ಈ 7-ಸೀಟರ್ ಫ್ಯಾಮಿಲಿ ಕಾರಿಗೆ ಫುಲ್ ಡಿಮ್ಯಾಂಡ್: ಸನ್‌ರೂಫ್, ADAS, 7 ಏರ್‌ಬ್ಯಾಗ್‌ಗಳು

ಮಹೀಂದ್ರಾ XUV700 ಎಸ್‍ಯುವಿ ಭಾರತೀಯ ಆಟೋ ಉದ್ಯಮದಲ್ಲಿ ತನಗೊಂದು ಇತಿಹಾಸವನ್ನು ಸೃಷ್ಟಿಸಿಕೊಂಡಿರುವ ಕಾರಾಗಿದೆ. ಈ ಎಸ್‌ಯುವಿ ಮಾರುಕಟ್ಟೆಗೆ ಬಂದು ಮೂರು ವರ್ಷಗಳು ಆಗುತ್ತಾ ಬಂದರೂ, ಇನ್ನೂ ತನ್ನ ಬೇಡಿಕೆಯನ್ನು ಉಳಿಸಿಕೊಂಡು ಮುನ್ನುಗ್ಗುತ್ತಿದೆ. ಪ್ರಸ್ತುತ ಹೊಸ ಮಹೀಂದ್ರಾ XUV700 ಬೆಲೆಯು ರೂ.13.99 ಲಕ್ಷದಿಂದ ಆರಂಭವಾಗಿ ಇದರ ಟಾಪ್ ಎಂಡ್ ವೆರಿಯೆಂಟ್‌ಗೆ ರೂ.23.99 (ಎಕ್ಸ್ ಶೋರೂಂ ಬೆಲೆಗಳು) ಲಕ್ಷ ಬೆಲೆಯಿದೆ. ಈ ಎಸ್‍ಯುವಿ ಬಿಡುಗಡೆಯಾದಗಿನಿಂದ 1.40 ಲಕ್ಷಕ್ಕೂ ಹೆಚ್ಚು ಕಾರುಗಳು ಮಾರಾಟವಾಗಿರುವುದಾಗಿ ಕಂಪನಿ ಹೇಳಿಕೊಂಡಿದೆ. ಇಷ್ಟು ಬೇಡಿಕೆಯಿರುವ ಕಾರಿನಲ್ಲಿ ಅಂಥದ್ದೇನಿದೆ ನೋಡೋಣ ಬನ್ನಿ.

2024ರ ಮಹೀಂದ್ರಾ XUV700 ಎಸ್‌ಯುವಿ MX, AX3, AX5, AX7 ಮತ್ತು AX7L ಎಂಬ ರೂಪಾಂತರಗಳಲ್ಲಿ ಖರೀದಿಗೆ ಲಭ್ಯವಿದೆ. ಈ ಎಸ್‍ಯುವಿಯ ಪೆಟ್ರೋಲ್ ಮಾದರಿಯು 2.0-ಲೀಟರ್ ಟರ್ಬೋಚಾರ್ಜ್ಡ್ ಎಂಜಿನ್ ಅನ್ನು ಹೊಂದಿದ್ದರೇ, ಡೀಸೆಲ್ ರೂಪಾಂತರವು 2.2-ಲೀಟರ್ ಟರ್ಬೊ-ಡೀಸೆಲ್ ಎಂಜಿನ್ ಅನ್ನು ಹೊಂದಿದೆ.

new-2024-mahindra-xuv700-engine-features-price-details

ವಿನ್ಯಾಸ: 2024ರ ಮಹೀಂದ್ರಾ XUV700 ಎಸ್‍ಯುವಿ ಇತ್ತೀಚಗೆ ನವೀಕರಣಗೊಂಡರೂ, ವಿನ್ಯಾಸವು ಮೊದಲಿನಿಂದಲೂ ಅದೇ ಡಿಸೈನ್‌ನೊಂದಿಗೆ ಬರುತ್ತದೆ. ಮೂಲ ವಿನ್ಯಾಸ ಮತ್ತು ಸಿಲೂಯೆಟ್ ಹಿಂದಿನಂತೆಯೇ ಇದೆ. ಆದರೆ ಹೊಸ AX7L ಮತ್ತು AX7 ರೂಪಾಂತರಗಳಿಗೆ ಹೊಸ ನಾಪೋಲಿ ಬ್ಲ್ಯಾಕ್ ಪೇಂಟ್ ಆಯ್ಕೆಯನ್ನು ಸೇರಿಸಲಾಗಿದೆ. ಈ ಎರಡು ರೂಪಾಂತರಗಳು ಆಪ್ಷನಲ್ ಡ್ಯುಯಲ್-ಟೋನ್ ಬಣ್ಣದೊಂದಿಗೆ ಬರುತ್ತವೆ.

ಫೀಚರ್ಸ್: ಹೊಸ ಮಹೀಂದ್ರಾ XUV700 ಎಸ್‍ಯುವಿಯಲ್ಲಿ ಅಡ್ರಿನಾಕ್ಸ್ ಸೂಟ್‌ನೊಂದಿಗೆ ಸಾಫ್ಟ್‌ವೇರ್ ಅಪ್‌ಡೇಟ್ ಸಾಮರ್ಥ್ಯದೊಂದಿಗೆ ಬರುತ್ತದೆ ಎಂದು ಮಹೀಂದ್ರಾ ಹೇಳಿದೆ. ಈ ಎಸ್‍ಯುವಿಯಲ್ಲಿ EcoSense ಲೀಡರ್‌ಬೋರ್ಡ್, M ಲೆನ್ಸ್ ಮತ್ತು ಟೋಲ್ ಡೈರಿಯಂತಹ 13 ಹೊಸ ಫೀಚರ್ಸ್ ಅನ್ನು ಸೇರ್ಪಡೆ ಮಾಡಲಾಗಿದೆ. ಈ ಸಾಫ್ಟ್‌ವೇರ್ ಸೂಟ್ 83 ಕನೆಕ್ಟಿವಿಟಿ ಕಾರ್ ಫೀಚರ್ಸ್‌ಗಳೊಂದಿಗೆ ಬರುತ್ತದೆ.

new-2024-mahindra-xuv700-engine-features-price-details

ಇಂಟಿರಿಯರ್: ಮಹೀಂದ್ರಾ XUV700 ಎಸ್‍ಯುವಿ ನವೀಕರಿಸಿದ ಕ್ಯಾಬಿನ್, ಏರ್ ವೆಂಟ್‌ಗಳು ಮತ್ತು ಸೆಂಟ್ರಲ್ ಕನ್ಸೋಲ್‌ನಲ್ಲಿ ಡಾರ್ಕ್ ಕ್ರೋಮ್ ಫೀನಿಶಿಂಗ್ ಪಡೆಯುತ್ತದೆ. ಈ ಎಸ್‍ಯುವಿಯ AX7L ರೂಪಾಂತರವು ಕಸ್ಟಮ್ ಸೀಟ್ ಪ್ರೊಫೈಲ್‌ಗಳಿಗೆ ಲಿಂಕ್ ಮಾಡಲಾದ ಮೊದಲ-ಇನ್-ಸೆಗ್ಮೆಂಟ್ ಮೆಮೊರಿ ORVM ಗಳೊಂದಿಗೆ ಮತ್ತು AX7 ಮತ್ತು AX7L ರೂಪಾಂತರಗಳಲ್ಲಿ ಕ್ಯಾಪ್ಟನ್ ಸೀಟ್‌ಗಳ ಆಯ್ಕೆಯೊಂದಿಗೆ ವೆಂಟಿಲೇಟೆಡ್ ಫ್ರಂಟ್ ಸೀಟ್‌ಗಳೊಂದಿಗೆ ಬಂದಿದೆ.

ಸದ್ಯ, ಮಹೀಂದ್ರಾ ಕಂಪನಿಯ ಈ ಜನಪ್ರಿಯ ಎಕ್ಸ್‌ಯುವಿ 700 ಎಸ್‌ಯುವಿ ಭಾರತೀಯ ಮಾರುಕಟ್ಟೆಯಲ್ಲಿ ಭರ್ಜರಿಯಾಗಿ ಮಾರಾಟ ಕಾಣುತ್ತಿದೆ. ಹೊಸ ಮಹೀಂದ್ರಾ XUV700 (Mahindra XUV700) ಎಸ್‍ಯುವಿಯು ಭಾರತೀಯ ಮಾರುಕಟ್ಟೆಯಲ್ಲಿ ಟಾಟಾ ಸಫಾರಿ ಮತ್ತು MG ಹೆಕ್ಟರ್ ಪ್ಲಸ್‌ ಎಸ್‍ಯುವಿಗಳಿಗೆ ಪೈಪೋಟಿ ನೀಡುತ್ತದೆ.

ಮಹೀಂದ್ರಾ XUV700 ಎಸ್‍ಯುವಿ ತನ್ನ ವಿಭಾಗದಲ್ಲಿ ಹೊಸ ವೈಶಿಷ್ಟ್ಯಗಳೊಂದಿಗೆ ಪ್ರತಿಸ್ಪರ್ಧಿಗಳಿಗೆ ಉತ್ತಮ ಪೈಪೋಟಿ ನೀಡುತ್ತಾ ಮುನ್ನುಗ್ಗುತ್ತಿದೆ. ಮುಂಬರುವ ತಿಂಗಳುಗಳಲ್ಲಿ ಹೊಸ ಅಪ್‌ಡೇಟ್‌ಗಳನ್ನು ಪಡೆಯುವ ಸಾಧ್ಯತೆ ಇದೆ. ಪ್ರಸ್ತುತ ಕಂಪನಿಯು ಈ 7-ಸೀಟರ್ ಫ್ಯಾಮಿಲಿ ಕಾರನ್ನು ತನ್ನ ಸೆಗ್‌ಮೆಂಟ್‌ನ ರಾಜ ಎಂದು ಬಣ್ಣಿಸಿದೆ.

ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತ ಆಟೋಮೊಬೈಲ್ ಸುದ್ದಿಗಳನ್ನು ಒದಗಿಸುತ್ತದೆ, ಎಲ್ಲಾ ಸಾಮಾಜಿಕ ಮಾಧ್ಯಮಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಹಂಚಿಕೊಳ್ಳುತ್ತದೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್ ಮತ್ತು ಯೂಟ್ಯೂಬ್ ಪೇಜ್‌ಗಳೊಂದಿಗೆ ಸಂಪರ್ಕದಲ್ಲಿರಿ. ನಿಮಗೆ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.

Article Published On: Monday, July 8, 2024, 8:30 [IST]
English summary
New 2024 mahindra xuv700 engine features price details
Read more on mahindra india
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+