MG ಮೋಟಾರ್‌ನ ಹೊಸ ಕಾರಿದು: ಭಾರತದ ಮೊದಲ CUV... ವಿಶೇಷತೆಗಳೇನು?

ಜೆಎಸ್‌ಡಬ್ಲ್ಯು ಎಂಜಿ ಮೋಟಾರ್ (JSW MG Motor) ಇಂಡಿಯಾ ತನ್ನ ಮುಂಬರುವ ಮಾದರಿಯದ ಭಾರತದ ಮೊದಲ ಕ್ರಾಸ್ಒವರ್ ಯುಟಿಲಿಟಿ ವೆಹಿಕಲ್ (CUV) ಹೆಸರು "ವಿಂಡ್ಸರ್" ಎಂದು ಘೋಷಿಸಿದೆ. ಈ ಹೊಸ ಕಾರಿನ ಹೆಸರನ್ನು 'ಜನಪ್ರಿಯ ರಾಜಮನೆತನದ ಲಾಂಛನವಾದ - ವಿಂಡ್ಸರ್ ಕ್ಯಾಸಲ್‌ನಿಂದ ಸ್ಫೂರ್ತಿಯಾಗಿ ಪಡೆಯಲಾಗಿದೆ. ಪೌರಾಣಿಕ ಕೋಟೆಯಂತೆಯೇ, MG ವಿಂಡ್ಸರ್ ಅದರ ಭವ್ಯವಾದ ವಿನ್ಯಾಸದೊಂದಿಗೆ, ಕಾರಿನ ಪ್ರತಿಯೊಂದು ಅಂಶವು ಪ್ರೀಮಿಯಂ ಗುಣಮಟ್ಟ ಮತ್ತು ಐಷಾರಾಮಿತನವನ್ನು ಪ್ರತಿಬಿಂಬಿಸುತ್ತದೆ ಎಂದು ಎಂಜಿ ಮೋಟಾರ್ ತಿಳಿಸಿದೆ. ಹೊಸ ಕಾರಿನ ಹೆಚ್ಚಿನ ವಿವರಗಳನ್ನು ಇಲ್ಲಿ ನೋಡೋಣ.

ಏನಿದು ವಿಂಡ್ಸರ್ ಕ್ಯಾಸಲ್: ವಿಂಡ್ಸರ್ ಕ್ಯಾಸಲ್ ಎಂಬುದು ಬರ್ಕ್‌ಷೈರ್‌ನ ಇಂಗ್ಲಿಷ್ ಕೌಂಟಿಯ ವಿಂಡ್ಸರ್‌ನಲ್ಲಿರುವ ರಾಜಮನೆತನದ ನಿವಾಸವಾಗಿದೆ. ಇದು ಬ್ರಿಟಿಷ್ ರಾಜಮನೆತನದೊಂದಿಗೆ ಬಲವಾದ ಸಂಬಂಧ ಹೊಂದಿದ್ದು, ಸಹಸ್ರಮಾನದ ವಾಸ್ತುಶಿಲ್ಪದ ಇತಿಹಾಸವನ್ನು ಒಳಗೊಂಡಿದೆ. ಜಾಗತಿಕವಾಗಿ ಅತಿ ದೊಡ್ದ ಜನವಸತಿ ಕೋಟೆ ಎಂದು ಜನಪ್ರಿಯವಾಗಿರುವ 'ವಿಂಡ್ಸರ್ ಕ್ಯಾಸಲ್' ಇಂಗ್ಲೆಂಡ್‌ನ ಅತಿ ದೊಡ್ಡ ಕೋಟೆ ಎಂಬ ಹೆಗ್ಗಳಿಕೆಯನ್ನು ಪಡೆದಿದೆ.

mg-motor-revealed-indias-1st-cuv-car-name

ಈ ಕೋಟೆಯ ಹೆಸರನ್ನೇ ಈಗ ಎಂಜಿ ಮೋಟಾರ್ ತನ್ನ ಮುಂಬರುವ ಹೊಸ ಕಾರಿಗೆ ಇಟ್ಟಿದೆ. ಶತಮಾನಗಳ ರಾಜಮನೆತನದ ಇತಿಹಾಸದೊಂದಿಗೆ ಈ ಐಕಾನಿಕ್ ವಿಂಡ್ಸರ್ ಕಾರು, ಐತಿಹಾಸಿಕ ಭವ್ಯತೆ ಮತ್ತು ಈಗಿನ ಕಾಲದ ಮಾರ್ಪಾಡುಗಳ ಸಂಯೋಜನೆಯನ್ನು ಪ್ರದರ್ಶಿಸುತ್ತದೆ. ಆರಾಮ, ಮೌಲ್ಯ ಮತ್ತು ವರ್ಗ ಎರಡನ್ನೂ ಹುಡುಕುವ ಗ್ರಾಹಕರಿಗೆ ಪ್ರೀಮಿಯಂ ಕೊಡುಗೆಯಾಗಿದ್ದು, ಇತ್ತೀಚಿನ ವರ್ಷಗಳಲ್ಲಿ ನೀವು ನೋಡಬಹುದಾದ ಅದ್ಬುತ ವಾಹನವಾಗಲಿದೆ ಎಂದು ಕಂಪನಿ ಭರವಸೆ ನೀಡಿದೆ.

CUV ಗಳು ವಾಯುಬಲವೈಜ್ಞಾನಿಕ ವಿನ್ಯಾಸ (Aerodynamic design) ಮತ್ತು ವಿಶಾಲವಾದ ಒಳಾಂಗಣಗಳ ಪರಿಪೂರ್ಣ ಮಿಶ್ರಣವನ್ನು ನೀಡುತ್ತವೆ. ನಗರ ರಸ್ತೆಗಳಾಗಿರಲಿ ಅಥವಾ ಸಣ್ಣ ಪಟ್ಟಣಗಳಲ್ಲಾಗಿರಲಿ ಓಡಿಸಬಹುದಾದ ಸಾಮರ್ಥ್ಯವನ್ನು 'ವಿಂಡ್ಸರ್' ಹೊಂದಿದೆ. ಬಹುಮುಖತೆ ಮತ್ತು ಹೊಂದಿಕೊಳ್ಳುವಿಕೆಯಿಂದಾಗಿ, ಕುಟುಂಬಗಳು ಸೌಕರ್ಯದಲ್ಲಿ ಪ್ರಯಾಣಿಸಬಹುದು ಎಂಜಿ ಮೋಟಾರ್ ಹೇಳಿಕೊಂಡಿದೆ.

mg-motor-revealed-indias-1st-cuv-car-name

JSW MG ಮೋಟಾರ್ ಇಂಡಿಯಾದ ಮುಖ್ಯ ವಾಣಿಜ್ಯ ಅಧಿಕಾರಿ ಸತೀಂದರ್ ಸಿಂಗ್ ಬಜ್ವಾ ಮಾತನಾಡಿ, "ನಮ್ಮ ಮುಂಬರುವ CUV: MG ವಿಂಡ್ಸರ್ ಹೆಸರನ್ನು ಬಹಿರಂಗಪಡಿಸಲು ನಾವು ಉತ್ಸುಕರಾಗಿದ್ದೇವೆ. ವಿಂಡ್ಸರ್ ಕ್ಯಾಸಲ್ ವಿಶ್ವಾದ್ಯಂತ ರಾಜಮನೆತನದ ಮತ್ತು ವೈಭವದ ಸಂಕೇತವಾಗಿ ಪ್ರಸಿದ್ಧವಾಗಿದೆ, ಇದು ಈ CUV ಯ ಪ್ರತಿಯೊಂದು ವಿವರವನ್ನು ಪ್ರತಿಬಿಂಬಿಸುತ್ತದೆ ಎಂದರು.

ಇದು ಪ್ರೀಮಿಯಂ ಮತ್ತು ವಿಶಾಲತೆಯನ್ನು ಹೊಂದಿರುವುದರ ಜೊತೆಗೆ ಸುಧಾರಿತ ತಂತ್ರಜ್ಞಾನದ ಕೊಡುಗೆಗಳು ಮತ್ತು ಫ್ಯೂಚರಿಸ್ಟಿಕ್ ಹೊರಭಾಗದ ವಿನ್ಯಾಸವು ಕಾರಿನ ಆಕರ್ಷಣೆಯನ್ನು ಮತ್ತಷ್ಟು ಹೆಚ್ಚಿಸಿದೆ. ಎಂಜಿ ವಿಂಡ್ಸರ್ ಸೆಡಾನ್‌ನ ಸೌಕರ್ಯ ಮತ್ತು ಎಸ್‌ಯುವಿಯ ವಿಸ್ತಾರತೆಯಿಂದ ಉತ್ತಮ ಗ್ರಾಹಕ ನೆಲೆಯನ್ನು ಆಕರ್ಷಿರುವ ವಿಶ್ವಾಸವಿದೆ ಎಂದರು.

mg-motor-revealed-indias-1st-cuv-car-name

ಬ್ರಿಟಿಷ್ ಮೂಲದ ಚೀನಾ ಒಡೆತನದಲ್ಲಿರುವ ಎಂಜಿ ಮೋಟಾರ್ ಸದ್ಯ ಭಾರತದಲ್ಲಿ ತನ್ನ ಮಾರುಕಟ್ಟೆಯನ್ನು ವಿಸ್ತರಸಲು JSW ನೊಂದಿಗೆ ಒಪ್ಪಂದ ಮಾಡಿಕೊಂಡಿದೆ. ಭಾರತದಲ್ಲಿ ಇನ್ನುಮುಂದೆ ಬಿಡುಗಡೆಯಾಗಲಿರುವ ಕಾರುಗಳು JSW MG ಮೋಟಾರ್ ಅಡಿಯಲ್ಲಿ ಹೊರಬರಲಿವೆ. ಈ ಎರಡೂ ದೈತ್ಯ ಕಂಪನಿಗಳ ಅಡಿಯಲ್ಲಿ ಹಲವು ಕಾರುಗಳು ಮುಂಬರುವ ವರ್ಷಗಳಲ್ಲಿ ಬಿಡುಗಡೆಯಾಗಲಿವೆ.

ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊ ಗಳನ್ನು ಪಡೆಯಲು ನಮ್ಮ ಫೇಸ್‌ ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.

More from DriveSpark

Article Published On: Friday, August 2, 2024, 15:54 [IST]
English summary
Mg motor revealed indias 1st cuv car name
Read more on mg motor india
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+