ಕೇವಲ 10 ಲಕ್ಷಕ್ಕೆ ಪವರ್‌ಫುಲ್ ಪ್ರೀಮಿಯಂ ಕಾರು ಬಿಡುಗಡೆ ಮಾಡಿದ ಎಂಜಿ ಮೋಟಾರ್
ಭಾರತದಲ್ಲಿ ಎಂಜಿ ಮೋಟಾರ್ ಇತ್ತೀಚೆಗೆ ಭಾರೀ ಜನಪ್ರಿಯತೆ ಪಡೆಯುತ್ತಿದೆ. ಈ ಹಿಂದೆ ಭಾರತೀಯ ಆಟೋ ಉದ್ಯಮದಲ್ಲಿ ಗ್ರಾಹಕರ ಬೇಡಿಕೆಗಳನ್ನು ತಿಳಿಯದೆ ತುಸು ದುಬಾರಿ ಬೆಲೆಯಲ್ಲಿ ಗ್ಲೋಸ್ಟರ್, ಹೆಕ್ಟರ್ ಪ್ಲಸ್‌ನಂತಹ ಪ್ರೀಮಿಯಂ ಕಾರುಗಳನ್ನು ಬಿಡುಗಡೆ ಮಾಡಿತ್ತು. ಇದೀಗ ಕಡಿಮೆ ಬೆಲೆಗೆ ಉತ್ತಮ ಫೀಚರ್ಸ್ ಬಯಸುವ ಗ್ರಾಹಕರ ಅಗತ್ಯತೆಗಳನ್ನು ಕಂಪನಿ ಮನಗಂಡಿದೆ. ಅದರಂತೆ ದೇಶದ ಅತ್ಯಂತ ಅಗ್ಗದ ಹಾಗೂ ಪುಟ್ಟ ಎಲೆಕ್ಟ್ರಿಕ್ ಕಾರಾಗಿರುವ ಎಂಜಿ ಕಾಮೆಟ್ ಅನ್ನು ಬಿಡುಗಡೆ ಮಾಡಿದ ಬಳಿಕ, ಈಗ ಹೊಸ ವಿಂಡ್ಸರ್ ಇವಿ(MG Windsor EV) ಅನ್ನು ಲಾಂಚ್ ಮಾಡಿದೆ. ಇದರ ಬೆಲೆ, ಫೀಚರ್ಸ್, ಬ್ಯಾಟರಿ ವಿವರಗಳನ್ನು ಇಲ್ಲಿ ನೋಡೋಣ.
ಬೆಲೆ: ಹೊಸ ಎಂಜಿ ವಿಂಡ್ಸರ್ ಇವಿ ಬೆಲೆಯು ರೂ. 9.99 ಲಕ್ಷದಿಂದ ಪ್ರಾರಂಭವಾಗುತ್ತದೆ (ಎಕ್ಸ್-ಶೋ ರೂಂ). ಇದರ ಬುಕಿಂಗ್‌ಗಳು ಅಕ್ಟೋಬರ್ 3 ರಿಂದ ಪ್ರಾರಂಭವಾಗಲಿದ್ದು, ಡೆಲಿವರಿಗಳನ್ನು ಅಕ್ಟೋಬರ್ 12 ರಿಂದ ನಿಗದಿಪಡಿಸಲಾಗಿದೆ. ಇದು MG ಮೋಟಾರ್‌ನ ಭಾರತೀಯ EV ಪೋರ್ಟ್‌ಫೋಲಿಯೊದಲ್ಲಿ ಕಾಮೆಟ್ EV ಮತ್ತು ZS EV ನಡುವೆ ಇರುತ್ತದೆ.

ವಿಂಡ್ಸರ್ ಇವಿ 5-ಸೀಟರ್ ಎಲೆಕ್ಟ್ರಿಕ್ ಕ್ರಾಸ್‌ಒವರ್ ಫ್ಯಾಮಿಲಿ ಕಾರಾಗಿದೆ. MG ಇದನ್ನು ಎಕ್ಸೈಟ್, ಎಕ್ಸ್‌ಕ್ಲೂಸಿವ್ ಮತ್ತು ಎಸೆನ್ಸ್ ಎಂಬ ಮೂರು ವೇರಿಯೆಂಟ್‌ಗಳಲ್ಲಿ ನೀಡುತ್ತಿದೆ. ಇದು ವಿಶೇಷವಾಗಿ ಜೆಎಸ್‌ಡಬ್ಲ್ಯೂ (JSW) ಹಾಗೂ ಎಂಜಿ ಮೋಟಾರ್ (MG Motor) ಪಾಲುದಾರಿಕೆಯಲ್ಲಿ ಬಿಡುಗಡೆಯಾಗುತ್ತಿರುವ ಮೊದಲ ಕಾರಾಗಿರುವುದು ವಿಶೇಷ.
ಬ್ಯಾಟರಿ ಮತ್ತು ರೇಂಜ್: ಈ ಎಂಜಿ ವಿಂಡ್ಸರ್ ಇವಿ 38 ಕೆಡಬ್ಲ್ಯೂಹೆಚ್ (kWh) ಸಾಮರ್ಥ್ಯದ ಬ್ಯಾಟರಿ ಪ್ಯಾಕ್ ಆಯ್ಕೆಯನ್ನು ಹೊಂದಿದೆ. ಇದರಲ್ಲಿರುವ ಸಿಂಗಲ್ ಎಲೆಕ್ಟ್ರಿಕ್ ಮೋಟಾರ್ 134 ಬಿಹೆಚ್‍ಪಿ ಪವರ್ ಹಾಗೂ 200 ಎನ್ಎಂ ಪೀಕ್ ಟಾರ್ಕ್ ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದೆ. ಸಂಪೂರ್ಣ ಚಾರ್ಜ್‌ನಲ್ಲಿ 331 ಕಿ.ಮೀ ರೇಂಜ್ ನೀಡುತ್ತದೆ.

ಇಂಟೀರಿಯರ್ & ಫಿಚರ್ಸ್: ಇಂಟೀರಿಯರ್‌ನಲ್ಲಿ MG ವಿಂಡ್ಸರ್ EV ಸಂಪೂರ್ಣ ಬ್ಲಾಕ್ ಕ್ಯಾಬಿನ್ ಥೀಮ್ ಹೊಂದಿದೆ. ಬ್ಲಾಕ್ ಲೆಥೆರೆಟ್ ಸೀಟ್ ಅಪ್ಹೋಲ್ಸ್ಟರಿಯೊಂದಿಗೆ ಫ್ಲಾಟ್ ಬಾಟಮ್ ಸ್ಟೀರಿಂಗ್ ವೀಲ್ ಅನ್ನು ಲೆಥೆರೆಟ್‌ನಲ್ಲಿ ನೀಡಲಾಗಿದೆ. ಹಿಂಬದಿಯ ಸೀಟುಗಳನ್ನು 135-ಡಿಗ್ರಿ ರಿಕ್ಲೈನಿಂಗ್ ಮಾಡಿಕೊಳ್ಳಬಹುದು. ಜೊತೆಗೆ ಸೆಂಟರ್ ಆರ್ಮ್‌ರೆಸ್ಟ್ ಅನ್ನು ಸಹ ನೀಡಲಾಗಿದೆ.
ಹೊಸ ಎಂಜಿ ವಿಡ್ಸರ್ ಇವಿ ಕಾರಿನಲ್ಲಿ 15.6-ಇಂಚಿನ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಮ್, 8.8-ಇಂಚಿನ ಡಿಜಿಟಲ್ ಡ್ರೈವರ್ ಡಿಸ್‌ಪ್ಲೇ, ವೈರ್‌ಲೆಸ್ ಫೋನ್ ಚಾರ್ಜಿಂಗ್ ಪೋರ್ಟ್, ಕೀಲೆಸ್ ಎಂಟ್ರಿ, ಆಂಬಿಯೆಂಟ್ ಲೈಟಿಂಗ್, ಆಟೋಮೆಟಿಕ್ ಕ್ಲೇಮೇಟ್ ಕಂಟ್ರೋಲ್, ಆಂಬಿಯೆಂಟ್ ಲೈಟಿಂಗ್, ಪುಶ್-ಬಟನ್ ಸ್ಟಾರ್ಟ್ ಸೇರಿದಂತೆ ವಿವಿಧ ವೈಶಿಷ್ಟ್ಯಗಳನ್ನು ಒಳಗೊಂಡಿದೆ.

ಇವಿಷ್ಟೇ ಅಲ್ಲದೇ ವೈರ್‌ಲೆಸ್ ಫೋನ್ ಚಾರ್ಜಿಂಗ್, ಪವರ್ಡ್ ಡ್ರೈವರ್ ಸೀಟ್, ಪವರ್ಡ್ ಟೈಲ್‌ಗೇಟ್, ಪನಾರಮಿಕ್ ಸನ್‌ರೂಫ್ ಸಹ ಹೊಂದಿದೆ. ಸುರಕ್ಷತೆಯ ಸಲುವಾಗಿ 6-ಏರ್‌ಬ್ಯಾಗ್‌ಗಳು, TPMS (ಟೈರ್ ಪ್ರೆಶರ್ ಮಾನಿಟರಿಂಗ್ ಸಿಸ್ಟಮ್), ESC (ಎಲೆಕ್ಟ್ರಾನಿಕ್ ಸ್ಟೆಬಿಲಿಟಿ ಕಂಟ್ರೋಲ್) ಹಾಗೂ 360-ಡಿಗ್ರಿ ಕ್ಯಾಮೆರಾವನ್ನು ನೀಡಲಾಗಿದೆ.
ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.


Click it and Unblock the Notifications








