ಅತ್ಯಂತ ಅಗ್ಗದ ಬೆಲೆಯಲ್ಲಿ 7 ಸೀಟರ್ ಕಾರು.. ಗರಿಷ್ಟ ಸುರಕ್ಷತೆ, ಆಧುನಿಕ ಫೀಚರ್ಸ್, ಸೂಪರ್ ಮೈಲೇಜ್!

Most Affordable 7 Seater mpv: ಇತ್ತೀಚಿನ ದಿನಗಳಲ್ಲಿ 7-ಸೀಟರ್ ಫ್ಯಾಮಿಲಿ ಕಾರುಗಳು ಭಾರತೀಯ ಮಾರುಕಟ್ಟೆಯಲ್ಲಿ ಹೆಚ್ಚು ಜನಪ್ರಿಯವಾಗುತ್ತಿವೆ. ನೀವು ಲಾಂಗ್ ಡ್ರೈವ್‌ಗೆ ಹೋಗಲು ಬಯಸಿದರೆ ಅಥವಾ ನಿಮ್ಮ ಕುಟುಂಬದೊಂದಿಗೆ ಎಲ್ಲಾದರು ಹೋಗಬೇಕೆಂದರೆ 7-ಸೀಟರ್ ಕಾರುಗಳು ಪರಿಪೂರ್ಣವಾಗಿವೆ ಎಂಬುದರಲ್ಲಿ ಯಾವುದೇ ಸಂದೇಹವಿಲ್ಲ.

ಮಾರುತಿ ಎರ್ಟಿಗಾ ದೇಶದ ಅತ್ಯಂತ ಜನಪ್ರಿಯ 7 ಆಸನಗಳ ಕಾರು. ಆದರೂ, ಈ ವಿಭಾಗದಲ್ಲಿ ಎರ್ಟಿಗಾಗೆ ಸವಾಲು ಹಾಕಲು ರೆನಾಲ್ಟ್ ಸಜ್ಜಾಗಿದೆ. ಫ್ರೆಂಚ್ ಕಾರು ತಯಾರಕ ಸಂಸ್ಥೆಯು ಇತ್ತೀಚೆಗೆ ತನ್ನ 7-ಆಸನಗಳ ಟ್ರೈಬರ್‌ನ ಅಗ್ಗದ ಆವೃತ್ತಿಯನ್ನು ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆ ಮಾಡಿದೆ. ರೆನಾಲ್ಟ್ ಟ್ರೈಬರ್‌ನ ಈ ಹೊಸ ಆವೃತ್ತಿಯ ಬೆಲೆ ಕೇವಲ ರೂ. 5.99 ಲಕ್ಷ (ಎಕ್ಸ್ ಶೋ ರೂಂ).

most-affordable-7-seater-mpv-renault-triber-launched-know-price-features-engine

ಟ್ರೈಬರ್ 2024 ವೈಶಿಷ್ಟ್ಯಗಳು ಮತ್ತು ಸುರಕ್ಷತೆ: ಆಂಡ್ರಾಯ್ಡ್ ಆಟೋ ಜೊತೆಗೆ 8-ಇಂಚಿನ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಮ್, ಸ್ಟೀರಿಂಗ್-ಮೌಂಟೆಡ್ ಆಡಿಯೋ ಕಂಟ್ರೋಲ್, Apple CarPlay, ಹೊಂದಾಣಿಕೆ ಮಾಡಬಹುದಾದ ಡ್ರೈವರ್ ಸೀಟ್, ಮೊಬೈಲ್ ಫೋನ್ ಸಂಪರ್ಕ, ಪುಶ್-ಬಟನ್ ಸ್ಟಾರ್ಟ್/ಸ್ಟಾಪ್, ಎರಡನೇ ಮತ್ತು ಮೂರನೇ ಸಾಲುಗಳಿಗೆ AC ವೆಂಟ್‌ಗಳು, ಸೆಂಟರ್ ಕನ್ಸೋಲ್‌ನಲ್ಲಿ ಕೂಲ್ಡ್ ಸ್ಟೋರೇಜ್ ಮತ್ತು ಡಿಜಿಟಲ್ ಇನ್ಸ್ಟ್ರುಮೆಂಟ್ ಕ್ಲಸ್ಟರ್ ಅನ್ನು ಸಹ ನೀಡಲಾಗಿದೆ.

ಇದರ ಹೊರತಾಗಿ, ಸಾಮಾನ್ಯ ಕೀ ಬದಲಿಗೆ ಸ್ಮಾರ್ಟ್ ಕಾರ್ಡ್ ಪ್ರವೇಶದ ಕೀ ಅದರ ಉನ್ನತ ರೂಪಾಂತರಗಳಲ್ಲಿ ಲಭ್ಯವಿದೆ. ಮುಖ್ಯವಾಗಿ ರೆನಾಲ್ಟ್ ಟ್ರೈಬರ್‌ನ ಹೊಸ ಆವೃತ್ತಿಯ ಬೆಲೆ ಹಳೆಯ ಆವೃತ್ತಿಗಿಂತ ಸುಮಾರು 34,000 ರೂ.ಗಳಷ್ಟು ಕಡಿಮೆಯಾಗಿದೆ. ಬೆಲೆ ಕಡಿತದ ನಂತರವೂ ಕಂಪನಿಯು ಈ MPV ನಲ್ಲಿ ಅನೇಕ ನವೀಕರಣಗಳನ್ನು ಮತ್ತು ಹೊಸ ವೈಶಿಷ್ಟ್ಯಗಳನ್ನು ನೀಡಿರುವುದು ವಿಶೇಷ.

most-affordable-7-seater-mpv-renault-triber-launched-know-price-features-engine

2024ರ ಟ್ರೈಬರ್ ಕಾರು 4-ಸ್ಟಾರ್ ಸುರಕ್ಷತಾ ರೇಟಿಂಗ್‌ನೊಂದಿಗೆ ಬರುತ್ತದೆ. ಹಿಲ್ ಸ್ಟಾರ್ಟ್ ಅಸಿಸ್ಟ್ (HSA), ಟ್ರಾಕ್ಷನ್ ಕಂಟ್ರೋಲ್ ಸಿಸ್ಟಮ್ (TCS), ಎಲೆಕ್ಟ್ರಾನಿಕ್ ಸ್ಟೆಬಿಲಿಟಿ ಪ್ರೋಗ್ರಾಂ (ESP), ಟೈರ್ ಪ್ರೆಶರ್ ಮಾನಿಟರಿಂಗ್ ಸಿಸ್ಟಮ್ (TPMS) ನಂತಹ ಪ್ರಮುಖ ವೈಶಿಷ್ಟ್ಯಗಳನ್ನು ಹೊಂದಿದೆ. ಜೊತೆಗೆ ನಾಲ್ಕು ಏರ್‌ಬ್ಯಾಗ್‌ಗಳು, ಇಬಿಡಿಯೊಂದಿಗೆ ಎಬಿಎಸ್, ರಿಯರ್ ವ್ಯೂ ಕ್ಯಾಮೆರಾ, ರಿಯರ್ ಪಾರ್ಕಿಂಗ್ ಸೆನ್ಸಾರ್ ಅನ್ನು ಸಹ ಪಡೆಯುತ್ತದೆ.

2024ರ ಟ್ರೈಬರ್‌ನಲ್ಲಿ ಹೊಸ ವೈಶಿಷ್ಟ್ಯಗಳು: ಇದನ್ನು ಮೊದಲಿನಂತೆ RXE, RXL, RXT, RXZ ಎಂಬ ನಾಲ್ಕು ರೂಪಾಂತರಗಳಲ್ಲಿ ತರಲಾಗಿದೆ. ನವೀಕರಣಗಳ ವಿಷಯದಲ್ಲಿ, ಈಗ ಈ MPV ಹೊಸ ಡಿಜಿಟಲ್ ಇನ್ಸ್ಟ್ರುಮೆಂಟ್ ಕ್ಲಸ್ಟರ್, ವೈರ್‌ಲೆಸ್ ಚಾರ್ಜರ್, ರನ್ನಿಂಗ್ ORVM ಗಳೊಂದಿಗೆ ಬರುತ್ತದೆ. ಹೆಚ್ಚುವರಿಯಾಗಿ, ಪ್ರಮಾಣಿತ ಬಣ್ಣದ ಆಯ್ಕೆಗಳ ಹೊರತಾಗಿ, ನವೀಕರಿಸಿದ ಟ್ರೈಬರ್ ಈಗ ಹೊಸ ಸ್ಟೆಲ್ತ್ ಬ್ಲ್ಯಾಕ್ ಬಾಹ್ಯ ಬಣ್ಣವನ್ನು ಪಡೆದಿದೆ.

most-affordable-7-seater-mpv-renault-triber-launched-know-price-features-engine

ಈ ಕಾರು 84 ಲೀಟರ್ ಬೂಟ್ ಸ್ಪೇಸ್ ಹೊಂದಿದೆ. ಮೂರನೇ ಸಾಲಿನ ಸೀಟುಗಳನ್ನು ಮಡಚಿದರೆ ಹೆಚ್ಚುವರಿಯಾಗಿ 625 ಲೀಟರ್‌ ಜಾಗವನ್ನು ಪಡೆಯಬಹುದು. ಹೊಸ ಟ್ರೈಬರ್ 1-ಲೀ. ನ್ಯಾಚುರಲ್ಲಿ ಆಸ್ಪಿರೇಟೆಡ್ 3-ಸಿಲಿಂಡರ್ ಪೆಟ್ರೋಲ್ ಎಂಜಿನ್ ಅನ್ನು ಮುಂದುವರೆಸಿದೆ. ಈ ಎಂಜಿನ್ ಗರಿಷ್ಠ 72 ಬಿಎಚ್‌ಪಿ ಪವರ್ ಮತ್ತು 96 ಎನ್‌ಎಂ ಟಾರ್ಕ್ ಅನ್ನು ಉತ್ಪಾದಿಸುತ್ತದೆ. 5-ಸ್ಪೀಡ್ ಮ್ಯಾನುವಲ್, 5-ಸ್ಪೀಡ್ AMT ಗೇರ್ ಬಾಕ್ಸ್ ಆಯ್ಕೆಯನ್ನು ಹೊಂದಿದೆ.

ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಇನ್ನು ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಹಂಚಿಕೊಳ್ಳುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ. ಜೊತೆಗೆ ನಿಮ್ಮ ಸ್ನೇಹಿತರಿಗೂ ಶೇರ್ ಮಾಡಿ.

More from DriveSpark

Article Published On: Thursday, January 11, 2024, 12:02 [IST]
English summary
Most affordable 7 seater mpv renault triber launched know price features engine
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+