2 ಕುಟುಂಬ ಪ್ರಯಾಣಿಸಬಹುದು: ಗರಿಷ್ಠ ಸುರಕ್ಷತೆಯ ಬಿವೈಡಿ ಇಮ್ಯಾಕ್ಸ್ 7 ವೀಡಿಯೋ ರಿವ್ಯೂ

ವಿಶ್ವದಾದ್ಯಂತ ಜನಪ್ರಿಯ ವಾಹನ ತಯಾರಕ ಕಂಪನಿಯಾಗಿ ಚೀನಾ ಮೂಲದ ಬಿವೈಡಿ (BYD) ಗುರುತಿಸಿಕೊಂಡಿದೆ. ಬಿಲ್ಡ್ ಯುವರ್ ಡ್ರೀಮ್ (ಬಿವೈಡಿ) ಕಂಪನಿಯು ಜನಪ್ರಿಯ ಟೆಸ್ಲಾ ಜೊತೆ ಪೈಪೋಟಿ ನಡೆಸುತ್ತಿದೆ. ಭಾರತಕ್ಕೆ ಬಿವೈಡಿ (BYD) ಕಂಪನಿಯು 2021ರಲ್ಲಿ e6 ಎಂಬ ಮಾದರಿಯೊಂದಿಗೆ ಮಾರುಕಟ್ಟೆಗೆ ಎಂಟ್ರಿ ಕೊಟ್ಟಿತು. ಆದರೆ 2022ರಲ್ಲಿ ಬಿವೈಡಿ ಕಂಪನಿಯು ಸಾರ್ವಜನಿಕರಿಗಾಗಿ e6 ಮಾರಾಟ ಪ್ರಾರಂಭಿಸಿತು. ಎಸ್‍ಯುವಿ, ಐಷಾರಾಮಿ ಸ್ಪೋರ್ಟ್ಸ್ ಕಾರಿನಂತಹ ವ್ಯಾಪಕ ಕಾರುಗಳ ಸರಣಿಯನ್ನು ಹೊಂದಿರುವ ಬಿವೈಡಿ (BYD) ಬ್ರ್ಯಾಂಡ್ ಜನರನ್ನು ಆಕರ್ಷಿಸುತ್ತಿದೆ. ಹೊಸ ಕಾರುಗಳನ್ನು ಪರಿಚಯಿಸುತ್ತಿದೆ.

ಬಿವೈಡಿ ಕಂಪನಿಯು ತನ್ನ ಹೊಸ ಬಿವೈಡಿ ಇಮ್ಯಾಕ್ಸ್ 7 (BYD eMax 7) ಎಂಪಿವಿ ಕಾರನ್ನು ಇತ್ತೀಚೆಗೆ ಬಿಡುಗಡೆಗೊಳಿಸಿತು. ಈ ಬಿವೈಡಿ ಇಮ್ಯಾಕ್ಸ್ 7 ಎಲೆಕ್ಟ್ರಿಕ್ ಕಾರನ್ನು ನಾವು ಇತ್ತೀಚೆಗೆ ಚೆನ್ನೈನಲ್ಲಿ ಡ್ರೈವ್ ಮಾಡಿದ್ದೇವೆ. ಈ ಕಾರಿನ ವಿನ್ಯಾಸ, ಫೀಚರ್ಸ್, ಪರ್ಫಾಮೆನ್ಸ್, ಡ್ರೈವಿಂಗ್ ಅನುಭವ ಮತ್ತು ಹೆಚ್ಚಿನ ಮಾಹಿತಿಗಾಗಿ ಈ ವೀಡಿಯೋ ನೋಡಿ.


ಹೊಸ ಬಿವೈಡಿ ಇಮ್ಯಾಕ್ಸ್ 7 ಎಲೆಕ್ಟ್ರಿಕ್ ಕಾರು ಮುಂಭಾಗವು "ಡ್ರ್ಯಾಗನ್ ಫೇಸ್" ವಿನ್ಯಾಸವನ್ನು ಹೊಂದಿದೆ. ಈ ಬಿವೈಡಿ ಎಂಪಿವಿಯು ಹೊಸ LED ಹೆಡ್‌ಲ್ಯಾಂಪ್‌ಗಳನ್ನು LED ಡೇಟೈಮ್ ರನ್ನಿಂಗ್ ಲೈಟ್‌ಗಳನ್ನು ಪಡೆಯುತ್ತದೆ ಮತ್ತು ಅದರ ಮೇಲೆ BYD ನೇಮ್‌ಪ್ಲೇಟ್‌ನೊಂದಿಗೆ ಕ್ರೋಮ್ ಬಾರ್‌ ಕನೆಕ್ಟ್ ಅನ್ನು ಹೊಂದಿದೆ.

ಈ ಹೊಸ ಎಲೆಕ್ಟ್ರಿಕ್ ಕಾರಿನ ಮುಂಭಾಗದ ಬಂಪರ್ ಮತ್ತು ದೊಡ್ಡ ಸೆಂಟ್ರಲ್ ಏರ್ ಇನ್‌ಟೇಕ್ ಅನ್ನು ಒಳಗೊಂಡಿವೆ, ಸಾಮಾನ್ಯ ICE ವಾಹನದಲ್ಲಿರುವಂತೆ ಇದು ADAS ಲೆವೆಲ್ 2 ಗಾಗಿ ಕೆಲವು ಕಿಟ್‌ಗಳನ್ನು ಹೊಂದಿದೆ. ಇನ್ನು 225/55 R17 ಟೈರ್‌ಗಳಲ್ಲಿ ಹೊಸ ವಿನ್ಯಾಸದ 17-ಇಂಚಿನ ಅಲಾಯ್ ವ್ಹೀಲ್ ಗಳನ್ನು ಕೂಡ ಹೊಂದಿವೆ.

BYD eMax 7

ಬಿವೈಡಿ ಕಾರಿನಲ್ಲಿ ದೊಡ್ಡದಾದ 12.3-ಇಂಚಿನ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಡಿಸ್ಪ್ಲೇ ಅನ್ನು ಸಹ ಹೊಂದಿದೆ. ಇದು ಆಂಡ್ರಾಯ್ಡ್ ಆಟೋ ಮತ್ತು ಆಪಲ್ ಕಾರ್ಪ್ಲೇ ಅನ್ನು ಸಂಪೂರ್ಟ್ ಮಾಡುತ್ತದೆ. ಮತ್ತು ಆನ್‌ಬೋರ್ಡ್ ಸಟ್ನಾವ್ ಅನ್ನು ಸಹ ನೀಡುತ್ತದೆ. ಅನಲಾಗ್ ಸೂಜಿ ಟರ್ನರ್‌ಗಳ ನಡುವೆ ಇರುವ 5-ಇಂಚಿನ ಮಲ್ಟಿ-ಇನ್ಫೋರ್ ಮೆಶನ್ಡಿಸ್‌ಪ್ಲೇ ಸೇರಿದಂತೆ ಅದರ ಹಿಂದೆ ಡಯಲ್‌ಗಳೊಂದಿಗೆ ಹೊಸ ಸ್ಟೀರಿಂಗ್ ವೀಲ್ ಕೂಡ ನೀಡಲಾಗಿದೆ.

ಬಿವೈಡಿ ಇಮ್ಯಾಕ್ಸ್ 7 ಕಾರಿನಲ್ಲಿ ದೊಡ್ಡ ಬದಲಾವಣೆಗಳು ಪವರ್‌ಟ್ರೇನ್ ರೂಪದಲ್ಲಿ ಬರುತ್ತವೆ. ಈ ಕಾರಿನ ಪ್ರೀಮಿಯಂ ಮತ್ತು ಸುಪೀರಿಯರ್ ರೂಪಾಂತರಗಳಲ್ಲಿ ಎರಡು ಬ್ಯಾಟರಿ ಪ್ಯಾಕ್‌ಗಳಲ್ಲಿ ದೊಡ್ಡದಾಗಿದೆ. ಈ ಕಾರಿನ ಪ್ರೀಮಿಯಂ ರೂಪಾಂತರ 55.4kWh ಬ್ಯಾಟರಿ ಪ್ಯಾಕ್ ಮತ್ತು ಸುಪೀರಿಯರ್ ಮಾದರಿಯು 71.8kWh ಬ್ಯಾಟರಿ ಪ್ಯಾಕ್ ಹೊಂದಿದೆ. ಪ್ರೀಮಿಯಂ ಟ್ರಿಮ್ 163hp ಪವರ್ ಮತ್ತು ಸುಪೀರಿಯರ್ 204hp ಪವರ್ ಉತ್ಪಾದಿಸುತ್ತದೆ. ಎರಡೂ ರೂಪಾಂತರಗಳು 310Nm ಟಾರ್ಕ್ ಉತ್ಪಾದಿಸುತ್ತದೆ.

More from DriveSpark

Article Published On: Monday, October 28, 2024, 12:20 [IST]
English summary
New byd emax 7 video review details
Read more on byd india
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+