Kia: ಬಹುನಿರೀಕ್ಷಿತ ಕಿಯಾ ಕ್ಲಾವಿಸ್ ಮೈಕ್ರೋ ಎಸ್‌ಯುವಿ ಶೀಘ್ರದಲ್ಲೇ ಬಿಡಗಡೆ

ಕಿಯಾ ಮೋಟಾರ್ಸ್, ಬಹುದಿಗಳಿಂದ ಕ್ಲಾವಿಸ್ ಎಂಬ ಹೊಸ ಮೈಕ್ರೊ ಎಸ್‌ಯುವಿಯನ್ನು ಬಿಡುಗಡೆ ಮಾಡಲು ಭಾರೀ ತಯಾರಿ ನಡೆಸುತ್ತಿದೆ. ಕಳೆದ ಕೆಲವು ತಿಂಗಳುಗಳಲ್ಲಿ ಕಠಿಣ ಪರೀಕ್ಷಾ ಹಂತಗಳಿಗೆ ಒಳಪಡಿಸಿದ್ದು, ಹಲವು ಸ್ಪೈ ಚಿತ್ರಗಳು ಕೂಡ ಹೊರಹೊಮ್ಮಿದ್ದವು. ಈ ಮುಂಬರುವ ಸಣ್ಣ ಕಾರಿನ ವಿಶೇಷತೆಗಳನ್ನು ಇಲ್ಲಿ ನೋಡೋಣ.

ಕಿಯಾ ಸೊನೆಟ್ ಮತ್ತು ಸೆಲ್ಟೋಸ್ ನಡುವೆ ಈ ಹೊಸ ಕ್ಲಾವಿಸ್ ಇರಲಿದ್ದು, ವೈವಿಧ್ಯಮಯ ಗ್ರಾಹಕರ ಆದ್ಯತೆಗಳು ಮತ್ತು ಚಾಲನಾ ಅಗತ್ಯಗಳನ್ನು ಪೂರೈಸುವ ಸಮಗ್ರ ಎಸ್‌ಯುವಿ ಆಗಲಿದೆ. ಆರಂಭದಲ್ಲಿ ಪೆಟ್ರೋಲ್ ಎಂಜಿನ್‌ನೊಂದಿಗೆ ಲಭ್ಯವಾಗುವ ನಿರೀಕ್ಷೆಯಿತ್ತು, ಆದರೆ ಈಗ ಎಲೆಕ್ಟ್ರಿಕ್ ಮತ್ತು ಹೈಬ್ರಿಡ್ ವೇರಿಯೆಂಟ್‌ಗಳನ್ನು ಪರಿಚಯಿಸುವ ಸಾಧ್ಯತೆಗಳು ಕೂಡ ಇವೆ ಎನ್ನಲಾಗಿದೆ. ಮರೆಮಾಚಲ್ಪಟ್ಟ ಕಿಯಾ ಕ್ಲಾವಿಸ್ ಇತ್ತೀಚೆಗೆ ಕ್ಯಾಮರಾ ಕಣ್ಣಿಗೆ ಬಿದ್ದಿತ್ತು. ಆ ವೇಳೆ ಕಾಣಿಸಿಕೊಂಡ ಗಮನಾರ್ಹ ವೈಶಿಷ್ಟ್ಯವೆಂದರೆ ಎಸ್‌ಯುವಿಯ ಅತ್ಯಾಧುನಿಕ ಎಲ್ಇಡಿ ಡಿಆರ್‌ಎಲ್‌ಗಳು. ಈ ಆಲ್ -ಎಲ್ಇಡಿ ಹೆಡ್‌ಲ್ಯಾಂಪ್‌ಗಳು, ಡ್ಯುಯಲ್-ಫಂಕ್ಷನ್ ಎಲ್ಇಡಿ ಡಿಆರ್‌ಎಲ್‌ಗಳನ್ನು ಪಡೆದಿರುವಂತೆ ಕಾಣುತ್ತಿದೆ.

much-awaited-kia-clavis-micro-suv-will-be-launched-soon

ಕ್ಲಾವಿಸ್‌ನ ಹಿಂಭಾಗದಲ್ಲಿ ಬಾಕ್ಸ್ ವಿನ್ಯಾಸದೊಂದಿಗೆ ಲಂಬವಾದ ಎಲ್ಇಡಿ ಟೈಲ್ ಲ್ಯಾಂಪ್, ಆಧುನಿಕ ವಾಹನ ವಿನ್ಯಾಸಗಳಲ್ಲಿ ಸಾಮಾನ್ಯ ಅಂಶವಾದ ಎಲ್ಇಡಿ ಕನೆಕ್ಟಿಂಗ್ ಬಾರ್‌ ಪಡೆದಿರುವಂತೆ ಕಾಣುತ್ತಿದೆ. ಬಂಪರ್ ನಲ್ಲಿ ಟರ್ನ್ ಇಂಡಿಕೇಟರ್‌ಗಳ ಜೊತೆಗೆ ನಂಬರ್ ಪ್ಲೇಟ್‌ನ ಸ್ಥಾನವು ಸಾಂಪ್ರದಾಯಿಕ ಎಸ್‌ಯುವಿ ವಿನ್ಯಾಸಗಳಿಂದ ಭಿನ್ನವಾಗಿ ಕಾಣುವಂತೆ ಮಾಡಿದೆ.

ಸ್ಪ್ಲಿಟ್ ಫ್ರಂಟ್ ಗ್ರಿಲ್, ಫಾಕ್ಸ್ ಸ್ಕಿಡ್ ಪ್ಲೇಟ್, ಹೊಸ ಅಲಾಯ್ ವೀಲ್ ವಿನ್ಯಾಸ ಮತ್ತು ಹೊರಭಾಗದ ಹಿಂಭಾಗ-ವ್ಯೂ ಮಿರರ್‌ಗಳಲ್ಲಿ (ಒಆರ್‌ವಿಎಂ) ಇಂಟಿಗ್ರೇಟೆಡ್ ಎಲ್ಇಡಿ ಟರ್ನ್ ಇಂಡಿಕೇಟರ್‌ಗಳಂತಹ ವಿಭಿನ್ನ ವಿನ್ಯಾಸದ ಅಂಶಗಳು ಕಾಣಿಸಿಕೊಂಡಿವೆ. ಜೊತೆಗೆ ಚೌಕಾಕಾರದ ವೀಲ್ ಆರ್ಚ್‌ಗಳು ಮತ್ತು ರೂಫ್ ರೈಲ್ಸ್‌ಗಳೊಂದಿಗೆ, ಭವ್ಯವಾದ ಡಿಸೈನ್ ಅನ್ನು ಪಡೆದುಕೊಂಡಿದೆ.

much-awaited-kia-clavis-micro-suv-will-be-launched-soon

ಇಂಟೀರಿಯರ್‌ನಲ್ಲಿ ಸಂಪೂರ್ಣ ಡಿಜಿಟಲ್ ಇನ್ಸ್ಟ್ರುಮೆಂಟ್ ಕ್ಲಸ್ಟರ್, ಮಲ್ಟಿ-ಫಂಕ್ಷನಲ್ ಸ್ಟೀರಿಂಗ್ ವೀಲ್ ಮತ್ತು 360 - ಡಿಗ್ರಿ ಕ್ಯಾಮೆರಾ ಸಿಸ್ಟಮ್ ಸೇರಿದಂತೆ ಹೈಟೆಕ್ ವೈಶಿಷ್ಟ್ಯಗಳನ್ನು ನಿರೀಕ್ಷಿಸಲಾಗಿದೆ. ಅತ್ಯಾಧುನಿಕ ವೈಶಿಷ್ಟ್ಯಗಳೊಂದಿಗೆ ಪ್ಯಾಕ್ ಮಾಡುವ ಕಿಯಾ ಖ್ಯಾತಿಯು ಕ್ಲಾವಿಸ್ ಇದಕ್ಕೆ ಹೊರತಾಗಿಲ್ಲ ಎಂದು ಸೂಚಿಸುತ್ತದೆ ಎಂದೇ ಹೇಳಬಹುದು. ಇದಲ್ಲದೆ, ವಾಹನದ ಬಾಹ್ಯ ವಿನ್ಯಾಸವು ಕೆಳಗಿನ ಬಂಪರ್‌ನಲ್ಲಿ ರಾಡಾರ್ ವ್ಯವಸ್ಥೆ ಮತ್ತು ವಿಂಡ್‌ಶೀಲ್ಡ್‌ನಲ್ಲಿ ಅಳವಡಿಸಲಾದ ಕ್ಯಾಮೆರಾವು ಹೈಲೈಟ್ ಆಗಿದೆ. ಇದು ಚಾಲಕನಿಗೆ ಸುರಕ್ಷತೆ ಮತ್ತು ಅನುಕೂಲವನ್ನು ಹೆಚ್ಚಿಸುವ ನಿರೀಕ್ಷೆಯಿರುವ ಸುಧಾರಿತ ಚಾಲಕ ಸಹಾಯ ವ್ಯವಸ್ಥೆಯನ್ನು (ADAS) ಸೂಚಿಸುತ್ತಿದೆ.

ಈ ಕ್ಲಾವಿಸ್ ಎಸ್‌ಯುವಿ ವೈರ್‌ಲೆಸ್ ಆಂಡ್ರಾಯ್ಡ್ ಆಟೋ ಮತ್ತು ಆಪಲ್ ಕಾರ್ಪ್ಲೇ, ವೈರ್‌ಲೆಸ್ ಚಾರ್ಜರ್ ಮತ್ತು ಫೋಲ್ಡಬಲ್ ಸೆಂಟ್ರಲ್ ಆರ್ಮ್‌ರೆಸ್ಟ್ ಅನ್ನು ಹೊಂದಿರುತ್ತದೆ. ICE ರೂಪಾಂತರಗಳನ್ನು 120 PS, 1.0-ಲೀಟರ್ ಟರ್ಬೊ ಪೆಟ್ರೋಲ್ ಎಂಜಿನ್‌ನೊಂದಿಗೆ ಬರುತ್ತದೆ. ಈ ಎಂಜಿನ್ ನೊಂದಿಗೆ 6-ಸ್ಪೀಡ್ iMT ಮತ್ತು 7-ಸ್ಪೀಡ್ DCT ಅನ್ನು ಒಳಗೊಂಡಿರುತ್ತದೆ.

much-awaited-kia-clavis-micro-suv-will-be-launched-soon

ಕ್ಲಾವಿಸ್ ಎಲೆಕ್ಟ್ರಿಕ್ ಕಾರು ಸುಮಾರು 350 ರಿಂದ 400 ಕಕಿ.ಮಿ ರೇಂಜ್ ಅನ್ನು ನೀಡಬಹುದು. ವಾರ್ಷಿಕ ಸುಮಾರು 1 ಲಕ್ಷ ಯೂನಿಟ್ ಕಾರುಗಳನ್ನು ಉತ್ಪಾದಿಸುವ ಯೋಜನೆ ಹೊಂದಿದೆ. ಸುರಕ್ಷತಾ ದೃಷ್ಟಿಯಿಂದ 6-ಏರ್‌ಬ್ಯಾಗ್‌ಗಳು ಮತ್ತು ಎಲ್ಲಾ-4-ಡಿಸ್ಕ್ ಬ್ರೇಕ್‌ಗಳಂತಹ ವೈಶಿಷ್ಟ್ಯಗಳನ್ನು ಒಳಗೊಂಡಿರಲಿದೆ. ಕಿಯಾ ಕ್ಲಾವಿಸ್‌ನ ಟಾಪ್-ಸ್ಪೆಕ್ ರೂಪಾಂತರಗಳು ADAS ನೊಂದಿಗೆ ಬರುವ ನಿರೀಕ್ಷೆಯಿದೆ. ಕಿಯಾ ಕ್ಲಾವಿಸ್ ಮಾದರಿಯು ಎರಡೂ ರೂಪಾಂತರಗಳಲ್ಲಿ ಲಭ್ಯವಿರಲಿದೆ.

ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.

More from DriveSpark

Article Published On: Thursday, April 18, 2024, 8:30 [IST]
English summary
Much awaited kia clavis micro suv will be launched soon
Read more on ಕಿಯಾ kia
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+