬುಕಿಂಗ್‌ಗಳನ್ನು ಗಳಿಸುವ ಮೂಲಕ ಭಾರತದಲ್ಲಿ ಮೊದಲ ಪ್ರಯಾಣಿಕ EV ಎಂಬ ಹೆಗ್ಗಳಿಕೆಯನ್ನು ಪಡೆದಿದೆ.
ಹೊಸ MG ವಿಂಡ್ಸರ್ ಬೆಲೆಯು ಭಾರತದಲ್ಲಿ ರೂ. 13,49,800 (ಎಕ್ಸ್ ಶೋ ರೂಂ)ನಿಂದ ಪ್ರಾರಂಭವಾಗುತ್ತದೆ. ಅನನ್ಯ ಬ್ಯಾಟರಿ ಸೇವೆಯಾಗಿ BaaS (ಬ್ಯಾಟರಿ ಆಸ್ ಎ ಸರ್ವಿಸ್) ಪ್ರೋಗ್ರಾಂ ಅಡಿಯಲ್ಲಿ, ಇದು ರೂ. 9.99 ಲಕ್ಷ ಸೇರಿದಂತೆ ಬ್ಯಾಟರಿ ಬಾಡಿಗೆಯು ಪ್ರತಿ ಕಿ.ಮೀಗೆ ರೂ. 3.5 ನಲ್ಲಿ ಲಭ್ಯವಿದೆ. ಎಕ್ಸೈಟ್, ಎಕ್ಸ್‌ಕ್ಲೂಸಿವ್ ಮತ್ತು ಎಸೆನ್ಸ್ ಎಂಬ ಮೂರು ವೆರಿಯೆಂಟ್‌ಗಳಲ್ಲಿ ಖರೀದಿಸಬಹುದಾಗಿದ್ದು, ನಾಲ್ಕು ಬಣ್ಣಗಳ ಆಯ್ಕೆಯನ್ನು ಹೊಂದಿದೆ.

ಈ ಕಾರು ಒಂದೇ ಚಾರ್ಜ್‌ನಲ್ಲಿ 332 ಕಿಮೀ ಪ್ರಮಾಣೀಕೃತ ರೇಂಜ್ ಹೊಂದಿದೆ. ಈ ಎಂಜಿ ವಿಂಡ್ಸರ್ ಇವಿ 38 ಕೆಡಬ್ಲ್ಯೂಹೆಚ್ (kWh) ಸಾಮರ್ಥ್ಯದ ಬ್ಯಾಟರಿ ಪ್ಯಾಕ್ ಆಯ್ಕೆಯನ್ನು ಹೊಂದಿದೆ. ಇದರಲ್ಲಿರುವ ಸಿಂಗಲ್ ಎಲೆಕ್ಟ್ರಿಕ್ ಮೋಟಾರ್ 134 ಬಿಹೆಚ್ ಪವರ್ ಹಾಗೂ 200 ಎನ್ಎಂ ಪೀಕ್ ಟಾರ್ಕ್ ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದೆ.
ಈ ಕಾರು ಮಾರಾಟದಲ್ಲಿ ಕಂಪನಿ ಈವರೆಗೆ ನೋಡಿರದ ಲಾಭವನ್ನು ತಂದುಕೊಡುತ್ತಿದೆ. ಕಳೆದ ಅಕ್ಟೋಬರ್ 2024 ರಲ್ಲಿ ಗಮನಾರ್ಹವಾದ ಮಾರಾಟವನ್ನು ದಾಖಲಿಸಿದ್ದು, ಕಂಪನಿಯು 3,116 ಕಾರುಗಳನ್ನು ಮಾರಾಟ ಮಾಡಿದೆ. ಅಕ್ಟೋಬರ್‌ನಲ್ಲಿ ಒಟ್ಟು ಪ್ಯಾಸೆಂಜರ್ ಎಲೆಕ್ಟ್ರಿಕ್ ಕಾರ್ ಮಾರಾಟದಲ್ಲಿ ಶೇ30 ರಷ್ಟು ಕೊಡುಗೆ ಎಂಜಿ ವಿಂಡ್ಸರ್‌ನದ್ದಾಗಿದೆ ಎಂದು ಕಂಪನಿ ಹೇಳಿಕೊಂಡಿದೆ.

ಫೀಚರ್ಸ್: ಏರೋ ಲೌಂಜ್ ಆಸನಗಳು ಅವುಗಳ 135° ರಿಕ್ಲೈನ್ ಸಾಮರ್ಥ್ಯದೊಂದಿಗೆ ಬರುತ್ತವೆ. MG-Jio ಇನ್ನೋವೇಟಿವ್ ಕನೆಕ್ಟಿವಿಟಿ ಪ್ಲಾಟ್‌ಫಾರ್ಮ್ (ICP) ನೊಂದಿಗೆ ಸ್ಮಾರ್ಟ್ ಸಂಪರ್ಕ ಮತ್ತು ಇನ್ - ಕಾರ್ ತಂತ್ರಜ್ಞಾನವನ್ನು ಹೊಂದಿದೆ. ಹೋಮ್ - ಟು - ಕಾರ್ ಕಾರ್ಯನಿರ್ವಹಣೆ ಮತ್ತು 100 ಕ್ಕೂ ಹೆಚ್ಚು AI- ವಾಯಿಸ್ ಕಮಾಂಡ್‌ಗಳಂತಹ ಸುಧಾರಿತ ವೈಶಿಷ್ಟ್ಯಗಳನ್ನು ನೀಡಲಾಗಿದೆ.
15.6-ಇಂಚಿನ ಗ್ರ್ಯಾಂಡ್‌ವ್ಯೂ ಟಚ್ ಡಿಸ್‌ಪ್ಲೇ, ರಿಯಲ್ ಟೈಮ್ ನ್ಯಾವಿಗೇಷನ್, ಆಟೋಮೆಟಿಕ್ ಕ್ಲೈಮೆಟ್ ಕಂಟ್ರೋಲ್, ಆಂಬಿಯೆಂಟ್ ಲೈಟಿಂಗ್, ವೈರ್‌ಲೆಸ್ ಫೋನ್ ಚಾರ್ಜಿಂಗ್ ಪೋರ್ಟ್, ಕೀಲೆಸ್ ಎಂಟ್ರಿ ಮತ್ತು ಪುಶ್-ಬಟನ್ ಸ್ಟಾರ್ಟ್ ಜೊತೆಗೆ ರಿಮೋಟ್ ವೆಹಿಕಲ್ ಕಂಟ್ರೋಲ್ ಮತ್ತು ಸುರಕ್ಷತಾ ಎಚ್ಚರಿಕೆಗಳು ಸೇರಿದಂತೆ 80 ಕ್ಕೂ ಹೆಚ್ಚು ಸಂಪರ್ಕಿತ ವೈಶಿಷ್ಟ್ಯಗಳನ್ನು ಒಳಗೊಂಡಿದೆ.

ಇದರ ಇನ್ಫಿನಿಟಿ ವ್ಯೂ ಗ್ಲಾಸ್ ರೂಫ್ ಮತ್ತು 2700 ಎಂಎಂನ ಅತ್ಯುತ್ತಮ ವೀಲ್‌ಬೇಸ್ ಐಷಾರಾಮಿ ಪ್ರಯಾಣ ಅನುಭವ ಹೆಚ್ಚಿಸುತ್ತದೆ. ಹೊಸ ಎಂಜಿ ವಿಂಡ್ಸರ್ ವಿಸ್ತಾರವಾದ 604 - ಲೀಟರ್ ಬೂಟ್ ಸ್ಪೇಸ್ ಹೊಂದಿದ್ದು, ಲಗೇಜ್‌ಗೆ ಸಾಕಷ್ಟು ಸ್ಥಳಾವಕಾಶವನ್ನು ಒದಗಿಸುತ್ತದೆ. ವಿಂಡ್ಸರ್ IP67-ಪ್ರಮಾಣೀಕೃತ 38kWh ಬ್ಯಾಟರಿಯನ್ನು ಹೊಂದಿದ್ದು, ಇದು ಬಾಳಿಕೆ ಮತ್ತು ಸುರಕ್ಷತೆಯನ್ನು ಖಾತ್ರಿಪಡಿಸುತ್ತದೆ ಎಂದು ಕಂಪನಿ ಭರವಸೆ ನೀಡಿದೆ.
ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊ ಗಳನ್ನು ಪಡೆಯಲು ನಮ್ಮ ಫೇಸ್ ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.


Click it and Unblock the Notifications








