Tata: 2023ರ ನೆಕ್ಸಾನ್, ಟಿಯಾಗೊ ಎಲೆಕ್ಟ್ರಿಕ್ ಕಾರುಗಳಿಗೆ ದೊಡ್ಡ ರಿಯಾಯಿತಿ.. ಈಗ ಬಿಟ್ಟರೆ ಮತ್ತೆ ಸಿಗಲ್ಲ!

ಟಾಟಾ ಮೋಟಾರ್ಸ್ (Tata Motors) ವಿಶ್ವಾಸಾರ್ಹ ಕಾರು ತಯಾರಕ ಕಂಪನಿಯಾಗಿ ಗುರುತಿಸಿಕೊಂಡಿದೆ. 2023 ರಲ್ಲಿ ಉತ್ಪಾದಿಸಿ, ಮಾರಾಟಗೊಳ್ಳದಿರುವ ನೆಕ್ಸಾನ್ (Nexon) ಮತ್ತು ಟಿಯಾಗೊ (Tiago) ಎಲೆಕ್ಟ್ರಿಕ್ ಕಾರುಗಳಿಗೆ ಭರ್ಜರಿ ರಿಯಾಯಿತಿಯನ್ನು ಘೋಷಣೆ ಮಾಡಿದೆ. ಆ ಬಗ್ಗೆ ಇಲ್ಲಿದೆ ಸಂಪೂರ್ಣ ಮಾಹಿತಿ.

ದೇಶಾದ್ಯಂತ ವಿವಿಧ ಟಾಟಾ ಡೀಲರ್‌ಶಿಪ್‌ಗಳು (Tata dealerships), 2023ರ ಸೆಪ್ಟೆಂಬರ್ ಮತ್ತು ಡಿಸೆಂಬರ್ ಅವಧಿಯಲ್ಲಿ ತಯಾರಿಸಿದ ನೆಕ್ಸಾನ್ ಇವಿಯ ಎಲ್ಲ ರೂಪಾಂತರಗಳಿಗೆ ರೂ.50,000 'ಗ್ರೀನ್ ಬೋನಸ್' ಅನ್ನು ನೀಡುತ್ತಿವೆ. ಅದೇ ರೀತಿಯಲ್ಲಿ 2024ರಲ್ಲಿ ಉತ್ಪಾದಿಸಿದ ಯಾವುದೇ ನೆಕ್ಸಾನ್ ಎಲೆಕ್ಟ್ರಿಕ್ ಕಾರುಗಳಿಗೂ ಈ ಏಪ್ರಿಲ್ ತಿಂಗಳು ಡಿಸ್ಕೌಂಟ್ ಲಭಿಸುತ್ತಿಲ್ಲ.

My2023 Model Tata Nexon Tiago Ev Get Upto 65 000 Discount

2023ರ ಟಾಟಾ ಟಿಯಾಗೊ ಇವಿ (Tata Tiago EV) ರೂಪಾಂತರಗಳು ರೂ.65,000 ರವರೆಗೆ ರಿಯಾಯಿತಿ ಪ್ರಯೋಜನವನ್ನು ಹೊಂದಿವೆ. ಇದರಲ್ಲಿ ರೂ.50,000 ಗ್ರೀನ್ ಬೋನಸ್, ರೂ.15,000 ವಿನಿಮಯ ಬೋನಸ್ ಗಳು ಸೇರಿದೆ. 2024ರ ಟಿಯಾಗೊ ಇವಿಯ ಎಲ್ಆರ್ ರೂಪಾಂತರ ಒಟ್ಟು ರೂ.35,000 (ರೂ.20,000 ಗ್ರೀನ್ ಬೋನಸ್ ಒಳಗೊಂಡಿದೆ), ಎಕ್ಸ್ಇ ಮತ್ತು ಎಕ್ಸ್‌ಟಿ ಮಾದರಿಗಳು ರೂ.20,000 ಡಿಸ್ಕೌಂಟ್ ಆಫರ್ ಪಡೆದಿವೆ.

ಸದ್ಯ ದೇಶೀಯ ಮಾರುಕಟ್ಟೆಯಲ್ಲಿ ಖರೀದಿಗೆ ಸಿಗುವ ಟಾಟಾ ನೆಕ್ಸಾನ್ ಇವಿ, ರೂ.14.74 ಲಕ್ಷದಿಂದ ರೂ.19.99 ಲಕ್ಷ ಎಕ್ಸ್ ಶೋರೂಂ ಬೆಲೆಯನ್ನು ಹೊಂದಿದೆ. ಇದು 30 ಕೆಡಬ್ಲ್ಯೂಹೆಚ್ ಹಾಗೂ 40.5 ಕೆಡಬ್ಲ್ಯೂಹೆಚ್ ಬ್ಯಾಟರಿ ಪ್ಯಾಕ್‌ ಆಯ್ಕೆಯಲ್ಲಿ ಲಭ್ಯವಿದೆ. ಸಂಪೂರ್ಣ ಚಾರ್ಜ್ ನಲ್ಲಿ 325 ಕಿಲೋಮೀಟರ್ ರಿಂದ 465 ಕಿಲೋಮೀಟರ್ ಕ್ರಮಿಸುತ್ತದೆ.

My2023 Model Tata Nexon Tiago Ev Get Upto 65 000 Discount

ಈ ನೆಕ್ಸಾನ್ ಎಲೆಕ್ಟ್ರಿಕ್ ಕಾರು, 12.3-ಇಂಚಿನ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಮ್, 10.25-ಇಂಚಿನ ಸಂಪೂರ್ಣ ಡಿಜಿಟಲ್ ಡ್ರೈವರ್ ಡಿಸ್‌ಪ್ಲೇ, ಆಂಡ್ರಾಯ್ಡ್ ಆಟೋ, ಆಪಲ್ ಕಾರ್‌ ಪ್ಲೇ ಸೇರಿದಂತೆ ವಿವಿಧ ವೈಶಿಷ್ಟ್ಯಗಳನ್ನು ಹೊಂದಿದೆ. ಸುರಕ್ಷತೆಯ ದೃಷ್ಟಿಯಿಂದ 6-ಏರ್‌ಬ್ಯಾಗ್‌, ESC (ಎಲೆಕ್ಟ್ರಾನಿಕ್ ಸ್ಟೆಬಿಲಿಟಿ ಕಂಟ್ರೋಲ್), ಆಲ್-ವೀಲ್ ಡಿಸ್ಕ್ ಬ್ರೇಕ್ಸ್, ಹಿಲ್ ಹೋಲ್ಡ್, ಡಿಸೆಂಟ್ ಕಂಟ್ರೋಲ್, ಆಟೋ-ಡಿಮ್ಮಿಂಗ್ ಐಆರ್‌ವಿಎಂ, 360-ಡಿಗ್ರಿ ಕ್ಯಾಮೆರಾವನ್ನು ಒಳಗೊಂಡಿದೆ.

ಟಾಟಾ ಟಿಯಾಗೊ ಇವಿ (Tata Tiago EV), ರೂ.7.99 ಲಕ್ಷದಿಂದ ರೂ.11.89 ಲಕ್ಷ ಎಕ್ಸ್ ಶೋರೂಂ ದರದಲ್ಲಿ ಲಭ್ಯವಿದೆ. ಈ ಕಾರಿನಲ್ಲಿ 5 ಮಂದಿ ಆರಾಮದಾಯಕವಾಗಿ ಪ್ರಯಾಣಿಸಬಹುದು. ಇದು 19.2 ಕೆಡಬ್ಲ್ಯೂಹೆಚ್ ಮತ್ತು 24 ಕೆಡಬ್ಲ್ಯೂಹೆಚ್ ಬ್ಯಾಟರಿ ಪ್ಯಾಕ್ ಆಯ್ಕೆಯನ್ನು ಹೊಂದಿದ್ದು, ರೂಪಾಂತರಗಳಿಗೆ ಅನುಗುಣವಾಗಿ 250 ಕಿಲೋಮಿಟರ್ ರಿಂದ 315 ಕಿಲೋಮಿಟರ್ ರೇಂಜ್ (ಮೈಲೇಜ್) ಕೊಡುತ್ತದೆ.

ಈ ಕಾರು 7-ಇಂಚಿನ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಮ್, ಆಂಡ್ರಾಯ್ಡ್ ಆಟೋ, ಆಪಲ್ ಕಾರ್ ಪ್ಲೇ, 4 - ಸ್ಪೀಕರ್ ಹರ್ಮನ್ ಸೌಂಡ್ ಸಿಸ್ಟಮ್ ಸೇರಿದಂತೆ ವಿವಿಧ ವೈಶಿಷ್ಟ್ಯಗಳನ್ನು ಒಳಗೊಂಡಿದೆ. ಡುಯಲ್ ಫ್ರಂಟ್ ಏರ್‌ಬ್ಯಾಗ್‌, TPMS (ಟೈರ್ ಪ್ರೆಶರ್ ಮಾನಿಟರಿಂಗ್ ಸಿಸ್ಟಮ್), ABS (ಆಂಟಿಲಾಕ್ ಬ್ರೇಕಿಂಗ್ ಸಿಸ್ಟಮ್), ರೈನ್-ಸೆನ್ಸಿಂಗ್ ವೈಪರ್ಸ್, ರೇರ್ ಕ್ಯಾಮೆರಾವನ್ನು ಹೊಂದಿದೆ.

ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.

Article Published On: Saturday, April 13, 2024, 8:30 [IST]
English summary
My 2023 model tata nexon tiago ev get upto 65000 discount
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+