ಹೊಸ 2024ರ ಟಾಟಾ ಆಲ್ಟ್ರೋಜ್ ರೇಸರ್ ರಿವ್ಯೂ ವಿಡಿಯೋ
ಕೊನೆಗೂ ಹೊಸ ಟಾಟಾ ಆಲ್ಟ್ರೋಜ್ ರೇಸರ್ ರಸ್ತೆಗಿಳಿದಿದೆ. Altroz ರೇಸರ್ ಕ್ಯಾಬಿನ್‌ನ ಒಳಗೆ ಸಾಮಾನ್ಯ ಹ್ಯಾಚ್‌ಬ್ಯಾಕ್‌ಗೆ ಹೋಲಿಸಿದರೆ ಬದಲಾವಣೆಗಳು ಬಹಳ ಸ್ಪಷ್ಟವಾಗಿ ಕಾಣುತ್ತವೆ. ಭಾರತದ ಮೊದಲ F1 ಡ್ರೈವರ್ ನರೇನ್ ಕಾರ್ತಿಕೇಯನ್ ಅವರ ಸಹಾಯದಿಂದ ಅಭಿವೃದ್ಧಿಪಡಿಸಲಾದ ಟಾಟಾ ಆಲ್ಟ್ರೋಜ್ ರೇಸರ್' ಪ್ರೀಮಿಯಂ ಹ್ಯಾಚ್‌ಬ್ಯಾಕ್ ಹಾಗೂ ಪರ್ಫಾಮೆನ್ಸ್ ಆವೃತ್ತಿಯಾಗಿದೆ. ಈ ಹೊಸ ಹ್ಯಾಚ್‌ಬ್ಯಾಕ್ ನಿಜವಾಗಿಯೂ ಎಷ್ಟು ಪರ್ಫಾಮೆನ್ಸ್ ಪ್ರೇರಿತ ಕಾರೆಂಬುದನ್ನು ತಿಳಿಯಲು ಕೊಯಮತ್ತೂರಿನ ಹೊಸ CoASTT ರೇಸ್ ಟ್ರ್ಯಾಕ್‌ನಲ್ಲಿ ನಾವು ಟಾಟಾ ಆಲ್ಟ್ರೋಜ್ ರೇಸರ್‌ನ ಓಡಿಸಿ ನೋಡಿದ್ದೇವೆ.
Tata Altroz ರೇಸರ್ ರಿವ್ಯೂ: 'ಟಾಟಾ ಆಲ್ಟ್ರೊಜ್ ರೇಸರ್' ನೋಡಲು ಥೇಟ್ ಸ್ಟ್ಯಾಂಡರ್ಡ್ ಆಲ್ಟ್ರೊಜ್ ಅನ್ನು ಹೋಲುತ್ತದೆ. ಆದರೆ ಮೇಲಿನ ವಿಭಾಗದಲ್ಲಿ ಬ್ಲಾಕ್ ಮತ್ತು ಕೆಳಗಿನ ವಿಭಾಗದಲ್ಲಿ ಡ್ಯುಯಲ್-ಟೋನ್ ನೋಟವನ್ನು ಅಳವಡಿಸಿಕೊಳ್ಳುವ ಜೊತೆಗೆ ಅಟಾಮಿಕ್ ಆರೆಂಜ್, ಪ್ಯೂರ್ ಗ್ರೇ ಮತ್ತು ಅವೆನ್ಯೂ ವೈಟ್ ಎಂಬ ಮೂರು ಬಣ್ಣದ ಆಯ್ಕೆಗಳಲ್ಲಿ ಹೊರಹೊಮ್ಮಿದೆ.

ಹೊಸ ಟಾಟಾ ಆಲ್ಟ್ರೋಜ್ ರೇಸರ್‌ನ ಎಲ್ಲಾ ಬಣ್ಣ ಆಯ್ಕೆಗಳು ಅವಳಿ ಬಿಳಿ ಪಟ್ಟಿಗಳನ್ನು ಹೊಂದಿದ್ದು, ಈ ಪಟ್ಟಿಗಳು ಬಾನೆಟ್ ಮತ್ತು ಹ್ಯಾಚ್‌ಬ್ಯಾಕ್‌ನ ರೂಫ್ ಮೇಲೆ ಚಲಿಸುತ್ತವೆ. ಇತರ ಬಾಹ್ಯ ವಿನ್ಯಾಸದ ಮುಖ್ಯಾಂಶಗಳಲ್ಲಿ ಬ್ಲಾಕ್ ಗ್ರಿಲ್, ORVM ಗಳು, ಪಿಲ್ಲರ್‌ಗಳು ಮತ್ತು ಅಲಾಯ್ ವೀಲ್‌ಗಳು (16 ಇಂಚುಗಳು) ಸೇರಿವೆ.
ಹೊಸ ಹ್ಯಾಚ್‌ಬ್ಯಾಕ್ "ರೇಸರ್" ಬ್ಯಾಡ್ಜ್‌ಗಳನ್ನು ಮುಂಭಾಗದ ವೀಲ್ ಆರ್ಚ್‌ಗಳ ಮೇಲಿ ನೀಡಲಾಗಿದೆ. ಸನ್‌ರೂಫ್, ಬೂಟ್ ಲಿಡ್‌ನಲ್ಲಿ ಐ-ಟರ್ಬೊ+ ಬ್ಯಾಡ್ಜಿಂಗ್, ಹಿಂಭಾಗದ ಸ್ಪಾಯ್ಲರ್ ಮತ್ತು ಡ್ಯುಯಲ್-ಟಿಪ್ ಎಕ್ಸಾಸ್ಟ್ ಸೆಟಪ್ ಅನ್ನು ಒಳಗೊಂಡಿದೆ. ಒಟ್ಟಾರೆ ಕಾರಿಗೆ ಹೊರಾಂಗಣದಲ್ಲಿ ಸ್ಪೋರ್ಟಿ ಲುಕ್ ನೀಡುವ ಮೂಲಕ ಆಕರ್ಷಣೆಯನ್ನು ಹೆಚ್ಚಿಸಿದೆ.


Click it and Unblock the Notifications








