ಬಿಎಂಡಬ್ಲ್ಯು ಹೊಸ 450cc ಬೈಕ್ ಲಾಂಚ್‌ಗೆ ಸಜ್ಜು: KTM 390 Duke ಗೆ ಇದೇನಾ ಬಿಗ್ ಶಾಕ್?
ಬಿಎಂಡಬ್ಲ್ಯು ಮೋಟೊರಾಡ್ ಇಂಡಿಯಾ ನಾಳೆ, ಅಂದರೆ 2026ರ ಅಕ್ಟೋಬರ್ 1ರಂದು ತನ್ನ ಹೊಸ 450cc ರೋಡ್‌ಸ್ಟಾರ್ ಬೈಕ್ ಅನಾವರಣಗೊಳಿಸಲು ಸಜ್ಜಾಗಿದೆ. ಭಾರತೀಯ ಕಾಲಮಾನ ಸಂಜೆ 5:30ಕ್ಕೆ ಈ ಬೈಕ್ ಪ್ರದರ್ಶನಗೊಳ್ಳಲಿದ್ದು, ಇದು 'ಬಿಎಂಡಬ್ಲ್ಯು ಎಫ್ 450 ಆರ್' ಇರಬಹುದು ಎಂದು ಅಂದಾಜಿಸಲಾಗಿದೆ. ಕಂಪನಿಯು ತನ್ನ ಸೋಷಿಯಲ್ ಮೀಡಿಯಾ ಪೇಜ್‌ಗಳಲ್ಲಿ ಇದರ ಟೀಸರ್ ಹಂಚಿಕೊಂಡಿದ್ದು, ಬೈಕ್ ಪ್ರಿಯರಲ್ಲಿ ಇದರ ಬೆಲೆ, ಫೀಚರ್‌ಗಳು, ಬುಕಿಂಗ್ ಹಾಗೂ ಕಾಂಪಿಟಿಟರ್ಸ್ ಬಗ್ಗೆ ಕುತೂಹಲ ಹೆಚ್ಚಾಗಿದೆ.
ಟೀಸರ್‌ನಲ್ಲಿ ಕಾಣುವ ಲುಕ್ ನೋಡಿದರೆ, ಇದು ಆಪ್‌ಸೈಡ್-ಡೌನ್ ಫೋರ್ಕ್ ಮತ್ತು ರೋಡ್-ಫೋಕಸ್ಡ್ ವಿನ್ಯಾಸ ಹೊಂದಿರುವ ಕಾಂಪ್ಯಾಕ್ಟ್ ಸ್ಟ್ರೀಟ್‌ಫೈಟರ್ ಬೈಕ್‌ನಂತಿದೆ. ಈ ಬೈಕ್, ಬಿಎಂಡಬ್ಲ್ಯುನ ಎಫ್ 450 ಜಿಎಸ್‌ನಲ್ಲಿರುವ ಹೊಸ 420cc ಪ್ಯಾರಲಲ್-ಟ್ವಿನ್ ಪ್ಲಾಟ್‌ಫಾರ್ಮ್ ಅನ್ನೇ ಹೊಂದಿರುವ ಸಾಧ್ಯತೆಯಿದೆ. ಜಿಎಸ್ ಆವೃತ್ತಿಯಲ್ಲಿ ಈ ಎಂಜಿನ್ 48 hp ಪವರ್ ಹಾಗೂ 43 Nm ಟಾರ್ಕ್ ಉತ್ಪಾದಿಸುತ್ತದೆ. ಇಷ್ಟೇ ಅಲ್ಲದೆ, 6.5-ಇಂಚಿನ ಟಿಎಫ್‌ಟಿ ಸ್ಕ್ರೀನ್, ರೈಡಿಂಗ್ ಮೋಡ್‌ಗಳು, ಎಬಿಎಸ್ ಪ್ರೊ ಮತ್ತು ಈಸಿ ರೈಡ್ ಕ್ಲಚ್ ಫೀಚರ್‌ಗಳು ಇದರಲ್ಲಿರಲಿವೆ. ಜೊತೆಗೆ ಶಾರ್ಟ್ ಸಸ್ಪೆನ್ಷನ್ ಟ್ರಾವೆಲ್ ಮತ್ತು ಸಿಟಿ ರೈಡಿಂಗ್‌ಗೆ ತಕ್ಕಂತೆ ಆರಾಮದಾಯಕ ರೈಡಿಂಗ್ ಪೊಸಿಷನ್ ನಿರೀಕ್ಷಿಸಬಹುದು.

BMW F 450 R ನಿರೀಕ್ಷಿತ ಬೆಲೆ ಮತ್ತು ಬುಕಿಂಗ್ ವಿವರ
ಮಾರುಕಟ್ಟೆಯ ಲೆಕ್ಕಾಚಾರಗಳ ಪ್ರಕಾರ, ಈ ರೋಡ್‌ಸ್ಟಾರ್ ಬೈಕ್ 4.70 ಲಕ್ಷ ರೂ. ಎಕ್ಸ್-ಶೋರೂಮ್ ಬೆಲೆಯಲ್ಲಿ ಬಿಡುಗಡೆಯಾಗಿದ್ದ ಎಫ್ 450 ಜಿಎಸ್‌ಗಿಂತ ಕಡಿಮೆ ಬೆಲೆಗೆ ಲಭ್ಯವಾಗಲಿದೆ. ಭಾರತದ ಬಿಎಂಡಬ್ಲ್ಯು ಲೈನ್‌ಅಪ್‌ನಲ್ಲಿ ಇದು ಜಿಎಸ್‌ಗಿಂತ ಕೆಳಗಿನ ಕ್ರಮಾಂಕದಲ್ಲಿ ಸ್ಥಾನ ಪಡೆಯಲಿದೆ ಎಂದು ಹಲವು ವರದಿಗಳು ತಿಳಿಸಿವೆ. ಕಂಪನಿ ಇನ್ನೂ ಬುಕಿಂಗ್ ಅಥವಾ ಡೆಲಿವರಿ ದಿನಾಂಕವನ್ನು ಘೋಷಿಸಿಲ್ಲ. ನಾಳೆ ಸಂಜೆ 5:30ರ ಅನಾವರಣದ ನಂತರ ಡೀಲರ್‌ಗಳ ಬಳಿ ಹೆಚ್ಚಿನ ಮಾಹಿತಿ ಲಭ್ಯವಾಗುವ ನಿರೀಕ್ಷೆಯಿದೆ.
BMW F 450 R ಸ್ಪೆಸಿಫಿಕೇಶನ್ ಮತ್ತು ಫೀಚರ್‌ಗಳು
ಜಿಎಸ್ ಆವೃತ್ತಿಯ ಹಾರ್ಡ್‌ವೇರ್ ಇದಕ್ಕೂ ಮುಂದುವರಿದರೆ, ಬ್ಲೂಟೂತ್ ಬೆಂಬಲಿಸುವ ದೊಡ್ಡ ಟಿಎಫ್‌ಟಿ ಸ್ಕ್ರೀನ್ ಸಿಗಲಿದೆ. ಮಲ್ಟಿಪಲ್ ರೈಡ್ ಮೋಡ್‌ಗಳು, ಟ್ರ್ಯಾಕ್ಷನ್ ಕಂಟ್ರೋಲ್ ಹಾಗೂ ಡ್ಯುಯಲ್-ಚಾನೆಲ್ ಎಬಿಎಸ್ ನಂತಹ ಫೀಚರ್‌ಗಳು ಇರಲಿವೆ. ನಗರದ ಟ್ರಾಫಿಕ್‌ನಲ್ಲಿ ಸುಲಭವಾಗಿ ಬೈಕ್ ರೈಡ್ ಮಾಡಲು ಬಿಎಂಡಬ್ಲ್ಯುನ 'ಈಸಿ ರೈಡ್ ಕ್ಲಚ್' ನೆರವಾಗಲಿದೆ. ಈಗಾಗಲೇ ಜಿಎಸ್ ಮಾಡೆಲ್‌ನಲ್ಲಿರುವ ಈ ಎಲೆಕ್ಟ್ರಾನಿಕ್ಸ್, ಭಾರತದ ಡೈಲಿ ಕಮ್ಯೂಟಿಂಗ್ ಮತ್ತು ವೀಕೆಂಡ್ ರೈಡ್‌ಗಳಿಗೆ ಸಖತ್ ಸೂಟ್ ಆಗಲಿವೆ.
BMW F 450 R ಯಾರಿಗೆ ಪೈಪೋಟಿ?
ಈ ಎಫ್ 450 ಆರ್ ಬೈಕ್ ಮಾರುಕಟ್ಟೆಯಲ್ಲಿ ಕೆಟಿಎಂ 390 ಡ್ಯೂಕ್, ಏಪ್ರಿಲಿಯಾ ಆರ್‌ಎಸ್ 457 ಮತ್ತು ಟ್ರಯಂಫ್ ಟ್ರೈಡೆಂಟ್ 660 ಬೈಕ್‌ಗಳಿಗೆ ಸವಾಲು ಒಡ್ಡಲಿದೆ. ಸುಮಾರು 3.45 ಲಕ್ಷ ರೂ. ಬೆಲೆಯ ಕೆಟಿಎಂ ಸಖತ್ ವ್ಯಾಲ್ಯೂ ಫಾರ್ ಮನಿ ಎನಿಸಿಕೊಂಡಿದ್ದರೆ, 4.22 ಲಕ್ಷ ರೂ. ಆಸುಪಾಸಿನ ಏಪ್ರಿಲಿಯಾ ಟ್ವಿನ್ ಸಿಲಿಂಡರ್ ಹಾಗೂ ಸುಧಾರಿತ ಎಲೆಕ್ಟ್ರಾನಿಕ್ಸ್ ಹೊಂದಿದೆ. ಇನ್ನು 8.99 ಲಕ್ಷ ರೂ. ಬೆಲೆಯ ಟ್ರಯಂಫ್ ಟ್ರಿಪಲ್, ಬಿಗ್-ಬೈಕ್ ಪರ್ಫಾರ್ಮೆನ್ಸ್ ನೀಡುತ್ತದೆ. 200-300cc ಬೈಕ್‌ಗಳಿಂದ ನೆಕ್ಸ್ಟ್ ಲೆವೆಲ್‌ಗೆ ಅಪ್‌ಗ್ರೇಡ್ ಆಗಲು ಕಾಯುತ್ತಿರುವ ರೈಡರ್‌ಗಳು ನಾಳೆ ಅನಾವರಣಗೊಳ್ಳಲಿರುವ ಬಿಎಂಡಬ್ಲ್ಯು ಬೈಕ್ ಮೇಲೆ ಕಣ್ಣಿಡುವುದು ಒಳ್ಳೆಯದು.


Click it and Unblock the Notifications
