Ignis: ಮಾರುತಿ ಸುಜುಕಿ ಇಗ್ನಿಸ್ ಕಾರಿಗೆ ದೊಡ್ಡ ರಿಯಾಯಿತಿ.. 5 ಲಕ್ಷ ಬೆಲೆ, ಭರ್ಜರಿ ವೈಶಿಷ್ಟ್ಯಗಳು, 20 ಕಿ.ಮೀ ಮೈಲೇಜ್

ಮಾರುತಿ ಸುಜುಕಿ ಇಗ್ನಿಸ್ (Maruti Suzuki Ignis) ಕಾರನ್ನು ಈ ಜನವರಿ ತಿಂಗಳು ಖರೀದಿಸಲು ಯೋಜಿಸಿದ್ದರೆ, ಅಂತಹವರಿಗಾಗಿ ಇಲ್ಲಿದೆ ಭರ್ಜರಿ ಸಿಹಿಸುದ್ದಿ. ಹ್ಯುಂಡೈ ಎಕ್ಸ್‌ಟರ್ (Hyundai Exter)ಗೆ ಪ್ರಬಲ ಪ್ರತಿಸ್ಪರ್ಧಿಯಾಗಿರುವ 'ಇಗ್ನಿಸ್' ಭಾರೀ ರಿಯಾಯಿತಿ ಪ್ರಯೋಜನವನ್ನು ಪಡೆದಿದೆ. ಆ ಬಗ್ಗೆ ಹೆಚ್ಚಿನ ಮಾಹಿತಿ ತಿಳಿಯೋಣ.

ಹೊಸ ಮಾರುತಿ ಸುಜುಕಿ ಇಗ್ನಿಸ್ ಒಟ್ಟು ರೂ.55,000 ವರೆಗೆ ಡಿಸ್ಕೌಂಟ್ ಆಫರ್ ಹೊಂದಿದೆ. 2023ರ ಮಾದರಿಗಳು ರೂ.40,000 ನಗದು ರಿಯಾಯಿತಿ (Cash discount), ರೂ.15,000 ವಿನಿಮಯ ಬೋನಸ್ (Exchange bonus) ಅನ್ನು ಹೊಂದಿವೆ. ಅದೇ ರೀತಿಯಲ್ಲಿ 2024ರ ಮಾದರಿಗಳು ರೂ.25,000 ಕ್ಯಾಶ್ ಡಿಸ್ಕೌಂಟ್, ರೂ.15,000 ಎಕ್ಸ್ಚೇಂಜ್ ಬೋನಸ್ ಒಳಗೊಂಡಿವೆ.

Ignis

ಈ ರಿಯಾಯಿತಿ ಪ್ರಯೋಜನಗಳು ಜನವರಿ 31, 2024 ರವರೆಗೆ ಮಾನ್ಯವಾಗಲಿದೆ. ಆದರೆ, ರಾಜ್ಯದಿಂದ ರಾಜ್ಯಕ್ಕೆ ಡೀಲರ್ ಶಿಪ್, ರೂಪಾಂತರ ಹಾಗೂ ಬಣ್ಣವನ್ನು ಆಧರಿಸಿ, ಡಿಸ್ಕೌಂಟ್ ಆಫರ್ ಬೇರೆಯಿರಲಿದ್ದು, ಹೆಚ್ಚಿನ ವಿವರಗಳಿಗೆ ನಿಮ್ಮ ಹತ್ತಿರದ ಶೋರೂಂಗೆ ಭೇಟಿ ನೀಡಿರಿ. ಸದ್ಯ, ದೇಶೀಯ ಮಾರುಕಟ್ಟೆಯಲ್ಲಿ ಖರೀದಿಗೆ ದೊರೆಯುವ ಇಗ್ನಿಸ್ ರೂ.5.84 ಲಕ್ಷದಿಂದ ರೂ.8.16 ಲಕ್ಷ ಎಕ್ಸ್ ಶೋರೂಂ ಬೆಲೆಯನ್ನು ಹೊಂದಿದೆ.

ನೂತನ ಮಾರುತಿ ಸುಜುಕಿ ಇಗ್ನಿಸ್ (Maruti Suzuki Ignis) ಕಾರು, ಸಿಗ್ಮಾ (Sigma), ಡೆಲ್ಟಾ (Delta), ಜಿಟಾ (Zeta), ಆಲ್ಪಾ (Alpha) ರೂಪಾಂತರ (Variants) ಆಯ್ಕೆಯಲ್ಲಿ ಲಭ್ಯವಿದೆ. ಜೊತೆಗೆ ನೆಕ್ಸಾ ಬ್ಲೂ, ಲ್ಯೂಸೆಂಟ್ ಆರೆಂಜ್, ಸಿಲ್ಕಿ ಸಿಲ್ವರ್, ಟರ್ಕೋಯಿಸ್ ಬ್ಲೂ, ಗ್ಲಿಸ್ಟೆನಿಂಗ್ ಗ್ರೇ, ಪರ್ಲ್ ಆರ್ಕ್ಟಿಕ್ ವೈಟ್ ಸೇರಿದಂತೆ 6 - ಮೊನೊಟೋನ್, 3 - ಡುಯಲ್ ಟೋನ್ ಬಣ್ಣಗಳನ್ನು ಪಡೆದಿದೆ.

Ignis

ಈ ಕಾರು, 1.2 - ಲೀಟರ್ ಪೆಟ್ರೋಲ್ ಎಂಜಿನ್ ಹೊಂದಿದ್ದು, 83 PS ಗರಿಷ್ಠ ಪವರ್, 113 Nm ಪೀಕ್ ಟಾರ್ಕ್ ಉತ್ಪಾದಿಸುವ ಸಾಮರ್ಥ್ಯವನ್ನು ಒಳಗೊಂಡಿದೆ. 5 - ಸ್ವೀಡ್ ಮ್ಯಾನುವಲ್/ 5 - ಸ್ವೀಡ್ ಎಎಂಟಿ (ಆಟೋಮೆಟಿಕ್) ಗೇರ್ ಬಾಕ್ಸ್ ಆಯ್ಕೆಯಲ್ಲಿ ಸಿಗುತ್ತದೆ. ಮೈಲೇಜ್ ವಿಚಾರಕ್ಕೆ ಬರುವುದಾದರೆ 20.89 kmpl ಇಂಧನ ದಕ್ಷತೆಯನ್ನು ಒಳಗೊಂಡಿದೆ.

ಮಾರುತಿ ಸುಜುಕಿ ಇಗ್ನಿಸ್ ನಲ್ಲಿ 5 ಮಂದಿ ಆರಾಮದಾಯವಾಗಿ ಪ್ರಯಾಣಿಸಬಹುದು. ವಿನ್ಯಾಸದ ದೃಷ್ಟಿಯಿಂದಲೂ ಈ ಕಾರು ಅತ್ಯಾಧುನಿಕವಾಗಿದ್ದು, ಎಲ್ಇಡಿ ಪ್ರೊಜೆಕ್ಟರ್ ಹೆಡ್‌ಲೈಟ್‌, ಡಿಆರ್‌ಎಲ್‌ ಅನ್ನು ಹೊಂದಿದೆ. ವೈಶಿಷ್ಟ್ಯಗಳ ಬಗ್ಗೆ ಹೇಳುವುದಾದರೆ, 7 - ಇಂಚಿನ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಮ್, ಆಪಲ್ ಕಾರ್ ಪ್ಲೇ, ಆಂಡ್ರಾಯ್ಡ್ ಆಟೋ, ಆಟೋಮೆಟಿಕ್ ಕ್ಲೇಮೇಟ್ ಕಂಟ್ರೋಲ್ ಅನ್ನು ಪಡೆದಿದೆ.

Ignis

ಸುರಕ್ಷತೆಯಲ್ಲಿಯೂ ಈ ಕಾರು ಅತ್ಯುತ್ತಮವಾಗಿದ್ದು, ಡುಯಲ್ ಫ್ರಂಟ್ ಏರ್‌ಬ್ಯಾಗ್‌, EBD (ಎಲೆಕ್ಟ್ರಾನಿಕ್ ಬ್ರೇಕ್‌ಫೋರ್ಸ್ ಡಿಸ್ಟ್ರಿಬ್ಯೂಷನ್), ABS (ಆಂಟಿಲಾಕ್ ಬ್ರೇಕಿಂಗ್ ಸಿಸ್ಟಮ್) ಹಾಗೂ ರೇರ್ ಪಾರ್ಕಿಂಗ್ ಸೇನಾರ್ಸ್ ಅನ್ನು ಒಳಗೊಂಡಿದೆ. ಈ ಕಾರಿಗೆ ಟಾಟಾ ಟಿಯಾಗೊ (Tata Tiago) ಮತ್ತು ಹ್ಯುಂಡೈ ಎಕ್ಸ್‌ಟರ್ (Hyundai Exter) ಪ್ರಬಲ ಎದುರಾಳಿಯಾಗಿವೆ.

ಮಾರುತಿ ಸುಜುಕಿ ಎಸ್-ಪ್ರೆಸ್ಸೊ ಸಹ ಭಾರೀ ರಿಯಾಯಿತಿ ಪ್ರಯೋಜನವನ್ನು ಪಡೆದಿದೆ. ಒಟ್ಟು ರೂ.50,000 ವರೆಗೆ ಡಿಸ್ಕೌಂಟ್ ಆಫರ್ ಹೊಂದಿದೆ. ಈ ಕಾರು ರೂ.4.26 ಲಕ್ಷದಿಂದ ರೂ.6.12 ಲಕ್ಷ ಎಕ್ಸ್ ಶೋರೂಂ ಬೆಲೆಯಲ್ಲಿ ಖರೀದಿಗೆ ಲಭ್ಯವಿದೆ. ಪೆಟ್ರೋಲ್ ಮತ್ತು ಸಿಎನ್‌ಜಿ ಆಯ್ಕೆಯಲ್ಲಿ ಸಿಗಲಿದ್ದು, 7 - ಇಂಚಿನ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಮ್, ಸೆಮಿ ಡಿಜಿಟಲ್ ಇನ್‌ಸ್ಟ್ರುಮೆಂಟ್ ಕ್ಲಸ್ಟರ್ ಸೇರಿದಂತೆ ಹತ್ತಾರು ವೈಶಿಷ್ಟ್ಯಗಳನ್ನು ಹೊಂದಿದೆ.

ಮಾರುತಿ ಸುಜುಕಿ ಆಲ್ಟೊ (Maruti Suzuki Alto) ಕಾರು ಒಟ್ಟು 45,000 ವರೆಗೆ ಡಿಸ್ಕೌಂಟ್ ಆಫರ್ ಪಡೆದಿದೆ. ಭಾರತದ ಮಾರುಕಟ್ಟೆಯಲ್ಲಿ ಸಿಗುವ ಆಲ್ಟೊ ಕೆ10, ರೂ.3.99 ಲಕ್ಷದಿಂದ ರೂ.5.96 ಲಕ್ಷ ಎಕ್ಸ್ ಶೋರೂಂ ದರವನ್ನು ಹೊಂದಿದೆ. ಪೆಟ್ರೋಲ್ ಮತ್ತು ಸಿಎನ್‌ಜಿ ಪವರ್ ಟ್ರೈನ್ ಆಯ್ಕೆಯಲ್ಲಿ ದೊರೆಯುತ್ತದೆ.

Article Published On: Tuesday, January 16, 2024, 10:41 [IST]
English summary
Middle class people favorite maruti suzuki ignis get big discount 5 lakh price 20 km mileage
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+