ಎಂಜಿ ವಿಂಡ್ಸರ್ ಇವಿ ಶೀಘ್ರದಲ್ಲೇ ಬಿಡುಗಡೆ: ಬೆಲೆ ಎಷ್ಟು, ಬಿಡುಗಡೆ ಯಾವಾಗ?
ಭಾರತದಲ್ಲಿ ಎಂಜಿ ಮೋಟಾರ್ ಇತ್ತೀಚೆಗೆ ಭಾರೀ ಜನಪ್ರಿಯತೆ ಪಡೆಯುತ್ತಿದೆ. ಎಂಜಿ ಕಾಮೆಟ್ ಇವಿನಂತಹ ಕೈಗೆಟುಕುವ ಎಲೆಕ್ಟ್ರಿಕ್ ಕಾರುಗಳನ್ನು ಪರಿಚಯಿಸುವ ಮೂಲಕ ಕೇವಲ ಪ್ರೀಮಿಯಂ ಕಾರುಗಳು ಮಾತ್ರವಲ್ಲದೇ ಮಧ್ಯಮ ವರ್ಗದವರ ಬ್ರಾಂಡ್ ಆಗಿ ಗುರ್ತಿಸಿಕೊಳ್ಳುತ್ತಿದೆ. ಇದೀಗ ಹೊಸ ಫ್ಯಾಮಿಲಿ ಕಾರನ್ನು ಬಿಡುಗಡೆ ಮಾಡಲು ಸಜ್ಜಾಗುತ್ತಿದೆ. ಅಂದಹಾಗೆ ವುಲಿಂಗ್ ಕ್ಲೌಡ್ ಇವಿ ಎಂದು ಕರೆಯಲ್ಪಡುವ ಕ್ರಾಸ್ಒವರ್ ಎಂಪಿವಿಯನ್ನು ಭಾರತದಲ್ಲಿ ವಿಂಡ್ಸರ್ ಇವಿ ಹೆಸರಿನಲ್ಲಿ ಬಿಡುಗಡೆ ಮಾಡಲು ಸಜ್ಜಾಗಿದೆ. ಈ ಕಾರು ಕಾಮೆಟ್ ಮತ್ತು ಝಡ್ಎಸ್ ಇವಿ ನಂತರ ಭಾರತದಲ್ಲಿ ಎಂಜಿ ಮೋಟಾರ್ ಕಂಪನಿಯ ಮೂರನೇ ಇವಿಯಾಗಲಿದೆ.
ಬೆಲೆ ಮತ್ತು ಬಿಡುಗಡೆ ದಿನಾಂಕ: ವೆಚ್ಚವನ್ನು ಕಡಿಮೆ ಮಾಡಲು ಬ್ಯಾಟರಿ ಪ್ಯಾಕ್ ಸೇರಿದಂತೆ ವಿಂಡ್ಸರ್ ಇವಿಯ ಅನೇಕ ಘಟಕಗಳನ್ನು ಸ್ಥಳೀಕರಿಸುವ ಗುರಿಯನ್ನು ಎಂಜಿ ಹೊಂದಿದೆ. ಈ ಕಾರನ್ನು ಭಾರತದಲ್ಲಿ 20 ಲಕ್ಷ ರೂ.ಗಿಂತ ಕಡಿಮೆ ಬೆಲೆಗೆ ಬಿಡುಗಡೆ ಮಾಡುವ ನಿರೀಕ್ಷೆಯಿದೆ. ನಿಖರವಾದ ಬಿಡುಗಡೆಯ ದಿನಾಂಕವನ್ನು ಘೋಷಿಸಲಾಗಿಲ್ಲವಾದರೂ, ಇದು ಆಗಸ್ಟ್ ಕೊನೆಯಲ್ಲಿ ಅಥವಾ ಸೆಪ್ಟೆಂಬರ್ ಆರಂಭದಲ್ಲಿ ಬಿಡುಗಡೆಯಾಗಬಹುದು.

ವೈಶಿಷ್ಟ್ಯಗಳು: ಎಂಜಿ ವಿಂಡ್ಸರ್ ಇವಿ ದೊಡ್ಡ ಫ್ಲೋಟಿಂಗ್ ಟಚ್ ಸ್ಕ್ರೀನ್ ಅನ್ನು ಹೊಂದಿದೆ, ಇದರ ಅಂತರರಾಷ್ಟ್ರೀಯ ಮಾದರಿಯು "ಸೋಫಾ ಮೋಡ್" ಗೆ ಸಂಪೂರ್ಣವಾಗಿ ಮಲಗಬಲ್ಲ ಮುಂಭಾಗದ ಆಸನಗಳನ್ನು ಒಳಗೊಂಡಿದೆ. ಅದೇ ರೀತಿಯ ಆಸನಗಳನ್ನು ಭಾರತೀಯ ಮಾದರಿಯಲ್ಲೂ ನಿರೀಕ್ಷಿಸಲಾಗಿದೆ. ಟೀಸರ್ ವೀಡಿಯೊಗಳಲ್ಲಿ ಸನ್‌ರೂಫ್ ಮತ್ತು 360-ಡಿಗ್ರಿ ಕ್ಯಾಮೆರಾದೊಂದಿಗೆ ADAS ಇರುವುದನ್ನು ಬಹಿರಂಗಗೊಂಡಿದ್ದವು.
ಬ್ಯಾಟರಿ ಆಯ್ಕೆಗಳು ಮತ್ತು ರೇಂಜ್: ವಿಂಡ್ಸರ್ ಇವಿ ವಿದೇಶದಲ್ಲಿ 360 ಕಿ.ಮೀ ರೇಂಜ್ ಒದಗಿಸುವ 37.9 ಕಿಲೋವ್ಯಾಟ್ ಪ್ಯಾಕ್ ಮತ್ತು 460 ಕಿ.ಮೀ ವರೆಗೆ ನೀಡುವ 50.6 ಕಿಲೋವ್ಯಾಟ್ ಪ್ಯಾಕ್ ಎಂಬ ಎರಡು ಬ್ಯಾಟರಿ ಪ್ಯಾಕ್ ಆಯ್ಕೆಗಳನ್ನು ನೀಡುತ್ತದೆ. ಜೊತೆಗೆ 134 ಬಿಹೆಚ್‌ಪಿ ಪವರ್ ಹೊರಹಾಕುವ ಫ್ರಂಟ್ ಆಕ್ಸಲ್ ಮೌಂಟೆಡ್ ಪರ್ಮನೆಂಟ್ ಮ್ಯಾಗ್ನೆಟ್ ಸಿಂಕ್ರೊನಸ್ ಮೋಟರ್ ಅನ್ನು ಹೊಂದಿದೆ. ಭಾರತದಲ್ಲಿ ಯಾವ ರೀತಿಯ ಬ್ಯಾಟರಿ ನೀಡಲಾಗುವುದು ಎಂಬುದು ಇನ್ನೂ ದೃಢಪಟ್ಟಿಲ್ಲ.

ರೀಬ್ರಾಂಡ್ ಮಾಡಲಾದ ಕ್ಲೌಡ್ EV: ಮೊದಲೇ ಹೇಳಿದಂತೆ ಈ ವಿಂಡ್ಸರ್ ಇವಿ ವುಲಿಂಗ್ ಕ್ಲೌಡ್ ಇವಿ ಆವೃತ್ತಿಯಾಗಿದೆ. ಇದು ದೊಡ್ಡ ಹ್ಯಾಚ್‌ಬ್ಯಾಕ್ನಂತೆ ಕಾಣುವ ಎಂಪಿವಿಯ ಅಂಶಗಳನ್ನು ಒಳಗೊಂಡಿರುವ ಕಾರಾಗಿದೆ. ಎಂಪಿವಿ ತರಹದ ಡಿಸೈನ್ ಇದ್ದರೂ ಒಳಗೆ ಕೇವಲ ಎರಡು ಸಾಲುಗಳಲ್ಲಿ ಐದು ಜನರಿಗೆ ಆಸನವನ್ನು ನೀಡುತ್ತದೆ. ಸುಮಾರು 4.3 ಮೀಟರ್ ಉದ್ದ ಮತ್ತು 2,700 ಎಂಎಂ ವ್ಹೀಲ್ ಬೇಸ್ ಅನ್ನು ಹೊಂದಿದೆ.
ZS EV ಯೊಂದಿಗೆ ಹೋಲಿಕೆ ಝಡ್ಎಸ್ ಇವಿ ಮತ್ತು ವಿಂಡ್ಸರ್ ಇವಿ ತಮ್ಮ ವಿನ್ಯಾಸ ಮತ್ತು ಪ್ಲಾಟ್‌ಫಾರ್ಮ್‌ನಲ್ಲಿ ಗಮನಾರ್ಹವಾಗಿ ಭಿನ್ನವಾಗಿವೆ. ವಿಂಡ್ಸರ್ ಇವಿ ಸಣ್ಣ ಓವರ್ ಹ್ಯಾಂಗ್‌ಗಳು ಮತ್ತು ಉದ್ದನೆಯ ವ್ಹೀಲ್ ಬೇಸ್ ಅನ್ನು ಒಳಗೊಂಡಿರುವ ಬಾರ್ನ್-ಎಲೆಕ್ಟ್ರಿಕ್ ಸ್ಕೇಟ್‌ಬೋರ್ಡ್ ಪ್ಲಾಟ್ಫಾರ್ಮ್ ಅನ್ನು ಆಧರಿಸಿದ್ದರೇ, ಝಡ್ಎಸ್ ಇವಿ 'ಎಸ್‌ಯುವಿ' ವಿನ್ಯಾಸದೊಂದಿಗೆ ನವೀಕರಿಸಿದ ಐಸಿಇ ಎಂಜಿನ್ ಪ್ಲಾಟ್ ಫಾರ್ಮ್ ಅನ್ನು ಆಧರಿಸಿದೆ.

ಬ್ರಿಟಿಷ್ ಮೂಲದ ಚೀನಾ ಒಡೆತನದಲ್ಲಿರುವ ಎಂಜಿ ಮೋಟಾರ್ ಸದ್ಯ ಭಾರತದಲ್ಲಿ ತನ್ನ ಮಾರುಕಟ್ಟೆಯನ್ನು ವಿಸ್ತರಸಲು JSW ನೊಂದಿಗೆ ಒಪ್ಪಂದ ಮಾಡಿಕೊಂಡಿದೆ. ಭಾರತದಲ್ಲಿ ಇನ್ನುಮುಂದೆ ಬಿಡುಗಡೆಯಾಗಲಿರುವ ಕಾರುಗಳು JSW MG ಮೋಟಾರ್ ಅಡಿಯಲ್ಲಿ ಹೊರಬರಲಿವೆ. ಈ ಎರಡೂ ದೈತ್ಯ ಕಂಪನಿಗಳ ಅಡಿಯಲ್ಲಿ ಹಲವು ಕಾರುಗಳು ಮುಂಬರುವ ವರ್ಷಗಳಲ್ಲಿ ಬಿಡುಗಡೆಯಾಗಲಿವೆ.
ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊ ಗಳನ್ನು ಪಡೆಯಲು ನಮ್ಮ ಫೇಸ್ ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.


Click it and Unblock the Notifications








