ಜಗತ್ತು ನಿಬ್ಬೆರಗಾಗುವಂತೆ ಮಾಡಿದ ಚೀನಾ ಕಂಪನಿ: ಭಾರತದಲ್ಲೂ ನಂ.1 ಎಲೆಕ್ಟ್ರಿಕ್ ಕಾರು ಕಂಪನಿ ಆಗುತ್ತಾ?

ಜನಪ್ರಿಯ ಬಿವೈಡಿ (BYD) ಭಾರತದ ಎಲೆಕ್ಟ್ರಿಕ್ ಕಾರು ಮಾರುಕಟ್ಟೆಯಲ್ಲಿ ನಿಧಾನವಾಗಿ ಜನಪ್ರಿಯತೆ ಗಳಿಸುತ್ತಿದೆ. ಗ್ರಾಹಕರ ಸ್ಪಂದನೆಗೆ ತಕ್ಕಂತೆ ಕಂಪನಿಯು ದೇಶದ ಪ್ರಮುಖ ನಗರಗಳಲ್ಲಿ ಹೊಸ ಶೋರೂಂಗಳನ್ನು ತೆರೆಯುತ್ತಿದೆ. ಬಿವೈಡಿ ಕಂಪನಿಯು ಭಾರತೀಯ ಮಾರುಕಟ್ಟೆಯಲ್ಲಿ ಆಕರ್ಷಕ ಕಾರುಗಳನ್ನು ಬಿಡುಗಡೆಗೊಳಿಸಿ ಭಾರೀ ಸಂಚಲನನ್ನು ಸೃಷ್ಟಿಸಿದೆ. ಈ ಬಿವೈಡಿ ಕಂಪನಿಯು ವಿಶ್ವದ ಅತಿದೊಡ್ಡ ಎಲೆಕ್ಟ್ರಿಕ್ ವಾಹನ ತಯಾರಕರಾಗಿದ್ದಾರೆ. ಭಾರತದ ಕಾರು ಎಲೆಕ್ಟ್ರಿಕ್ ವಿಭಾಗದಲ್ಲೂ ಪಾರುಪತ್ಯ ಸಾಧಿಸಲು ಸಜ್ಜಾಗುತ್ತಿದೆ. ಬಿವೈಡಿ ಕಂಪನಿಯು ಭಾರತದಲ್ಲಿ ಆಟ್ಟೊ 3 ಎಸ್‍ಯುವಿ, ಸೀಲ್ ಸೆಡಾನ್ ಮತ್ತು ಇಮ್ಯಾಕ್ 7 ಎಂಬ ಎಲೆಕ್ಟ್ರಿಕ್ ಕಾರುಗಳನ್ನು ಮಾರಾಟ ಮಾಡುತ್ತಿದೆ.

ಭಾರತದಲ್ಲಿ ಎಸ್‍ಯುವಿಗಳಿಗೆ ಹೆಚ್ಚು ಬೇಡಿಕೆಯನ್ನು ಹೊಂದಿದೆ. ಇದರಿಂದ ಬಿವೈಡಿ ಕಂಪನಿಯು ಭಾರತದಲ್ಲಿ ಹೊಸ ಎಸ್‌ಯುವಿಯನ್ನು ಪರಿಚಯಿಸಲು ಮುಂದಾಗಿದೆ. ಇದರ ಭಾಗವಾಗಿ ಬಿವೈಡಿ ಕಂಪನಿಯ ಅಂಗಸಂಸ್ಥೆ ಬ್ರಾಂಡ್ ಡೆನ್ಜಾದ ಪ್ರಮುಖ ಸ್ಪೋರ್ಟ್ ಯುಟಿಲಿಟಿ ವಾಹನ N9 ಭಾರತದಲ್ಲಿ ಪೇಟೆಂಟ್ ಪಡೆದುಕೊಂಡಿದೆ. ಇತ್ತೀಚೆಗೆ ಗುವಾಂಗ್‌ಝೌ ಆಟೋ ಶೋದಲ್ಲಿ ಅನಾವರಣಗೊಂಡ ಈ ಎಲೆಕ್ಟ್ರಿಕ್ ಎಸ್‌ಯುವಿ ಸಾಕಷ್ಟು ಗಮನ ಸೆಳೆದಿದೆ.

BYD Denza N9

ಕಿಯಾ ಇವಿ9 ನಂತಹ ಐಷಾರಾಮಿ ಎಲೆಕ್ಟ್ರಿಕ್ ಎಸ್‍ಯುವಿಗಳಿಗೆ ಪೈಪೋಟಿ ನೀಡಲು ಬಿವೈಡಿ ಡೆನ್ಜಾ N9 ಎಸ್‍ಯುವಿಯು ಬರುತ್ತಿದೆ. ಚೀನಾದಲ್ಲಿ ಬಿವೈಡಿ N9 ಎಸ್‍ಯುವಿಯು ಸಂಪೂರ್ಣ ಎಲೆಕ್ಟ್ರಿಕ್ ಆವೃತ್ತಿಯ ಹೊರತಾಗಿ, ಕಂಪನಿಯು ಪ್ಲಗ್-ಇನ್ ಹೈಬ್ರಿಡ್ ಆವೃತ್ತಿಯನ್ನು ಸಹ ಪರಿಚಯಿಸಿದೆ. ಡೆನ್ಜಾ N9 ಅನೇಕ ಜಾಗತಿಕ ಮಾರುಕಟ್ಟೆಗಳಲ್ಲಿ ಬಿಡುಗಡೆ ಮಾಡಲು ಸಿದ್ಧವಾಗಿರುವ ಬಹುಮುಖ ವಾಹನವಾಗಿದೆ.

ಭವಿಷ್ಯದಲ್ಲಿ ಭಾರತದಲ್ಲಿ ಈ ಹೊಸ ಎಸ್‍ಯುವಿಯನ್ನು ಬಿಡುಗಡೆಗೊಳಿಸಲು ಇದೀಗ ಈ ಮಾದರಿಗೆ ಪೇಟೆಂಟ್ ಪಡೆದುಕೊಂಡಿದೆ. ಭಾರತದಲ್ಲಿ ಪ್ರೀಮಿಯಂ ಮತ್ತು ಐಷಾರಾಮಿ ಕಾರುಗಳನ್ನು ಖರೀದಿಸಲು ಹೆಚ್ಚಿನ ಜನರು ಬರುತ್ತಿರುವುದರಿಂದ ಬಿವೈಡಿ ಡೆನ್ಜಾ N9 ಎಲೆಕ್ಟ್ರಿಕ್ ಮತ್ತು ಹೈಬ್ರಿಡ್ ಮಾದರಿಗಳಾಗಿ ಬರಬಹುದು. ಮುಂದಿನ ದಿನಗಳಲ್ಲಿ ಈ ಬಗ್ಗೆ ಹೆಚ್ಚಿನ ಮಾಹಿತಿಗಳು ಬಹಿರಂಗವಾಗಲಿದೆ.

BYD Denza N9

ಇನ್ನು ಈ ಎಲೆಕ್ಟ್ರಿಕ್ ಎಸ್‍ಯುವಿಯು 22-ಇಂಚಿನ ವ್ಹೀಲ್ ಗಳು, 50-ಇಂಚಿನ ಹೆಡ್-ಅಪ್ ಡಿಸ್ ಪ್ಲೇ, 17.3-ಇಂಚಿನ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸ್ಕ್ರೀನ್, 13.2-ಇಂಚಿನ ಡಿಜಿಟಲ್ ಕ್ಲಸ್ಟರ್, 13.2-ಇಂಚಿನ ಟಚ್‌ಸ್ಕ್ರೀನ್ ಮುಂಭಾಗದ ಪ್ರಯಾಣಿಕರಿಗೆ, 17.1-ಇಂಚಿನ ಸೀಲಿಂಗ್-ಮೌಂಟೆಡ್ ಡಿಸ್ ಪ್ಲೇ ಹಿಂಭಾಗದ ಸೀಟ್‌ಗಳಲ್ಲಿ ಮಿರರ್ ಫೋಲ್ಡ್ ಮೌಂಟೆಡ್ ಸ್ಕ್ರೀನ್, 11.5 ಲೀಟರ್ ಹೀಟೆಡ್ ಮತ್ತು ಕೂಲ್ಡ್ ಸ್ಟೋರೇಜ್ ಬಾಕ್ಸ್ ಅನ್ನು ಹೊಂದಿದೆ.

ಇನ್ನು ಈ ಬಿವೈಡಿ ಡೆನ್ಜಾ N9 ಎಸ್‍ಯುವಿ 2+2+2 ಸೀಟಿಂಗ್ ಲೇಔಟ್ ಅನ್ನು ಹೊಂದಿದೆ. ಈ ಹೊಸ ಬಿವೈಡಿ ಡೆನ್ಜಾ N9 ಎಸ್‍ಯುವಿ ಒಟ್ಟಾರೆ ಉದ್ದ 5,258 mm, ಅಗಲ 2,030 mm, ಎತ್ತರ 1,830 mm ಮತ್ತು 3,125 mm ವ್ಹೀಲ್‌ಬೇಸ್ ಅನ್ನು ಹೊಂದಿದೆ. ಇನ್ನು ಈ ಹೊಸ ಬಿವೈಡಿ ಡೆನ್ಜಾ N9 ಎಸ್‍ಯುವಿ 3,130 ಕೆಜಿ ರಿಂದ 3,245 ಕೆಜಿವರೆಗೆ ಇರುತ್ತದೆ. ಈ ಮಾಹಿತಿಗಳು ಕೈಗಾರಿಕೆ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯದ ಫೈಲಿಂಗ್ ಪ್ರಕಾರವಾಗಿದೆ.

BYD Denza N9

ಬಿವೈಡಿ ಡೆನ್ಜಾ N9 ಎಸ್‍ಯುವಿ ಪ್ಲಗ್-ಇನ್ ಹೈಬ್ರಿಡ್ 205 bhp ಉತ್ಪಾದಿಸುವ 2.0-ಲೀಟರ್ ಪೆಟ್ರೋಲ್ ಎಂಜಿನ್‌ನಿಂದ ಚಾಲಿತವಾಗಿದೆ. ಇದನ್ನು 47 kWh ಎಲೆಕ್ಟ್ರಿಕ್ ಬ್ಯಾಟರಿ ಪ್ಯಾಕ್‌ನೊಂದಿಗೆ ಜೋಡಿಸಲಾಗಿದೆ. ಇದು ಬಿವೈಡಿಯ Li-Fe-Po ಬ್ಲೇಡ್ ಬ್ಯಾಟರಿಯಾಗಿದೆ. ಇದು 165 ಕಿ.ಮೀ ರೇಂಜ್ ಅನ್ನು ನೀಡಲು ಯೋಗ್ಯವಾಗಿದೆ. ಎರಡು ಎಲೆಕ್ಟ್ರಿಕ್ ಮೋಟರ್‌ಗಳಿಂದ ಚಾಲಿತವಾಗಿರುವ ಈ ಬ್ಯಾಟರಿಯು ಒಟ್ಟು 911 bhp ಪವರ್ ಉತ್ಪಾದಿಸುತ್ತದೆ.

ಡ್ರೈವ್‌ಸ್ಪಾರ್ಕ್ ಕನ್ನಡ ತಂಡ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ಒದಗಿಸುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ ಗಳನ್ನು ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.

More from DriveSpark

Article Published On: Tuesday, December 31, 2024, 13:30 [IST]
English summary
New byd denza n9 luxury suv patented in india details
Read more on byd india
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+