ವಿಮಾನದಂತೆ ಸೌಕರ್ಯವಿರುವ ಕಡಿಮೆ ಬೆಲೆಯ ಎಂಜಿ ಕಾರು ಮನೆಗೆ ತರಲು EMI, ಆನ್ ರೋಡ್ ಬೆಲೆ ಎಷ್ಟು?

ಭಾರತೀಯ ಮಾರುಕಟ್ಟೆಯಲ್ಲಿ ಗ್ಲೋಸ್ಟರ್, ಹೆಕ್ಟರ್ ಪ್ಲಸ್, ಕಾಮೆಟ್ ಇವಿ ಸೇರಿದಂತೆ ವಿವಿಧ ಕಾರುಗಳನ್ನು ಮಾರಾಟ ಮಾಡುತ್ತಿದೆ. ಈ ನಡುವೆ ಜನಪ್ರಿಯ ವಾಹನ ತಯಾರಕ ಸಂಸ್ಥೆಯಾಗಿ ಗುರುತಿಸಿಕೊಂಡ ಎಂಜಿ ತನ್ನ ಎಲೆಕ್ಟ್ರಿಕ್ ಕಾರುಗಳ ಸರಣಿಯನ್ನು ವಿಸ್ತರಿಸಿದೆ. ಇದರ ಭಾಗವಾಗಿ ಎಂಜಿ ಕಂಪನಿಯು ವಿಂಡ್ಸರ್ ಇವಿ (Windsor EV) ಮಾದರಿಯನ್ನು ಬಿಡುಗಡೆಗೊಳಿಸಿ ಹೊಸ ಸಂಚಲನವನ್ನು ಸೃಷ್ಟಿಸಿತು. ಈ ಹೊಸ ಎಂಜಿ ಕಾರು ಕೈಗೆಟುಕುವ ಬೆಲೆ ಹಾಗೂ ಆಕರ್ಷಕ ಫೀಚರ್ಸ್ ಗಳೊಂದಿಗೆ ಖರೀದಿಗೆ ದೊರೆಯಲಿದ್ದು, ಹೆಚ್ಚಿನ ಸಂಖ್ಯೆಯಲ್ಲಿ ಗ್ರಾಹಕರು ಕೂಡ ಇಷ್ಟಪಟ್ಟು ಬುಕ್ ಮಾಡುತ್ತಿದ್ದಾರೆ.

ಎಂಜಿ ಮೋಟಾರ್ ಕಂಪನಿಯು ಇದೀಗ ವಿಂಡ್ಸರ್ ಇವಿ ಕಾರಿನ ವಿತರಣೆಯನ್ನು ಪ್ರಾರಂಭಿಸಿದ್ದಾರೆ. ಇತ್ತೀಚೆಗೆ ಒಂದೇ ಬಾರೀ ಎಂಜಿ 101 ಕಾರುಗಳನ್ನು ಡೆಲಿವರಿ ನೀಡಿದೆ. ಈ ಹೊಸ ಕ್ರಾಸ್ಒವರ್ ಯುಟಿಲಿಟಿ ವಾಹನವನ್ನು, ಬೆಂಗಳೂರಿನ ಎಂಜಿ ಜುಬಿಲಂಟ್ ಮೂಲಕ ವಿತರಿಸಿದೆ. ಬುಕ್ಕಿಂಗ್ ಪ್ರಾರಂಭವಾಗಿ ಮೊದಲ ದಿನವೇ 15,176 ಬುಕ್ಕಿಂಗ್ ಗಳನ್ನು ಪಡೆದು ಮೈಲುಗಲ್ಲು ಸಾಧಿಸಿತು. ಈ ಕಾರಿನ ಇಎಂಐ ಮತ್ತು ಆನ್ ರೋಡ್ ಬೆಲೆಯ ಬಗ್ಗೆ ಇಲ್ಲಿದೆ ಮಾಹಿತಿ.

MG Windsor EV

ಎಂಜಿ ವಿಂಡ್ಸರ್ ರೂ 9.99 ಲಕ್ಷದ ಆರಂಭಿಕ ಬೆಲೆಯೊಂದಿಗೆ ಬಾಸ್ (Baas) ಬ್ಯಾಟರಿ ಬಾಡಿಗೆ ಯೋಜನೆಯೊಂದಿಗೆ ಬಿಡುಗಡೆ ಮಾಡಲಾಗಿದೆ. ನೀವು ಈ ಕಾರನ್ನು ಎಕ್ಸ್ ಶೋರೂಂ ಬೆಲೆ ರೂ.13,49,800 ಲಕ್ಷದಲ್ಲಿ ಸಂಪೂರ್ಣವಾಗಿ ಖರೀದಿಸಬಹುದು ಮತ್ತು ಆನ್-ರೋಡ್ ಬೆಲೆಯು ರೂ.14,76,445 ಆಗಿದೆ. ಈ ಕಾರಿನ ಲೋ ವೆರಿಯೆಂಟ್ ಮಾದರಿಗೆ 9.8 % ಬಡ್ಡಿ ದರದಲ್ಲಿ ಐದು ವರ್ಷದ ಲೋನ್‌ ಮಾಡಿದರೆ ಪ್ರತಿ ತಿಂಗಳು ನೀವು ರೂ.28,095 ಗಳಷ್ಟು ಇಎಂಐ ಪಾವತಿಸಬೇಕು.

ಎಂಜಿ ವಿಂಡ್ಸರ್ (MG Windsor) ಎಲೆಕ್ಟ್ರಿಕ್ ಕಾರಿನ ಡೌನ್ ಪೇಮೆಂಟ್ ರೂ.1,48,000 ಆಗಿದೆ. ಇನ್ನು ವಿಶೇಷವಾಗಿ ಜೆಎಸ್‌ಡಬ್ಲ್ಯೂ (JSW) ಹಾಗೂ ಎಂಜಿ ಮೋಟಾರ್ (MG Motor) ಪಾಲುದಾರಿಕೆಯಲ್ಲಿ ಬಿಡುಗಡೆಯಾಗುತ್ತಿರುವ ಮೊದಲ ಕಾರು ಇದಾಗಿದೆ. ಈ ಎಂಜಿ ವಿಂಡ್ಸರ್ ಇವಿ ಕಾರಿನ ಬಗ್ಗೆ ಹೇಳುವುದಾರೆ, ಈ ಕಾರು ಟರ್ಕೋಯಿಸ್ ಗ್ರೀನ್, ಪರ್ಲ್ ವೈಟ್, ಕ್ಲೇ ಬೀಜ್ ಹಾಗೂ ಸ್ಟಾರ್‌ಬರ್ಸ್ಟ್ ಬ್ಲ್ಯಾಕ್ ಎಂಬ ಬಣ್ಣಗಳ ಆಯ್ಕೆಗಳಲ್ಲಿ ಲಭ್ಯವಿದೆ.

MG Windsor EV

ಈ ವಿಂಡ್ಸರ್ ಇವಿ ಹೊರಭಾಗದಲ್ಲಿ ಅತ್ಯಾಕರ್ಷಕವಾದ ವಿನ್ಯಾಸವನ್ನು ಹೊಂದಿದೆ. ಈ ಎಂಜಿ ವಿಂಡ್ಸರ್ ಇವಿ ಕಾರು ಸ್ಪ್ಲಿಟ್ ಎಲ್ಇಡಿ ಹೆಡ್‌ಲ್ಯಾಂಪ್‌ಗಳು, ಎಲ್ಇಡಿ ಡಿಆರ್‌ಎಲ್‌ಗಳು, ಪ್ರೊಜೆಕ್ಟರ್ ಹೆಡ್‌ಲೈಟ್‌ಗಳು, ಮುಂಭಾಗ (ಫ್ರಂಟ್) ಹಾಗೂ ಹಿಂಭಾಗ (ರೇರ್) ಎಲ್ಇಡಿ ಲೈಟ್ ಬಾರ್‌ಗಳನ್ನು ಹೊಂದಿವೆ. ಇದರೊಂದಿಗೆ ಎಲ್-ಆಕಾರಕ್ಕೆ ಹೋಲಿಕೆಯಾಗುವ ಎಲ್ಇಡಿ ಟೈಲ್‌ಲೈಟ್‌ಗಳು, ಫ್ಲಶ್ ಫಿಟ್ಟಿಂಗ್ ಡೋರ್ ಹ್ಯಾಂಡಲ್‌ಗಳು, 18-ಇಂಚಿನ ಅಲಾಯ್ ವೀಲ್‌ಗಳು ಮತ್ತು 215/55 ಆರ್18 ಟೈಯರ್‌ಗಳನ್ನು ಹೊಂದಿದೆ.

ಈ ಎಂಜಿ ವಿಂಡ್ಸರ್ ಇವಿ ಕಾರಿನಲ್ಲಿ 15.6-ಇಂಚಿನ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಮ್, ಫುಲ್-ಡಿಜಿಟಲ್ ಇನ್ಸ್ಟ್ರುಮೆಂಟ್ ಕ್ಲಸ್ಟರ್, ಆಂಬಿಯೆಂಟ್ ಲೈಟಿಂಗ್ ಮತ್ತು ಆಟೋಮೆಟಿಕ್ ಕ್ಲೇಮೇಟ್ ಕಂಟ್ರೋಲ್ ಅನ್ನು ಹೊಂದಿದೆ. ಇದರೊಂದಿಗೆ ಆಂಬಿಯೆಂಟ್ ಲೈಟಿಂಗ್, ವೈರ್‌ಲೆಸ್ ಫೋನ್ ಚಾರ್ಜಿಂಗ್ ಪೋರ್ಟ್, ಕೀಲೆಸ್ ಎಂಟ್ರಿ ಮತ್ತು ಪುಶ್-ಬಟನ್ ಸ್ಟಾರ್ಟ್ ಸೇರಿದಂತೆ ವಿವಿಧ ವೈಶಿಷ್ಟ್ಯಗಳನ್ನು ಒಳಗೊಂಡಿದೆ.

MG Windsor EV

ಈ ಕಾರಿನಲ್ಲಿ ಇಕೋ, ಇಕೋ ಪ್ಲಸ್, ನಾರ್ಮಲ್ ಹಾಗೂ ಸ್ಪೋರ್ಟ್ ಎಂಬ ಡ್ರೈವಿಂಗ್ ಮೋಡ್‌ಗಳನ್ನು ಪಡೆದಿವೆ. ಹೊಸ ವಿಂಡ್ಸರ್ ಎಲೆಕ್ಟ್ರಿಕ್ ಕಾರು ಪ್ರಯಾಣಿಕರಿಗೆ ಗರಿಷ್ಠ ರಕ್ಷಣೆ ಒದಗಿಸುತ್ತದೆ. ಸುರಕ್ಷತೆಯ ಸಲುವಾಗಿ 6-ಏರ್‌ಬ್ಯಾಗ್‌ಗಳು, ಟಿಪಿಎಂಎಸ್ (ಟೈರ್ ಪ್ರೆಶರ್ ಮಾನಿಟರಿಂಗ್ ಸಿಸ್ಟಮ್), ಇಎಸ್‌ಸಿ (ಎಲೆಕ್ಟ್ರಾನಿಕ್ ಸ್ಟೆಬಿಲಿಟಿ ಕಂಟ್ರೋಲ್) ಹಾಗೂ 360-ಡಿಗ್ರಿ ಕ್ಯಾಮೆರಾವನ್ನು ಹೊಂದಿದೆ. ಆದರೆ ಎಡಿಎಎಸ್ (ಅಡ್ವಾನ್ಸ್ಡ್ ಡ್ರೈವರ್ ಅಸಿಸ್ಟೆನ್ಸ್ ಸಿಸ್ಟಮ್) ಫೀಚರ್ ಹೊಂದಿಲ್ಲ.

ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.

More from DriveSpark

Article Published On: Sunday, November 3, 2024, 15:30 [IST]
English summary
Mg windsor ev emi and on road price details
Read more on mg motor india
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+