ವಿಮಾನದಂತಹ ಸೌಕರ್ಯ: ಹೊಸ ಐರಾವತ ಕ್ಲಬ್‌ ಕ್ಲಾಸ್‌ 2.0 ವೋಲ್ವೋ ಬಸ್ ವಿಶೇಷತೆಗಳು!

ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮವು ತಮ್ಮ ಐಷಾರಾಮಿ ಬಸ್‌ ಫ್ಲೀಟ್‌ಗೆ ಇತ್ತೀಚೆಗಷ್ಟೆ 20 ಹೊಸ ಐರಾವತ ಕ್ಲಬ್‌ ಕ್ಲಾಸ್‌ 2.0 ವೋಲ್ವೋ ಬಸ್ಸು (Airavat Club Class 2.0 Volvo Bus)ಗಳನ್ನು ಸೇರಿಸಿದೆ. ಈ ಬಸ್‌ಗಳು 15 ಮೀಟರ್ ಉದ್ದವಿದ್ದು, 51 ಆಸನಗಳು 2x2 ಸಂರಚನೆಯೊಂದಿಗೆ ಪ್ರಯಾಣಿಕರಿಗೆ ಕುಳಿತುಕೊಳ್ಳುವ ವ್ಯವಸ್ಥೆ ಕಲ್ಪಿಸಲಾಗಿದೆ. ಬೆಂಕಿ ಅಪಘಾತಗಳ ಸಂದರ್ಭಗಳಲ್ಲಿ ನೀರನ್ನು ಸಿಂಪಡಿಸಲು ಪ್ರಯಾಣಿಕರ ಆಸನಗಳ ಎರಡೂ ಬದಿಗಳಲ್ಲಿರುವ 30 ನೊಝಲ್‌ಗಳ ನೀರು ಪೈಪುಗಳನ್ನು ಅಳವಡಿಸಲಾಗಿದ್ದು, ಇವು ಅತ್ಯಂತ ಸುರಕ್ಷಿತ ವೈಶಿಷ್ಟ್ಯಗಳನ್ನು ಒಳಗೊಂಡಿವೆ ಎಂದು ಕೆಎಸ್‌ಆರ್‌ಟಿಸಿ ತಿಳಿಸಿದೆ.

ತುರ್ತು ಪರಿಸ್ಥಿತಿಗಳಲ್ಲಿ ಪ್ರಯಾಣಿಕರ ಸುರಕ್ಷತೆಗಾಗಿ ಫೈರ್ ಅಲಾರ್ಮ್ ಮತ್ತು ಪ್ರೊಟೆಕ್ಷನ್ ಸಿಸ್ಟಮ್ (FAPS) ಸ್ಥಾಪಿಸಲಾಗಿದೆ. ರಾತ್ರಿ ಸಮಯದಲ್ಲಿ ಚಾಲನೆ ಮಾಡುವಾಗ ಹೆಚ್ಚಿನ ಸುರಕ್ಷತೆಗಾಗಿ ಹಿಂಬದಿ ಫಾಗ್ ಲೈಟ್‌ಗಳು, ಚಾಲಕರ ಅನುಕೂಲತೆಗಾಗಿ ಸುಲಭವಾಗಿ ಕೈಗೆಟುಕುವ ನಿಯಂತ್ರಕಗಳು ಮತ್ತು ಸ್ವಿಚ್‌ಗಳನ್ನು ನೀಡಲಾಗಿದೆ. ಈ ನಿಟ್ಟಿನಲ್ಲಿ ಹಳೆಯ ಬಸ್‌ಗಳಿಗಿಂತ ಮತ್ತಷ್ಟು ಸುರಕ್ಷತೆಯನ್ನು ಹೆಚ್ಚಿಸಲಾಗಿದೆ.

new-airavat-club-class-2-0-volvo-bus-top-things

ಹಳೆಯ ಬಸ್‌ಗಳಿಗಿಂತ ಒಟ್ಟಾರೆ ಶೇ20 ರಷ್ಟು ದೊಡ್ಡದಾಗಿರುವುದರಿಂದ ಹೆಚ್ಚು ಸಾಮರ್ಥ್ಯವನ್ನು ಹೊಂದಿರುವ ದೊಡ್ಡ ಲಗೇಜ್ ಸ್ಥಳವನ್ನು ಕೂಡ ಹೊಂದಿದೆ. ಉದ್ದದಲ್ಲಿ ಹಳೆಯ ಬಸ್‌ಗಳಿಗಿಂತ ಶೇ3.5 ರಷ್ಟು ಏರಿಕೆಯಾಗಿದ್ದು, ಪ್ರಯಾಣಿಕರ ಆಸನಗಳ ನಡುವೆ ಹೆಚ್ಚು ಸ್ಥಳವನ್ನು ಒದಗಿಸಲಾಗಿದೆ. ಎತ್ತರದಲ್ಲಿ ಶೇ5.6 ರಷ್ಟು ಏರಿಕೆಯಿಂದ ಹೆಚ್ಚಿನ ಆರಾಮದಾಯಕ ಪ್ರಯಾಣವನ್ನು ನೀಡುತ್ತದೆ.

ಹೊಸ ಪ್ಲಶ್ ಇಂಟೀರಿಯರ್ಸ್ ಮತ್ತು ಸ್ಕ್ಯಾಂಡಿನೇವಿಯನ್ ಶೈಲಿಯ ಎಕ್ಸ್‌ಟೀರಿಯರ್ಸ್‌ನ್ನು ಹೊಂದಿದ್ದು, ಪ್ರಯಾಣಿಕರು ಪ್ರೀಮಿಯಂ ಅನುಭವ ಮತ್ತು ಉತ್ತಮ ಆಸನ ಸೌಕರ್ಯ ಪಡೆಯಬಹುದು. ಹಾಗೆಯೇ ಚಾಲಕರ ದೃಶ್ಯಾವಧಿಯನ್ನು ಸುಧಾರಿಸಲು ಮತ್ತು ಬ್ಲೈಂಡ್ ಸ್ಪಾಟ್ ಕಡಿಮೆ ಮಾಡಲು ಮುಂಭಾಗದ ಗಾಜು ಶೇ9.5 ರಷ್ಟು ಅಗಲವಾಗಿದೆ.

new-airavat-club-class-2-0-volvo-bus-top-things

ಈ ಅತ್ಯಾಧುನಿಕ ಐರಾವತ್ ಕ್ಲಬ್ ಕ್ಲಾಸ್ 2.0 ಬಸ್ಸುಗಳ ಬೆಲೆಯು ತಲಾ 1.78 ಕೋಟಿ ರೂ.ಗಳಾಗಿದ್ದು, ಶಕ್ತಿಯುತ ಹಾಲೋಜನ್ ಹೆಡ್‌ಲೈಟ್‌ಗಳು ಮತ್ತು ಡೇಟೈಮ್ ರನ್ನಿಂಗ್ ಲೈಟ್‌ಗಳನ್ನು (DRL) ಹೊಂದಿದೆ. ಇದರ ಏರೋಡೈನಮಿಕ್ ವಿನ್ಯಾಸವು ಬಸ್‌ಗೆ ಉತ್ತಮ ಮೈಲೇಜ್ ಒದಗಿಸುತ್ತದೆ ಎಂದು ಕೆಎಸ್‌ಆರ್‌ಟಿಸಿ ಹೇಳಿದೆ.

ಮೊಬೈಲ್ ಚಾರ್ಜಿಂಗ್ ಪಾಯಿಂಟ್‌ಗಳಿಗಾಗಿ ಯುಎಸ್‌ಬಿ ಮತ್ತು C-ಟೈಪ್ ಆಯ್ಕೆ ನೀಡಲಾಗಿದೆ. ದೊಡ್ಡ ಏರ್ ಡಕ್ಟ್ ಹೊಂದಿರುವುದರಿಂದ ಹೆಚ್ಚಿನ ಏರ್ ಕಂಡೀಷನಿಂಗ್ ವ್ಯವಸ್ಥೆ ಹೊಂದಿದೆ. ಫೈರ್ ಅಲಾರಂ ಮತ್ತು ಪ್ರೊಟೆಕ್ಷನ್ ಸಿಸ್ಟಮ್ (ಎಫ್ಎಪಿಎಸ್) ಸೇರಿದಂತೆ ಹಲವಾರು ನವೀಕರಣಗಳನ್ನು ಒಳಗೊಂಡಿವೆ. 20 ಹೊಸ ಐರಾವತ ಕ್ಲಬ್‌ ಕ್ಲಾಸ್‌ 2.0 ವೋಲ್ವೋ ಬಸ್ಸುಗಳು ಕಾರ್ಯಾಚರಿಸುವ ಮಾರ್ಗಗಳನ್ನು ಇಲ್ಲಿ ನೋಡೋಣ.

new-airavat-club-class-2-0-volvo-bus-top-things

ಐರಾವತ ಕ್ಲಬ್‌ ಕ್ಲಾಸ್‌ ವಾಹನಗಳನ್ನು ಈ ಮಾರ್ಗಗಳಲ್ಲಿ ಕಾರ್ಯಾಚರಣೆಗೊಳಿಸಲು ಯೋಜಿಸಲಾಗಿದೆ. ಬೆಂಗಳೂರು-ಚನ್ನೈ ನಡುವೆ 1 ಬಸ್, ಬೆಂಗಳೂರು-ರಾಯಚೂರು ನಡುವೆ 2 ಬಸ್‌, ಬೆಂಗಳೂರು-ಶ್ರೀ ಹರಿಕೋಟಾ ನಡುವೆ 2 ಬಸ್‌, ಮೈಸೂರು-ಬೆಂಗಳೂರು ನಡುವೆ 1 ಬಸ್, ಬೆಂಗಳೂರು-ಹೈದರಾಬಾದ್ ನಡುವೆ 1 ಬಸ್, ಮೈಸೂರು-ಬೆಂಗಳೂರು ನಡುವೆ 1 ಬಸ್, ಬೆಂಗಳೂರು-ಕಾಸರಗೂಡು ನಡುವೆ 2 ಬಸ್‌, ಬೆಂಗಳೂರು-ಕ್ಯಾಲಿಕಟ್ ನಡುವೆ 2 ಬಸ್ಸುಗಳು ಕಾರ್ಯಾಚರಿಸಲಿವೆ.

ಬೆಂಗಳೂರು-ಬಳ್ಳಾರಿ ನಡುವೆ 1 ಬಸ್, ಕುಂದಾಪುರ-ಬೆಂಗಳೂರು ನಡುವೆ 1 ಬಸ್, ಶಿವಮೊಗ್ಗ-ಬೆಂಗಳೂರು ನಡುವೆ 1 ಬಸ್, ಬೆಂಗಳೂರು - ತಿರುಪತಿ ನಡುವೆ 1 ಬಸ್, ದಾವಣಗೆರೆ-ಬೆಂಗಳೂರು ನಡುವೆ 1 ಬಸ್, ಮಂಗಳೂರು-ಬೆಂಗಳೂರು ನಡುವೆ 1 ಬಸ್, ಬೆಂಗಳೂರು-ತಿರುಪತಿ ನಡುವೆ 1 ಬಸ್ ಕಾರ್ಯಾಚರಿಸಲಿವೆ.

ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊ ಗಳನ್ನು ಪಡೆಯಲು ನಮ್ಮ ಫೇಸ್‌ ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.

Article Published On: Monday, November 11, 2024, 11:34 [IST]
English summary
New airavat club class 2 0 volvo bus top things
Read more on offbeat india
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+