ಅಬ್ಬಾ.. 15 ಲಕ್ಷಕ್ಕೆ ಈ ಬಿಎಂಡಬ್ಲ್ಯು ಸ್ಕೂಟರ್ ಖರೀದಿಸುತ್ತೀರಾ? ವಿಶೇಷತೆಗಳೇನು?

ಐಷಾರಾಮಿ ದ್ವಿಚಕ್ರ ತಯಾರಕ ಕಂಪನಿಯಾದ ಬಿಎಂಡಬ್ಲ್ಯು ಮೋಟೊರಾಡ್ ಇಂಡಿಯಾ (BMW Motorrad India) ತನ್ನ ಬಹುನಿರೀಕ್ಷಿತ CE 04 ಪ್ರೀಮಿಯಂ ಎಲೆಕ್ಟ್ರಿಕ್ ಸ್ಕೂಟರ್ ಅನ್ನು ಬಿಡುಗಡೆ ಮಾಡುವುದರೊಂದಿಗೆ ಅಧಿಕೃತವಾಗಿ ಭಾರತದಲ್ಲಿ ಎಲೆಕ್ಟ್ರಿಕ್ ದ್ವಿಚಕ್ರ ವಾಹನ ವಿಭಾಗಕ್ಕೆ ಪ್ರವೇಶಿಸಿದೆ. ಬಿಎಂಡಬ್ಲ್ಯು CE 04 (BMW CE 04) ಪ್ರೀಮಿಯಂ ಎಲೆಕ್ಟ್ರಿಕ್ ಸ್ಕೂಟರ್ ಎಕ್ಸ್ ಶೋರೂಂ ಪ್ರಕಾರ ರೂ. 14.90 ಲಕ್ಷವಾಗಿದೆ. ಇದು ಭಾರತೀಯ ಮಾರುಕಟ್ಟೆಯಲ್ಲಿ ಅತ್ಯಂತ ದುಬಾರಿ ಎಲೆಕ್ಟ್ರಿಕ್ ಸ್ಕೂಟರ್ ಆಗಿದೆ. ಅಲ್ಲದೇ ಬಿಎಂಡಬ್ಲ್ಯು ಭಾರತಕ್ಕೆ ಎಲೆಕ್ಟ್ರಿ ದ್ವಿಚಕ್ರ ವಾಹನ ತಂದ ಮೊದಲ ಪ್ರೀಮಿಯಂ ದ್ವಿಚಕ್ರ ವಾಹನ ಬ್ರಾಂಡ್ ಆಗಿದೆ.

ಈ ದುಬಾರಿ ಬಿಎಂಡಬ್ಲ್ಯು ಎಲೆಕ್ಟ್ರಿಕ್ ಸ್ಕೂಟರ್ ಖರೀದಿಗಾಗಿ ಬುಕ್ಕಿಂಗ್ ಅನ್ನು ಈ ತಿಂಗಳ ಆರಂಭದಲ್ಲಿ ಪ್ರಾರಂಭವಾಯಿತು ಮತ್ತು ವಿತರಣೆಗಳು ಸೆಪ್ಟೆಂಬರ್‌ನಿಂದ ಪ್ರಾರಂಭವಾಗುತ್ತವೆ. ಈ ಹೊಸ ಬಿಎಂಡಬ್ಲ್ಯು ಎಲೆಕ್ಟ್ರಿಕ್ ಸ್ಕೂಟರ್ ಅವಂತ್ಗಾರ್ಡ್ ಬ್ಲೂ ಮತ್ತು ಲೈಟ್ ವೈಟ್ ಎಂಬ ಬಣ್ಣಗಳ ಆಯ್ಕೆಯೊಂದಿಗೆ ಲಭ್ಯವಿದೆ. ಈ ಪ್ರೀಮಿಯಂ ಎಲೆಕ್ಟ್ರಿಕ್ ಸ್ಕೂಟರ್ ಬಗ್ಗೆ ಹೆಚ್ಚಿನ ಮಾಹಿತಿ ಇಲ್ಲಿದೆ.

BMW CE 04 Electric Scooter

ವಿನ್ಯಾಸ: ಈ ಬಿಎಂಡಬ್ಲ್ಯು CE 04 ಪ್ರೀಮಿಯಂ ಎಲೆಕ್ಟ್ರಿಕ್ ಸ್ಕೂಟರ್ ವಿನ್ಯಾಸದ ಬಗ್ಗೆ ಹೇಳುವುದಾದರೆ, ಈ ಬೈಕಿನ ಮ್ಯಾಕ್ಸಿ-ಶೈಲಿಯ ಸ್ಕೂಟರ್ ವಿನ್ಯಾಸವನ್ನು ಹೊಂದಿದೆ. ಈ ಎಲೆಕ್ಟ್ರಿಕ್ ಸ್ಕೂಟರ್ ಪ್ರೊಫೈಲ್, ಫ್ಲಾಟ್ ಬೆಂಚ್-ರೀತಿಯ ಸೀಟ್ ಮತ್ತು ಸಂಪೂರ್ಣ ಎಲ್ಇಡಿ ಲೈಟ್ ನೊಂದಿಗೆ ಬಂದಿದೆ. ಒಟ್ಟಾರೆಯಾಗಿ ಈ ಎಲೆಕ್ಟ್ರಿಕ್ ಸ್ಕೂಟರ್ ಅಗ್ರೇಸಿವ್ ಲುಕ್ ಅನ್ನು ಹೊಂದಿದೆ.

ಉದ್ದಳತೆ: ಈ ಹೊಸ ಬಿಎಂಡಬ್ಲ್ಯು CE 04 ಪ್ರೀಮಿಯಂ ಎಲೆಕ್ಟ್ರಿಕ್ ಸ್ಕೂಟರ್ 2,285 ಎಂಎಂ ಉದ್ದ, 1,150 ಎಂಎಂ ಎತ್ತರ ಮತ್ತು 855 ಎಂಎಂ ಅಗಲವನ್ನು ಹೊಂದಿದೆ. ಇನ್ನು ಸ್ಟ್ಯಾಂಡರ್ಡ್ ಸೀಟ್ ಎತ್ತರವು 780 ಎಂಎಂ ಆಗಿದೆ. ಇದನ್ನು ಆರಾಮದಾಯಕವಾಗಿ 800 ಎಂಎಂವರೆಗೆಗೆ ಸರಿಹೊಂದಿಸಬಹುದು.

BMW CE 04 Electric Scooter

ಫೀಚರ್ಸ್: ಈ ಪ್ರೀಮಿಯಂ ಎಲೆಕ್ಟ್ರಿಕ್ ಸ್ಕೂಟರ್ ಫೀಚರ್ಸ್ ಬಗ್ಗೆ ಹೇಳುವುದಾದರೆ, ಇದರಲ್ಲಿ 10.25-ಇಂಚಿನ TFT ಬಣ್ಣದ ಡಿಸ್ ಪ್ಲೇಯನ್ನು ಹೊಂದಿದ್ದು, ಇದು ನ್ಯಾವಿಗೇಷನ್, ಕನೆಕ್ಟಿವಿಟಿ, ಪರ್ಫಾಮೆನ್ಸ್ ಡೇಟಾ, ರೇಂಜ್ ಮಾಹಿತಿ ಮತ್ತು ಚಾರ್ಜಿಂಗ್ ಸಮಯವನ್ನು ನೀಡುತ್ತದೆ. ಈ ಪ್ರೀಮಿಯಂ ಎಲೆಕ್ಟ್ರಿಕ್ ಸ್ಕೂಟರ್ ನಲ್ಲಿ ಮೂರು ರೈಡಿಂಗ್ ಮೋಡ್‌ಗಳೊಂದಿಗೆ ಬರುತ್ತದೆ.

ಇದರೊಂದಿಗೆ ಈ ಪ್ರೀಮಿಯಂ ಎಲೆಕ್ಟ್ರಿಕ್ ಸ್ಕೂಟರ್ ಟ್ರಾಕ್ಷನ್ ಕಂಟ್ರೋಲ್, ಎಬಿಎಸ್, ಟೈಪ್-ಸಿ ಚಾರ್ಜಿಂಗ್ ಪೋರ್ಟ್ ಮತ್ತು ಎಲೆಕ್ಟ್ರಾನಿಕ್ ರಿವರ್ಸ್ ಫಂಕ್ಷನ್ ಅನ್ನು ಹೊಂದಿದೆ. ಇದಲ್ಲದೆ, ಕಸ್ಟಮೈಸ್ ಮಾಡಲು ಹಲವಾರು ಆಯ್ಕೆಯ ಫಿಚರ್ಸ್ ಹೊಂದಿವೆ. ಇನ್ನು ಪ್ರೀಮಿಯಂ ಸ್ಕೂಟರ್ ಭರ್ಜರಿ ಪರ್ಫಾಮೆನ್ಸ್ ನೀಡುವ ಮಾದರಿಯಾಗಿದೆ.

BMW CE 04 Electric Scooter

ಬ್ಯಾಟರಿ ಪ್ಯಾಕ್: ಬಿಎಂಡಬ್ಲ್ಯು CE 04 ಪ್ರೀಮಿಯಂ ಎಲೆಕ್ಟ್ರಿಕ್ ಸ್ಕೂಟರ್ ನಲ್ಲಿ 15 kW ಲಿಕ್ವಿಡ್-ಕೂಲ್ಡ್ ಎಲೆಕ್ಟ್ರಿಕ್ ಮೋಟಾರ್‌ನೊಂದಿಗೆ ಸಜ್ಜುಗೊಂಡಿದೆ, CE 04 ಗರಿಷ್ಠ 41 bhp ಪವರ್ ಮತ್ತು 62 Nm ಟಾರ್ಕ್ ಅನ್ನು ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದೆ.ಈ ಬಿಎಂಡಬ್ಲ್ಯು ಸ್ಕೂಟರ್ 2.6 ಸೆಕೆಂಡುಗಳಲ್ಲಿ 0 ರಿಂದ 50 ಕಿ.ಮೀ ವೇಗವನ್ನು ಪಡೆದುಕೊಳ್ಳುತ್ತದೆ.

ಇನ್ನು ಎಲೆಕ್ಟ್ರಿಕ್ ಸ್ಕೂಟರ್ 120 ಕಿ.ಮೀ ಟಾಪ್ ಸ್ಪೀಡ್ ಅನ್ನು ಹೊಂದಿದೆ. ಇ-ಸ್ಕೂಟರ್ 8.9 kWh ಬ್ಯಾಟರಿ ಪ್ಯಾಕ್ ಅನ್ನು ಹೊಂದಿದೆ, ಇದು ಸಿಂಗಲ್ ಚಾರ್ಜ್‌ನಲ್ಲಿ 130 ಕಿಮೀ ರೇಂಜ್ ನೀಡುವ ನಿರೀಕ್ಷೆಯಿದೆ. ಈ ಬಿಎಂಡಬ್ಲ್ಯು CE 04 ಪ್ರೀಮಿಯಂ ಎಲೆಕ್ಟ್ರಿಕ್ ಸ್ಕೂಟರ್ 15-ಇಂಚಿನ ವ್ಹೀಲ್ ಗಳನ್ನು ಹೊಂದಿವೆ.

ಈ ಬಿಎಂಡಬ್ಲ್ಯು CE 04 ಪ್ರೀಮಿಯಂ ಎಲೆಕ್ಟ್ರಿಕ್ ಸ್ಕೂಟರ್ ಸಸ್ಪೆಕ್ಷನ್ ಸೆಟಪ್ ಬಗ್ಗೆ ಹೇಳುವುದಾದರೆ, ಈ ಮುಂಭಾಗದಲ್ಲಿ ಟೆಲಿಸ್ಕೋಪಿಕ್ ಫೋರ್ಕ್‌ನೊಂದಿಗೆ ಸ್ಟೀಲ್ ಡಬಲ್-ಲೂಪ್ ಫ್ರೇಮ್ ಅನ್ನು ಬಳಸುತ್ತದೆ ಮತ್ತು ಹಿಂಭಾಗದಲ್ಲಿ ನೇರವಾಗಿ ಹಿಂಜ್ ಮಾಡಲಾದ ಸಿಂಗಲ್-ಬದಿಯ ಸ್ವಿಂಗರ್ಮ್ ಅನ್ನು ಬಳಸುತ್ತದೆ. ಈ ಸ್ಕೂಟರ್ ಮುಂಭಾಗ ಮತ್ತು ಹಿಂಭಾಗದಲ್ಲಿ 265 ಎಂಎಂ ಡಿಸ್ಕ್ ಬ್ರೇಕ್‌ಗಳನ್ನು ಹೊಂದಿವೆ.

ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊ ಗಳನ್ನು ಪಡೆಯಲು ನಮ್ಮ ಫೇಸ್‌ ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.

More from DriveSpark

Article Published On: Thursday, July 25, 2024, 11:46 [IST]
English summary
New bmw ce 04 electric scooter top things details
Read more on bmw motorrad india
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+